04/02/2018
ವನಪ್ರಸ್ಥನಾಗಿ ತಪಸ್ಸನ್ನು ಮಾಡಿ, ಮಾಡಿದ ಪಾಪಗಳನ್ನು ಕಳೆದುಕೊಳ್ಳಬೇಕಾಗಿದ್ದ ಧೃತರಾಷ್ಟ್ರ ವಿಷಯಾಸಕ್ತನಾಗಿಯೇ ಉಳಿದಿರುತ್ತಾನೆ. ಅವನಲ್ಲಿ ಭೀಮಸೇನದೇವರು ವೈರಾಗ್ಯ ಮೂಡಿಸಿದ ಪ್ರಸಂಗವನ್ನು, ಆ ವೈರಾಗ್ಯವನ್ನು ವಿದುರರು ಧೃಢತರವನ್ನಾಗಿ ಮಾಡಿದ ಸಂದರ್ಭವನ್ನಿಲ್ಲಿ ಕೇಳುತ್ತೇವೆ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ಹೇಳಿಕೊಟ್ಟು ಒಂದು ದಿವ್ಯ ಪ್ರಾರ್ಥನೆಯ ಅರ್ಥಾನುಸಂಧಾನದೊಂದಿಗೆ. ಇಲ್ಲಿ ವಿವರಣೆಗೊಂಡ ಶ್ರೀ ಭಾಗವತದ ಶ್ಲೋಕಗಳು — ಯುಧಿಷ್ಠಿರೋ ಲಬ್ಧರಾಜ್ಯೋ ದೃಷ್ಟ್ವಾ ಪೌತ್ರಂ ಕುಲಂಧರಮ್। ಭ್ರಾತೃಭಿರ್ಲೋಕಪಾಲಾಭೈರ್ಮುಮುದೇ ಪರಯಾ ಶ್ರಿಯಾ। ಏವಂ ಗೃಹೇಷು ಸಕ್ತಾನಾಂ ಪ್ರಮತ್ತಾನಾಂ ತದೀಹಯಾ। ಅತ್ಯಕ್ರಾಮದವಿಜ್ಞಾತಃ ಕಾಲಃ ಪರಮದುಸ್ತರಃ। ವಿದುರಸ್ತದಭಿಪ್ರೇತ್ಯ ಧೃತರಾಷ್ಟ್ರಮಭಾಷತ। ರಾಜನ್ನಿರ್ಗಮ್ಯತಾಂ ಶೀಘ್ರಂ ಪಶ್ಯೇದಂ ಭಯಮಾಗತಮ್। ಪ್ರತಿಕ್ರಿಯಾ ನ ಯಸ್ಯೇಹ ಕುತಶ್ಚಿತ್ ಕರ್ಹಿಚಿತ್ ಪ್ರಭೋ। ಸ ಏಷ ಭಗವಾನ್ ಕಾಲಃ ಸರ್ವೇಷಾಂ ನಃ ಸಮಾಗತಃ। ಯೇನ ಚೈವಾಭಿಪನ್ನೋಽಯಂ ಪ್ರಾಣೈಃ ಪ್ರಿಯತಮೈರಪಿ। ಜನಃ ಸದ್ಯೋ ವಿಯುಜ್ಯೇತ ಕಿಮುತಾನ್ಯೈರ್ಧನಾದಿಭಿಃ। ಪಿತೃಭ್ರಾತೃಸುಹೃತ್ಪುತ್ರಾ ಹತಾಸ್ತೇ ವಿಗತಂ ವಯಮ್। ಆತ್ಮಾ ಚ ಜರಯಾ ಗ್ರಸ್ತಃ ಪರಗೇಹಮುಪಾಸಸೇ। ಅಹೋ ಮಹೀಯಸೀ ಜಂತೋರ್ಜೀವಿತಾಶಾ ಯಥಾ ಭವಾನ್। ಭೀಮಾಪವರ್ಜಿತಂ ಪಿಂಡಮಾದತ್ತೇ ಗೃಹಪಾಲವತ್। ಅಗ್ನಿರ್ನಿಸೃಷ್ಟೋ ದತ್ತಶ್ಚ ಗರೋ ದಾರಾಶ್ಚ ದೂಷಿತಾಃ। ಹೃತಂ ಕ್ಷೇತ್ರಂ ಧನಂ ಯೇಷಾಂ ತದ್ದತ್ತೈರಸುಭಿಃ ಕಿಯತ್। ತಸ್ಯಾಪಿ ತವ ದೇಹೋಽಯಂ ಕೃಪಣಸ್ಯ ಜಿಜೀವಿಷೋಃ। ಪರೈತ್ಯನಿಚ್ಛತೋ ಜೀರ್ಣೋ ಜರಯಾ ವಾಸಸೀ ಇವ। ಗತಸ್ವಾರ್ಥಮಿಮಂ ದೇಹಂ ವಿಯುಕ್ತೋ ಮುಕ್ತಬಂಧನಃ। ಅವಿಜ್ಞಾತಗತಿರ್ಜಹ್ಯಾತ್ ಸ ವೈ ಧೀರ ಉದಾಹೃತಃ। ಯಃ ಸ್ವತಃ ಪರತೋ ವೇಹ ಜಾತನಿರ್ವೇದ ಆತ್ಮವಾನ್। ಹೃದಿ ಕೃತ್ವಾ ಹರಿಂ ಗೇಹಾತ್ಪ್ರವ್ರಜೇತ್ಸ ನರೋತ್ತಮಃ। ಅಥೋದೀಚೀಂ ದಿಶಂ ಯಾತು ಸ್ವೈರಜ್ಞಾತಗತಿರ್ಭವಾನ್। ಇತೋಽರ್ವಾಕ್ಪ್ರಾಯಶಃ ಕಾಲಃ ಪುಂಸಾಂ ಗುಣವಿಕರ್ಷಣಃ।
Play Time: 52:00
Size: 7.60 MB