ಕಾಲ್ಪನಿಕ ಕತೆಗಳಿಂದ ತತ್ವನಿರ್ಣಯವಾಗುವದಿಲ್ಲ
ಶ್ರೀ ಹೃಷೀಕೇಶಾಚಾರ್ಯ ಮಠದ ಅವರ ಎರಡನೆಯ ಲೇಖನಕ್ಕೆ ಉತ್ತರ
ಪರಿಮಳ ವಾಕ್ಯದ ಅರ್ಥ
“ರಾಯರು ಹೇಳಿದ್ದನ್ನೇ ಸತ್ಯಾತ್ಮರು ಹೇಳಿದ್ದಾರೆ” ಎಂಬ ಉತ್ತರಾದಿಮಠದ ಪಂಡಿತರ ಭ್ರಮೆಯ ಖಂಡನೆ ಇಲ್ಲಿದೆ. ನಮ್ಮ ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ವಾಕ್ಯದ ಸರಳ ಮತ್ತು ಸಹಜವಾದ ಅರ್ಥ, ಆ ಅರ್ಥಕ್ಕೆ ಪ್ರಮಾಣಗಳ ನಿರೂಪಣೆಯೊಂದಿಗೆ.
ದಿಗ್ವಿಜಯ ಎಂದರೇನು?
ಆಚಾರ್ಯರೇ ದಿಗ್ವಿಜಯ ಎಂದರೆ ಏನು, ಈಗಿನ ಮಠಾಧಿಶರು ಏಕೆ ಹಾಗೆ ಹಾಕಿರುತ್ತಾರೆ, ಮೊದ್ಲು ಹಾಗೂ ಇಂದಿನ ದಿಗ್ವಿಜಯಕ್ಕೆ ಏನು ವ್ಯತ್ಯಾಸ?
ನಿಸ್ಸಾರ ಪುಸ್ತಕ, ವಾಕ್ಯಾರ್ಥದಿಂದ ಪಲಾಯನ
ಉತ್ತರಾದಿಮಠದ ಚಂದಿ ರಘುವೀರಾಚಾರ್ಯರು ಸತ್ತ್ವಹೀನವಾದ ಪುಸ್ತಕವನ್ನು ಪ್ರಕಟಿಸಿ ನನಗೆ ಕಳುಹಿಸಿದ್ದರು. 14ನೆಯ ತಾರೀಕು ವಾಕ್ಯಾರ್ಥಕ್ಕೆ ಬನ್ನಿ ಎಂದರೆ, “ವಾಕ್ಯಾರ್ಥದ ಆವಶ್ಯಕತೆ ಇರುವದು ನನಗಲ್ಲ, ನಿಮಗೆ" ಎಂದು ಜಾರಿಕೊಂಡು ಕಿರುಲೇಖನವೊಂದನ್ನು ಕಳುಹಿಸಿದ್ದಾರೆ. ಅವರ ಪುಸ್ತಕ, ಕಿರುಲೇಖಗಳನ್ನು ಪ್ರಕಟಿಸಿದ್ದೇನೆ, ನನ್ನ ಸ್ಪಷ್ಟನಿಲುವುಗಳೊಂದಿಗೆ.
ಪಂಚಾಂಗಶ್ರವಣ
ಶ್ರೀ ಶುಭಕೃತ್ ಸಂವತ್ಸರದ (2022) ಪಂಚಾಂಗಶ್ರವಣ, ಕಾಲನಾಮಕ ಭಗವಂತನ ಚಿಂತನೆ ಮತ್ತು ದ್ವಾದಶರಾಶಿಗಳ ವರ್ಷಫಲದೊಂದಿಗೆ.
ವಾಕ್ಯಾರ್ಥ
ವಾಕ್ಯಾರ್ಥದ ಕುರಿತ ಬೆಳವಣಿಗೆಗಳ ಮಾಹಿತಿ.
ವಾಕ್ಯಾರ್ಥದ ವೇದಿಕೆ ಸಿದ್ಧಪಡಿಸುತ್ತೇನೆ
ಶ್ರೀ ಚಂದಿ ರಘುವೀರಾಚಾರ್ಯರು ವಾಕ್ಯಾರ್ಥಕ್ಕೆ ಸಿದ್ಧ ಎಂದು ತಿಳಿಸಿ, ವೇದಿಕೆ ಸಿದ್ಧಪಡಿಸಲು ತಿಳಿಸಿದ್ದಾರೆ. ಆ ಕುರಿತ ವಿವರ.
ಪುಸ್ತಕವನ್ನು ಇಂದೇ (14-03-2022)ಪ್ರಕಟಿಸಿ, ಸತ್ಯಾತ್ಮರೆ!
ನಾನು ಮಾಡಿದ ಆಕ್ಷೇಪಕ್ಕೆ ಎಂಟು ವರ್ಷಗಳ ನಂತರ ಉತ್ತರ ನೀಡಿದ್ದೇವೆ ಎಂದು ಪುಸ್ತಕವನ್ನು ಬಿಡುಗಡೆ ಮಾಡಿರುವ ಸತ್ಯಾತ್ಮರು ಪುಸ್ತಕವನ್ನು ಮಾತ್ರ ಪ್ರಕಟ ಮಾಡಿಲ್ಲ!
ಮಧ್ವನವಮೀ ಪೂಜೆ
ಪ್ಲವನಾಮ ಸಂವತ್ಸರದ [2022] ಶ್ರೀಮಧ್ವನವಮಿಯಂದು ಶ್ರೀಮಧ್ವಾನುಜಮಂದಿರದಲ್ಲಿ ನಡೆದ ಪೂಜೆಯ ವಿಡಿಯೋ
ಈ ಬಾರಿಯ ರಥಸಪ್ತಮಿ ಭೀಷ್ಮಾಷ್ಟಮಿ
ಪ್ಲವನಾಮ ಸಂವತ್ಸರದಲ್ಲಿ [2022] ರಥಸಪ್ತಮಿ ಮತ್ತು ಭೀಷ್ಮಾಷ್ಟಮಿಗಳನ್ನು ಎಂದು ಆಚರಿಸಬೇಕು?
ಸಾತ್ವಿಕ ಆಹಾರ ತಿನ್ನುವವರಲ್ಲಿಯೂ ತಾಮಸ ಪ್ರವೃತ್ತಿ ಏಕೆ?
ಸಾತ್ವಿಕ ಆಹಾರದಿಂದ ಸಾತ್ವಿಕ ಪ್ರವೃತ್ತಿ, ತಾಮಸ ಆಹಾರದಿಂದ ತಾಮಸಪ್ರವೃತ್ತಿ ಎಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಸಾತ್ವಿಕ ಆಹಾರ ತಿನ್ನುವ ಜನರಲ್ಲಿಯೂ ತಾಮಸ ಪ್ರವೃತ್ತಿ ಕಂಡಿದೆ, ತಾಮಸ ಆಹಾರ ತಿನ್ನುವವರಿಲ್ಲಿಯೂ ಸಾತ್ವಿಕ ಪ್ರವೃತ್ತಿ ಕಂಡಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಈ ಬಾರಿಯ ಮಕರ ಸಂಕ್ರಾಂತಿ
2022 ರ ಮಕರ ಸಂಕ್ರಾಂತಿ, ಭೋಗಿಹಬ್ಬಗಳ ಆಚರಣೆಯ ವಿವರ. ಅರ್ಥಸಹಿತ ಸಕಾಮ ನಿಷ್ಕಾಮ ಸಂಕಲ್ಪಗಳೊಂದಿಗೆ.
ಭಜರಂಗಬಲಿ
ಭಜರಂಗಬಲಿ ಮತ್ತು ಭಜರಂಗಿ ಶಬ್ದಗಳ ಅರ್ಥವೇನು? ಹನುಮಂತದೇವರನ್ನು ಆ ಹೆಸರಿನಿಂದ ಏಕೆ ಕರೆಯುತ್ತಾರೆ?
ಶ್ರಾದ್ಧಕ್ಕೂ ಕಾಗೆಗಳಿಗೂ ಇರುವ ಸಂಬಂಧ
ಮರುತ್ತಮಹಾರಾಜರು ಯಜ್ಞಮಾಡುವಾಗ ಅಲ್ಲಿಗೆ ಯುದ್ಧಕ್ಕಾಗಿ ರಾವಣ ಬರುತ್ತಾನೆ. ಆಗ ದೇವತೆಗಳೆಲ್ಲರೂ ಬೇರೆಬೇರೆ ಪಕ್ಷಿಯ ರೂಪಗಳನ್ನು ತೆಗೆದುಕೊಳ್ಳುತ್ತಾರೆ. ಯಮಧರ್ಮರು ಕಾಗೆಯ ರೂಪವನ್ನು ಸ್ವೀಕರಿಸಿ, ರಾವಣ ಹೋದ ನಂತರ ಕಾಗೆಯ ಕುಲಕ್ಕೇ ವರಗಳನ್ನು ಅನುಗ್ರಹಿಸುತ್ತಾರೆ. ಶ್ರಾದ್ಧಕ್ಕೂ ಮತ್ತು ಕಾಗೆಗಳಿಗೂ ಇರುವ ಸಂಬಂಧವನ್ನು ತಿಳಿಸುವ ಈ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ.
ಕೃಷ್ಣಾಷ್ಟಮಿ ಪಾರಣೆ ದ್ವಾದಶಿಯಂತೆಯೆ?
ಕೃಷ್ಣಾಷ್ಟಮಿ ಪಾರಣೆ ಮಾಡಿದ ನಂತರ ರಾತ್ರಿ ಮತ್ತೆ ಊಟ ಮಾಡಬಹುದೇ ಅಥವಾ ಫಲಾಹಾರ ಮಾಡಬೇಕೇ?
ಈ ಬಾರಿಯ ಕೃಷ್ಣಾಷ್ಟಮಿ
2021 ರಲ್ಲಿ ಕೃಷ್ಣಾಷ್ಟಮಿಯನ್ನು ಎಂದು ಆಚರಿಸಬೇಕು ಎಂಬ ಪ್ರಶ್ನೆಗೆ ಉತ್ತರ.
ಜಾಗು ಮಾಡದೇ ಎಂದರೇನು?
“ವಿಜಯವಿಠ್ಠಲನಂಘ್ರಿ ಜಾಗು ಮಾಡದೇ ಭಜಿಪ ಭಾಗ್ಯವನು ಕೊಡು ಶಂಭೋ” ಎಂಬ ಸಾಲಿನಲ್ಲಿ ಜಾಗು ಮಾಡದೇ ಎಂದರೆ ಅರ್ಥವೇನು?
ಸಹಗಮನ
ಹೆಣ್ಣನ್ನು ಜೀವಂತವಾಗಿ ಸುಡುವ ಸಹಗಮನ ಪದ್ಧತಿ ನಿಜವಾಗಿಯೂ ಶಾಸ್ತ್ರಗಳಲ್ಲಿ ಉಲ್ಲೇಖಗೊಂಡಿದೆಯೇ? ಇದ್ದಲ್ಲಿ ಎಷ್ಟರಮಟ್ಟಿಗೆ ಅದು ಸರಿ?
ಇರುವೆ ಮುಂತಾದವನ್ನು ಕೊಂದಾಗ
ಇರುವೆ, ಜಿರಳೆ, ಇಲಿ ಮುಂತಾದವನ್ನು ಅನಿವಾರ್ಯವಾಗಿ ಕೊಲ್ಲುವ ಸಂದರ್ಭ ಬರುತ್ತಲೇ ಇರುತ್ತದೆ. ಇದರಿಂದ ಉಂಟಾಗುವ ಪಾಪ ಎಷ್ಟು, ಪರಿಹಾರ ಹೇಗೆ ಮಾಡಿಕೊಳ್ಳಬೇಕು.
ಅಸಹ್ಯ ಆಲೋಚನೆಗಳಿಂದ ಪಾರಾಗುವ ಕ್ರಮ
ದೇವರ ಪೂಜೆ ಮಾಡುವಾಗ, ಜಪ ಮಾಡುವಾಗ, ಸ್ತೋತ್ರ ಹೇಳುವಾಗ ತುಂಬ ಅಸಹ್ಯವಾದ ಕೆಟ್ಟದಾದ ಆಲೋಚನೆಗಳು ಮನಸ್ಸಿಗೆ ಬರುತ್ತವೆ. ಅದರಿಂದ ಪಾರಾಗುವ ಅತ್ಯಂತ ಸುಲಭವಾದ ಮಾರ್ಗದ ವಿವರಣೆ.
ದಂಡಕಾರಣ್ಯದ ಕಥೆ
ತಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದ ದಂಡ ಎಂಬ ರಾಜನಿಗೆ ಶುಕ್ರಾಚಾರ್ಯರು ನೀಡಿದ ಶಾಪದಂತೆ ರಾಕ್ಷಸರಿಂದ ತುಂಬಿದ್ದ ದಂಡಕಾರಣ್ಯವನ್ನು ಅಗಸ್ತ್ಯರು ರಾಮದೇವರು ಪುಣ್ಯಭೂಮಿಯನ್ನಾಗಿ ಮಾಡಿದ ಘಟನೆಯ ಚಿತ್ರಣ.
ಮನುಷ್ಯರ ಪಾಡು
ನಮ್ಮ ವಿಚಿತ್ರ ಪಾಡನ್ನು ಕೇಳಿ ನಮಗೇ ನಗು ತರಿಸುವ ವಿಷಯಗಳು.
ಗಂಗಾಪೂಜೆ
ಗಂಗಾಪೂಜೆಯ ಮಂಗಳನೀರಾಜನದ ದೃಶ್ಯ
ನಮ್ಮಲ್ಲಿ ಅಸುರಾವೇಶವಾಗದಿರಲು ಏನು ಮಾಡಬೇಕು?
ದೈತ್ಯರು ನಮ್ಮೊಳಗೆ ಹೇಗೆ ಪ್ರವೇಶ ಮಾಡುತ್ತಾರೆ, ತಡೆಯುವ ಕ್ರಮವೇನು ಎನ್ನುವದರ ಕುರಿತ ಚರ್ಚೆ.
ಅಕ್ಕಿ ಬೇಳೆಗಳನ್ನು ತೊಳೆದ ನೀರಿನ ಮಹಿಮೆ
ಹೆಣ್ಣುಮಕ್ಕಳು ಅತ್ಯಂತ ಸುಲಭವಾಗಿ ತನ್ನ ಗಂಡನ, ತಂದೆಯ, ತಾಯಿಯ ಕುಲದವರಿಗೆ ಶ್ರಾದ್ಧಫಲವನ್ನು ದೊರಕಿಸಿಕೊಡುವ ಕ್ರಮದ ವಿವರಣೆ. ಹಾಗೂ ಮನೆಯಲ್ಲಿ ಅಡಿಗೆ ಮಾಡುವಾಗ, ಶ್ರಾದ್ಧದಲ್ಲಿ ಮತ್ತು ಅಪರಕರ್ಮದಲ್ಲಿ ಅಕ್ಕಿ ಬೇಳೆಗಳನ್ನು ಎಷ್ಟು ಬಾರಿ ತೊಳೆಯಬೇಕು ಎನ್ನುವದರ ವಿವರ.
ಉದಾಸೀನ ಕರ್ಮಗಳ ಸಮರ್ಪಣೆಯ ಕ್ರಮ
Walking, Jogging ಮುಂತಾದ ವ್ಯಾಯಾಮದ ಕಾರ್ಯಗಳನ್ನು ದೇವರಿಗೆ ಸಮರ್ಪಣೆ ಮಾಡಬಹುದೇ? ಮಾಡುವದಾದರೆ ಕ್ರಮವೇನು?
ಆಪತ್ಕಾಲದಲ್ಲಿ ಸದಾಚಾರ ಮುಖ್ಯವೋ, ದೇಹರಕ್ಷಣೆ ಮುಖ್ಯವೋ
ಖಾಯಿಲೆ, ಅಪಾರವಾದ ದುಃಖದ ಸಂದರ್ಭಗಳಲ್ಲಿ ದೇಹರಕ್ಷಣೆ ಮುಖ್ಯವಾಗುತ್ತದೆಯೋ, ಅಥವಾ ಸದಾಚಾರವೇ ಮುಖ್ಯವಾಗುತ್ತದೆಯೋ?
ಹಸಿ ತರಕಾರಿಯನ್ನು ನೇರವಾಗಿ ನೈವೇದ್ಯ ಮಾಡಬಹುದೇ?
ಬಾಳೆಹಣ್ಣು ಮುಂತಾದ ಹಣ್ಣುಗಳನ್ನು ದೇವರಿಗೆ ನೇರವಾಗಿ ನೈವೇದ್ಯ ಮಾಡುವಂತೆ ಹಸಿ ತರಕಾರಿಯನ್ನೂ ದೇವರಿಗೆ ನೈವೇದ್ಯ ಮಾಡಬಹುದೇ?
ಶ್ರೀ ರಾಜೇಂದ್ರ ತೀರ್ಥರ ಸ್ಮರಣೆ
ವೈಶಾಖ ಪೌರ್ಣಿಮೆ ಶ್ರೀ ರಾಜೇಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ.
ವೇದ ವೇದಾಂತ ಎಂಬ ಶಬ್ದಗಳ ಅರ್ಥವೇನು?
ಸ್ವಯಂ ಶ್ರೀಮದಾಚಾರ್ಯರೇ ಈ ಶಬ್ದಗಳಿಗೆ ಅರ್ಥವನ್ನು ತಿಳಿಸಿದ್ದಾರೆ, ಅವರ ವಚನಗಳ ಅರ್ಥಾನುಸಂಧಾನ ಇಲ್ಲಿದೆ.
ಆಪತ್ಕಾಲದಲ್ಲಿ ಧರ್ಮೋದಕ
ಕೋವಿಡ್ ನಿಂದ ಉಂಟಾಗಿರುವ Lock down ನ ರಾಷ್ಟ್ರಕ್ಷೋಭದ ಸಂದರ್ಭದಲ್ಲಿ, ಅಂತ್ಯಸಂಸ್ಕಾರದ ಕ್ರಿಯೆಗಳಿಗೂ ಸಂಚಕಾರ ಒದಗಿರುವಾಗ, ಮನೆಯ ಹೊರಗೆ ಕುಳಿತು ಧರ್ಮೋದಕ ನೀಡುವ ಕ್ರಮದ ವಿವರಣೆ.
ಬಾಹ್ಯಶತ್ರುಗಳನ್ನು ಹೇಗೆ ಎದುರಿಸಬೇಕು?
ನಮ್ಮನ್ನು ಹೊಡೆಯುವ, ಮಾನಸಿಕವಾಗಿ ಹಿಂಸಿಸುವ ಅಥವಾ ಕೊಲ್ಲಲೆಂದೇ ಬರುವ ಬಾಹ್ಯಶತ್ರುಗಳಿಂದ ಪಾರಾಗುವ ಪರಿಶುದ್ಧ ಶಾಸ್ತ್ರೀಯ ಕ್ರಮ
ನನ್ನ ಆರೊಗ್ಯ
ದೇವರ ಅನುಗ್ರಹದಿಂದ ಸಾವನ್ನು ದಾಟಿ ಬಂದ ರೀತಿ. ವಿಡಿಯೋ ಹಾಕಲಾಗಿದೆ. ನೋಡಿ.
ತೋರಣ
ಯುಗಾದಿ ಮುಂತಾದ ಹಬ್ಬಗಳು, ಮದುವೆ ಮುಂಜಿ ಮುಂತಾದ ಮಂಗಳಕಾರ್ಯಗಳಲ್ಲಿ ತೋರಣ ಕಟ್ಟುವ ಕ್ರಮದ ಮತ್ತು ಪಾಲಿಸಲೇಬೇಕಾದ ನಿಯಮದ ವಿವರಣೆ.
ಭಕ್ತಿ ಮತ್ತು ನೀರಿನ ಚಿಲುಮೆ
ಅಂತರ್ಜಲದ ದೃಷ್ಟಾಂತದಿಂದ ಶ್ರೀಮದಾಚಾರ್ಯರು ತಿಳಿಸಿದ ಒಂದು ತತ್ವದ ಚಿಂತನೆ.
ನರಸಿಂಹನ ಮೂರು ಕಣ್ಣುಗಳು ವ್ಯಾಸತ್ರಯ
ಶ್ರೀಮದ್ ವ್ಯಾಸರಾಜಗುರುಸಾರ್ವಭೌಮರ ವಾಗ್ವೈಭವ
ಈ ಬಾರಿಯ ಏಕಾದಶಿ ವಿವರ
ಈ ಬಾರಿ ದಶಮೀ, ಏಕಾದಶಿ, ದ್ವಾದಶಿಗಳ ಅನುಷ್ಠಾನದ ವಿವರ.
ಶ್ರೀ ವಾದಿರಾಜಸಂಸ್ಥಾನ ಪೂಜಾ
ಶ್ರೀಮದ್ವಾದಿರಾಜಸಂಸ್ಥಾನಾಧಿಪತಿಗಳಾದ ಶ್ರೀ ವಿಶ್ವವಲ್ಲಭತೀರ್ಥಶ್ರೀಪಾದಂಗಳವರು ಶ್ರೀಮಧ್ವಾನುಜಮಂದಿರಕ್ಕೆ ಆಗಮಿಸಿ ಶ್ರೀ ಭೂತರಾಜರ ಪೂಜೆ ಮತ್ತು ಸಂಸ್ಥಾನಪೂಜೆಗಳನ್ನು ನೆರವೇರಿಸಿ ವಿಶ್ವನಂದಿನಿಯ ಜ್ಞಾನಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದು ಮನಃಪೂರ್ವಕವಾಗಿ ಆಶೀರ್ವದಿಸಿದರು. ಅದರ ವಿಡಿಯೋ ಇಲ್ಲಿದೆ.
ಪುಷ್ಪವೃಷ್ಟಿ
ಶ್ರೀದಾಚಾರ್ಯರಿಗೆ ಅಭಿಷೇಕ, ಮಂಗಳನೀರಾಜನ ಮತ್ತು ಪುಷ್ಪವೃಷ್ಟಿ
ನೆಪಗಳೊಡ್ಡಿ ಕೈ ಚಲ್ಲುವ ಮುನ್ನ
ಯಾವುದೇ ಕೆಲಸ ಮಾಡಬೇಕಾದರೂ ಅನೇಕ ಲೋಪ ದೋಷಗಳ ನೆಪಗಳನ್ನೊಡ್ಡಿ ನಾವು ಕೆಲಸ ಮುಂದುವರೆಸುವದನ್ನೇ ಬಿಟ್ಟುಬಿಡುವ ಮುನ್ನ ಕೇಳಬೇಕಾದ ವಿಷಯ.
ಈ ಬಾರಿಯ ರಥಸಪ್ತಮಿ
ಶಾರ್ವರೀ ಸಂವತ್ಸರದ ರಥಸಪ್ತಮಿಯನ್ನು ಗುರುವಾರ ಆಚರಿಸಬೇಕೋ, ಶುಕ್ರವಾರ ಆಚರಿಸಬೇಕೋ ಎಂಬ ಪ್ರಶ್ನೆಗೆ ಪ್ರಮಾಣಸಹಿತವಾದ ಉತ್ತರ
ಗೋಪ್ರಸವ ನಮಸ್ಕಾರ
ಗೋವು ಕರುವನ್ನು ಹಾಕುವ ಸಂದರ್ಭದಲ್ಲಿ ಅದಕ್ಕೆ ತೊಂದರೆಯಾಗದಂತೆ ಪ್ರದಕ್ಷಿಣೆ ಬಂದು ನಮಸ್ಕಾರ ಹಾಕಿದಲ್ಲಿ ಸಮಗ್ರ ಭೂಮಂಡಲ ಪ್ರದಕ್ಷಿಣೆ ಮಾಡಿ ಸಕಲ ದೇವತೆಗಳಿಗೆ ಜಗದೊಡೆಯ ಶ್ರೀ ಗೋಪಾಲಕೃಷ್ಣದೇವರಿಗೆ ನಮಸ್ಕಾರ ಮಾಡಿದ ಮಹಾಪುಣ್ಯ.
ಕರ್ಮಸಮರ್ಪಣೆಯಲ್ಲಿ ಹೇಳಬೇಕಾದ ಶ್ಲೋಕ
ಇಡಿಯ ದಿವಸದ ಸತ್ಕರ್ಮಗಳನ್ನು ದೇವರಿಗೆ ರಾತ್ರಿ ಸಮರ್ಪಿಸುವ ಸಂದರ್ಭದಲ್ಲಿ, ಪ್ರತಿಯೊಂದು ಸತ್ಕರ್ಮವನ್ನು ಸಮರ್ಪಿಸುವ ಸಂದರ್ಭದಲ್ಲಿ ಮಾಡಬೇಕಾದ ಅನುಸಂಧಾನ ಪ್ರಾರ್ಥನೆಗಳನ್ನು ತಿಳಿಸುವ ದಿವ್ಯಶ್ಲೋಕದ ಅರ್ಥಾನುಸಂಧಾನ
ಅವರ ಸಾವೇ ಅಷ್ಟು ಅದ್ಭುತವಾಗಿತ್ತೆಂದರೆ…
ಶ್ರೀಮದ್ ಹೃಷೀಕೇಶತೀರ್ಥಶ್ರೀಪಾದಂಗಳವರ ದಿವ್ಯತಪಸ್ವಿಪರಂಪರೆಯ ಭೂಷಾಮಣಿಗಳಾದ ಶ್ರೀ ರಘೂತ್ತಮತೀರ್ಥಶ್ರೀಪಾದಂಗಳವರು ಪರಮಾದ್ಭುತ ಕ್ರಮದಲ್ಲಿ ನಿರ್ಯಾಣ ಮಾಡಿದ ಘಟನೆಯ ಚಿತ್ರಣ.
ಡೈನಿಂಗ್ ಟೇಬಲ್ ಮೇಲೆ ಊಟ ಏಕೆ ನಿಷಿದ್ಧ?
ಅನಾರೋಗ್ಯದ ಸಮಸ್ಯೆಯಿಂದ ಕೆಳಗೆ ಕುಳಿತು ಊಟ ಮಾಡಲಿಕ್ಕಾಗದವರು ಏನು ಮಾಡಬೇಕು?
ಬ್ರಹ್ಮದೇವರ ಐದನೆಯ ತಲೆ ಕತ್ತರಿಸಿದ ಕಥೆ ಸತ್ಯವೇ?
ಮಹಾರುದ್ರದೇವರು ಬ್ರಹ್ಮದೇವರ ಐದನೆಯ ತಲೆಯನ್ನು ಕತ್ತರಿಸಿದರು ಎಂದು ಕಥೆಯಿದೆ. ಇದು ಶಾಸ್ತ್ರಸಮ್ಮತವೇ?
ಅಂಗನ್ಯಾಸ ಕರನ್ಯಾಸ ಎಂದರೇನು ?
ಮಂತ್ರಗಳ ಜಪ ಮಾಡುವಾಗ ಅಂಗನ್ಯಾಸ ಕರನ್ಯಾಸಗಳನ್ನು ಮಾಡುತ್ತೇವೆ. ಆ ಶಬ್ದಗಳ ಅರ್ಥವೇನು ಮತ್ತು ಆ ಕ್ರಿಯೆಗಳ ಮಹತ್ತ್ವವೇನು?
ಫಲಸ್ತುತಿಯನ್ನು ಪಠಿಸಲೇ ಬೇಕೆ?
ವಿಷ್ಣುಸಹಸ್ರನಾಮ ಮುಂತಾದ ಸ್ತೋತ್ರಗಳನ್ನು ಪಠಿಸುವಾಗ ಫಲಸ್ತುತಿಯನ್ನು ಪಠಿಸಲೇ ಬೇಕೆ? ಅಥವಾ ಕೇವಲ ಸ್ತೋತ್ರಗಳನ್ನು ಪಠಿಸಿದರೆ ಸಾಕೆ?
ನರಕದಲ್ಲಿ ಶಿಕ್ಷೆಯಾದ ಬಳಿಕ ಭೂಲೋಕದಲ್ಲಿ ಕಷ್ಟಗಳೇಕೆ?
ನಾವು ಮಾಡಿದ ಪಾಪಗಳಿಗೆ ನರಕದಲ್ಲಿ ಶಿಕ್ಷೆ ಅನುಭವಿಸಿರುತ್ತೇವೆ, ಅಂದ ಮೇಲೆ ಭೂಮಿಯ ಮೇಲೂ ಯಾಕಿಷ್ಟು ಕಷ್ಟಗಳು?
ಶ್ರೀ ಜಗನ್ನಾಥದಾಸಾರ್ಯರ ಸ್ಮರಣೆ
ಸ್ವರ್ಣಗೌರೀ, ಗಣಪತಿಯ ವಿಸರ್ಜನೆಯ ಜೊತೆಯಲ್ಲಿ ಸಾಧಕಪ್ರಪಂಚದ ಮೇಲೆ ಪರಮಾನುಗ್ರಹವನ್ನು ಮಾಡಿರುವ ಶ್ರೀಜಗನ್ನಾಥದಾಸಾರ್ಯರ ಆರಾಧನಾ ಮಹೋತ್ಸವದಂದು ಅವರ ಸ್ಮರಣೆ.
ಕಾವೇರಿ ಎಂಬ ಶಬ್ದದ ಅರ್ಥ
ಕಾವೇರಿ ಎಂಬ ಶಬ್ದದಲ್ಲಿರುವ ಕಾವೇರಿಯ ಮಾಹಾತ್ಮ್ಯ
ಎಲ್ಲ ಪ್ರಾಣಿಗಳಲ್ಲಿಯೂ ದೇವರಿದ್ದಾಗ ಗೋವಿಗೆ ಮಾತ್ರ ಏಕೆ ಪೂಜೆ?
ದೇವರನ್ನು ಸರ್ವವ್ಯಾಪಿ ಎನ್ನುತ್ತೀರಿ. ಅಂದ ಮೇಲೆ ನಾಯಿಯಲ್ಲಯೂ ದೇವರಿದ್ದಾನೆ, ಗೋವಿನಲ್ಲಿಯೂ ದೇವರಿದ್ದಾನೆ. ಸೊಳ್ಳೆ ನೊಣಗಳಲ್ಲಿಯೂ ಇದ್ದಾನೆ. ಸೊಳ್ಳೆಯನ್ನು ಕೊಲ್ಲುತ್ತೀರಿ, ನಾಯಿಯನ್ನು ಮುಟ್ಟುವದಿಲ್ಲ, ಗೋವನ್ನು ಪೂಜಿಸುತ್ತೀರಿ. ಏಕೆ ಈ ವೈಷಮ್ಯ?
ಶುಕ್ರವಾರ ಉಪವಾಸ ಮಾಡಬಾರದೇ?
24/07/2020 ಶುಕ್ರವಾರ ನಾಗರ ಚೌತಿ, ಮುತ್ತೈದೆಯರು ಉಪವಾಸ ಮಾಡಬೇಕೆ ಮಾಡಬಾರದೇ ಎಂಬ ಪ್ರಶ್ನೆಗೆ ಉತ್ತರ.
ಗುರುಗಳನ್ನು ಹೇಗೆ ಉಪಾಸನೆ ಮಾಡಬೇಕು?
ಗುರುಗಳಿಗೇಕೆ ಅಷ್ಟು ಮಹತ್ತ್ವ ಮತ್ತು ಅವರನ್ನು ಉಪಾಸನೆ ಮಾಡುವ ಶಾಸ್ತ್ರೀಯವಾದ ಕ್ರಮವೇನು?
ಕೊರೋನಾ ಸಂದರ್ಭದಲ್ಲಿ ಕ್ಷೌರ ಮತ್ತು ಚಾತುರ್ಮಾಸ್ಯ
ಕೊರೋನಾ ಖಾಯಿಲೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ, ಮನೆಯಲ್ಲಿಯೇ ಕ್ಷೌರ ಮಾಡಿಕೊಳ್ಳಬಹುದೆ, ಮತ್ತು ಚಾತುರ್ಮಾಸ್ಯದ ಆಚರಣೆಯ ಕುರಿತ ವಿವರ.
ಕಾಮಪ್ರಸಂಗಗಳ ವಿಶ್ಲೇಷಣೆ
ಕುಂತಿ, ದ್ರೌಪದಿ ಮುಂತಾದವರ ಚಾರಿತ್ರ್ಯವನ್ನು ದ್ರೋಣ, ದ್ರುಪದ ಮುಂತಾದವರ ಜನನದ ಕ್ರಮವನ್ನು ರುದ್ರದೇವರ ಲಿಂಗಪೂಜೆಯನ್ನು ಹೀಯಾಳಿಸುವ ಇಂದಿನ ಆಧುನಿಕರ ಪ್ರಶ್ನೆಗಳಿಗೆ ಉತ್ತರಗಳು
ಈ ಬಾರಿಯ ಗ್ರಹಣ
21-06-2020 ರ ಸೂರ್ಯಗ್ರಹಣದ ಕುರಿತ ಲೇಖನ. ಆಯಾ ರಾಶಿಯ ಶುಭಾಶುಭ ಫಲಗಳ ವಿವರಣೆಯೊಂದಿಗೆ.
ಉತ್ತಮ ಗಂಡನನ್ನು ಪಡೆಯಲು ಪ್ರಾರ್ಥನೆ
ಮದುವೆಗೆ ಪ್ರತಿಬಂಧಕವಾದ ಸಕಲ ದೋಷಗಳ ಪರಿಹಾರಕ್ಕಾಗಿ ಮತ್ತು ಉತ್ತಮ ಪತಿಯನ್ನು ಪಡೆಯುವದಕ್ಕಾಗಿ ಕನ್ಯೆಯರು ಸಲ್ಲಿಸಬೇಕಾದ ಪ್ರಾರ್ಥನೆ.
ವೈರಾಗ್ಯ ಎಂದರೇನು?
ವೈರಾಗ್ಯ ಎನ್ನುವ ಶಬ್ದದ ಅರ್ಥವನ್ನು ಸಂಕ್ಷಿಪ್ತವಾಗಿ ತಿಳಿಸಿ.
ಗುರುಗಳನ್ನು ಸರ್ವತಂತ್ರಸ್ವತಂತ್ರರು ಎಂದು ಕರೆಯಬಹುದೇ?
ಗುರುಗಳೇ, ಪ್ರವಚನದ ಕೊನೆಯಲ್ಲಿ ಗುರುಗಳ ಸ್ಮರಣೆ ಮಾಡುವಾಗ ಅವರನ್ನು ನೀವು ಸರ್ವ ತಂತ್ರ ಸ್ವತಂತ್ರರು ಎಂದು ಹೇಳಿದ್ದೀರಿ. ಇದು ನನಗೆ ಗೊಂದಲವಾಗಿದೆ. ಭಗವಂತ ಮಾತ್ರ ಸರ್ವತಂತ್ರಸ್ವತಂತ್ರನಲ್ಲವೇ? ಇದು ಗುರುಗಳಿಗೆ ಅನ್ವಯವಾಗುವದು ಹೇಗೆ? — ಶ್ರೀಕರ್ ಕಮನೂರು
ಉತ್ತಮ ಹೆಂಡತಿಯನ್ನು ಪಡೆಯಲು ಪ್ರಾರ್ಥನೆ
ಮದುವೆಗೆ ಪ್ರತಿಬಂಧಕವಾದ ಸಕಲ ದೋಷಗಳ ಪರಿಹಾರಕ್ಕಾಗಿ ಮತ್ತು ಉತ್ತಮ ಪತ್ನಿಯನ್ನು ಪಡೆಯುವದಕ್ಕಾಗಿ ಪುರುಷರು ಸಲ್ಲಿಸಬೇಕಾದ ಪ್ರಾರ್ಥನೆ.
ಉದ್ಯೋಗಕ್ಕಾಗಿ ಪ್ರಾರ್ಥನೆ
ಉತ್ತಮವಾದ ಉದ್ಯೋಗವನ್ನು ಪಡೆಯುವದಕ್ಕಾಗಿ ಮತ್ತು ಉದ್ಯೋಗದಲ್ಲಿನ ಕಿರಿಕಿರಿ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಬೇಕಾದ ಪ್ರಾರ್ಥನೆ.
ಮಹಾ ಆಪತ್ತನ್ನು ಪರಿಹರಿಸುವ ಉಗ್ರನರಸಿಂಹ ಸ್ತುತಿ
ಪರಿಹರಿಸಲಿಕ್ಕೆ ಸಾಧ್ಯವಿಲ್ಲದ ಯಾವುದೇ ಆಪತ್ತಿನಿಂದ ನಮ್ಮನ್ನು ಪಾರು ಮಾಡುವ ಉಗ್ರನರಸಿಂಹನ ಚಿಂತನೆ
ಯುದ್ಧದಲ್ಲಿ ಪ್ರಾಣಿಗಳನ್ನು ಕೊಲ್ಲುವದು ತಪ್ಪಲ್ಲವೇ?
ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಾಣಿಗಳನ್ನು ಬಳಸುತ್ತಾನೆ ನಿಜ. ಆದ್ರೆ ಯುದ್ಧದಲ್ಲಿ ಹೀಗೆ ಬಳಸಿ ಅವುಗಳ ಪ್ರಾಣ ತೆಗೆಯುವುದು ಶಾಸ್ತ್ರಕ್ಕೆ ವಿರೋಧವಾಗುವುದಿಲ್ಲವೇ? ಭೀಮಸೇನನಂತಹ ಪರಾಕ್ರಮಿ ಅಮಾಯಕ ಆನೆಗಳ ಮೇಲೆ ಪರಾಕ್ರಮ ತೋರಿಸಿ ಅವುಗಳನ್ನು ಸಾಯಿಸುವುದು ಎಷ್ಟರ ಮಟ್ಟಿಗೆ ಸರಿ? ಹೇಗೆ ಅರ್ಥ ಮಾಡಿಕೊಳ್ಳಬೇಕು?
ದೇವರು ಕಲ್ಲಾಗಲು ಹೇಗೆ ಸಾಧ್ಯ?
ಆಚಾರ್ಯರೇ ನಮಸ್ಕಾರ🙏🏻,ಜಡ ಚೇತನ ಆಗಲ್ಲ, ಚೇತನ ಜಡ ಆಗಲ್ಲ, ಅಂದಮೇಲೆ ಪರಮಚೇತನನಾದ ಭಗವಂತ, ಸ್ವಯಂವ್ಯಕ್ತ ಸ್ಥಳಗಳಲ್ಲಿ ನಮ್ಮ ಕಣ್ಣಿಗೆ ಕಲ್ಲಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಹೇಗೆ ಎಂಬುದನ್ನು ತಿಳಿಸಿ ಆಚಾರ್ಯರೇ🙏🏻🙏🏻 — ಸುಧೀಂದ್ರ
ರಾಮ ಮೋಕ್ಷ ನೀಡಿದ ರೀತಿ
“ನಾನು ಪರಂಧಾಮಕ್ಕೆ ಹೊರಟಿದ್ದೇನೆ, ಮೋಕ್ಷ ಬಯಸುವವರೆಲ್ಲ ನನ್ನೊಡನೆ ಬನ್ನಿ” ಎಂದು ಡಂಗುರ ಹೊಡೆಸಿ ಅನಂತ ಜೀವರನ್ನು ಮೋಕ್ಷಕ್ಕೆ ಜೊತೆಯಲ್ಲಿಯೇ ಕರೆದುಕೊಂಡು ಹೋದ ಅವತಾರ ರಾಮಾವತಾರ. ಆ ಘಟನೆಯ ಚಿತ್ರಣ ಇಲ್ಲಿದೆ, ಕೇಳಿ.
ಹಬ್ಬ ಶ್ರಾದ್ಧಗಳ ಆಚರಣೆ ಹೇಗೆ
ಕೊರೋನಾ ಖಾಯಿಲೆಯಿಂದ ರಾಷ್ಟ್ರಕ್ಷೋಭ ಉಂಟಾಗಿರುವ ಈ ಸಂದರ್ಭದಲ್ಲಿ ಶ್ರಾದ್ಧ ಬಂದರೆ ಹೇಗೆ ಮಾಡಬೇಕು, ಯುಗಾದಿಯ ಆಚರಣೆ ಹೇಗಿರಬೇಕು?
ಕೊರೋನಾ ನಾಶಕ್ಕಾಗಿ ಪ್ರಾರ್ಥನೆ
ಕೊರೋನಾ ವೈರಸ್ಸಿನ ನಾಶಕ್ಕಾಗಿ ಮಾಡಬೇಕಾದ ಪ್ರಾರ್ಥನೆ, ಕನ್ನಡ, ತೆಲುಗು, ತಮಿಳು, ಮಲಯಾಳಿ, ಹಿಂದಿ ಮತ್ತು ಇಂಗ್ಲಿಷ್ ಲಿಪಿಗಳಲ್ಲಿ. ಆಡಿಯೋ ವಿಡಿಯೋ ರೂಪದಲ್ಲಿ ಸಹಿತ.
ಕೊರೋನಾ ನಾಶವಾಗಲಿ
ಕೊರೋನಾ ವೈರಸ್ಸಿನಿಂದ ಉಂಟಾದ ರೋಗದ ನಾಶಕ್ಕೆ ನಾವು ಮಾಡಬೇಕಾದ ಪ್ರಯತ್ನ, ಪ್ರಾರ್ಥನೆಗಳು. ದೇವರ ಮೇಲೆ ಭಾರ ಹಾಕಿ ಸುಮ್ಮನಿರಬಹುದಲ್ಲವೇ ಎಂಬ ಪ್ರಶ್ನೆಗೆ ಸ್ವಯಂ ಶ್ರೀಮದಾಚಾರ್ಯರು ಕೊಟ್ಟ ಉತ್ತರದೊಂದಿಗೆ.
ಕುಶಲವರೋ, ಲವಕುಶರೋ?
ನನ್ನ ಪ್ರಶ್ನೆ, ನೀವು ಪ್ರತಿಬಾರಿ ಕುಶ - ಲವರು ಎಂದು ಸಂಭೋಧಿಸಿದ್ದಿರಾ. ನಾನು ರಾಮಾಯಣ ಕಥೆ ಕೇಳಿದಾಗ ರಾಮನ ಮಕ್ಕಳ ಹೆಸರು ಲವ - ಕುಶರು ಎಂದೇ ಕೇಳಿದ್ದೇನೆ. ಇದೇ ಮೊದಲ ಬಾರಿಗೆ ನಿಮ್ಮ ಪ್ರವಚನದಲ್ಲಿ ಕುಶ - ಲವರು ಎಂದು ಕೇಳಿದೆನು. ಇದರ ಕಾರಣ ವೇನು? ಇದಕ್ಕೆ ಒಳ ಅರ್ಥವಿದೆಯಾ?
ರುದ್ರಾಕ್ಷಿ ಮತ್ತು ತುಳಸೀಮಣಿ
ರುದ್ರಾಕ್ಷಿ ಮಾಲೆ ಹಾಗೂ ತುಳಸಿ ಮಾಲೆಯನ್ನು ಒಬ್ಬ ವ್ಯಕ್ತಿ ಏಕ ಕಾಲದಲ್ಲಿ ಧರಿಸಬಹುದೇ? ದಯವಿಟ್ಟು ಉತ್ತರಿಸಿ. — ನಿತ್ಯಾನಂದ ಭಟ್
ಸಪಿಂಡೀಕರಣವನ್ನು ಮನೆಯ ಮೇಲೆ ಮಾಡಬಹುದೇ?
ಮುತ್ತೈದೆಯರು ಸತ್ತಾಗ ತುಳಸಿ ಹಾರವನ್ನು ಅವರಿಗೆ ಹಾಕಬಹುದಾ ಧರ್ಮೊದಕ ಮತ್ತು ಸಪಿಂಡಿಕರಣ ಶ್ರಾದ್ಧವನ್ನು ಮನೆಯ ಮಹಡಿಯ ಮೇಲೆ ಮಾಡಬಹುದಾ...
ಈಗೇಕೆ ರಾಮಾಯಣದ ಪ್ರವಚನಗಳು
ಮೂರನೆಯ ಸ್ಕಂಧದ ಪ್ರವಚನಗಳು ನಡೆಯುವಾಗ ಮಧ್ಯದಲ್ಲೇಕೆ 12-03-2020 ರಿಂದ ರಾಮಾಯಣದ ಪ್ರವಚನದ ಆರಂಭಿಸಿದ್ದೀರಿ?
ಧನಿಷ್ಠಾ ಶ್ರಾದ್ಧ
ಮಾಘ ಮಾಸದ ಅಮಾವಾಸ್ಯೆಯಂದು ಧನಿಷ್ಠಾನಕ್ಷತ್ರವಿದ್ದಲ್ಲಿ ಆ ದಿವಸ ಶ್ರಾದ್ಧ ಮಾಡಿದಾಗ ಪಿತೃಗಳಿಗೆ ಹತ್ತುಸಾವಿರ ವರ್ಷದ ತೃಪ್ತಿಯುಂಟಾಗುತ್ತದೆ.
ಬಲಿಯ ಬಂಧಿಸಿದ್ದು ಎಷ್ಟರ ಮಟ್ಟಿಗೆ ಸರಿ?
ಭಕ್ತನಾದ ಬಲಿಯನ್ನು ದೇವರು ಬಂಧಿಸಿ ಪಾತಾಳಕ್ಕೆ ತುಳಿದದ್ದು ತಪ್ಪಲ್ಲವೇ? “ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು” ಎಂದು ಶ್ರೀ ಕನಕದಸಾರ್ಯರೂ ಹೇಳುತ್ತಾರೆ, ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು?
ಸತ್ತವರಿಗಳಲೇಕೆ?
ಸತ್ತು ಹೋದ ಬಾಂಧವರನ್ನು ನೆನೆದು ಅಳುತ್ತ ಕೂಡುವದು ತಪ್ಪು ಎಂದು ಶಾಸ್ತ್ರಗಳು ಹೇಳುತ್ತವೆ. ಏಕೆ ಹೇಗೆ. ನಮ್ಮ ಬಾಂಧವರಿಗಾಗಿ ನಾವು ಕಣ್ಣೀರನ್ನೂ ಹಾಕಬಾರದೇ? ಶಾಸ್ತ್ರದ ಅಭಿಪ್ರಾಯವೇನು?
ಭೀಷ್ಮರ ನಿರ್ಯಾಣ
ವ್ಯಾಸ-ಪರಶುರಾಮ-ಶ್ರೀಕೃಷ್ಣ ಎಂಬ ಮೂರು ರೂಪಗಳ ದೇವರನ್ನು ಕಾಣುತ್ತಲೇ ಮಾಘ ಶುದ್ಧ ಅಷ್ಟಮಿಯಂದು ದೇಹತ್ಯಾಗ ಮಾಡಿದ ಭೀಷ್ಮಾಚಾರ್ಯರ ಅದ್ಭುತ ನಿರ್ಯಾಣದ ಚಿತ್ರಣ ಇಲ್ಲಿದೆ. ತಪ್ಪದೇ ಕೇಳಿ.
ಭೀಷ್ಮಾಚಾರ್ಯರು ಮಾಡಿದ ಕಡೆಯ ಸ್ತೋತ್ರ
ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿ ದೇಹತ್ಯಾಗ ಮಾಡುವ ಕಟ್ಟ ಕಡೆಯ ಕ್ಷಣದಲ್ಲಿ ಮಾಡಿದ ಸ್ತೋತ್ರ ಅರ್ಥಾನುಸಂಧಾನ.
ಭೀಷ್ಮಾಷ್ಟಮೀ ಆಚರಣೆ
ಭೀಷ್ಮಾಷ್ಟಮಿಯನ್ನು ಎಂದು ಆಚರಿಸಬೇಕು, ತರ್ಪಣವನ್ನು ಯಾರುಯಾರು ನೀಡಬೇಕು? ನಮ್ಮ ಪಿತೃಗಳಿಗೂ ತಿಲತರ್ಪಣ ನೀಡಬಹುದೇ? ರಾತ್ರಿ ಊಟ ಮಾಡಬಹುದೇ ಮಾಡಬಾರದೇ ?
ತನ್ಮಯತೆಯ ಸ್ಮರಣೆ
ಅದೆಂತಹುದೇ ಕೆಲಸದ ಮಧ್ಯದಲ್ಲಿದ್ದರೂ ನಾಕೈದು ಕ್ಷಣಗಳ ಕಾಲ ನಾವು ತನ್ಮಯರಾಗಿ ದೇವರ ನಾಮಸ್ಮರಣೆಯನ್ನು ಮಾಡುವದರಿಂದ ಉಂಟಾಗುವ ಅದ್ಭುತ ಪರಿಣಾಮದ ಚಿತ್ರಣ ಇಲ್ಲಿದೆ.
ಕರ್ಮಗಳು ನಮಗೆ ಅಂಟದಿರಲು ಏನು ಮಾಡಬೇಕು?
ನಮ್ಮ ಹಿಂದಿನ ಜನ್ಮದ ಕರ್ಮಗಳೇ ನಮ್ಮನ್ನು ಸಾಕಷ್ಟು ಕಾಡಿಸುತ್ತಿವೆ. ರೋಗ, ದಾರಿದ್ರ್ಯ ಎಲ್ಲವೂ ಇವೆ. ಈಗ ಮತ್ತೆ ನಮ್ಮಿಂದ ಪಾಪಕರ್ಮಗಳು ನಡೆಯುತ್ತಲೇ ಇವೆ. ನಾವು ಈ ಕರ್ಮದ ಸಂಕೋಲೆಯಿಂದ ಹೊರಬರಲು ಯಾವುದಾದರೂ ಸುಲಭೋಪಾಯವಿದ್ದರೆ ತಿಳಿಸಿ. ಯಾವಾಗಲೂ ಮನಸ್ಸಿನಲ್ಲಿ ಸ್ಮರಣೆ ಮಾಡುವಂತದ್ದು. ಉಳಿದ ಯಾವುದೇ ವ್ರತ, ಅಧ್ಯಯನ ಮಾಡುವಷ್ಟು ಶಕ್ತಿಯಿಲ್ಲ.
ರಾಮನಾಮ ವಿಷ್ಣುಸಹಸ್ರನಾಮಕ್ಕೆ ಸಾಟಿಯೇ?
ರಾಮನಾಮವು ಸಹಸ್ರನಾಮಕ್ಕೆ ಸಾಟಿಯಾಗಿದ್ದರೆ, ಸಹಸ್ರನಾಮ ಯಾಕೆ ಬೇಕು? ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ ವಾಸುದೇವಸಹಸ್ರನಾಮದ ವೈಶಿಷ್ಟ್ಯ ಹಾಗೂ ವಿಷ್ಣುಸಹಸ್ರನಾಮ, ಭಗವದ್ಗೀತೆಗಳ ಅದ್ಭುತ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ, ಸಹಸ್ರ ಎಂಬ ಶಬ್ದದ ಅರ್ಥಾನುಂಸಂಧಾನದೊಂದಿಗೆ.
ಪಾಣಿನಿ ಮಹರ್ಷಿಗಳ ಕಥೆ
ಎಷ್ಟು ಪ್ರಯತ್ನ ಪಟ್ಟರೂ ಫಲ ಸಿಗದೇ ಇದ್ದಾಗ ಏನು ಮಾಡಬೇಕು ಎನ್ನುವವರಿಗೊಂದು ಸ್ಫೂರ್ತಿ ತುಂಬಿಸುವ, ನಮ್ಮ ಜೀವನವನ್ನೇ ಬದಲಿಸುವ ಶಕ್ತಿಯಿರುವ ಈ ಅದ್ಭುತ ಕಥೆ ನಾಲ್ಕೂ ವರೆ ನಿಮಿಷಗಳ ಆಡಿಯೋದಲ್ಲಿ ಸಂಗೃಹೀತವಾಗಿದೆ.
ಮಲತಾಯಿ ಇದ್ದರೆ ತಾಯಿಯ ಶ್ರಾದ್ಧ ಮಾಡಬಾರದೇ?
ತಾಯಿ ಮೃತಳಾಗಿದ್ದು ತಂದೆ ಮತ್ತು ಮಲತಾಯಿ ಇದ್ದರೆ ತಾಯಿಯ ಶ್ರಾದ್ಧವನ್ನು ಮಗನು ಮಾಡಬಹುದೇ?
ಅನೇಕ ಬಾರಿ ಹಸ್ತೋದಕ ನೀಡಬಹುದೇ?
ಗುರುಗಳು ನಾವು ನೀಡುವದನ್ನು “ತಿನ್ನುವದಿಲ್ಲ” ಎಂದು ಹೇಳಿದ್ದೀರಿ. ಅಂದಮೇಲೆ ಎಷ್ಟು ಬಾರಿಯಾದರೂ ಸಹ ಹಸ್ತೋದಕವನ್ನು ನೀಡಬಹುದೇ? ಮತ್ತು ಒಬ್ಬರೇ ಯತಿಗಳಿಗೆ ಅನೇಕ ಕಡೆಯಲ್ಲಿ ಒಂದೇ ದಿವಸ ಅನೇಕ ಹಸ್ತೋದಕ ಆಗುತ್ತಿರಬೇಕಾದರೆ ಒಂದೇ ಸನ್ನಿಧಾನದಲ್ಲಿ ಅನೇಕ ಬಾರಿ ಹಸ್ತೋದಕ ಮಾಡುವದು ತಪ್ಪು ಹೇಗಾಗುತ್ತದೆ?
ಮಧ್ಯಾಹ್ನದ ಸಂಧ್ಯಾವಂದನೆಯನ್ನು ಬೆಳಿಗ್ಗೆ ಮಾಡುವದು ಉತ್ತಮವೋ, ಸಂಜೆ ಮಾಡುವದು ಉತ್ತಮವೋ?
ನಾವು ಕೆಲಸಕ್ಕೆ ಹೋಗುವದರಿಂದ ಮಧ್ಯಾಹ್ನದ ಸಂಧ್ಯಾವಂದನೆಯನ್ನು ಮಧ್ಯಾಹ್ನಕಾಲದಲ್ಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬೆಳಿಗ್ಗೆ ಅಥವಾ ಸಂಜೆ ಮಾಡಬೇಕಾಗುತ್ತದೆ. ಯಾವಾಗ ಮಾಡಿದರೆ ಉತ್ತಮ ಎನ್ನುವದನ್ನು ತಿಳಿಸಿ.
ಹಸ್ತೋದಕದ ಕುರಿತ ಚರ್ಚೆ
ಹಸ್ತೋದಕ ಪಾದೋದಕ ಎಂದರೇನು, ಅವುಗಳನ್ನು ಸ್ವೀಕರಿಸಬೇಕೇ ಸ್ವೀಕರಿಸಬಾರದೆ ಎಂಬ ವಿಷಯದ ಕುರಿತ ಚರ್ಚೆ ಇಲ್ಲಿದೆ.
ಶೂನ್ಯತಿಥಿ ಇದ್ದ ದಿವಸವೂ ಜಲತರ್ಪಣವನ್ನು ನೀಡಬೇಕೆ?
ಪಂಚಾಂಗದಲ್ಲಿ ಕೆಲವು ದಿವಸಗಳಲ್ಲಿ ಶೂನ್ಯತಿಥಿ, ಶ್ರಾದ್ಧ ಇರುವದಿಲ್ಲ ಎಂದು ಮುದ್ರಿಸಿರುತ್ತಾರೆ, ಅಂತಹ ದಿವಸಗಳಲ್ಲಿ ನಾವು ಶ್ರಾದ್ಧವನ್ನು ಮಾಡುವದಿಲ್ಲ. ಹಾಗಾದರೆ, ನಾವು ಪ್ರತಿನಿತ್ಯ ನೀಡುವ ಜಲತರ್ಪಣವನ್ನು ಅಂತಹ ದಿವಸಗಳಲ್ಲಿ ನೀಡಬೇಕೇ, ನೀಡಬಾರದೆ? ನೀಡಬೇಕೆಂದರೆ ಯಾವ ತಿಥಿಯನ್ನು ಗ್ರಹಿಸಬೇಕು?
ತಂದೆ ತಾಯಿ ಇರುವವರು ಗಯಾಯಾತ್ರೆ ಮಾಡಬಹುದೇ?
ತಾಯಿ ಬದುಕಿರುವವರು ಮಾತೃಗಯಾಕ್ಕೆ ಹೋಗಬಹುದೇ, ತಂದೆ ಬದುಕಿರುವವರು ಗಯಾಕ್ಷೇತ್ರಕ್ಕೆ ಹೋಗಬಹುದೆ?
ಗ್ರಹಣ ಸಮರ್ಪಣೆ
ಗ್ರಹಣ ಕಾಲದಲ್ಲಿ ಮಾಡಿದ ಸಕಲ ಸತ್ಕರ್ಮಗಳ ಸಮರ್ಪಣೆಯ ಕ್ರಮ ಇಲ್ಲಿದೆ.
ಸೂರ್ಯಗ್ರಹಣ ಪ್ರಾರ್ಥನೆಯ ಪಠಣ
ಸೂರ್ಯಗ್ರಹಣ ಕಾಲದಲ್ಲಿ ಮಾಡಬೇಕಾದ ಪ್ರಾರ್ಥನೆಯ ಕೇವಲ ಪಠಣ ಮಾತ್ರ ಇಲ್ಲಿದೆ. ಅರ್ಥ ತಿಳಿದವರು ಇದನ್ನು ಕೇಳುತ್ತ ಪಠಿಸಬಹುದು. ಅರ್ಥ ಸಹಿತವಾಗಿಯೂ ಈಗಾಗಲೇ ಪ್ರಕಟಿಸಲಾಗಿದೆ. VNP158
ಸೂರ್ಯಗ್ರಹಣ ಪ್ರಾರ್ಥನೆ ಅರ್ಥಸಹಿತ
ಸೂರ್ಯಗ್ರಹಣ ಕಾಲದಲ್ಲಿ ಮಾಡಬೇಕಾದ ದಿಗ್ದೇವತೆಗಳ ಪ್ರಾರ್ಥನೆಯ ನಿರೂಪಣೆ ಇಲ್ಲಿದೆ, ಅರ್ಥಸಮೇತವಾಗಿ.
ಗ್ರಹಣ ಸಂಕಲ್ಪ
ಗ್ರಹಣಕಾಲದಲ್ಲಿ ಮಾಡಬೇಕಾದ ಸ್ನಾನ, ಜಪ, ಪಾರಾಯಣ, ದಾನ, ಧ್ಯಾನ, ನಮಸ್ಕಾರಗಳ ನಿಷ್ಕಾಮ ಮತ್ತು ಸಕಾಮ ಸಂಕಲ್ಪ ಗಳು ಇಲ್ಲಿವೆ. ಅರ್ಥಸಹಿತವಾಗಿ.
ದತ್ತಾತ್ರೇಯನಿಗೆ ಮೂರು ಮುಖಗಳಿವಯೇ?
ದತ್ತಾತ್ರೇಯ ಎಂದರೆ ಯಾರು, ಚಿತ್ರಗಳಲ್ಲಿ ಕಾಣುವಂತೆ ಅವರಿಗೆ ಮೂರು ಮುಖಗಳಿವೆಯೇ. ದತ್ತಾತ್ರೇಯ ರೂಪದ ಮತ್ತು ಜಯಂತಿಯ ಕುರಿತು ತಿಳಿಸಿ.
ಸ್ವೋತ್ತಮರು ಎಂದರೆ ಯಾರು
ಸ್ವೋತ್ತಮ ಎಂಬ ಶಬ್ದಕ್ಕೆ ಅರ್ಥವೇನು, ಯಾರನ್ನು ಸ್ವೋತ್ತಮರು ಎಂದು ಗ್ರಹಿಸಬೇಕು
ಪ್ರವರದಲ್ಲಿ ನಾವು ಸುಳ್ಳು ಹೇಳುತ್ತಿದ್ದೇವೆಲ್ಲವೇ?
ಸಂಧ್ಯಾವಂದನೆ ಮುಂತಾದ ಸಂದರ್ಭಗಳಲ್ಲಿ ನಾವು ನಮ್ಮ ಪ್ರವರ ಹೇಳಿ ನಮಸ್ಕಾರ ಮಾಡುತ್ತೇವೆ. ಪ್ರವರದಲ್ಲಿ “ಋಕ್ ಶಾಖಾಧ್ಯಾಯೀ, ಯಜುಃಶಾಖಾಧ್ಯಾಯೀ” ಎಂದು ನಾನು ಋಗ್ವೇದವನ್ನು ಓದುತ್ತಿರುವವನು, ಯಜುರ್ವೇದವನ್ನು ಓದುತ್ತಿರುವವನು ಎಂದು ಹೇಳುತ್ತೇವೆ. ನಾವು ಓದುತ್ತಿಲ್ಲವಾದ್ದರಿಂದ ಅದು ಸುಳ್ಳು. ಸುಳ್ಳಿನ ಪ್ರವರ ಹೇಳುವದರಿಂದ ಪ್ರವರವನ್ನೇ ಹೇಳದಿರುವದು ಒಳಿತಲ್ಲವೇ?
ದಾಸರಾಯರದು ದೈನ್ಯದ ಬದುಕಲ್ಲವೇ?
“ವಿನಾ ದೈನ್ಯೇನ ಜೀವನಮ್” ಎಂದು ದಿನನಿತ್ಯ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಹಿರಿಯರು ಹೇಳಿಕೊಟ್ಟಿದ್ದಾರೆ. ಆದರೆ, ದಾಸರು, ರಾಯರು ಮುಂತಾದ ಮಹಾನುಭಾವರು ದೈನ್ಯದ ಜೀವನವನ್ನೇ ನಡೆಸಿದಂತೆ ತೋರುತ್ತದೆ. ಹಾಗಾದರೆ ಅವರು ಪ್ರಾರ್ಥನೆ ಮಾಡಲಿಲ್ಲವೇ, ಅಥವಾ ಪ್ರಾರ್ಥನೆ ಫಲಿಸಲಿಲ್ಲವೇ?
ಭಕ್ತಿ ಎಂದರೇನು?
ಶ್ರೀಮದಾಚಾರ್ಯರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ, ಟೀಕಾಕೃತ್ಪಾದರು ವಿವರಿಸಿದ್ದಾರೆ, ಕನಕದಾಸಾರ್ಯರು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಈ ಮೂರು ಮಹಾನುಭಾವರ ವಚನಗಳ ಅರ್ಥಾನುಸಂಧಾನದೊಂದಿಗೆ ಭಕ್ತಿ ಎಂದರೇನು ಎಂಬ ವಿವರಣೆ ಇಲ್ಲಿದೆ.
ಬಲಗೈಗೆ ಪೆಟ್ಟಾಗಿದ್ದರೆ ಅಥವಾ ಮುರಿದಿದ್ದರೆ ಎಡಗೈಯಿಂದ ತರ್ಪಣ ನೀಡಬಹುದೆ?
ಎಡಗೈಯಿಂದ ಯಾವ ದೇವ-ಪಿತೃಕಾರ್ಯಗಳನ್ನು ಮಾಡಬಾರದು ಎನ್ನುತ್ತಾರೆ, ಆದರೆ, ಬಲಗೈಗೆ ಪೆಟ್ಟಾಗಿದ್ದಾಗ, ಅಥವಾ ಬಲಗೈ ಮುರಿದೇ ಹೋಗಿದ್ದಾಗ ದೇವ ಪಿತೃ ಕಾರ್ಯಗಳನ್ನು ಮಾಡಲೇಬಾರದೋ ಅಥವಾ ಎಡಗೈಯಿಂದ ಮಾಡಬಹುದೋ?
ಅಕ್ಷತೆ ಧರಿಸಿ ಮಠಕ್ಕೆ ಹೋಗಬಹುದೆ?
ನಮ್ಮ ಮನೆಯಲ್ಲಿ ಪೂಜೆಯನ್ನು ಮುಗಿಸಿ ಅಂಗಾರ ಅಕ್ಷತೆ ಧರಿಸಿ ಮಠ, ದೇವಸ್ಥಾನಗಳಲ್ಲಿ ಇನ್ನೂ ನೈವೇದ್ಯವಾಗದ ಸಮಯಕ್ಕೆ ಹೋಗಬಹುದೆ.
ದೇವರ ಮನೆಯಲ್ಲಿ, ದೇವರಿಗೆ ಎದುರಾಗಿ ಕನ್ನಡಿಯನ್ನು ಯಾವಾಗಲೂ ಇಡಬಹುದೆ?
ದೇವರಿಗೆ ಕನ್ನಡಿಯನ್ನು ಹೇಗೆ ಸಮರ್ಪಿಸಬೇಕು, ಎನ್ನುವದರ ಕುರಿತು ಶ್ರೀ ನಾರಾಯಣಪಂಡಿತಾಚಾರ್ಯರು, ಶ್ರೀ ಸ್ಮೃತಿಮುಕ್ತಾವಲಿಕೃಷ್ಣಾಚಾರ್ಯರು ತಿಳಿಸಿರುವ ವಿಷಯದ ನಿರೂಪಣೆ.
ಮಗು ಹುಟ್ಟುವ ಮುನ್ನ ಮಗುವಿಗಾಗಿ ಖರೀದಿ ಮಾಡಬಹುದೇ
7-8 ತಿಂಗಳ ಗರ್ಭ ಇರುವಾಗಲೇ ಮುಂದೆ ಹುಟ್ಟುವ ಮಗುವಿಗೆ ಬೇಕಾದ ವಸ್ತುಗಳನ್ನು ತೊಗಳೋಕೆ ಶುರು ಮಾಡ್ತರೆ ಈರೀತಿ ಮಾಡಬಹುದ?
ಮೈಮೇಲೆ ದೇವರು ಬರಲು ಸಾಧ್ಯವೇ?
ಮನುಷ್ಯರ ಮೈಯಲ್ಲಿ ದೇವರು ದೇವತೆಗಳು ಬರಲು ಸಾಧ್ಯವೇ, ಶಾಸ್ತ್ರ ಇದಕ್ಕೇನು ಹೇಳುತ್ತದೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸಂನ್ಯಾಸಿಯಾದವನು ಮತ್ತೆ ಗೃಹಸ್ಥನಾಗಬಹುದೇ? ಶಾಸ್ತ್ರದಲ್ಲಿ ಅನುಮತಿ ಇದೆಯೇ?
ಸಂನ್ಯಾಸಿಯಾದವನು ಮತ್ತೆ ಗೃಹಸ್ಥನಾಗಬಹುದೇ? ಶಾಸ್ತ್ರದಲ್ಲಿ ಅನುಮತಿ ಇದೆಯೇ?
ತುಳಸೀಸ್ತೋತ್ರ
ತುಳಸಿಗೆ ನಮಸ್ಕಾರ ಮಾಡಬೇಕಾದರೆ ಹೇಳಬೇಕಾದ ಸ್ತೋತ್ರದ ಅರ್ಥ ಇಲ್ಲಿದೆ.
ನಾಹಂ ಕರ್ತಾ ಹರಿಃ ಕರ್ತಾ
ಕರ್ಮಸಮರ್ಪಣೆಯ ಕ್ರಮವನ್ನು ತಿಳಿಸುವ ಶ್ಲೋಕದ ಅರ್ಥ
ಶಾಸ್ತ್ರಗ್ರಂಥಗಳ ಇತಿಹಾಸವೇನು, ಯಾವ ಕ್ರಮದಲ್ಲಿ ಅವು ನಮಗೆ ದೊರೆತಿವೆ?
ಮನುಷ್ಯರಿಗೆ ವೇದಗಳು ದೊರೆತದ್ದರಿಂದ ಆರಂಭಿಸಿ, ಬ್ರಹ್ಮತರ್ಕ, ಪಂಚರಾತ್ರಗಳು ದೊರೆತ ಕ್ರಮ, ವೇದಗಳ ವಿಭಾಗ, ವೇದಾರ್ಥನಿರ್ಣಯಕ್ಕಾಗಿ ರಚಿತವಾದ ಬ್ರಹ್ಮಸೂತ್ರಗಳು ಹಾಗೂ ಮಹಾಭಾರತ, ಪುರಾಣಗಳು ಮುಂತಾದ ಗ್ರಂಥಗಳು ದೊರೆತ ರೀತಿ, ಕಲಿಯುಗದಲ್ಲಿ ಆದ ಬುದ್ಧಾವತಾರ, ಆ ನಂತರ ಬಂದ ಉಳಿದ ಮತಗಳು, ಕಡೆಯಲ್ಲಿ ಶ್ರೀಮದಾಚಾರ್ಯರು ರಚಿಸಿರುವ ಗ್ರಂಥಗಳವರಿಗೆ ಬೆಳೆದು ಬಂದಿರುವ ತತ್ವಶಾಸ್ತ್ರದ ರೋಚಕ ಇತಿಹಾಸದ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ
ತೀರ್ಥ, ಪಕ್ಷ ಶ್ರಾದ್ಧದಲ್ಲಿ ಯಾರು ಯಾರಿಗೆ ಪಿಂಡಪ್ರದಾನ ಮಾಡಬೇಕು?
ನನ್ನದು ಒಂದು ಪ್ರಶ್ನೆ. ತಂದೆ ತಾಯಿ ಇಬ್ಬರೂ ಮೃತರಾಗಿದ್ದಾರೆ. ಗಯಾದಲ್ಲಿ ಶ್ರಾದ್ಧ ಮಾಡುವ ಆಲೋಚನೆ ಬಂದಿದೆ. ಅಲ್ಲಿ ತಾಯಿ ಶ್ರಾದ್ಧ ಮಾತ್ರ ಮಾಡುವದೇ ಅಥವಾ ತಂದೆ ಅವರ ಶ್ರಾದ್ಧದ ಜೊತೆಗೆ ಮಾಡಬೇಕೋ. ದಯವಿಟ್ಟು ತಿಳಿಸಿ.
ಶ್ರೀ ಲಕ್ಷ್ಮೀಕಾಂತತೀರ್ಥರು
ಘನಗಿರಿ ಕ್ಷೇತ್ರ ಎಂದು ಪ್ರಸಿದ್ಧವಾದ ಪೆನುಗೊಂಡೆಯ ಉಪೇಂದ್ರನದಿಯ ತೀರದಲ್ಲಿ ವಿರಾಜಮಾನರಾಗಿರುವ ಗುರುಗಳು ಶ್ರೀ ಲಕ್ಷ್ಮೀಕಾಂತತೀರ್ಥ ಗುರುಸಾರ್ವಭೌಮರು. ಶ್ರಾವಣ ಶುದ್ಧ ಸಪ್ತಮಿ ಅವರ ಆರಾಧನಾ ಮಹೋತ್ಸವ.
ಶ್ರೀ ಲಕ್ಷ್ಮೀಕಾಂತತೀರ್ಥರ ಚರಮಶ್ಲೋಕದ ಅರ್ಥ
ನಮಸ್ಕಾರ. लक्ष्मीकान्तगुरुं वन्दे लक्ष्मणार्यमहं सदा। रक्षितान् स्वेन कुर्वाणं लक्ष्मीशान् भिक्षुकानपि।। अहं भिक्षुकानपि लक्ष्मीशान् कुर्वाणं,सदारक्षितान्, लक्ष्मीकान्तगुरुं वन्दे लक्ष्मणार्यं ಅನ್ವಯದಲ್ಲಿ ಹೇಗೆ ಕೂಡುತ್ತೆ? ಅದರ ಅರ್ಥ ಏನು? केन रक्षितः ಮತ್ತು कः रक्षितः? स्वेन ಅಂದರೆ ಯಾರಿಂದ? ಶ್ಲೋಕಾರ್ಥ ತಿಳಿಸಿ ಅಂತ ಪ್ರಾರ್ಥನ. — ಶ್ಯಾಮ್
ಏಕಾದಶಿ ದ್ವಾದಶಿಗಳಂದು ಧನುರ್ಮಾಸದ ಆಚರಣೆ ಹೇಗೆ?
ಪೂಜ್ಯ ಗುರುಗಳಿಗೆ ನಮಸ್ಕಾರಗಳು. ಧನುರ್ಮಾಸದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ನೈವೇದ್ಯ ಎಂದು ಹೇಳಿದ್ದೀರಿ. ದ್ವಾದಶಿಯಂದೂ ಹಾಗೆಯೇ ಮಾಡಬೇಕಾ? ಹಾಗೆಯೇ ಏಕಾದಶಿಯಂದು ದೇವರಿಗೆ ಮಾತ್ರ ಹುಗ್ಗಿ ಸಮರ್ಪಿಸಲೇಬೇಕಾ? ದಯವಿಟ್ಟು ತಿಳಿಸಿ. — ರಾಘವೇಂದ್ರ ಉಮರ್ಜಿ.
ಪಂಢರಪುರದ ವಿಠ್ಠಲ ದೇವರೋ. ಪ್ರತಿಮೆಯೋ?
ಆಚಾರ್ಯರಿಗೆ ನಮಸ್ಕಾರಗಳು. ಪಂಡರಾಪುರದ ಪಾಂಡುರಂಗನನ್ನು ನಾವು ಸಾಕ್ಷಾತ್ ದೇವರೆಂದು ತಿಳಿಯಬೇಕೊ ಇಲ್ಲವೇ ದೇವರ ಮೂತಿ೯ ಎಂದು ನಾವು ಚಿಂತಿಸಬೇಕೆ ? ದಯವಿಟ್ಟು ತಿಳಿಸಿ. ಪ್ರಶಾಂತ ಕುಲಕರ್ಣಿ, ಬಾಗಲಕೋಟೆ
ಘಾತಚತುರ್ದಶಿಯಂದು ಮೃತರಾದವರಿಗೆ ಕಾಲಶ್ರಾದ್ಧ ಹಾಗು ಮಹಾಲಯ ಯಾವಾಗ ಮಾಡಬೇಕು?
ಆಚಾರ್ಯರೇ ಪಕ್ಷ ಮಾಸದ ಚತುರ್ದಶಿಯಂದು ಮೃತರಾದವರಿಗೆ ಕಾಲಶ್ರಾದ್ಧ ಹಾಗು ಮಹಾಲಯ ಯಾವಾಗ ಮಾಡಬೇಕು? — ವಾಜಿ
ನವಗ್ರಹಗಳನ್ನು ತಾರತಮ್ಯದ ಕ್ರಮದಲ್ಲಿ ಪೂಜಿಸಬೇಕಲ್ಲವೇ?
ಆಚಾರ್ಯರಿಗೆ ನಮಸ್ಕಾರಗಳು. ನವಗ್ರಹ ದೇವತೆಗಳನ್ನು ಪೂಜಿಸುವಾಗ ತಾರತಮ್ಯ ರೀತಿ ಯಿಂದ ಪೂಜಿಸ ಬೇಕೇ? ಗುರು, ಸೂರ್ಯ, ಚಂದ್ರ......... ಅಥವಾ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ......... ಹೀಗೆ ಪೂಜಿಸ ಬಹುದೇ? ದಯವಿಟ್ಟು ತಿಳಿಸಿ. ಸರಿಯಾದ ತಾರತಮ್ಯ ತಿಳಿ ಸ ಬೇಕಾಗಿ ವಿನಂತಿಸುತ್ತೇನೆ. — ವಸುಧೇಂದ್ರ
ಜೀರ್ಣವಾದ ಪುಸ್ತಕಗಳನ್ನು ಹೇಗೆ ವಿಸರ್ಜಿಸಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಹರಿದ ಅಥವಾ ಮಲಿನವಾದ ಮಂತ್ರಪುಸ್ತಕಗಳನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿ. — ಉದ್ಯಾವರ ನಾಗರಾಜ್
ಶಾಕ, ದ್ವಿದಳ ವ್ರತಗಳಲ್ಲಿ ತಿರುಪತಿ ಲಡ್ಡು ಮುಂತಾದ ಪ್ರಸಾದವನ್ನು ತಿನ್ನಬಹುದೇ?
ಆಚಾರ್ಯರಿಗೆ ವಂದನೆಗಳು. ನಮ್ಮಕ್ಕ ತಿರುಪತಿಯ ಲಡ್ಡು ಪ್ರಸಾದ ತಂದು ಕೊಟ್ಟಿದ್ದಾರೆ. ಶಾಕ ವ್ರತದಲ್ಲಿ ಸ್ವೀಕರಿಸಬಹುದೇ ಎಂಬ ಗೊಂದಲದ ಮದ್ಯದಲ್ಲಿ ಪ್ರಸಾದವಾದ್ದರಿಂದ ಸ್ವೀಕರಿಸಿದ್ದೇನೆ. ತಪ್ಪಾಗಿದ್ದಲ್ಲಿ ಏನು ಮಾಡಬೇಕೆಂದು ತಿಳಿಸಿಕೊಡಿ. - ರಾಘವೇಂದ್ರ.
ದೇವರಿಗೆ ಅರ್ಪಿಸಿದ ಕರ್ಮವನ್ನು ಜೀವರಿಗೆ ನೀಡುವದು ಹೇಗೆ?
ನಾವು ಕರ್ಮಫಲವನ್ನು ಕೂಡ ಕೃಷ್ಣಾರ್ಪಣ ಎಂದು ಬಿಡುತ್ತೀವಿ. ಆ ಫಲ ಕೂಡ ನಮ್ಮ ಬಳಿ ಇರುವದಿಲ್ಲ ಅಂತ ಕೇಳಿದ್ದೀವಿ. ನಮಗೆ ಅಧಿಕಾರ ಹೇಗೆ ಬರುತ್ತದೆ. M ಶ್ರೀನಾಥ್, ಬೆಂಗಳೂರು
ಧರ್ಮೋದಕವನ್ನು ಯಾರು ಹೇಗೆ ನೀಡಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಧರ್ಮೋದಕ ಅಂದರೆ ಏನು. ಪುರೋಹಿತರು ಮಹಿಳೆಯರು ಮತ್ತು ಚಿಕ್ಕ ಹುಡುಗರಿಂದ (ಅನುಪನೀತರಿಂದ) ಧರ್ಮೋದಕವನ್ನು ಬಿಡಿಸುತ್ತಾರೆ. ಇದು ಸರಿಯೇನಾ? ಧರ್ಮೋದಕವನ್ನು ಬಿಡುವಾಗ ಅನುಸಂಧಾನ ಏನು ಮಾಡಬೇಕು? ತಿಳಿಸಿರಿ. - ಮುದಿಗಲ್ ಶ್ರೀನಾಥ್
ಅನಂತಗುಣಪೂರ್ಣತೆಗೂ ಸಕಲಗುಣಪೂರ್ಣತೆಗೂ ಏನು ವ್ಯತ್ಯಾಸ
ಆಚಾರ್ಯರೇ ನಮಸ್ಕಾರಗಳು 🙏 ಭಗವಂತನ ಅನಂತ ಗುಣಗಳಿಗೂ ಸಕಲ ಗುಣಗಳಿಗೂ ಏನು ವ್ಯತ್ಯಾಸ? ಅನಂತ ಅಂದರೆ ಅಂತ್ಯ ಇಲ್ಲದಿರುವುದು ಅಂತ ಅರ್ಥ ನೀಡೋವಾಗ ಸಕಲ ಎಂಬ ಅರ್ಥವೂ ಅಲ್ಲಿ ಸೇರುವುದಿಲ್ಲವೇ? ದಯಮಾಡಿ ತಿಳಿಸಿ ಆಚಾರ್ಯರೇ 🙏 — ಪ್ರಮೋದ, ಬೆಂಗಳೂರು
ಅನಂತಗುಣಪೂರ್ಣನನ್ನು ಆರು ಗುಣದವನು ಎಂದು ಕರೆಯಬಹುದೇ?
ಗುರುಗಳಿಗೆ ನಮಸ್ಕಾರ, ದೇವರು ಅನಂತ ಗುಣಪರಿಪೂರ್ಣ. ಆದರೆ ಅನಂತಗುಣಪರಿಪೂರ್ಣನನ್ನು ಆರುಗುಣವುಳ್ಳವನು,ಷಡ್ಗುಣೈಶ್ವರ್ಯಪೂರ್ಣನು, ಭಗವಾನ್ ಎಂದು ಕರೆಯುತ್ತಾರೆ ಐಶ್ವರ್ಯಸ್ಯ, ಸಮಗ್ರ ಸ್ಯ, ವೀರ್ಯಸ್ಯ, ಯಶಸ:ಶ್ರೀಯ:ಜ್ಞಾನ ವಿಜ್ಞಾನ ಯೋಶ್ಚೈವ ಷಣ್ಣಾಂ ಭಗವಂತ ಇತೀರಣಾ ಇದು ಯುಕ್ತ ವೇ? ಪ್ರಣವ್, ಬಳ್ಳಾರಿ
ಕೇದಾರನಾಥಕ್ಕೆ ಮಾಧ್ವರು ಏಕೆ ಹೋಗಬಾರದು
ಶ್ರೀ ಗುರುಭ್ಯೋ ನಮಃ, ಆಚಾರ್ಯರೇ, ವಿನಮ್ರ ಪೂರ್ವಕ ನಮಸ್ಕಾರಗಳು. ಮಾಧ್ವರು ಕೇದಾರನಾಥ ಮತ್ತು ನೇಪಾಳದ ಪಶುಪತಿನಾಥಕ್ಕೆ ಹೋಗಬಾರದೆಂದು ಹಿರಿಯರು ಹೇಳುವದನ್ನು ಕೇಳಿದ್ದೇವೆ. ಇದು ಸತ್ಯವಾ? ಸತ್ಯವಾಗಿದ್ದಲ್ಲಿ ಕಾರಣ ತಿಳಿಸಿ. — ಭಾರ್ಗವ ರಾವ್, ಬೆಂಗಳೂರು.
ಬದುಕಿರುವಾಗಲೇ ಗೋದಾನ ಮಾಡಬಹುದೇ?
ಮಾತಾ ಪಿತೃಗಳ ಜೀವಿತಾವಧಿಯಲ್ಲಿ ಅವರ ಶ್ರೇಯಸ್ಸಿಗಿಗಾಗಿ ಗೋದಾನ ಮಾಡಬಹುದೇ? — ಶಾಮಸುಂದರ್ ಕಟ್ಟಿ
ಅಪಮೃತ್ಯು
ಅಪಮೃತ್ಯು ಎಂದರೇನು, ಆಯುಷ್ಯ ಮುಗಿಯದೇ ಮರಣ ಹೇಗೆ ಉಂಟಾಗಲು ಸಾಧ್ಯ, ಅಯುಷ್ಯ ಮುಗಿದು ಮರಣವಾದರೆ ಅದು ಅಪಮೃತ್ಯು ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ನೀಡುವದರೊಂದಿಗೆ ಅಪಮೃತ್ಯು ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ.
ಬಾಡಿದ ತುಳಸಿಗಿಡವನ್ನು ಏನು ಮಾಡಬೇಕು?
ಬಾಡಿ ಹೋದ ತುಳಸಿಯನ್ನು ತೆಗೆಯಬಹುದೇ, ಹೌದಾದರೆ ಕ್ರಮವನ್ನು ತಿಳಿಸಿ. ಮತ್ತು ಆ ತುಳಸೀ ಗಿಡವನ್ನು ಏನು ಮಾಡಬೇಕು ಎನ್ನುವದನ್ನೂ ತಿಳಿಸಿ. — ಪದ್ಮಿನಿ. ಬೆಂಗಳೂರು.
ಯಾವ ಶ್ರಾದ್ಧವನ್ನು ಎಲ್ಲಿ ಮಾಡಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಪಿತೃಕಾಯರ್ಯವನ್ನು (ತಿಲ ತರ್ಪಣ/ಪಿಂಡಪ್ರದಾನ) ಕತೃಗಳೇ ನದಿ ಅಥವಾ ಮನೆಯಲ್ಲಿ ಮಾಡಬಹುದಾ... ದಯವಿಟ್ಟು ವಿಧಿ ವಿದಾನಗಳನ್ನು ತಿಳಿಸಿ. — ನರಸಿಂಹ ಮೂರ್ತಿ
ಕ್ಷೇತ್ರಗಳಲ್ಲಿ ಮೃತರಾದರೆ ಅಂತ್ಯಸಂಸ್ಕಾರ ಹೇಗೆ?
ಪವಿತ್ರ ಕ್ಷೇತ್ರ ದರ್ಶನಕ್ಕೆ ಹೋಗಿ ಮೃತರಾದರವರಿಗೆ ವಿಧಿಗಳು ಏನಾಗಿರುತ್ತದೆ. ಮೃತಶರೀರ ದಾಹಾದಿಗಳು ಬೇಕಿಲ್ಲವೇ? ದಯವಿಟ್ಟು ತಿಳಿಸಿ — ಎನ್. ವಿ. ಪದ್ಮನಾಭ
ಪ್ರತಿ ಸೃಷ್ಟಿಯಲ್ಲಿಯೂ ಬೇರೆ ಬೇರೆ ಲಕ್ಷ್ಮಿಯರಿರುರಾತ್ತರಾ?
ನಮಸ್ಕಾರ ಆಚಾರ್ಯರಿಗೆ, ನನ್ನ ಪ್ರಶ್ನೆ ಏನೆಂದರೆ ಬ್ರಹ್ಮಪದವಿ, ಇಂದ್ರಪದವಿ ತರಹ ಲಕ್ಷ್ಮೀಪದವಿಯಾ, ಇಲ್ಲ ಯಾವಾಗಲೂ ಒಬ್ಬಳೇ ಲಕ್ಷ್ಮೀನಾ? ದಯಮಾಡಿ ನನ್ನ ಸಂದೇಹವನ್ನು ಪರಿಹರಿಸಿ. —— ಕಮಲಾಕರ್
2018 ರ ಭೀಷ್ಮಾಷ್ಟಮಿ ಎಂದು ಆಚರಿಸಬೇಕು?
ಕೆಲವರು ಭೀಷ್ಮಾಷ್ಟಮಿಯನ್ನು ಗುರುವಾರ ಆಚರಿಸಬೇಕೆಂದು, ಕೆಲವರು ಬುಧವಾರ ಆಚರಿಸಬೇಕೆಂದು ಹೇಳುತ್ತಿದ್ದಾರೆ. ಯಾವತ್ತು ಆಚರಿಸಬೇಕೆಂದು ತಾವು ವಿವರಿಸಬೇಕಾಗಿ ಕೋರಿಕೊಳ್ಳುತ್ತೇನೆ. — ರಘೂತ್ತಮರಾವ್, ಬೆಂಗಳೂರು.
ಪುರಂದರದಾಸರೇಕೆ ಸಂನ್ಯಾಸಿಗಳಾಗಲಿಲ್ಲ?
ಪುರಂದದರದಾಸರು ವ್ಯಾಸರಾಜರಿಂದ ದಾಸದೀಕ್ಷೆಯನ್ನೇ ಯಾಕೆ ತೆಕ್ಕೊಂಡರು. ಸಂನ್ಯಾಸಿ ಅಗುವ ಎಲ್ಲ ಲಕ್ಷಣ ಅವರಲ್ಲಿ ಈಗ ಇತ್ತು. ತನ್ನ ಮೂಲರೂಪದಲ್ಲಿ ನಾರದರು ಬ್ರಹ್ಮಚಾರಿ ಆಗಿರುವಾಗ ಅವತಾರ ಮಾಡಿ ಬಂದಾಗ ದಾಸದೀಕ್ಷೆಯನ್ನೇ ತೆಗೆದು ಸಂನ್ಯಾಸದೀಕ್ಷೆ ತೆಗೆಯದೇ ಇರಲಿಕ್ಕೆ ವಿಶೇಷ ಏನಾದರೂ ಕಾರಣ ಇರಬಹುದೇ? — ಎಮ್. ಉಲ್ಲಾಸ್ ಹೆಗಡೆ.
ಪ್ರತಿಮೆ, ವೃಂದಾವನಗಳನ್ನು ಮನೆಗೆ ತರಬೇಕಾದರೆ ಅನುಸರಿಸಬೇಕಾದ ನಿಯಮಗಳೇನು?
ಗುರುಗಳೇ, ಪೂಜೆಗಾಗಿ ಸಣ್ಣ ಪ್ರತಿಮೆಗಳನ್ನು ಅಥವಾ ಗುರುಗಳ ಬೃಂದಾವನಗಳನ್ನು ಕೊಂಡಾಗ ಮನೆಗೆ ಯಾವ ರೀತಿ ತರಬೇಕು? — ಪ್ರಸನ್ನ ಸಿಂಹ ರಾವ್
ದೈತ್ಯರಲ್ಲಿ ದೇವರ ಭಕ್ತರಿದ್ದಾರೆಯೇ?
ಹರೇ ಶ್ರೀನಿವಾಸ ನಮಸ್ಕಾರಗಳು ಆಚಾರ್ಯರೇ, ದೈತ್ಯರಲ್ಲೂ ಭಗವದ್ಭಕ್ತರುಂಟೇ, ಇಲ್ಲವಾದಲ್ಲಿ ಅವರು by default ಶ್ರೀಹರಿ ವಾಯು ಗುರುಗಳ ಪ್ರತಿಯಾಗಿ ದ್ವೇಷ ಉಳ್ಳವರೇ ಅದಕ್ಕೇನಾದರೂ ಪುರಾಣಗಳ ಪ್ರಕಾರ ನಿರ್ದಿಷ್ಟವಾದ ಕಾರಣವುಂಟೇ? ದಯೆಯಿಂದ ತಿಳಿಸಿ ಆಚಾರ್ಯರೇ. ಧನ್ಯವಾದಗಳು — ನಾಗರಾಜ ಶರ್ಮ
ಈಗಿನ ಕಾಲದಲ್ಲಿ ದೇವಸ್ಥಾನದ ಹುಂಡಿಗೆ ಹಣ ಹಾಕಬಹುದೇ?
ಗುರುಗಳೇ, ಮನೆಯ ದೇವರಿಗೆ ಕಾಣಿಕೆ ಹಾಗೂ ನೈವೇದ್ಯ ಮಾಡಿಸಲು ಹೋದಾಗ ಅಲ್ಲಿ ಪೂಜೆ ಮಾಡುವ ಅರ್ಹತೆ ಇಲ್ಲದವರು (ಬ್ರಾಹ್ಮಣೇತರರಾಗಿರಬಹುದು, ಬ್ರಾಹ್ಮಣರಾಗಿದ್ದೂ ಬ್ರಾಹ್ಮಣರಂತೆ ಬದುಕುತ್ತಿಲ್ಲದವರಾಗಿರಬಹುದು) ಪೂಜೆ ಮಾಡುತ್ತಿದ್ದರೆ ನಾವು ಏನು ಮಾಡಬೇಕು ಕಾಣಿಕೆ ಡಬ್ಬಿಗೆ ಹಾಕಿದರೂ ಅದು ಕೂಡ ಕಮಿಟಿಗೆ ಹೊಗುತ್ತದೆ ಇಂತಹ ಸಂದರ್ಭಗಳಲ್ಲಿ ಶಾಸ್ತ್ರ ಏನು ಹೇಳುತ್ತದೆ? — ವಿಜಯೀಂದ್ರ ಪೂಜ್ಯ ಆಚಾರ್ಯರೇ, ನಾನು ಒಂದು ದೇವಸ್ಥಾನದಲ್ಲಿಯೇ ಹಿಂದೆ ಕೆಲಸ ಮಾಡುತ್ತಿದ್ದೆ. ಅಲ್ಲಿ ನಡೆಯುವ ಹಣದ ದುರುಪಯೋಗವನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನಗಳಿಗೆ ಸಾಮಾನ್ಯಜನರು ಹಣ ನೀಡುವದು ಎಷ್ಟು ಸಮಂಜಸ? ಈ ರೀತಿ ನೀಡುವದರಿಂದ ಪುಣ್ಯ ಬರುತ್ತದೆಯೇ? — ಉಮಾ ನಾಗರಾಜ್
ಋಣಮೋಚನಸ್ತೋತ್ರ
ಭಕ್ತರ ಸಾಲದ ಬಾಧೆಯನ್ನು ಅತ್ಯಂತ ಸುಲಭವಾಗಿ ಪರಿಹರಿಸುವ ಋಣಮೋಚನ ಸ್ತೋತ್ರದ ಸಾಹಿತ್ಯ ಮತ್ತು ಅರ್ಥಾನುಸಂಧಾನ.
ನಾವು ಮಾಡುವ ಅಲ್ಪ ಧರ್ಮಾಚಾರಣೆಯನ್ನು ದೇವರು ಸ್ವೀಕರಿಸುತ್ತಾನೆಯಾ?
ಆಚಾರ್ಯರೇ, ನಮ್ಮ ಮನೆಯಲ್ಲಿ ನಾವು ಪೂರ್ಣವಾಗಿ ಸದಾಚಾರಿಗಳಲ್ಲ. ಹಾಗೆಂದು ನಿಷಿದ್ಧ ಕೆಲಸ ಮಾಡುತ್ತಿಲ್ಲ. ಉದಾಹರಣೆಗೆ ನಿತ್ಯ ಪೂಜೆ ಮಾಡಬೇಕು. ಆಗುತ್ತಿಲ್ಲ. ಶುದ್ಧ ಮಡಿಯಲ್ಲಿ ಅಡಿಗೆ ಮಾಡಿ ತಿನ್ನಬೇಕು. ಅದನ್ನು ಮಾಡುತ್ತಿಲ್ಲ. ಹಾಗೆಂದು ಹೋಟೆಲ್ಲಿನಲ್ಲಿ ತಿನ್ನುತ್ತಿಲ್ಲ. ನಿಷಿದ್ಧ ಪದಾರ್ಥಗಳನ್ನೂ ತಿನ್ನುತ್ತಿಲ್ಲ. ದೇವರಲ್ಲಿ ಭಕ್ತಿಯಿದೆ. ಸಾಧನೆಯಲ್ಲಿ ನಮ್ಮಂತಹವರಿಗೆ ಸ್ಥಾನವಿದೆಯೇ ಆಚಾರ್ಯರೆ. ನಮ್ಮ ಭಕ್ತಿಯನ್ನು ದೇವರು ಸ್ವೀಕರಿಸುತ್ತಾನೆಯಾ. ಕೆಲವು ನಿಯಮಗಳನ್ನು ಅನುಸರಿಸುತ್ತಿದ್ದೇವೆ. ಕೆಲವು ನಿಯಮಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಮಾಡಬಾರದು ಎಂದು ಹೇಳಿರುವದನ್ನು ಖಂಡಿತ ಮಾಡುವದಿಲ್ಲ. ಆದರೆ ಮಾಡಬೇಕಾದ ಎಲ್ಲವನ್ನೂ ಪಾಲಿಸದೇ ಇದ್ದಾಗ ದೇವರು ನಾವು ಮಾಡಿದ್ದಕ್ಕೆ ಉತ್ತಮ ಫಲವನ್ನು (ಲೌಕಿಕ ಫಲವಲ್ಲ. ನೀವು ಭಾಗವತದಲ್ಲಿ ಹೇಳಿದಂತೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ) ಕರುಣಿಸುತ್ತಾನೆಯಾ. ದಯವಿಟ್ಟು ತಿಳಿಸಿ. — ಅರವಿಂದ್ ಭಾರದ್ವಾಜ್
ತಂದೆ ಬದುಕಿದ್ದಾಗ ಮಾವನ ಶ್ರಾದ್ಧ ಮಾಡಬಹುದೇ?
ನಮಸ್ಕಾರ ಗುರುಗಳಿಗೆ ನನಗೆ ತಂದೆ ಇದ್ದಾರೆ. ತಾಯಿ ಇಲ್ಲ. ನಾನು ನನ್ನ ಹೆಂಡತಿಯ ತಂದೆಯವರ ಶ್ರಾದ್ಧ ಮಾಡಬಹುದಾ ದಯವಿಟ್ಟು ತಿಳಿಸಿರಿ. — ವಿನಾಯಕ ಕುಲಕರ್ಣಿ
ರಾತ್ರಿಯಲ್ಲಿ ರಜಸ್ವಲೆಯಾದರೆ, ಜನನ-ಮರಣಗಳಾದರೆ ಯಾವ ದಿವಸಕ್ಕೆ ಲೆಕ್ಕ ಹಾಕುವದು?
ಪೂಜ್ಯ ಆಚಾರ್ಯರಿಗೆ ಭಕ್ತಿಯಿಂದ ನಮಸ್ಕಾರಗಳನ್ನು ಮಾಡುತ್ತಿದ್ದೇನೆ. ನಿಮ್ಮ ಭಾಗವತ ಉಪನ್ಯಾಸಗಳು ನಮ್ಮನ್ನು ಧನ್ಯಗೊಳಿಸುತ್ತಿವೆ. ಇದುವರೆಗೂ ತಿಳಿಯದ ತುಂಬ ವಿಷಯಗಳನ್ನು ತಿಳಿಯುತ್ತಿದ್ದೇವೆ. ನನ್ನ ಒಂದು ಪ್ರಶ್ನೆಯಿದೆ. ಅನೇಕ ಜನರನ್ನು ಕೇಳಿದರೂ ಸರಿಯಾದ ಉತ್ತರ ದೊರೆಯಲಿಲ್ಲ. ದಯವಿಟ್ಟು ತಪ್ಪು ತಿಳಿಯದೇ ಉತ್ತರಿಸಬೇಕಾಗಿ ವಿನಂತಿ. ರಾತ್ರಿಯ ಹೊತ್ತು ರಜಸ್ವಲೆಯಾದಾಗ ಕೆಲವು ಬಾರಿ ಆ ದಿವಸಕ್ಕೂ ಕೆಲವು ಬಾರಿ ಮಾರನೆಯ ದಿವಸಕ್ಕೂ ಲೆಕ್ಕ ಹಿಡಿಯುತ್ತಾರೆ. ಇದರ ಲೆಕ್ಕ ಹೇಗೆ ಹಾಕುವದು ತಿಳಿಸಿ. — ಪೂರ್ಣಪ್ರಜ್ಞ. ಬೆಂಗಳೂರು.
ಕಾಣ್ವರೊಂದಿಗೆ ವಿವಾಹ ಸಂಬಂಧವನ್ನು ಬೆಳೆಸಬಹುದೇ?
ಆಚಾರ್ಯರೇ, ನಾವು ನನ್ನ ತಮ್ಮನಿಗೆ ಶುಕ್ಲಯಜುರ್ವೇದಿಯ ಮಾಧ್ವ ಕಣ್ವ ಮಠದ ಕನ್ಯೆಯ ಜೊತೆಗೆ ವಿವಾಹ ಮಾಡಬಹುದೇ. ನಮ್ಮದು ಉತ್ತರಾದಿ ಮಠ. — ಬಿಂದು ಮಾಧವ
ಸಾಡೇಸಾತಿಯ ಪರಿಹಾರ ಹೇಗೆ?
ಸಾಡೇಸಾತಿಯ ಕುರಿತು ಪೂರ್ಣವಾದ ಮಾಹಿತಿಯನ್ನು ನೀಡಬೇಕಾಗಿ ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ. ಮುಖ್ಯವಾಗಿ ಅದರ ಪರಿಹಾರವನ್ನು ತಿಳಿಸಿ. — ರಘೂತ್ತಮರಾವ್ ಮತ್ತು ಕುಟುಂಬದವರು. [ಶ್ರೀಯುತ ಅಭಿಷೇಕ್ ರವರೂ ಸಹ ಈ ಪ್ರಶ್ನೆಯನ್ನು ಕೇಳಿದ್ದಾರೆ.]
ಶಠ ಮತ್ತು ಶಾಠ್ಯ ಎಂದರೇನು?
ಶಠ ಮತ್ತು ಶಾಠ್ಯ ಎಂದರೇನು ಗುರುಗಳೇ? — ಸುದರ್ಶನ ಶ್ರೀ.ಲ.
ಗೌರಿ ಗಣಪತಿಯನ್ನು ಹೇಗೆ ಮತ್ತು ಏಕೆ ಆಚರಿಸಬೇಕು?
ಪೂಜ್ಯಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ತಮ್ಮ ವಿಶ್ವನಂದಿನಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದು ಕರ್ಮವನ್ನೂ ಏಕೆ ಮತ್ತು ಹೇಗೆ ಆಚರಿಸಬೇಕು ಎನ್ನುವದನ್ನು ತಾವು ತುಂಬ ಪರಿಣಾಮಕಾರಿಯಾಗಿ ತಿಳಿಸುತ್ತಿದ್ದೀರಿ. ನಿಮ್ಮ ದೆಸೆಯಿಂದ ನಮ್ಮ ಮಕ್ಕಳಿಗೆ ನಾವು ಉತ್ತರ ನೀಡಲು ಸಾಧ್ಯವಾಗಿದೆ. ಧನ್ಯವಾದಗಳು. ಹೀಗೆಯೇ ಗೌರೀ ಗಣಪತಿ ವ್ರತಗಳನ್ನು ಏಕೆ ಆಚರಿಸಬೇಕು ಮತ್ತು ಹೇಗೆ ಆಚರಿಸಬೇಕು ಎನ್ನುವದನ್ನು ತಿಳಿಸಬೇಕಾಗಿ ವಿನಂತಿಸುತ್ತೇನೆ. — ರಘೂತ್ತಮರಾವ್, ಬೆಂಗಳೂರು.
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 3
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 3
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 2
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 2
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 1
ಶ್ರೀ ವ್ಯಾಸರಾಜರ ರತ್ನಾಭಿಷೇಕ. Part - 1
ಹರಿಕಥಾಮೃತಸಾರವನ್ನು ಎಲ್ಲರೂ ಓದಬಹುದೆ?
ಆಚಾರ್ಯರಿಗೆ ನಮಸ್ಕಾರ ಹರಿಕಥಾಮೃತಸಾರವನ್ನು ಹೆಣ್ಣು ಗಂಡು ಭೇಧವಿಲ್ಲದೆ ಓದುವುದು ಶ್ರವಣ ಮಾಡುವುದು ಮಾಡಬಹುದೇ? — ಅಜಿತ್ ಉಮರ್ಜಿ
ಮೇಲ್ನೀರಿನ ಕುರಿತು ತಿಳಿಸಿ
ಸ್ನಾನದ ನಂತರ ಮೇಲ್ನೀರು ಹಾಕಿಕೊಳ್ಳುವದು ಏಕೆ ತಿಳಿಸಿ. — ರಾಮಚಂದ್ರ ಗಜೇಂದ್ರಗಡ್.
ಪವಿತ್ರದ ಉಂಗುರದ ಧಾರಣೆ ಹೇಗೆ?
ನಮಸ್ಕಾರ. ಪವಿತ್ರದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ??ದಿನದ ಯಾವ ಸಮಯದಲ್ಲಿ ಪವಿತ್ರದ ಉಂಗುರ ದರಿಸಬೇಕು ? — ಶ್ರೀನಿವಾಸ್
ಪೂಜೆಯಲ್ಲಿ ಶ್ರೇಷ್ಠ,ನಿಷಿದ್ಧ ಲೋಹಗಳ್ಯಾವುವು?
ನಮಸ್ಕಾರ, ದೇವರ ಪೂಜೆಗೆ ಯಾವ ಲೋಹದಿಂದ ಮಾಡಿದ ಸಾಮಗ್ರಿಗಳನ್ನು ಬಳಸಬೇಕು ಹಾಗೂ ಬಳಸಬಾರದು? — ಅನಂತ್ ರಾಜ್.
ಕುತಪಕಾಲ ಎಂಬ ಶಬ್ದದ ಅರ್ಥವೇನು?
ಕುತಪಕಾಲ ಎಂಬ ಶಬ್ದದ ಅರ್ಥವೇನು, ಗುರುಗಳೇ? — ಜಯಶ್ರೀ ಕರುಣಾಕರ
ಊರ್ಧ್ವಪುಂಡ್ರಗಳ ನಿಖರ ಸಂಖ್ಯೆ ಎಷ್ಟು? 12, 13, 14,ಅಥವಾ 15?
ಶ್ರೀ ಗುರುಭ್ಯೋ ನಮಃ. ದ್ವಾದಶನಾಮಗಳು ಎಂದು ಪ್ರಸಿದ್ಧಿ ಇರುವಾಗ, ಕೇವಲ ದ್ವಾದಶ ನಾಮಗಳನ್ನು ಧಾರಣೆ ಮಾಡದೆ, ಕೆಲವರು ತ್ರಯೋದಶ, ಕೆಲವರು ಚತುರ್ದಶ ಎಂದು ಕೆಲವರು ಪಂಚದಶ ನಾಮಗಳನ್ನು ಧಾರಣೆ ಮಾಡುತ್ತಾರೆ. ಈ ವ್ಯತ್ಯಾಸ ಏಕೆ ಮತ್ತು ಸರಿಯಾದ ಸಂಖ್ಯೆ ಯಾವುದು ಎಂದು ದಯಮಾಡಿ ತಿಳಿಸಿ. — ಪವನ್ ಬೆಂಗೇರಿ.
ನಾಗರ ಚೌತಿ ಮತ್ತು ಪಂಚಮಿಯ ಆಚರಣೆ ಎಂದು?
ನಾಗಚತುರ್ಥಿ, ನಾಗಪಂಚಮಿ ಯಾವಾಗ ಮಾಡಬೇಕು. ಕೆಲವರು ಬುಧ-ಗುರುವಾರ ಅಂತ, ಕೆಲವರು ಗುರು-ಶುಕ್ರವಾರ ಅಂತ ಹೇಳಿದರು. ದಯವಿಟ್ಟು ತಿಳಿಸಿ. — ಜನಾರ್ದನ್. ತಿರುಪತಿ.
ಬಿಳುಪು ರೋಗದವರನ್ನು ದೂರ ಇಡುವದು ತಪ್ಪು, ಆಚಾರ್ಯರೇ.
ಇದು VNP094 ಪ್ರಶ್ನೋತ್ತರದ ಮುಂದುವರೆ ದ ಚರ್ಚೆ. ಅದನ್ನು ಓದಿದ ನಂತರ ಇದನ್ನು ಓದಿ. ಅಲ್ಲಿ ನೀಡಿದ ಉತ್ತರದ ಮೇಲೆ ಶ್ರೀಯುತ ರಾಮಮೂರ್ತಿ ಕುಲಕರ್ಣಿಯವರು ಉತ್ತಮವಾದ ಪ್ರಶ್ನೆಗಳನ್ನು ಮಾಡಿದ್ದಾರೆ.
ಬಿಳುಪು ಖಾಯಿಲೆಯವರ ಸಾಧನೆ ಹೇಗೆ?
ನಮಸ್ಕಾರ ಆಚಾರ್ಯರೇ,ನನ್ನ ಮೈಮೇಲೆ ಬಿಳುಪು ಕಲೆಗಳಾಗಿವೆ, ಈ ಕಾಯಿಲೆ ಯಿಂದ ಬಳಲುವವರು ಈ ಕಾರಣದಿಂದ ದೇವರ ಪೂಜೆ ಹಾಗೂ ಮಾಡಿ ಕಾರ್ಯಕ್ಕೆ ನಿಷಿಧ್ದವೇ ದಯವಿಟ್ಟು ತಿಳಿಸಿ ಆಚಾರ್ಯರೇ.ಪರಿಹಾರ ತಿಳಿಸಿರಿ. ಹರೇ ಶ್ರೀನಿವಾಸ. — ಹೆಸರು ಬೇಡ.
ಹಸ್ತೋದಕ, ಪಾದೋದಕ ಸ್ವೀಕರಿಸಬಹುದೇ?
ಗುರುಗಳೆ, ನೀವೇ ಹಿಂದೊಮ್ಮೆ ನಾನು ಗುರುಗಳ ಪಾದೋದಕದ ಬಗ್ಗೆ ಕೇಳಿದಾಗ , ನೀವು ಗುರುಗಳ( ರಾಯರು ಇತ್ಯಾದಿ ಯತಿಗಳ), ರುದ್ರ ದೇವರ ತೀರ್ಥ ಸೇವಿಸಬಾರದು, ಕೇವಲ ತಲೆತಲೆಯಮೇಲೆ ಹಾಕಿಕೊಳ್ಳಬೇಕು ಎಂದಿದ್ದಿರಿ..ಈಗ ಸ್ವೀಕರಿಸಬೇಕು ಎನ್ನುತ್ತಿದ್ದೀರಿ. — ರಾಮಮೂರ್ತಿ ಕುಲಕರ್ಣಿ.
ಕಾಲನಿಯಾಮಕ ಹರಿಯ ಕುರಿತು ತಿಳಿಸಿ
ಆಚಾರ್ಯರೇ ನಮಸ್ಕಾರಗಳು. ಶ್ರೀಜಗನ್ನಾಥದಾಸಾರ್ಯರು ತವ ದಾಸೋಹಂ ಎಂಬ ಪದ್ಯದಲ್ಲಿ ಬಳಸಿರುವ ಈ ಶಬ್ದಗಳ ಅರ್ಥವನ್ನು ದಯವಿಟ್ಟು ತಿಳಿಸಿ. ಕಾಲನಿಯಾಮಕ, ಕಾಲಾಂತರ್ಗತ, ಕಾಲಾತೀತ, ತ್ರಿಕಾಲಜ್ಞ ಕಾಲೋತ್ಪಾದಕ, ಕಾಲಪ್ರವರ್ತಕ, ಕಾಲನಿವರ್ತಕ, ಕಾಲಮೂರ್ತಿ ತವ ದಾಸೋಹಂ. — ಜಯಶ್ರೀ, ಬೆಂಗಳೂರು.
ದೇವರಿಗೆ ಮಾಡಿರುವ ನೈವೇದ್ಯ ತುಲಸಿಗೆ ಮತ್ತೆ ಮಾಡಬಹುದೇ?
ಹರೇ ಶ್ರೀನಿವಾಸ. ದೇವರಿಗೆ ಮಾಡಿರುವ ನೈವೇದ್ಯ ತುಲಸಿಗೆ ಮತ್ತೆ ಮಾಡಬಹುದೇ, ಗುರುಗಳೇ? — ವಿಜಯಾ.
ನಮ್ಮ ವೇದ ಗೋತ್ರಗಳನ್ನು ತಿಳಿಯುವ ಕ್ರಮ ಹೇಗೆ?
ಗುರುಗಳಿಗೆ ನಮಸ್ಕಾರಗಳು. ನಾವು ಯಾವ ಗೋತ್ರಕ್ಕೆ ಸೇರಿದವರು ಮತ್ತು ಯಾವ ವೇದಕ್ಕೆ ಸೇರಿದವರು ಎಂದು ತಿಳಿಯುವ ಕ್ರಮವನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ. — ರಾಘವೇಂದ್ರ, ದೊಡ್ಡಬಳ್ಳಾಪುರ.
ಗರುಡಪುರಾಣವನ್ನು ಓದಬಹುದೆ?
ಆಚಾರ್ಯರಿಗೆ ಪ್ರಣಾಮಗಳು.ಗರುಡ ಪುರಾಣವನ್ನು ಓದಿದರೆ ಅಪಶಕುನವೆ ? ಓದಿದರೆ ಮನೆಯಲ್ಲಿ ಅಪಮೃತ್ಯು ಉಂಟಾಗುತ್ತದೆಯೆ ?ಅದನ್ನು ಓದಿದರೆ ಅಪಶಕುನ, ಎಂದು ಅಲ್ಲಿರುವುದನ್ನು ನೋಡಿ ಓದುವುದನ್ನು ಬಿಟ್ಟೆ. ಹಾಗಾದರೆ ಅಲ್ಲಿರುವ ವಿಷಯವನ್ನು ತಿಳಿಯುವುದಾದರು ಹೇಗೆ ? ದಯಮಾಡಿ ತಿಳಿಸಿ ಕೊಡಿ. — ಪುರುಷೋತ್ತಮ ಎನ್.
ಈ ಬಾರಿಯ ಉಪಾಕರ್ಮ ಯಾವಾಗ?
ಆಚಾರ್ಯರಿಗೆ ಪ್ರಣಾಮಗಳು. ಈ ಬಾರಿಯ ಋಗ್ವೇದ ಪ್ರಥಮ ಉಪಾಕರ್ಮ ಎ೦ದು ನೆರವೇರಿಸಬೇಕು ? ದಯವಿಟ್ಟು ತಿಳಿಸಬೇಕಾಗಿ ಪ್ರಾರ್ಥಿಸುತ್ತೇನೆ. ಪ್ರಣಾಮಗಳೊ೦ದಿಗೆ, — ಮಧುಸೂದನ .ಕೆ. ಆರ್.
ಮುಸುರೆ ಎಂದರೇನು?
ಆಚಾರ್ಯರೇ, ಅನ್ನ ಮುಸುರೆ ಹೇಗೆ, ಮುಸುರೆ ಎಂದರೆ ಏನು, ದಯವಿಟ್ಟು ತಿಳಿಸಿ. ಉಳಿದ ಧಾನ್ಯಗಳ ಮುಸುರೆಯ ಬಗ್ಗೆಯೂ ತಿಳಿಸಿ. — ಉದ್ಯಾವರ ನಾಗರಾಜ್.
ದಶಮಿ, ದ್ವಾದಶಿಗಳ ರಾತ್ರಿ ಏನನ್ನು ಸ್ವೀಕರಿಸಬಹುದು?
ದ್ವಾದಶಿಯ ದಿನ ಪಾರಣೆ ಆದ ನಂತರ ಏನನ್ನಾದರೂ ಸ್ವೀಕಾರ ಮಾಡಬಹುದೇ, ಇಲ್ಲವೇ? — ವಿಜಯ್ ಕುಮಾರ್. ಕೆ.
ಟ್ಯಾಂಕಿನ ನೀರನ್ನು ಪೂಜೆಗೆ ಬಳಸಲು ಏನಾದರೂ ಉಪಾಯವಿದೆಯೇ?
ಆಚಾರ್ಯರಲ್ಲಿ ಸಾಷ್ಟಾಂಗ ನಮಸ್ಕಾರಗಳು. ಅಪಾರ್ಟುಮೆಂಟುಗಳಲ್ಲಿ ನೀರು Overhead tank ನಿಂದ ಸರಬರಾಜು ಆಗುತ್ತದೆ. ಇಂತಹ ನೀರು ಪೂಜೆಗೆ ಅರ್ಹವೇ? — ಆನಂದ್ ರಾವ್. ಗುರುಗಳಿಗೆ ನಮಸ್ಕಾರಗಳು. ಆಚಾರ್ಯರೇ, ಶುದ್ಧ ನೀರು ಇಲ್ಲವೆಂದು ಪೂಜೆ ಬಿಡಬೇಕೋ, ಅಥವಾ ಟ್ಯಾಂಕಿನ ನೀರಿನಿಂದಾದರೂ ಪೂಜೆ ಮಾಡಬಹುದೋ? ಟ್ಯಾಂಕಿನ ನೀರನ್ನು ಶುದ್ಧ ಪಡಿಸುವ ದಾರಿ ಏನಾದರೂ ಇದೆಯೇ? — ವಾಸುದೇವ್ ದೇಶಪಾಂಡೆ ಆಚಾರ್ಯರೆ, ಪಕ್ಕದ ಬೀದಿಯಲ್ಲಿ ಬಾವಿಯಿದ್ದಾಗ ಕೆಲವರು ಅಲ್ಲಿಗೆ ಹೋಗಿ ಸ್ನಾನ ಮಾಡಿಕೊಂಡು ದೇವರ ಪೂಜೆಗೆ ನೀರು ತೆಗೆದುಕೊಂಡು ಬರುತ್ತಾರೆ. ಆದರೆ, ಬೀದಿಯಲ್ಲಿ ಹೋಗುವಾಗ ಕೊಳಕಾದ ರಸ್ತೆಯ ಮೇಲೇ ನಡೆದುಕೊಂಡು ಹೋಗಬೇಕು. ಕೇವಲ ಬಾವಿಯಲ್ಲಿ ಸ್ನಾನ ಮಾಡಿ, ಹೊಲಸು ರಸ್ತೆಯಲ್ಲಿ ನಡೆದು ಕೊಂಡು ಹೋದರೆ ಮಡಿಯಾಗುತ್ತದೆಯೇ. ಸಂಶಯ ಪರಿಹರಿಸಿ. — ನರಸಿಂಹಮೂರ್ತಿ.
ಹೆಣ್ಣುಮಗಳು ತಂದೆ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು?
ಗುರುಗಳೆ, ಗಂಡುಮಕ್ಕಳು ಇಲ್ಲದ ತಂದೆ ತಾಯಿಯರನ್ನು ಹೆಣ್ಣುಮಕ್ಕಳು ನೋಡಿಕೊಳ್ಳೋದು ತಪ್ಪಾ? ಹೆಣ್ಣುಮಕ್ಕಳಿಗೆ ಅದು ಕರ್ತವ್ಯ ಅಲ್ವಾ? ಬರೀ ಅತ್ತೆ ಮಾವನನ್ನು ನೋಡಿಕೊಳ್ಳಬೇಕಾ? ನನ್ನ ಸಮಸ್ಯೆಗೆ ಪರಿಹಾರ ನೀಡಿ. ತುಂಬ ತೊಂದರೆಯಲ್ಲಿರುವೆ. — ಹೆಸರು ಬೇಡ.
ಸಂಧ್ಯಾವಂದನೆಯ ನೀರನ್ನು ಎಲ್ಲಿ ಹಾಕಬೇಕು
ಆಚಾರ್ಯರಿಗೆ ನಮಸ್ಕಾರಗಳು, ಸಂಧ್ಯಾವಂದನೆ ಆದ ನಂತರ, ನೀರನ್ನು ವಿಸರ್ಜನೆ ಮಾ ಡುವ ಬಗೆ ಹೇಗೆ? ಗಿಡಗಳು ಇಲ್ಲದಿದ್ದಲ್ಲಿ ಏನು ಮಾಡಬೇಕು. — ಶ್ರೀನಿವಾಸ್.
ಧಾರ್ಮಿಕತೆಗೂ ಆಧ್ಯಾತ್ಮಿಕೆಗೂ ಏನು ವ್ಯತ್ಯಾಸ?
ಹರೇ ಶ್ರೀನಿವಾಸ. ಗುರುಗಳಿಗೆ ನಮಸ್ಕಾರಗಳು . ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆ ಇವುಗಳ ನಡು ವಿನ ವ್ಯತ್ಯಾಸವೇನು ಎನ್ನುವುದನ್ನು ತಿಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಮ್ರ ಪ್ರಾರ್ಥನೆ.🙏🙏 — ಸಂಗೀತಾ ಪ್ರಸನ್ನ
ಲಕ್ಷದೀಪವ್ರತ ನಿಯಮಗಳೇನು?
ಗುರುಗಳಿಗೆ ನಮನ. ನನ್ನ ಮಡದಿ ತಾನೇ ಬತ್ತಿಯನ್ನು ಮಾಡಿ ಲಕ್ಷಬತ್ತಿಗಳ ದೀಪದ ವ್ರತವನ್ನು ಮಾಡುತ್ತಿದ್ದಾರೆ. ಇದನ್ನು ಹೇಗೆ ಮಾಡಬೇಕು ಮತ್ತು ಯಾವಾಗ ಆರಂಭಿಸಬೇಕು ಎನ್ನುವದನ್ನು ತಿಳಿಸಿ. ಈಗಾಗಲೇ ಮೂವತ್ತು ಸಾವಿರ ಬತ್ತಿಗಳಾಗಿವೆ. ಮಧ್ಯದಲ್ಲಿ ನಿಲ್ಲಿಸಿ, ಬತ್ತಿಗಳನ್ನು ಮಾಡಿಕೊಂಡು ಮುಂದುವರೆಸಬಹುದೇ? ದೀಪವನ್ನು ಹಚ್ಚಬೇಕಾದರೆ ಎರಡೆರಡು ಬತ್ತಿಗಳನ್ನು ತೆಗೆದುಕೊಂಡು ಹಚ್ಚುತ್ತಾರೆ. ಹೀಗಾಗಿ ಐವತ್ತುಸಾವಿರ ದೀಪಗಳನ್ನು ಹಚ್ಚಿದರೆ ಲಕ್ಷ ಬತ್ತಿಗಳನ್ನು ಹಚ್ಚಿದಂತಾಗುತ್ತದೆ. ಇದು ಸರಿಯೇ? — ಬಿ. ಶೇಷಗಿರಿ ಆಚಾರ್
ಅನ್ನ ಎಂಬ ಶಬ್ದದ ಅರ್ಥವೇನು?
ಹರೇ ಶ್ರೀನಿವಾಸ. ದಯವಿಟ್ಟು ಅನ್ನ ಪದದ ಅರ್ಥವನ್ನು ವಿವರಿ — ರವೀಂದ್ರ ಬಿ. ಆರ್.
ಪ್ರಳಯದಲ್ಲಿ ಏನೇನು ಇದ್ದವು?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ಸೃಷ್ಟಿಯ ಮುಂಚೆ ಭಗವಂತ ಒಬ್ಬನೇ ಇದ್ದನಾ? ಅನ್ಯ ವಸ್ತುಗಳು ಇದ್ದರೆ ಅವು ಯಾವವು? ಯಾವ ಸ್ಥಿತಿಯಲ್ಲಿ ಇದ್ದವು? ಅವಕ್ಕು ಭಗವಂತನಗೊ ಯಾವ ಸಂಬಂಧ ? ದಯವಿಟ್ಟು ತಿಳಿಸಿ🙏 — ಭಾರದ್ವಾಜ್ ಕರಣಮ್
ಅನಿರುದ್ಧ ಶರೀರದ ಆವಶ್ಯಕತೆಯೇನು?
ಭಗವಂತ ಅನಾದಿ ಲಿಂಗಶರೀರದ ಮೇಲೆ ಅನಿರುದ್ಧಶರೀರವನ್ನು ಏಕೆ ಕೊಡುತ್ತಾನೆ. ನೇರವಾಗಿ ಅನಾದಿಲಿಂಗಶರೀರದ ಮೇಲೆ ಸ್ಥೂಲದೇಹವನ್ನು ಕೊಟ್ಟು ಸಾಧನೆ ಮಾಡಿಸಬಹುದಲ್ಲ? ಮಧ್ಯದಲ್ಲಿ ಅನಿರುದ್ಧಶರೀರವನ್ನೇತಕ್ಕೆ interface ಮಾಡುತ್ತಾನೆ? ಅನಿರುದ್ಧಶರೀರದ ಪ್ರಧಾನ ಕಾರ್ಯವೇನು? ದಯಮಾಡಿ ಇದಕ್ಕೆ ಉತ್ತರ ತಿಳಿಸಿ ಗುರುಗಳೇ. 🙏🙏🙏 — ಅಶೋಕ್ ಪ್ರಭಂಜನ್
ಪುನರ್ಜನ್ಮ ಪಡೆದ ವ್ಯಕ್ತಿಗೆ ಶ್ರಾದ್ಧ ಹೇಗೆ ತಲುಪುತ್ತದೆ?
ಗುರುಗಳಿಗೆ ನಮಸ್ಕಾರ. ನನ್ನ ಪ್ರಶ್ನೆ, ಶ್ರಾದ್ಧ ಕರ್ಮಗಳ ಬಗ್ಗೆ. ನಾವು ಪಿತೃದೇವತೆಗಳಿಗೆ ಶ್ರಾದ್ಧಾದಿ ಕರ್ಮಗಳನ್ನು ಮಾಡುತ್ತೇವೆ. ಆದರೆ ನಮ್ಮಲ್ಲಿ ಪುನರ್ಜನ್ಮದ ಸಿದ್ಧಾಂತ ದ ಪ್ರಕಾರ ಅಳಿದ ವ್ಯಕ್ತಿ ಕರ್ಮಾನುಸಾರವಾಗಿ ಬೇರೆಯ ದೇಹ ಪಡೆಯುತ್ತಾನೆ. ಹಾಗಾದರೆ ನಾವು ಮಾಡುವ ಶ್ರಾದ್ಧಾದಿ ಕರ್ಮಗಳು ಯಾರಿಗೆ ಸೇರುತ್ತವೆ. — ಶ್ರೀಕಾಂತ್ ಜೋಷಿ.
ಅಯ್ಯಪ್ಪನನ್ನು ನಾವು ಏಕೆ ಪೂಜಿಸುವದಿಲ್ಲ?
ಆಚಾರ್ಯರೇ, ಮಾಧ್ವರು ಏಕೆ ಅಯ್ಯಪ್ಪನ ಪೂಜೆಯನ್ನು ಮಾಡುವದಿಲ್ಲ ಮತ್ತು ಶಬರಿಮಲೈ ಯಾತ್ರೆಯನ್ನು ಮಾಡುವದಿಲ್ಲ. ದಯವಿಟ್ಟು ತಿಳಿಸಿ. — ಪ್ರಸಾದ್ ಕೆ. ಎನ್.
ಹನುಮಾನ್ ಚಾಲೀಸಾ ಪಠಿಸಬಾರದೇಕೆ ಮತ್ತು ಸಿದ್ಧಿಪ್ರದ ಹನುಮತ್ ಸ್ತೋತ್ರಗಳನ್ನು ತಿಳಿಸಿ.
ಗುರುಗಳಿಗೆ ನಮಸ್ಕಾರಗಳು. ಹನುಮಾನ್ ಚಾಳೀಸಾ ನಾವು ಏಕೆ ಪಠಿಸಬಾರದು ಎನ್ನುತ್ತಾರೆ. ದಯವಿಟ್ಟು ಕಾರಣ ತಿಳಿಸಿ. — ವೀಣಾ ಶ್ರೀಕಾಂತ್ ಆಚಾರ್ಯರೇ ನಮಸ್ಕಾರಗಳು, ಶ್ರೀ ಹನುಮಾನ್ ಚಾಳೀಸಾ ಓದುವವರಿಗೆ ನಮ್ಮ ಮಾಧ್ವ ಸಂಪ್ರದಾಯದಂತೆ ಶ್ರೇಷ್ಠವಾದ ಆದರೂ ಸರಳವಾದ ಶ್ರೀಮುಖ್ಯಪ್ರಾಣ ದೇವರ ಸ್ತೋತ್ರವನ್ನು ತಿಳಿಸಿರಿ. — ಗಣೇಶ್ ಕಾಮತ್
ಸ್ನಾನದ ಬಳಿಕ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗಬಹುದೇ?
ಆಚಾರ್ಯರ ಪಾದಕ್ಕೆ ನಮಸ್ಕಾರ. ಆಚಾರ್ಯರೇ, ಸಂಧ್ಯಾವಂದನೆ, ಪೂಜೆ ಬೆಳಗಿನ ತಿಂಡಿ ಆದ ನಂತರ ತಲೆಗೆ ತೆಂಗಿನ ಎಣ್ಣೆ ಹಚ್ಚುವ ಅಭ್ಯಾಸ ನಮ್ಮಲ್ಲಿ ಹಲವರಿಗೆ ಇದೆ. ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿ ಆಫೀಸಿಗೆ ಅಥವಾ ಹೊರಗಡೆಗೆ ಹೋಗ್ತಾರೆ. ನನ್ನ ಪ್ರಶ್ನೆ ಏನೆಂದರೆ, ತಲೆಗೆ ಎಣ್ಣೆ ಹಚ್ಚಿ (ಏಕಾದಶಿ ಹೊರತುಪಡಿಸಿ) ದೇವಸ್ಥಾನ ಮತ್ತು ಮಠಗಳಂತಹ ಪ್ರದೇಶಗಳಿಗೆ ಹೋಗಬಹುದೇ? ತಲೆಯಲ್ಲಿ ಎಣ್ಣೆ ಇದ್ದರೆ ಮಂತ್ರಾಕ್ಷತೆ ಧರಿಸಬಹುದೆ? — ಪ್ರಸಾದ್ ರಾವ್.
ವಿದೇಶಪ್ರವಾಸ ಬ್ರಾಹ್ಮಣರ ಅಭಿವೃದ್ಧಿಗೆ ಪೂರಕವಲ್ಲವೇ?
ಬ್ರಾಹ್ಮಣಸಮಾಜವನ್ನು ಇವತ್ತು ಪೋಷಿಸುವವರು ಕಡಿಮೆ. ನಮ್ಮಲ್ಲಿಯೇ ಕೆಲವರು ಹೊರಗೆ ಹೋಗಿ ಹೆಚ್ಚು ದುಡಿದಾಗ, ಬ್ರಾಹ್ಮಣಸಮಾಜವನ್ನು ಪೋಷಿಸಲು ಸಾಧ್ಯ. ಬೆಳೆಸಲು ಸಾಧ್ಯ. ಹೀಗಾಗಿ ಯಾಕಾಗಿ ಇದಕ್ಕೆ ಅವಕಾಶವನ್ನು ಮಾಡಿಕೊಡಬಾರದು ಎಂಬ ಕಳಕಳಿ ತುಂಬಿದ ಪ್ರಶ್ನೆಗೆ ಉತ್ತರ ಇಲ್ಲಿದೆ.
ವೃಂದಾವನದ ಮೃತ್ತಿಕೆ ಧರಿಸಬಹುದೇ?
ಆಚಾರ್ಯರಿಗೆ ನಮಸ್ಕಾರ. ಶ್ರೀಮಂತ್ರಾಲಯ ಪ್ರಭುಗಳ ಶ್ರೀಮದ್ವಾದಿರಾಜ-ಗುರುಸಾರ್ವಭೌಮರ ಗುರುಗಳ ವೃಂದಾವನದ ಮೃತ್ತಿಕೆ ಧಾರಣೆ ಮಾಡುವದು ಸರಿಯೇ? ಮೃತ್ತಿಕೆ ಯಾವಾಗ ಸ್ವೀಕರಿಸಬೇಕು. ಹೇಗೆ ಧಾರಣೆ ಮಾಡಬೇಕು? ಧನ್ಯವಾದಗಳೊಂದಿಗೆ — Ravi Kadagali
ಬ್ರಾಹ್ಮಣರನ್ನು ಸಾಕಲೆಂದೇ ನಾವು ವಿದೇಶಕ್ಕೆ ಹೋಗುವದು
ಬ್ರಾಹ್ಮಣರ ದಕ್ಷಿಣೆಯ ಮೊತ್ತ ಜಾಸ್ತಿ ಆಗಿದೆ, ಆಚಾರ್ಯರೇ. ಅವರನ್ನು ಸಾಕಲು ನಮಗೆ ಸಾಕಷ್ಟು ಹಣ ಬೇಕು. ಅದಕ್ಕಾಗಿಯೇ ವಿದೇಶಕ್ಕೆ ಹೋಗುವದು ಎಂಬ ಮಾತಿಗೆ ಉತ್ತರ ಇಲ್ಲಿದೆ.
ರಾಮಚಂದ್ರ ಎಂಬ ಶಬ್ದದ ಅರ್ಥವೇನು?
ರಾಮದೇವರಿಗೆ ರಾಮಚಂದ್ರ ಎಂದು ಹೆಸರು ಬರಲು ಕಾರಣವೇನು? ರಾಮದೇವರು ಸೂರ್ಯವಂಶದಲ್ಲಿ ಅವತಾರ ಮಾಡಿದವರು ಅಲ್ಲವೇ? ರಾಮಶಬ್ದದೊಡನೆ ಚಂದ್ರ ಸೇರಿಸಿ ಹೇಳಿದಾಗ ವಿಶೇಷ ಅರ್ಥವಿದೆಯೇ? — ಪ್ರಸಾದ್ ರಾವ್
ಜಮದಗ್ನಿಋಷಿಗಳಿಗೆ ಹಸುವನ್ನು ಕಾಪಾಡುವಷ್ಟು ಶಕ್ತಿ ಇರಲಿಲ್ಲವೇ?
ಶ್ರೀ ಜಮದಗ್ನಿಋಷಿಗಳಿಗೆ ಸತ್ತ ತಮ್ಮ ಹೆಂಡತಿಯನ್ನು ಬದುಕಿಸುವಷ್ಟು ಸಾಮರ್ಥ್ಯವಿದ್ದಾಗ ಕಾರ್ತವೀರ್ಯಾರ್ಜುನ ಹಸುವನ್ನು ಸೆಳೆದೊಯ್ಯಬೇಕಾದರೆ ನಿಗ್ರಹಿಸುವ ಶಕ್ತಿ ಇರಲಿಲ್ಲವೇ? ವಿಜಯ್ ಕುಮಾರ್, ಬೆಂಗಳೂರು.
ಪೂಜ್ಯಾಯ ಎಂಬ ಶ್ಲೋಕ ಅಪರಿಪೂರ್ಣವೇ?
ಪೂಜ್ಯಾಯ ಎಂಬ ಶ್ಲೋಕದಲ್ಲಿ ನಮಃ ಎನ್ನುವದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಅಪರಿಪೂರ್ಣ ಎನ್ನುತ್ತಾರೆ. ಆ ಶ್ಲೋಕ ಹೇಳುವಾಗಲೆಲ್ಲ ದುರ್ವಾದಿಧ್ವಾಂತರವಯೇ ಎಂಬ ಮುಂದಿನ ಶ್ಲೋಕವನ್ನು ಹೇಳಲೇಬೇಕು ಎನ್ನುತ್ತಾರೆ. ಇದು ಸರಿಯೇ? ಎರಡನೆಯ ಪ್ರಶ್ನೆ — ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ ಎನ್ನುವದನ್ನು ಸಜ್ಜನೇಂದೀವರೇಂದವೇ ಎಂದು ಹೇಳುತ್ತಾರೆ. ನನಗಿರುವ ಅಲ್ಪಜ್ಞಾನದಲ್ಲಿ, ವೈಷ್ಣವನಾಗಿರಲಿ ಬಿಡಲಿ, ರಾಯರ ಭಕ್ತನಾಗಲು, ಅವರಿಂದ ಅನುಗ್ರಹ ಪಡೆಯಲು ತೊಂದರೆಯಿಲ್ಲ ಅಲ್ಲವೇ? ದಯವಿಟ್ಟು ತಿಳಿಸಿ. — ಪರಿಮಳ ರಾವ್.
ಜಾತಾಶೌಚ ಮೃತಾಶೌಚಗಳ ಆಚರಣೆ
ಪ್ರಣಾಮ ಆಚಾರ್ಯರೇ. ನನ್ನ ತಮ್ಮ ಇಂದು ತೀರಿಕೊಂಡಿದ್ದಾನೆ. ನಾನು ಸಂಧ್ಯಾವಂದನೆ ಮಾಡಬಹುದೇ? ದಯವಿಟ್ಟು ತಿಳಿಸಿ. — ಸುಬ್ರಹ್ಮಣ್ಯ ಭಾರದ್ವಾಜ
ಪರಶುರಾಮದೇವರು ತಂದೆಯನ್ನೇಕೆ ಬದುಕಿಸಲಿಲ್ಲ?
“ಪರಶುರಾಮದೇವರಿಗೆ ತಾಯಿಯನ್ನು ಬದುಕಿಸುವ ಸಾಮರ್ಥ್ಯವಿತ್ತು. ಅಂದಮೇಲೆ ತಂದೆಯನ್ನೂ ಬದುಕಿಸುವ ಶಕ್ತಿಯೂ ಇತ್ತು. ಯಾಕಾಗಿ ಬದುಕಿಸಲಿಲ್ಲ” — ಜಗನ್ನಾಥ್, ಬೆಂಗಳೂರು.
ಮಕ್ಕಳಾಗದ ಹೆಣ್ಣು ಮಡಿಗೆ ಬರುವದಿಲ್ಲವೇ?
ಗುರುಗಳಿಗೆ ನಮಸ್ಕಾರ. ಮಕ್ಕಳು ಆಗದೆ ಇದ್ದವರು ಮಡಿಯಿಂದ ಅಡಿಗೆ ಮಾಡಬಹುದಾ? — ಹೆಸರು ಬೇಡ.
ಮಾಟ ಮಂತ್ರಗಳು ಸತ್ಯವೇ? ಪರಿಹಾರ ಹೇಗೆ
ಶ್ರೀ ಗಣೇಶಾಯ ನಮಃ. ಗುರುಗಳಿಗೆ ಪ್ರಣಾಮ. ಗುರುಗಳೆ ತಂತ್ರ.ಮಾಟ.ಮೊಡಿ ನಿಜನಾ ಇವು ವ್ಯಕ್ತಿಗೆ ಹಾನಿಕಾರಕವೆ ಹಾಗಾದರೆ ಅದರಿಂದ ಉಳಿಯುವ ಸುಲಭ ಉಪಾಯಗಳಾವವು? — ಮಂಜುನಾಥ ಯಾದವಾಡೆ
ಅಪಾರ್ಟುಮೆಂಟುಗಳಲ್ಲಿ ಗೃಹಪ್ರವೇಶ ಹೇಗೆ?
ನಮಸ್ಕಾರಗಳು, ಅಪಾರ್ಟಮೆಂಟಗಳಲ್ಲಿ ಮನೆ ಖರೀದಿಸಿದರೆ ವಾಸ್ತು ಶಾಂತಿ ಮಾಡಬೇಕೋ ಬೇಡವೋ? ಯಾಕೆ ಈ ಪ್ರಶ್ನೆ ಅಂದರೆ, ಅಲ್ಲಿ ಯಾವ ಕಾರ್ಯವೂ ಶಾಸ್ತ್ರೋಕ್ತ ವಿಧಿವಿಧಾನಗಳಿಂದ ಮಾಡಲು ಅನುಕೂಲ ಇರುವುದಿಲ್ಲ (ex. ಗೋ ಮತ್ತು ಕರುವಿನ ಪ್ರವೇಶ this is just one example) ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು? Or just we can enter how we use to enter into the rented house? — ಎ. ಎಸ್. ಕುಲಕರ್ಣಿ.
ಧಾವಂತದ ಬದುಕಿನಲ್ಲಿ ಅಧ್ಯಯನ ಮಾಡುವದು ಹೇಗೆ?
ಆಚಾರ್ಯರೆ, ನಾವು ಸಾಧನೆಯನ್ನ ಮಾಡಬೇಕಾದರೆ ನಾವು ಶಾಸ್ತ್ರದ ಆದೇಶಗಳ ಪ್ರಕಾರ ಮಾಡಬೇಕು. ಶಾಸ್ತ್ರದ ಆದೇಶದ ಪ್ರಕಾರ ಮಾಡಬೇಕಾದರೆ ಶಾಸ್ತ್ರಗಳನ್ನ ಅಧ್ಯಯನ ಮಾಡಬೇಕು. ಶಾಸ್ತ್ರಾಧ್ಯಯನ fulltime ಮಾಡಬೇಕಾದರೇ ಬಹಳ ಸಮಯ ಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ನೀವೇ ಹೇಳಿದ ಹಾಗೆ ಲೆಕ್ಕ ಇಟ್ಟರೆ 9 ವರ್ಷಗಳು ಆಯಿತು. ಈಗಿನ ಜೀವನ ಒಂದು ತರಹ ಹೇಳಬೇಕೆಂದರೆ ಕಾಲದ ಜೊತೆಗಿನ ಓಟಕ್ಕೆ ಇರುವಂತಿದೆ. ಹಿಂದೆ ಬೀಳುವಹಾಗೆ ಇಲ್ಲ. ಇದರ ಜೊತೆಗೆ ಹೆಚ್ಚಿದ ದುರಾಸೆ, ಕುಸಿಯುತ್ತಿರುವ ಅಧ್ಯಯನ ಮಟ್ಟ ಬೇರೆ.ಇದೆಲ್ಲದರ ನಡುವೆ ವಿದೇಶಿ ಧರ್ಮದವರ ನಿಲ್ಲದ ಆಕ್ರಮಣಗಳು.... ಹೀಗಿದ್ದಾಗ ಇಂಥ software engineer, bank managerಗಳು ಅಥವಾ salary based employeeಗಳಿಂದ ಶಾಸ್ತ್ರಾಧ್ಯಯನ ಮತ್ತು ಧರ್ಮಾಚರಣೆ ಹೇಗೆ ಮಾಡಲು ಸಾಧ್ಯ? ದಯವಿಟ್ಟು ನಾಲ್ಕೂ ವರ್ಣಗಳನ್ನ ಪ್ರತ್ಯೇಕವಾಗಿ ವಿವರಿಸಿ ಉತ್ತರಿಸಬೇಕಾಗಿ ವಿನಂತಿ. — ಅಭಿಷೇಕ್, ಬೆಂಗಳೂರು.
ಸ್ತ್ರೀಯರು ತುಳಸಿಯನ್ನು ಸ್ವೀಕರಿಸಬಹುದೇ?
ದೇವರ ನಿರ್ಮಾಲ್ಯ ತುಳಸಿಯನ್ನು ಸ್ತ್ರೀಯರು ಸೇವಿಸಬಹುದೆ? — ಕೃಷ್ಣಾಚಾರ್ಯ
ತುಳಸಿ ಮಣಿ ಮಾಲೆಯನ್ನು ಯಾವಾಗ ಧರಿಸಬೇಕು ಮತ್ತು ಯಾವಾಗ ಧರಿಸಬಾರದು?
ತುಳಸಿ ಮಣಿ ಮಾಲೆಯನ್ನು ಯಾವಾಗ ಧರಿಸಬೇಕು ಮತ್ತು ಯಾವಾಗ ಧರಿಸಬಾರದು? ದೇವರ ನಿರ್ಮಾಲ್ಯ ತುಳಸಿಯನ್ನು ಸ್ತ್ರೀಯರು ಸೇವಿಸಬಹುದೆ? — ಕೃಷ್ಣಾಚಾರ್ಯ
ಸಾಲಿಗ್ರಾಮದಿಂದ ಪಾಪಭೂಮಿಯನ್ನು ಕ್ಷೇತ್ರವನ್ನಾಗಿ ಮಾಡಬಹುದಲ್ಲವೇ?
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಆಚಾರ್ಯರೇ, ಕೆಲವು ಪಂಡಿತರು ವಿದೇಶಕ್ಕೆ ಹೋಗುವಾಗ ಸಾಲಿಗ್ರಾಮವನ್ನು ತೆಗೆದುಕೊಂಡು ಹೋಗುವದನ್ನು ನಾನು ನೋಡಿದ್ದೇನೆ. ಇದರ ಬಗ್ಗೆ ಅವರನ್ನೇ ಕೇಳಿದರೆ, ನಾವು ಯಾವ ಪ್ರದೇಶಕ್ಕೆ ಸಾಲಿಗ್ರಾಮವನ್ನು ಒಯ್ಯುತ್ತೇವೆಯೋ ಆ ಪ್ರದೇಶ ಶುದ್ಧವಾಗಿ ಬಿಡುತ್ತದೆ ಎಂದು ಶ್ರೀಕೃಷ್ಣಾಮೃತಮಹಾರ್ಣವದಲ್ಲಿ ಇದೆ ಎಂದು ಹೇಳುತ್ತಾರೆ. ಇದು ನಿಜವೇ ದಯವಿಟ್ಟು ತಿಳಿಸಿಕೊಡಿ. 🙏🙏🙏 — ಶ್ರವಣ್ ಪ್ರಭು
ಹಚ್ಚೆ, Tattoo ಹಾಕಿಸಿಕೊಳ್ಳಬಹುದೇ
ನಮಸ್ಕಾರ ಆಚಾರ್ಯರೇ. ಇತ್ತೀಚೆಗೆ ಹಚ್ಚೆ ಹಾಕಿಕೋಳ್ಳುವುದು ಒಂದು ಚಟವಾಗಿದ್ದು ಅದು ಶಾಸ್ತ್ರ ಸಮ್ಮತವೇ ? ಸುಧಾ ಓದುವ ವಿದ್ಯಾರ್ಥಿಗಳು ಕೂಡ ಇದರಿಂದ ಹೋರತಾಗಿಲ್ಲವಲ್ಲ? — ಜಯರಾಮಾಚಾರ್ಯರ ಬೆಣಕಲ್ ಆಚಾರ್ಯರೆ ಭಕ್ತಿ ಪೂರ್ವಕ ನಮಸ್ಕಾರಗಳುಆಚಾರ್ಯರೆ ಹಚ್ಚೆ ಹಾಕಿಸಿಕೊಳ್ಳುವ ಪದ್ದತಿ ಹಿಂದು ಧರ್ಮದಿಂದ ಬಂದದ್ದಾ? ಇದಕ್ಕೆ ಶಾಸ್ತ್ರ ಸಮ್ಮತವಿದೆಯ ಕೆಲವರು ಇದೆ ಎಂದು ಮೌಢ್ಯದಿಂದ ವಾದಿಸುತ್ತಾರೆ. ಸರಿಯಾದ ಮಾಹಿತಿ ನೀಡಿ🙏 — ಮಂಜುನಾಥ್
ಗಾಯತ್ರಿಯ ಜಪ ಮತ್ತು ಉಪದೇಶ
ಆಚಾರ್ಯರಿಗೆ ಪ್ರಣಾಮಗಳು.ಗಾಯತ್ರೀ ಮಂತ್ರ ಜಪವನ್ನು ಸ್ವರ ರಹಿತವಾಗಿಯೂ ಮಾಡಬಹುದೇ? ಉಪದೇಶ, ಸ್ವರ ರಹಿತವಾಗಿ ಆಗಿದ್ದರೆ, ಬೇರೆಯವರ ಬಳಿ ಸ್ವರಬದ್ಧವಾದ ಉಪದೇಶವನ್ನು ಉಪನಯನದ ಬಳಿಕ ಪಡೆಯಬಹುದೇ? ದಯವಿಟ್ಟು ತಿಳಿಸಿ. — ಗುರುರಾಜ್
ವಿದೇಶದಲ್ಲಿ ಸಂಕಲ್ಪ ಹೇಗೆ?
ಆಚಾರ್ಯರೇ, ಈ ಪ್ರಶ್ನೆಯನ್ನು ಎರಡನೆಯ ಬಾರಿಗೆ ಬರೆಯುತ್ತಿದ್ದೇನೆ. ನಾನು ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೇ ಹೊಗಲಿದ್ದೇನೆ. ನಾನು ಸಂಕಲ್ಪ ಹೇಗೆ ಮಾಡಬೇಕು, ದಯವಿಟ್ಟು ತಿಳಿಸಿ. — ಸುಬ್ರಹ್ಮಣ್ಯ ಭಾರದ್ವಾಜ್.
ಯಾವ ಬೆರಳುಗಳಿಂದ ಊರ್ಧ್ವಪುಂಡ್ರ ಧರಿಸಬೇಕು?
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಯಾವುದೇ ತಿಲಕವನ್ನು ತೋರುಬೆರಳಿನಿಂದ ಹಚ್ಚಬಾರದು ಎನ್ನುತ್ತಾರೆ. ಕೆಲವರು ಉಂಗುರದ ಬೆರಳಿನಿಂದ ಹಚ್ಚಬೇಕು ಎನ್ನುತ್ತಾರೆ. ಇದು ಸತ್ಯವೇ ತಿಳಿಸಿಕೊಡಿ — ಮಂಜುನಾಥ್
ಸ್ತ್ರೀಯರ ಗೋಪೀ-ಮುದ್ರಾಧಾರಣ ಕ್ರಮ
ಆಚಾರ್ಯರಿಗೆ ನಮಸ್ಕಾರಗಳು. ಹೆಂಗಸರು ಗೋಪೀಚಂದನ ಮತ್ತು ಮುದ್ರೆಗಳನ್ನು ಹಚ್ಚಿಕೊಳ್ಳಬಹುದೇ. ಕೆಲವರು ಗೋಪೀಚಂದನ ಮತ್ತು ಮುದ್ರೆಯನ್ನು ಮುದ್ರಾಧಾರಣೆ ಹಾಕಿಸಿಕೊಳ್ಳುವ ಜಾಗಕ್ಕೆ ಹಚ್ಚಿಕೊಳ್ಳುತ್ತಾರೆ. ಗೋಪಿ ಮುದ್ರೆ ಹಚ್ಚಿಕೊಳ್ಳಲೂ ಮಂತ್ರೋಪದೇಶ ಪಡೆಯಬೇಕೇ? ಹೆಂಗಸರು ಹಚ್ಚಿಕೊಳ್ಳುವ ಕ್ರಮ ಹೇಗೆ ದಯವಿಟ್ಟು ತಿಳಿಸಿ. ಯಾವ ಮುದ್ರಗಳನ್ನು ಹೆಂಗಸರು ಹಚ್ಚಿಕೊಳ್ಳಬಹುದು. ಇದನ್ನು ತಿಳಿಸಿ. — ಕಿರಣ್ ಭಾರ್ಗವ್ ನಂಜನಗೂಡು.
ಸಂಕಷ್ಟೀವ್ರತ
ಆಚಾರ್ಯರೇ ನಮಸ್ಕಾರಗಳು. ಮಾಧ್ವರು ಸಂಕಷ್ಟ ಗಣಪತಿ ಪೂಜೆ ಮಾಡಬಹುದೇ? ಮಾಡಬಾರದೆ? — ಪ್ರವೀಣ್ ಕೃಷ್ಣ
ಬ್ರಹ್ಮಾಂಡ, ಸಾವರಣ ಬ್ರಹ್ಮಾಂಡ ಎಂದರೇನು?
ಐವತ್ತು ಕೋಟಿ ವಿಸ್ತೀರ್ಣವಾದ ಬ್ರಹ್ಮಾಂಡಕ್ಕೂ, ಸಾವರಣ ಬ್ರಹ್ಮಾಂಡಕ್ಕೂ ಏನು ವ್ಯತ್ಯಾಸ? — ಡಾ। ಶ್ರೀರಂಗ್ ಪಿ ಕುಲಕರ್ಣಿ
ಮಂತ್ರ ಜಪಿಸಲು ಉಪದೇಶ ಅನಿವಾರ್ಯವೇ?
ಪೂಜ್ಯ ಆಚಾರ್ಯರಿಗೆ ನಮಸ್ಕಾರಗಳು. ಮಂತ್ರಗಳ ಜಪ ಮಾಡಬೇಕಾದರೆ ಪಡೀಲೇಬೇಕು ಎಂದು ಕೆಲವರು. ಬ್ರಹ್ಮೋಪದೇಶ ಆಗಿದ್ರೆ ಯಾವ ಜಪವನ್ನಾದ್ರುವು ಮಾಡಬಹುದು ಎಂದು ಕೆಲವರು. ಏನು ಮಾಡಬೇಕು ತಿಳಿಸಿ. ಎಲ್ಲ ಮಂತ್ರಕ್ಕೂ ಉಪದೇಶ ಪಡೆಯುವದು ಕಷ್ಟ ಅಲ್ವಾ? — ರಂಗನಾಥ್, ಹಾವೇರಿ.
ತೀರ್ಥವನ್ನು ನೀರಿನಂತೆ ಕುಡಿಯಬಹುದೇ?
ಆಚಾರ್ಯರಿಗೆ 🙏🙏 ಶಾಲಿಗ್ರಾಮದ ತೀರ್ಥವನ್ನು ನಾವು ಪ್ರತಿನಿತ್ಯ ಕುಡಿಯುವ ನೀರಿನಲ್ಲಿ ಹಾಕಿ ಅದನ್ನು ಸ್ವೀಕರಿಸಬಹುದೇ? ಶಾಲಗ್ರಾಮದ ತೀರ್ಥದಿಂದ ಆಚಮನ ಮಾಡಬಾರದು ಅಂತ ಕೇಳಿದ್ದೇನೆ, ಇದು ನಿಜವೇ? ತೀರ್ಥದಿಂದ ಪರಿಷೇಚನ ಮಾಡಬಹುದೇ? ತಿಳಿಸಿ. — ಮೋಹನ್ ಕುಲಕರ್ಣಿ.
ಬಸ್ಸು ಕಾರುಗಳಲ್ಲಿ ಪ್ರವಚನ ಕೇಳಬಹುದೇ?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ಬಸ್ಸಿನಲ್ಲಿ, ಕಾರಿನಲ್ಲಿ ಪ್ರವಚನಗಳು ಕೇಳ ಬಹುದೆ ? ದಯವಿಟ್ಟು ತಿಳಿಸಿ — ಭಾರದ್ವಾಜ್ ಕರಣಮ್.
ಸ್ತೋತ್ರಗಳನ್ನು ಮನಸ್ಸಿನಲ್ಲಿ ಸದಾ ಹೇಳಬಹದೇ?
ಆಚಾರ್ಯರಿಗೆ ನಮಸ್ಕಾರ. ಶ್ರೀ ವೆಂಕಟೇಶ್ವರ ಸ್ತೋತ್ರ. ಶ್ರೀ ರಾಘವೇಂದ್ರ ಸ್ವಾಮಿ ಸೋತ್ರ ಮನಸ್ಸಿನಲ್ಲಿ ಯಾವಾಗ ಬೇಕಾದರೂ ಹೇಳಬಹುದ? ದಯವಿಟ್ಟು ತಿಳಿಸಿ — ನಾಗರಾಜ್ ಉದ್ಯಾವರ
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 7
ಆರನೆಯ ಶ್ಲೋಕ
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 6
ಐದನೆಯ ಶ್ಲೋಕ
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 5
ನಾಲ್ಕನೆಯ ಶ್ಲೋಕ
ಶೂದ್ರರು ಏಕಾದಶಿ ಆಚರಿಸುವ ಕ್ರಮ
ಆಚಾರ್ಯರಿಗೆ ನನ್ನ ನಮನಗಳು.ಆಚಾರ್ಯರೆ ನಾನು ಕುರುಬ ನನಗೆ ಏಕಾದಶಿ ಮಾಡುವ ಕ್ರಮವನ್ನು ದಯಮಾಡಿ ತಿಳಿಸಿ. — ರಾಜೇಶ್, ಮೈಸೂರು.
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 4
ಮೂರನೆಯ ಶ್ಲೋಕ
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 3
ಎರಡನೆಯ ಶ್ಲೋಕ
ತಂಬಾಕು ಸೇವಿಸಬಹುದೇ?
ಶ್ರೀ ಗಣೇಶಾಯ ನಮಃ. ಆಚಾರ್ಯರೆ ಬ್ರಾಹ್ಮಣರಿಗೆ ತಂಬಾಕು ಸೇವಿಸಲು ಶಾಸ್ರ್ತದಲ್ಲಿ ಅನುಮತಿ ಇದೆಯೇ? — ಮಂಜುನಾಥ ಯಾದವಾಡೆ
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 2
ಮೊದಲನೆಯ ಶ್ಲೋಕ
ಶ್ರೀ ನರಸಿಂಹ ಸುಪ್ರಭಾತ ಪಂಚಕಮ್ — 1
ಈ ಬಾರಿಯ ನರಸಿಂಹ ಜಯಂತಿಯನ್ನು ಒಂದು ನರಸಿಂಹ ಸ್ತೋತ್ರವನ್ನು ಶ್ರೀಹರಿಗೆ ಸಮರ್ಪಿಸುವದರೊಂದಿಗೆ ಆಚರಿಸೋಣ. ಶ್ರೀ ಹರಿ ಗುರುಗಳಿಗೆ ಪ್ರೀತಿಯಾಗುತ್ತದೆ. ಇದನ್ನು ಸಮಗ್ರ ಕಲಿತು ಶ್ರೀ ನರಸಿಂಹ ಜಯಂತಿಯ ದಿವಸ ಶ್ರೀ ನರಸಿಂಹ ದೇವರಿಗೆ ಸಮರ್ಪಿಸಿ.
ಪೂಜೆ, ಉಪಾಸನೆ, ಸಾಧನೆ ಎಂದರೇನು?
ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಆಚಾರ್ಯರೆ ಪೂಜೆ, ಉಪಾಸನೆ,ಮತ್ತು ಸಾಧನೆ ಇವುಗಳಲ್ಲಿನ ವ್ಯತ್ಯಾಸ ಏನು? — ಮಂಜುನಾಥ್
ಜಪ/ಪೂಜೆ ಯಾವ ಮಣೆ ಉಪಯೋಗಿಸಬೇಕು?
ಆಚಾರ್ಯರೇ ಪೂಜೆ / ಜಪ ಮಾಡುವಾಗ ಮಣೆ ಉಪಯೋಗಿಸಬಹುದೇ? ಯಾವ ಮರದ ಮಣೆ ಉಪಯೋಗಿಸಬೇಕು? — ಕೆ. ವಿ. ಸುರೇಶ
ಏಕಾದಶೀ ಪೂಜೆಯ ವಿಶೇಷತೆಗಳೇನು?
ನಮಸ್ಕಾರ. ದಿನನಿತ್ಯದ ಪೂಜೆಗೆ ಮತ್ತು ಏಕಾದಶೀಯ ಪೂಜೆಗೆ ಏನೇನು ವ್ಯತ್ಯಾಸಗಳಿವೆ ಎಂದು ತಿಳಿಸಿ. ದೇವಪೂಜೆಯ ಸರಣಿಯಲ್ಲಿ ನೀವಿದನ್ನ ಹೇಳಿಯೇ ಹೇಳುತ್ತೀರಿ ಅಂತ ಭರವಸೆ ಇದ್ದೇ ಇದೆ. ಆದರೂ ತಾತ್ಕಾಲಿಕವಾಗಿ ಈಗೂಮ್ಮೆ ಸಂಕ್ಷಿಪ್ತವಾಗಿ ಹೇಳಿಕೊಟ್ಟರೆ ಉಪಕಾರವಾಗುವುದು. — ಜಯತೀರ್ಥ, ಹುಬ್ಬಳ್ಳಿ.
ಬ್ರಹ್ಮವೋ, ಬ್ರಮ್ಹವೋ?
ಪೂಜ್ಯ ಆಚಾರ್ಯರಿಗೆ ಸಾಷ್ಟಾಂಗ ಪ್ರಣಿಪಾತಗಳು. ತಮ್ಮ ವಿಶ್ವನಂದಿನಿಯ App ನಮಗೆ ಅತ್ಯಂತ ಉಪಯುಕ್ತವಾಗುತ್ತಿದೆ. ಮುಖ್ಯವಾಗಿ ಪ್ರಶ್ನೋತ್ತರ ವಿಭಾಗ ನಮಗೆ ರಸಾಯನದಂತಿದೆ. ವಿದೇಶಪ್ರವಾಸದ ಕುರಿತು ನಿಮ್ಮ ಪ್ರಶ್ನೋತ್ತರ ನಮ್ಮ ಆಲೋಚನೆಯ ವಿಧಾನವನ್ನು ಬದಲಿಸಿದೆ. ಹೋದರೆ ತಪ್ಪೇನು ಎಂದು ನಾವೆಲ್ಲರೂ ವಾದಿಸುತ್ತಿದ್ದೆವು. ಆದರೆ, “ಕೋಟಿಕೋಟಿ ಜನ್ಮಗಳಲ್ಲಿ ಸಾಧನೆ ಮಾಡಿ, ಅನಂತ ಜನ್ಮಗಳನ್ನು ದಾಟಿ ಪಡೆದಿರುವ ಈ ಅದ್ಭುತ ಬ್ರಾಹ್ಮಣ್ಯವನ್ನು ಕೇವಲ ಒಂದು ಊರಿಗಾಗಿ ಬಿಡಲು ಸಾಧ್ಯವೇ? ಬಿಡುವದು ಯುಕ್ತವೇ?” ಎಂಬ ನಿಮ್ಮ ಮಾತು ವೈಯಕ್ತಿಕವಾಗಿ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ, ವಿದೇಶಕ್ಕೆ ಹೋಗುವ ನಿರ್ಧಾರವನ್ನು ಕೈಬಿಟ್ಟಿದ್ದೇನೆ, ಗುರುಗಳೆ. ಈಗ ನನ್ನ ಪ್ರಶ್ನೆ ಹೀಗಿದೆ — ಬನ್ನಂಜೆ ಗೋವಿಂದಾಚಾರ್ಯರು ಮತ್ತು ತಾವು ಬ್ರಹ್ಮ ಎಂಬ ಶಬ್ದವನ್ನು ಬ್ರಹ್,ಮ ಎಂದು ಉಚ್ಚರಿಸುತ್ತೀರಿ. ಆದರೆ ಆ ರೀತಿಯ ಉಚ್ಚಾರಣೆ ತಪ್ಪು, ಬ್ರಮ್ಹ ಎಂದೇ ಉಚ್ಚರಿಸಬೇಕು ಎಂದು ಕೆಲವು ಪಂಡಿತರು ಹೇಳುತ್ತಿದ್ದಾರೆ. ಮತ್ತು ಬ್ರಹ್ಮ ಎಂಬಲ್ಲಿ ಹ ಎನ್ನುವದು silent ಎಂದು ಅನೇಕರ ವಾದ. ಅದಕ್ಕೆ ಪಾಣಿನೀಯ ಶಿಕ್ಷಾದ ಆಧಾರವನ್ನೂ ನೀಡುತ್ತಾರೆ. ಔರಸ್ಯಂ ತಂ ವಿಜಾನೀಯಾತ್ ಎಂದು. ಅಕ್ಷರ ಎದೆಯಲ್ಲಿಯೇ ಇರಬೇಕು ಎಂದು. ತಮ್ಮ ಉಚ್ಚಾರಣೆಯ ಕ್ರಮಕ್ಕೆ ಏನು ಆಧಾರ ಎನ್ನುವದನ್ನು ತಿಳಿಸಬೇಕಾಗಿ ಪ್ರಾರ್ಥನೆ. — ಸುಧಾಕರ, ಬೆಂಗಳೂರು.
ಪುಣ್ಯ-ಭೂಮಿ ಪಾಪ ಭೂಮಿ ಎಂಬ ವಿಭಾಗ ಸರಿಯೇ?
ಗುರುಗಳಿಗೆ ನಮನಗಳು. ಪ್ರಪಂಚ ವೆಲ್ಲವು ದೇವರ ಸೃಷ್ಟಿಯೇ ಆದಾಗ ಪಾಪ ಭೂಮಿ ಅಥವಾ ಪುಣ್ಯ ಭೂಮಿ ಎಂದು ಹೇಗಾಗುತ್ತವೆ. ಅಣುರೇಣು ತೃಣ ಕಾಷ್ಠವು ಆ ನಮ್ಮಪ್ಪ ತಿಮ್ಮಪ್ಪನದೆ ಅಲ್ಲವೆ ? ದಯವಿಟ್ಟು ತಿಳಿಸಿಕೊಡಿ 🙏🙏 — ಸಂಗೀತಾ ಪ್ರಸನ್ನ. 31ನೆಯ ಪ್ರಶ್ನೆಯ ಮುಂದುವರೆದ ಭಾಗ.
ಅಕ್ಷಯತೃತೀಯಾದಂದು ಶುಭಕರ್ಮ ಮಾಡಬಹುದೇ?
ಆಚಾರ್ಯರೇ ನಮಸ್ಕಾರ. ನನ್ನ ಪ್ರಶ್ನೆ: ಅಕ್ಷಯ ತದಿಗೆಯಂದು ಮಗುವಿಗೆ ಚೌಲ ಮಾಡಿಸ ಬಹುದೇ? — ಜಯರಾಮಾಚಾರ್ಯ
ಕೇವಲ ತಾಯಿಯ ತೀರ್ಥಶ್ರಾದ್ಧ ಮಾಡಬಹುದೇ?
ತಂದೆ ಬದುಕಿದ್ದು ತಾಯಿ ಮೃತರಾಗಿದ್ದಲ್ಲಿ ಕಾಶಿ ಮೊದಲಾದ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಬಹುದೇ? — ವಿನಾಯಕ್ ಕುಲಕರ್ಣಿ
ದುಬೈ ಶ್ರೀಲಂಕಾಗಳಿಗೆ ಹೋದರೆ ತಪ್ಪಿಲ್ಲವೇ?
ಆಚಾರ್ಯರೇ ನಮಸ್ಕಾರಗಳು. ದುಬಾಯ್.ಶ್ರೀಲಂಕಾ ಗೆ ಹೋಗಿಬಂದರೆ ಸಮುದ್ರೋಲಂಘನ ಆಗುವದಿಲ್ಲ ಅದ್ದರಿಂದ ಯಾವ ಪ್ರಾಯಶ್ಛಿತ್ತ ವಿಲ್ಲ ಅಮೇರಿಕಗೆ ಹೂಗಿಬಂದರೆ ಫ್ರಾಯಶ್ಛಿತ್ತ ವುಂಟು ಎಂದುಹೇಳುತ್ತಾರೆ ಯಾವುದು ಸರಿ ತಿಳಿಸಿ ಗುರುಗಳೆ — ಹೆಸರು ಬೇಡ
ಗಂಗಾವತರಣ ಆದದ್ದು ಎಂದು?
ಭಗೀರಥ ಪ್ರಯತ್ನದಿಂದ ಗಂಗಾವತರಣವಾದ ದಿನ ಯಾವಾಗ. ದಯವಿಟ್ಟು ತಿಳಿಸಿ. — ಭಾರತೀಶ
ಈ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ
ನಿಮಗೆಲ್ಲರಿಗೂ ಸ್ತೋತ್ರಗಳನ್ನು ಸುಲಭವಾಗಿ ಕಲಿಸಲು ಒಂದು ವಿಡಿಯೋ ಸಿದ್ಧಪಡಿಸಿದ್ದೇನೆ. ಒಮ್ಮೆ ಸಂಪೂರ್ಣವಾಗಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟಿನ ಮುಖಾಂತರ ತಿಳಿಸಿ.
ದಾರಿ ಕಾಣದೇ ಇದ್ದಾಗ ಏನು ಪರಿಹಾರ?
ಗುರುಗಳೆ. ನಮಸ್ಕಾರ. ಜೀವನದಲಿ ಹಲವು ಬಾರಿ ಕೆಲವು ಜನರಿಂದ ಕಿರುಕುಳಕ್ಕೆ ಒಳಗಾದ ಮನಸ್ಸು ತಪ್ಪುದಾರಿಯನ್ನು ಯೋಚಿಸುತ್ತದೆ. ಹಾಗೆ ಯೋಚಿಸದಿರಲು ಏನು ಮಾಡಬೇಕು? ಹಾಗೂ ಹಿಂಸೆಗೆ ಒಳಗಾದಾಗ ಏನು ಮಡಬೇಕು? ದಾರಿ ಕಾಣದೆ ಇದ್ದಾಗ ಏನು ಪರಿಹಾರ? — ರಾಘವೇಂದ್ರ
ಜೀವನ ಸ್ವಭಾವ ಬದಲಾಗುತ್ತದೆಯೇ?
ಆಚಾರ್ಯರೆ, ಸ್ವಭಾವತಃ ದುಷ್ಟರಾದ ಜೀವ ಯಾರಾದರೂ ಅತಿಶಯವಾದ ಭಗವದಾರಾಧನೆ ಮಾಡಿ ಆನಂದದ ಮೋಕ್ಷ ಪಡೆದಿರಯವ ಉದಾಹರಣೆಗಳು ಪುರಾಣಗಳಲ್ಲಿ ಇವೆಯಾ? ಜೀವನ ಸ್ವಭಾವದಲ್ಲಿ ಬದಳಾವಣೆ ಬರಲಿಕ್ಕೆ ಸಾಧ್ಯತೆ ಇದೆಯೆ? — ರೂಪಾ
ಅಕ್ಷಯತೃತೀಯಾದಂದು ತಿಲತರ್ಪಣ ಕೊಡಬೇಕಾ?
ನಮಸ್ತೆ ಆಚಾರ್ಯರೇ. ಅಕ್ಷಯ ತೃತೀಯಾ ದಿನ ತಿಲತರ್ಪಣ ಕೊಡಬೇಕಾ? — ರಾಘವನ್
ಪರಶುರಾಮಜಯಂತಿಯನ್ನು ಎಂದು ಆಚರಿಸಬೇಕು?
ಆಚಾರ್ಯರೇ, ತಾವು ಉಪನ್ಯಾಸದಲ್ಲಿ ಅಕ್ಷಯತೃತೀಯಾದಂದು ಪರಶುರಾಮಜಯಂತಿ ಎಂದು ಹೇಳಿದ್ದೀರಿ. ಪಂಚಾಂಗದಲ್ಲಿ ದ್ವಿತೀಯಾ ತಿಥಿ ಇರುವ ದಿವಸ (28/4/2017) ಪರಶರುರಾಮ ಜಯಂತಿ ಎಂದೂ ಹಾಗೂ ಶನಿವಾರ 29/4/2017 ಅಕ್ಷಯ ತೃತೀಯಾ ಎಂದು ಮುದ್ರಿಸಿದ್ದಾರೆ. ದಯವಿಟ್ಟು ಗೊಂದಲ ಪರಿಹರಿಸಿ. — ನರಸಿಂಹ ಮೂರ್ತಿ, ಕೋಲಾರ.
ದೈವ ಬಲ ಇಲ್ಲದವರನ್ನು ದೇವರು ರಕ್ಷಿಸುತ್ತಾನೆಯೇ?
ಆಚಾರ್ಯರಿಗೆ ಪ್ರಣಾಮಗಳು. ನನ್ನ ಪ್ರಶ್ನೆ ಇಂತಿದೆ — ಒಂದು ಸನ್ನಿವೇಶ. ಒಬ್ಬ ಮನುಷ್ಯನ ತಾರಾಬಲದಲ್ಲಿ ದೈವಬಲ ಕಡಿಮೆ/ಇಲ್ಲವೇ ಇಲ್ಲ ಅಂತಿದೆ. ಹಾಗಿರುವಾಗ ಕೃಷ್ಣ ಭಗವದ್ಗೀತೆಯಲ್ಲಿ ಹೇಳುವದು — “ನನ್ನನ್ನು ಸ್ಮರಿಸುವವರನ್ನು ನಾನು ಕಾಪಾಡುತ್ತೇನೆ” ಅಂತ. ಈ ಎರಡೂ ವಾಕ್ಯಗಳು ಒಂದಕ್ಕೊಂದು ವಿರುದ್ಧ ಅರ್ಥ ಕೊಡುತ್ತಿವೆ. ದಯವಿಟ್ಟು ಸಂದೇಹ ಪರಿಹರಿಸಿ. — ಚೇತನ್ ರಾಜ್ ರಾವ್.
ವಾಯುಸ್ತುತಿ ಪ್ರವಚನ
ಶ್ರೀ ಗುರುಭ್ಯೋ ನಮಃ. ತಮ್ಮ ಮುಖದಿಂದ ವಾಯುಸ್ತುತಿಯ ಉಪನ್ಯಾಸವನ್ನು ಕೇಳಬೇಕೆಂಬ ಆಸೆಯಿಂದ ತಮ್ಮಲ್ಲಿ ಪ್ರಾರ್ಥನೆಯನ್ನು ಸಲ್ಲಿಸ ಬಯಸುತ್ತೇನೆ. ದಯವಿಟ್ಟು ಈ ಪ್ರಾರ್ಥನೆಯನ್ನು ಸ್ವೀಕರಿಸಿ ನಮ್ಮನ್ನು ಉದ್ಧರಿಸಬೇಕು. — ಪವನ.
ಆತ್ಮನಿಗೆ ಸಾವಿಲ್ಲವಾದರೆ ಆತ್ಮಹತ್ಯೆ ಹೇಗೆ?
ಆತ್ಮನಿಗೆ ಸಾವಿಲ್ಲ ಎನ್ನುತ್ತಾರೆ. ಹಾಗಾದರೆ ಆತ್ಮಹತ್ಯೆ ಅತ್ಮಶ್ರಾದ್ಧ ಎನ್ನುವ ಶಬ್ದಗಳು ಏನನ್ನು ಹೇಳುತ್ತವೆ? ಆತ್ಮಕ್ಕೆ ಸಾವೇ ಇಲ್ಲದ ಬಳಿಕ ಹತ್ಯೆ ಹೇಗೆ? ಶ್ರಾದ್ಧ ಹೇಗೆ? — ಅಖಿಲಾ ದೇಶಪಾಂಡೆ.
ಹರಿವಾಸರ ಎಂದರೇನು?
ಗುರುಗಳಿಗೆ ನಮಸ್ಕಾರಗಳು.. ದಯವಿಟ್ಟು ಹರಿವಾಸರದ ಬಗ್ಗೆ ತಿಳಿಸಿಕೊಡಿ. — ಹರಿಪ್ರಸಾದ್
ಅಂಧೋಹಂ ಕರುಣಾಸಿಂಧೋ
ಗುರುಗಳಿಗೆ ನಮಸ್ಕಾರಗಳು. ದಯವಿಟ್ಟು ಶ್ರೀವಾದಿರಾಜ ಗುರುಗಳ ಅಂದೊಹಮ್ಮ ಕರುಣಾಸಿಂಧು ಎಂಬ ಸ್ತೋತ್ರವನ್ನು ಅನುಗ್ರಹಿಸಿ ಎಂದು ಪ್ರಾರ್ಥನೆ. — ಸಂಗೀತಾ ಪ್ರಸನ್ನ
ಚಾತುರ್ಮಾಸ್ಯ ವ್ರತಾಚರಣೆ ಕಡ್ಡಾಯವೇ?
ಚಾತುರ್ಮಾಸ್ಯ ವ್ರತಾಚರಣೆ ಕಡ್ಡಾಯವೇ? — ಶೋಭಾ ಸುಧೀಂದ್ರ, ಬೆಂಗಳೂರು.
ದೇವತೆಗಳು ದೈತ್ಯರಿಗೆ ವರ ಏಕೆ ಕೊಡುತ್ತಾರೆ?
ಗುರುಗಳಿಗೆ ನಮಸ್ಕಾರಗಳು. ತಮ್ಮ ದೇವರ ಪೂಜೆಯ ಉಪನ್ಯಾಸಗಳು ತುಂಬ ಪರಿಣಾಮಕಾರಿಯಾಗಿ ಮೂಡಿ ಬರುತ್ತಿವೆ. ಬಹಳ ದಿನಗಳಿಂದ ನನ್ನನ್ನು ಕಾಡುತ್ತಿರುವ ಒಂದು ಪ್ರಶ್ನೆಯಿದೆ. ಬ್ರಹ್ಮದೇವರು, ರುದ್ರದೇವರು ದೈತ್ಯರಿಗೆ ವರ ಕೊಡುತ್ತಾರೆ. ಆ ನಂತರ ಆ ದೈತ್ಯರು ಆ ವರಬಲದಿಂದ ಜನರಿಗೆ ತೊಂದರೆ ಕೊಡುತ್ತಾರೆ. ಅಷ್ಟೇ ಅಲ್ಲ, ದೇವತೆಗಳಿಗೇ ತೊಂದರೆ ಕೊಡುತ್ತಾರೆ. ತಮಗೂ ಸಜ್ಜನರಿಗೂ ಕಷ್ಟ ಉಂಟು ಮಾಡುವ ರಾಕ್ಷಸರಿಗೆ ದೇವತೆಗಳು ಯಾಕಾಗಿ ವರ ಕೊಡಬೇಕು? ವರ ಕೊಡದಿದ್ದರೆ ಆಯಿತಲ್ಲ. ದಯವಿಟ್ಟು ಉತ್ತರಿಸಿ. — ಶೇಷಾದ್ರಿ, ಸಕಲೇಶಪುರ.
ಮಡಿ ಮೈಲಿಗೆ
ಆಚಾರ್ಯರಿಗೆ ಪ್ರಣಾಮಗಳು, ಮಡಿ ಮೈಲಿಗೆ ಮುಸುರೆಗಳ ಬಗ್ಗೆ ಶಾಸ್ತ್ರೀಯ ಪ್ರಮಾಣಗಳ ಸಮೇತವಾಗಿ ತಿಳಿಸಿ ಹೇಳಿದರೆ ಮಹದುಪಕಾರ ಆಗುತ್ತದೆ 🙏 — ಆಶುತೋಷ್ ಪ್ರಭು
ವಾಯುಸ್ತುತಿಯನ್ನು ಸಂಜೆ ಪಠಿಸಬಾರದೇ?
ಕೆಲವರು ವಾಯುಸ್ತುತಿಯನ್ನು ಸಾಯಂಕಾಲ ಪಠಿಸಬಾರದು ಎಂದು ಹೇಳುತ್ತಾರೆ .ಇನ್ನು ಕೆಲವರು ಪಠಿಸಬಹುದು ಎಂದು ಹೇಳುತ್ತಾರೆ . ಇದರಲ್ಲಿ ಯಾವುದು ಸರಿ? — ಶ್ರೀಹರಿ ಪೆಜತ್ತಾಯ
ಏಕಾದಶಿಯ ದಿವಸ ಪದಾರ್ಥಗಳು ಕಲುಷಿತವಾಗುವದಿಲ್ಲವೇ?
ಆಚಾರ್ಯರೆ ನಮಸ್ಕಾರಗಳು. ನನ್ನದೊಂದು ಪ್ರಶ್ನೆ — ಏಕಾದಶಿಯಂದು ಸಕಲ ಪಾಪಗಳು ಆಹಾರವನ್ನು ಆಶ್ರಯಿಸಿರುತ್ತವೆ. ಆದ್ದರಿಂದ ಅಂದು ಭೋಜನ ಮಾಡಬಾರದು. ಆಚಾರ್ಯರೆ ಈಗ ಎಣ್ಣೆ ಉಪ್ಪು ಉಪ್ಪಿನಕಾಯಿ ಇವುಗಳು ಏಕಾದಶಿಗೆ ತಗುಲುತ್ತವೆ ಅಲ್ಲವೆ ಅದನ್ನು ಮತ್ತೆ ಉಪಯೋಗಿಸಲು ಬರುತ್ತದೆಯೇ ತಿಳಿಸಿಕೊಡಿ — ಮಂಜುನಾಥ್
ಕೃಷ್ಣಾರ್ಪಣ ಎನ್ನುವದು ಭೇದಚಿಂತನೆಯಲ್ಲವೇ?
ನಮಸ್ಕಾರ ಆಚಾರ್ಯರೆ, ಭಗವಂತನ ವಿವಿಧ ರೂಪಗಳಲ್ಲಿ ಭೇದ ಚಿಂತನೆ ಮಾಡಬಾರದು, ಹಾಗೆ ಮಾಡುವುದು ಶ್ರೇಯಸ್ಸಲ್ಲ ತಮಃ ಸಾಧಕವಾದದ್ದು ಎಂದು ನಿಮ್ಮ ಉಪನ್ಯಾಸಗಳಿಂದಲೇ ತಿಳಿದ ವಿಷಯ. ಹಾಗಿದ್ದರೆ ನಾವು ಮಾಡುವ ಪ್ರತಿಯೊಂದು ಕರ್ಮವನ್ನು ಶ್ರೀಕೃಷ್ಣಾರ್ಪಣಮಸ್ತು ಎಂದು ಕೃಷ್ಣ ರೂಪಿ ಭಗವಂತನಿಗೆ ಏಕೆ ಸಮರ್ಪಣೆ ಮಾಡಬೇಕು? ಭಗವಂತನ ಎಲ್ಲಾ ರೂಪಗಳೂ ಅಭಿನ್ನವಾಗಿದ್ದಲ್ಲಿ ವೇದವ್ಯಾಸಾರ್ಪಣಮಸ್ತು ಕಪಿಲಾರ್ಪಣಮಸ್ತು ಹಯಗ್ರೀವಾರ್ಪಣಮಸ್ತು ಎಂದು ಹೀಗೇ ಮುಂತಾಗಿ ಭಗವಂತನ ಬೇರೆ ಬೇರೆ ರೂಪಗಳಿಗೆ ಏಕೆ ಸಮರ್ಪಣೆ ಮಾಡಬಾರದು? ದಯವಿಟ್ಟು ತಿಳಿಸಿ ಕೊಡಿ. ಧನ್ಯವಾದಗಳು. ಗಾಯತ್ರೀ ಶ್ರೀನಿವಾಸ್, ಮುಳಬಾಗಿಲು
ಈ ನಿರ್ಮಾಲ್ಯದ ಕ್ರಮ ತಪ್ಪಾ?
ಆಚಾರ್ಯರೇ ಸಾಷ್ಟಾಂಗ ನಮಸ್ಕಾರಗಳು. ದೇವರ ಪೂಜೆಯಲ್ಲಿ ಇನ್ನೊಂದು ಕ್ರಮವನ್ನು ಕೇಳಿದ್ದೇನೆ. 1. ನಿರ್ಮಾಲ್ಯ ವಿಸರ್ಜನೆ ಮಾಡಿ 2. ನಿರ್ಮಾಲ್ಯ ಅಭಿಷೇಕ ಮಾಡಿ 3. ಶಂಖ ಮತ್ತು ಪ್ರಾಣದೇವರ ಅಭಿಷೇಕ ಮಾಡಿ 4. ಶಂಖ ಮತ್ತು ಪ್ರಾಣದೇವರಿಗೆ ನಿರ್ಮಾಲ್ಯ ತೀರ್ಥವನ್ನು ಕೊಟ್ಟು 5. ನಾವು ನಿರ್ಮಾಲ್ಯ ಸ್ವೀಕಾರ ಮಾಡಿ 6. ನಿರ್ಮಾಲ್ಯ ತೀರ್ಥದಿಂದ ಗೋಪೀಚಂದನ ಧಾರಣೆ ಮಾಡಿ ಆಮೇಲೆ ಸಂಧ್ಯಾವಂದನೆ ಮಾಡುವದು. ಈ ಕ್ರಮ ತಪ್ಪಾದದ್ದಾ. ದಯಮಾಡಿ ಕಾರಣಗಳನ್ನು ತಿಳಿಸಿಕೊಡಿ. — ಆದಿತ್ಯ ಸಿ. ಎಸ್.
ಯಾವುದು ದೇವರ ಪೂಜೆ?
ಸಾಲಿಗ್ರಾಮಕ್ಕೆ ಪೂಜೆ ಮಾಡುವದು ಮಾತ್ರ ಪೂಜೆಯೇ? ಬೇರೆ ಪೂಜೆಯಿಲ್ಲವೇ?
ಸ್ತ್ರೀಯರು ವಿಷ್ಣುಸಹಸ್ರನಾಮವನ್ನು ಪಠಿಸಬಹುದೇ?
ಹರೇ ಶ್ರೀನಿವಾಸಾ, ಆಚಾರ್ಯರಿಗೆ ನಮಸ್ಕಾರ. ಪ್ರಶ್ನೆ: ವಿಷ್ಣು ಸಹಸ್ರನಾಮವನ್ನು ಹೆಣ್ಣು ಮಕ್ಕಳು ಹೇಳಬಹುದೇ? ಅಥವಾ ಹೇಳಲೇ ಬಾರದೇ? — ಜಯರಾಮಾಚಾರ್ಯ ಬೆಣಕಲ್.
ಪಿಶಾಚಿಗಳು ನಿಜವಾಗಿಯೂ ಇವೆಯಾ?
ನಮ್ಮ ಆತ್ಮೀಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಈ ರೀತಿಯ ಪ್ರಶ್ನೆ ಕೇಳುತ್ತಿರುವದಕ್ಕೆ ದಯವಿಟ್ಟು ಕ್ಷಮಿಸಿ. ದೆವ್ವ ಭೂತಗಳು ಎನ್ನುವದು ನಿಜವಾಗಿ ಇವೆಯಾ? ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ. ದಯವಿಟ್ಟು ಉತ್ತರಿಸಿ. ತಪ್ಪು ಕೇಳಿದ್ದರೆ ಕ್ಷಮಿಸಿ. — ವಾದಿರಾಜ, ರಾಯಚೂರು.
ಕಾಷ್ಠ ಎಲ್ಲಿ ದೊರೆಯುತ್ತದೆ.
ಆಚಾರ್ಯರಿಗೆ ನಮಸ್ಕಾರ. ದಂತಧಾವನದ ಉಪನ್ಯಾಸ ಅದ್ಭುತ. ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಎಂತಹ ಮಾಹಿತಿ ಕೊಟ್ಟಿದ್ದಾರೆ! ನಾವು ಯುವಕರು ಬ್ರಷ್ ಬಿಟ್ಟು ಕಡ್ಡಿಗಳನ್ನು ಉಪಯೋಗಿಸಲಿಕ್ಕೆ ಸಿದ್ಧ. ಆದರೆ ಇವುಗಳು ಎಲ್ಲಿ ಸಿಗ್ತವೆ. — ರಾಘವೇಂದ್ರನ್, ಚೆನ್ನೈ
ಸಂಕ್ಷಿಪ್ತ ಪೂಜೆ
ಆಚಾರ್ಯರಿಗೆ ನಮಸ್ಕಾರಗಳು.ಉದ್ಯೋಗಸ್ಥರಿಗೆ ನಿತ್ಯ ಪೂಜೆ ಮಾಡಲು ಸಂಕ್ಷಿಪ್ತ ಪೂಜಾ-ವಿಧಾನವನ್ನು ತಿಳಿಸಿದರೆ ಮಹದುಪಕಾರವಾಗುತ್ತದೆ.
ಪ್ರಳಯಕಾಲದಲ್ಲಿ ಅಂಧಂತಮಸ್ಸು ಇರುತ್ತದೆಯೇ?
ಪ್ರಳಯಕಾಲದಲ್ಲಿ ದೇವರು ಲಕ್ಷ್ಮೀದೇವಿ ಇಬ್ಬರೇ ಇರುವಾಗ ಅಂಧಂತಮಸ್ಸು ಇರುತ್ತದೆಯೋ ಇರುವದಿಲ್ಲವೋ? — ರಾಘವೇಂದ್ರ
ಸಂಧ್ಯಾವಂದನೆಯ ನಂತರವೇ ಅಕ್ಷತೆ ಧರಿಸಬಹುದೇ?
ಆಚಾರ್ಯರಿಗೆ ನಮಸ್ಕಾರಗಳು. ಅಂಗಾರ ಅಕ್ಷತಿಯನ್ನು ಸಂಧ್ಯಾ ನಂತರ ಅಥವಾ ಭೋಜನ ಸಮಯದಲ್ಲಿ ಯಾವಾಗ ಹಚ್ಚಬೇಕು.— ಪವನ ಸಂಡೂರು.
ದಂತಕಾಷ್ಠಕ್ಕೆ ಪರ್ಯಾಯವಿದೆಯೇ?
🙏🙏🙏 ನಮಸ್ಕಾರ ಆಚಾರ್ಯರೇ, ನಿಮ್ಮ ಸದಾಚಾರ ಸ್ಮೃತಿಯ ಉಪನ್ಯಾಸಗಳನ್ನು ಕೇಳುತ್ತಿದ್ದೇನೆ. ತುಂಬ ಚನ್ನಾಗಿ ಮೂಡಿ ಬರುತ್ತಿವೆ. ದಂತಧಾವನದ ಕುರಿತು ನನಗೆ ಎರಡು ಪ್ರಶ್ನೆಗಳಿವೆ. ಉಜ್ಜಿದ ಕಡ್ಡಿಯನ್ನು ತೊಳೆದು ಎತ್ತಿಟ್ಟು ಮತ್ತೆ ಉಪಯೋಗಿಸಬಹುದೇ? ದಂತಕಾಷ್ಠಕ್ಕೆ ಮತ್ತೇನಾದರೂ ಪರ್ಯಾಯ ಇದೆಯೇ? — ಪ್ರಮೋದ್, ಬೆಂಗಳೂರು.
ಸಂಜೆ ಊರ್ಧ್ವಪುಂಡ್ರ ಧರಿಸಬಹುದೇ?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ದ್ವಾದಶ ಊರ್ಧ್ವಪುಂಡ್ರಗಳು ಗೋಪಿಚಂದನದಿಂದ ಸಾಯಂ ಸಂಧ್ಯವಂದನೆಯಲ್ಲಿ ಹಚ್ಚಿಕೊಳ್ಳ ಬಹುದೇ? 🙏 ದಯವಿಟ್ಟು ತಿಳಿಸಿ. — ಭಾರದ್ವಾಜ್ ಕರಣಮ್, ಬಳ್ಳಾರಿ.
ಸಂಸ್ಕೃತ ಸುರಭಿ ಯಾವಾಗ ಅಪ್ಡೇಟ್ ಆಗುತ್ತೆ ಆಚಾರ್ಯರೆ?
ದಿಲೀಪ್ ಕುಮಾರ್
ಆಚಾರ್ಯರೆ, ಹೆಣ್ಣು ಮಕ್ಕಳು ದ್ವಾದಶ ಸ್ತೋತ್ರವನ್ನು ಪಠಣೆ ಮಾಡಬಹುದಾ?
ಹೆಂಗಸರು ದ್ವಾದಶಸ್ತೋತ್ರಗಳನ್ನು ಪಠಿಸಬಹುದು ಎಂದು ಕೆಲವರು ಹೇಳುತ್ತಾರೆ, ಪಠಿಸಬಾರದು ಎಂದು ಕೆಲವರು ಹೇಳುತ್ತಾರೆ. ನಾವು ಯಾವುದನ್ನು ಅನುಸರಿಸಬೇಕು?
ಗಣಪತಿಗೆ ತುಳಸಿಯನ್ನು ಸಮರ್ಪಿಸಬಹುದೇ?
ಗುರುಗಳಿಗೆ ನಮಸ್ಕಾರಗಳು. ಶ್ರೀ ಗಣೇಶದೇವರಿಗೆ ತುಳಸೀ ಎಲೆ ಸಮರ್ಪಿಸಬಾರದು, ನಿಷಿದ್ಧ ಎನ್ನುತ್ತಾರೆ. ಇದು ನಿಜವೇ?
ಶ್ರೀ ಲಕ್ಷ್ಮೀವಲ್ಲಭತೀರ್ಥರ ವೃಂದಾವನದ ಶಿಲೆ
ಶ್ರೀ ಲಕ್ಷ್ಮೀವಲ್ಲಭತೀರ್ಥರ ಮೂಲವೃಂದಾವನದ ಅವಶಿಷ್ಟ ಶಿಲೆಯನ್ನು ಶ್ರೀರಂಗದ ಶ್ರೀ ಲಕ್ಷ್ಮೀನಿಧಿತೀರ್ಥಶ್ರೀಪಾದಂಗಳವರ ಸನ್ನಿಧಾನಕ್ಕೆ ತಲುಪಿಸಿದ ವಿವರ.