ಭರತರ ಹಿಂದೆ ಹೊರಟ ಸಮಗ್ರ ಜನತೆ
ಶ್ರೀರಾಮರನ್ನು ತಿರುಗಿ ಕರೆತರಲೇಬೇಕು ಎಂದು ಪಶು ಪಕ್ಷಿ ಪ್ರಾಣಿಗಳಿಂದಾರಂಭಿಸಿ ಅಯೋಧ್ಯೆಯ ಸಮಗ್ರ ಜನತೆ ಕಾಡಿಗೆ ಹೊರಡುವ ಘಟನೆಯ ಚಿತ್ರಣ.
ರಸ್ತೆಯ ನಿರ್ಮಾಣ
ಅಯೋಧ್ಯೆಯಿಂದ ಶೃಂಗವೇರಪುರದವರಗೆ ಎರಡೇ ದಿವಸಗಳಲ್ಲಿ ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಿದ ನಮ್ಮ ಪ್ರಾಚೀನರ ವಿದ್ಯೆ ಕೌಶಲ ಬದುಕು ಅದೆಷ್ಟು ಅದ್ಭುತವಾಗಿತ್ತು ಎಂದು ಪರಿಚಯಿಸುವ ಭಾಗ.
ಭರತರಿಗೆ ಧರ್ಮಪರೀಕ್ಷೆ
ಜೀವಕರ್ತೃತ್ವದ ವಿಷಯದಲ್ಲಿ ತಿಳಿಯಬೇಕಾದ ಮತ್ತು ನಾವು ಅನುಷ್ಠಾನಮಾಡಬೇಕಾದ ಅತ್ಯಂತ ರಹಸ್ಯದ ಮತ್ತು ಮಹತ್ತ್ವದ ಅನುಸಂಧಾನನ್ನು ಮನಗಾಣಿಸುವ ಮನೋಭಿಮಾನಿಯಾದ ಭರತರ ಚರಿತೆಯಿದು. ತಪ್ಪದೇ ಕೇಳಿ.
ದಶರಥರ ಅಂತ್ಯಸಂಸ್ಕಾರ
ಅಂತ್ಯಸಂಸ್ಕಾರದ ಸಂದರ್ಭದಲ್ಲಿ ನಾವು ಅನುಸರಿಸಬೇಕಾದ ಹತ್ತಾರು ನಿಯಮಗಳ ಪರಿಚಯದೊಂದಿಗೆ ರಾಜಾಧಿರಾಜರಾದ ಶ್ರೀ ದಶರಥಮಹಾರಾಜರ ಅಂತ್ಯೇಷ್ಟಿಯ ವಿವರಣೆ.
ಭರತರ ಅಂತರಾಳ
ಸ್ತ್ರೀಹತ್ಯೆಯನ್ನು ತನ್ನಣ್ಣ ರಾಮ ಮೆಚ್ಚುವದಿಲ್ಲ ಎನ್ನುವ ಕಾರಣಕ್ಕೆ ಕೈಕಯಿ ಮಂಥರೆಯರನ್ನು ಕೊಲ್ಲದೇ ಅವರನ್ನು ತೊರೆದು ಕೌಸಲ್ಯೆಯ ಬಳಿಗೆ ಬಂದು ರಾಮನ ವನನಾಸಕ್ಕೆ ನಾನು ಕಾರಣನಲ್ಲ ಎಂದು ಭರತರು ನಿವೇದಿಸಿಕೊಳ್ಳುವ ಘಟನೆಯ ಚಿತ್ರಣ
ಕೈಕಯಿಯನ್ನು ತಿರಸ್ಕರಿಸಿದ ಭರತರು
ಯಾವ ತಪ್ಪು ಮಾಡಿದಾಗ ಬಂಧುಗಳನ್ನು ಕ್ಷಮಿಸಬೇಕು, ಯಾವ ತಪ್ಪು ಮಾಡಿದಾಗ ಅವರಿಂದ ದೂರವಿರಬೇಕು ಎಂಬ ಪಾಠವನ್ನಿಲ್ಲಿ ಕಲಿಯುತ್ತೇವೆ, ಆಚಾರ್ಯರ ನಿರ್ಣಯಗಳೊಂದಿಗೆ.
ದಶರಥರ ಅಂತಿಮಸ್ಮರಣೆ
ತಮ್ಮ ಜೀವಿತದ ಕಟ್ಟಕಡೆಯ ಕ್ಷಣದಲ್ಲಿ ದಶರಥಮಹಾರಾಜರು ಮಾಡಿದ ಪರಮಾದ್ಭುತ ರಾಮಚಿಂತನೆಯ ಚಿತ್ರಣ.
ಮುನಿಹತ್ಯೆಯ ಕುರಿತ ಚರ್ಚೆ
ಮುನಿಕುಮಾರರ ನಿಜವಾದ ಹೆಸರೇನು, ಅವರು ಬ್ರಾಹ್ಮಣರೇ ಬ್ರಾಹ್ಮಣೇತರರೇ, ದಶರಥರಿಗೆ ಬಂದ ಪಾಪವೆಷ್ಟು, ಶಾಪವೆಷ್ಟು, ಈ ವಿಷಯಯವನ್ನು ದಶರಥರು ಗುಟ್ಟಾಗಿಟ್ಟಿದ್ದರೆ? ಮುಂತಾದ ಅನೇಕ ವಿಷಯಗಳ ಕುರಿತ ಚರ್ಚೆ ಇಲ್ಲಿದೆ.
ದಶರಥರಿಗೆ ಶಾಪ
ತಮ್ಮ ಮಗನನ್ನು ಕಳೆದುಕೊಂಡ ವೃದ್ಧ ಜೀವ ದಶರಥರಿಗೆ ಶಾಪ ನೀಡುವ ಪ್ರಸಂಗದ ಚಿತ್ರಣ
ಶ್ರವಣಕುಮಾರರ ಹತ್ಯೆ
ದಶರಥರು ಪ್ರಮಾದದಿಂದ "ಯಜ್ಞದತ್ತ" ಎಂಬ ಮುನಿಕುಮಾರರೊಬ್ಬರನ್ನು ಹತ್ಯೆ ಮಾಡಿದ ಘಟನೆಯ ವಿವರ ಇಲ್ಲಿದೆ.
ಕ್ಷಮೆ ಯಾಚಿಸಿದ ದಶರಥರು
ಮಹಾಸದ್ಗುಣಶಾಲಿಗಳಾದ ವ್ಯಕ್ತಿಗಳನ್ನು ನಮ್ಮ ಜೀವನದಿಂದ ನಾವೆಂದಿಗೂ ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು ಎಂಬ ಪಾಠವನ್ನು ಅದ್ಭುತವಾಗಿ ಕಲಿಸುವ ಭಾಗವಿದು.
ಕೌಸಲ್ಯೆಯ ದುಃಖಕ್ಕೆ ಕಾರಣ
ದಶರಥರ ಮತ್ತು ಅವರ ಪತ್ನಿಯರ ಮಧ್ಯದಲ್ಲಿದ್ದ ಅತ್ಯಂತ ಸೂಕ್ಷ್ಮವಿಷಯದ ಅನಾವರಣ ಇಲ್ಲಿದೆ.
ದಶರಥರ ಶೋಕಸಾಗರ
ಪ್ರಾಣಕ್ಕಿಂತಲೂ ಮಿಗಿಲಾದ ಮಗನಿಂದ ದೂರವಾಗಿ ದಶರಥರು ಅನುಭವಿಸಿದ ಅಪಾರ ಶೋಕದ ನಿರೂಪಣೆ.
ಅಯೋಧ್ಯೆಯ ಜನರ ಎತ್ತರ
ಅಸಂಖ್ಯ ಭಕ್ತರ ಮನಸ್ಸಿಗೆ ದುಃಖವನ್ನು ನೀಡಿ ರಾಮ ವನಕ್ಕೆ ಹೋಗಿದ್ದು ತಪ್ಪಲ್ಲವೇ, ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರೆಯುತ್ತದೆ. ಈ ಘಟನೆಯಿಂದ ಅಯೋಧ್ಯಾಪುರವಾಸಿಗಳು ಏರಿದ ಆಧ್ಯಾತ್ಮಿಕ ಎತ್ತರದ ವಿವರಣೆಯೊಂದಿಗೆ.
ಚಿತ್ರಕೂಟದಲ್ಲಿ ಪರ್ಣಶಾಲೆಯ ನಿರ್ಮಾಣ
ಚಿತ್ರಕೂಟದಲ್ಲಿ ಲಕ್ಷ್ಮಣ ನಿರ್ಮಾಣ ಮಾಡಿದ ಪರಮಾದ್ಭುತ ಪರ್ಣಶಾಲೆಯಲ್ಲಿ ವಾಸ್ತುಶಾಂತಿಯನ್ನು ಮಾಡಿ ಶ್ರೀರಾಮ ಸೀತೆಯರು ವಾಸ ಮಾಡಿದ ಪರಮಮಂಗಳ ಘಟನೆಯ ಚಿತ್ರಣ ಇಲ್ಲಿದೆ.
ಭರದ್ವಾಜರ ಆತಿಥ್ಯ
ಭರದ್ವಾಜರ ಆಶ್ರಮವನ್ನು ಪ್ರವೇಶ ಮಾಡಿದ ಕ್ರಮ, ಅಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುವ, ಮಾತನಾಡುವ ಕ್ರಮ, ಆಲ್ಲಿಂದ ಹೊರಟ ಪರಿಯ ವಿವರಣೆ ಇದೆ. ದೇವರು ಕಲಿಸುವ ಅದ್ಭುತ ಪಾಠಗಳೊಂದಿಗೆ.
ಲಕ್ಷ್ಮಣನಿಗೆ ಪರೀಕ್ಷೆ
ನಮ್ಮೊಳಗಿನ ಕಳ್ಳ ಮನಸ್ಸನ್ನು ಅನಾವರಣಗೊಳಿಸುವ ಅದ್ಭುತ ಭಾಗವಿದು. ಧರ್ಮಾಚರಣೆ ಮಾಡಲು, ದೇವರಲ್ಲಿ ಭಕ್ತಿಯನ್ನು ಮಾಡಲು ಹೊರಟಾಗ ಮನಸ್ಸಿನಲ್ಲಿ ಲೌಕಿಕ ವಿಷಯದ ಅಪೇಕ್ಷೆಗಳೊಂದಿಗೆ ನಡೆಯುವ ಘರ್ಷಣೆಯನ್ನು ಹೇಗೆ ಮೀರಬೇಕು ಎಂದು ರಾಮಲಕ್ಷ್ಮಣರಿಲ್ಲಿ ಕಲಿಸುತ್ತಾರೆ.
ಸೀತೆಯ ಹರಕೆ
ದೋಣಿಯಲ್ಲಿ ಕುಳಿತ ನಂತರ ಶ್ರೀರಾಮದೇವರು ಮಂತ್ರಗಳ ಜಪ ಮಾಡುತ್ತಾರೆ, ಸೀತಾದೇವಿಯರು ಗಂಗೆಗೆ ಹರಕೆಯನ್ನು ಹೊತ್ತುಕೊಳ್ಳುವ ಪ್ರಸಂಗದ ವಿವರಣೆ ಇಲ್ಲಿದೆ. ಹರಕೆಯ ಕುರಿತ ವಿಶೇಷ ವಿಷಯಗಳೊಂದಿಗೆ.
ರಾಮಕಥೆಯ ಆಧ್ಯಾತ್ಮಿಕತೆ
ರಾಮ-ಲಕ್ಷ್ಮಣ-ಸೀತೆಯರು, ಗುಹ ತರಿಸಿದ ನೌಕೆಯಲ್ಲಿ ಕುಳಿತು ಗಂಗೆಯನ್ನು ದಾಟಿದ ಪ್ರಸಂಗದ ಆಧ್ಯಾತ್ಮಿಕ ಮುಖದ ಚಿತ್ರಣ ಇಲ್ಲಿದೆ.
ಗುಹನ ಭಕ್ತಿ ಲಕ್ಷ್ಮಣನ ಅಂತರಾಳ
ನಡೆದ ಘಟನೆಯ ಕುರಿತು ಸಿಟ್ಟಾಗಿದ್ದ ಲಕ್ಷ್ಮಣನಿಗೆ ದಶರಥರ ಬಗ್ಗೆ ಅದೆಂತಹ ಪ್ರೀತಿಯಿತ್ತು, ಅ ಲಕ್ಷ್ಮಣರ ಮನಸ್ಸು ಅದೆಷ್ಟು ಮೃದುವಾಗಿತ್ತು ಎನ್ನುವದರ ಅನಾವರಣ ಇಲ್ಲಿದೆ. ಗುಹ-ರಾಮರ ಭಾಂದವ್ಯ, ಗುಹನ ಭಕ್ತಿಗಳ ಚಿತ್ರಣದೊಂದಿಗೆ.
ಸುಮಂತ್ರರ ಭಕ್ತಿ
ಸುಮಂತ್ರರ ಭಕ್ತಿ, ರಾಮನ ಭಕ್ತವಾತ್ಸಲ್ಯಗಳನ್ನು ವಾಲ್ಮೀಕಿಮಹರ್ಷಿಗಳು ಚಿತ್ರಿಸುವ ಕ್ರಮ ನಮ್ಮ ಕಣ್ಣಾಲಿಗಳಲ್ಲಿ ಅಪ್ರಯತ್ನವಾಗಿ ನೀರನ್ನು ತರಿಸುತ್ತವೆ, ನಮ್ಮ ಮನಸ್ಸಿನ ಕಶ್ಮಲವನ್ನು ದೂರಮಾಡಿಬಿಡುತ್ತವೆ.
ಗಂಗೆಯ ತೀರದಲ್ಲಿ ಶ್ರೀರಾಮ
ಕಚ್ಚೆ ಸೀರೆ ಪಂಚೆ ಉಟ್ಟರೇ ದೇವರು ಒಲಿಯುತ್ತಾನಾ, ಕೃಷ್ಣ ಅರ್ಜುನರೇನು ಮಡಿ ಉಟ್ಟಿಕೊಂಡು ಭಗವದ್ಗಿತೆಯನ್ನು ನೀಡಿದರೇ ಎನ್ನುವ ಆಧುನಿಕರಿಗೆ ನಮ್ಮ ಸ್ವಾಮಿ ಶ್ರೀರಾಮ ತನ್ನ ಚರ್ಯೆಯಿಂದಲೇ ನೀಡಿರುವ ಉತ್ತರದ ವಿವರಣೆಯೊಂದಿಗೆ
ಅಯೋಧ್ಯೆಗೆ ಗೌರವ
ಆಯುಧ ಪೂಜೆ, ಭೂಮಿ ಪೂಜೆ, ನಮ್ಮ ಬದುಕಿಗೆ ಆಧಾರವಾದ ವಸ್ತುಗಳ ಪೂಜೆಯ ಹಿಂದಿನ ಉದ್ದೇಶದ ವಿವರಣೆಯೊಂದಿಗೆ ನಮ್ಮ ಸ್ವಾಮಿ ಕೋಸಲದ ಎಲ್ಲೆಯಲ್ಲಿ ನಿಂತು ತನ್ನ ರಾಷ್ಟ್ರಕ್ಕೆ ಸಲ್ಲಿಸುವ ಗೌರವದ ಕುರಿತು ನಾವಿಲ್ಲಿ ಕೇಳುತ್ತೇವೆ. ನಮ್ಮ ಬದುಕನ್ನು ಬಂಗಾರಗೊಳಿಸುವ ಪಾಠಗಳೊಂದಿಗೆ.
ಶ್ರೀರಾಮನನ್ನು ಕಳೆದುಕೊಂಡ ಜನರು
ತಮಸಾ ನದಿಯ ತೀರದಲ್ಲಿ ರಾತ್ರಿ ಜನರೆಲ್ಲರೂ ಮಲಗಿದ್ದಾಗ ಮಧ್ಯರಾತ್ರಿಯಲ್ಲಿ ರಾಮ-ಸೀತಾ-ಲಕ್ಷ್ಮಣ-ಸುಮಂತ್ರರು ರಥವನ್ನೇರಿ ಹೊರಡುವ ಪ್ರಸಂಗದ ವಿವರಣೆ ಇಲ್ಲಿದೆ. ಮೂಡುವ ಎಲ್ಲ ಪ್ರಶ್ನೆಗಳ ಉತ್ತರೊಂದಿಗೆ.
ಬ್ರಾಹ್ಮಣರ ಪ್ರಾರ್ಥನೆ
ಇಡಿಯ ಅಯೋಧ್ಯೆಯ ಬ್ರಾಹ್ಮಣಸಂಕುಲ ಧೂಳಿರುವ ಬೀದಿಯಲ್ಲಿ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಹಿಂತಿರುಗಿ ಬಾ ಎಂದು ಪ್ರಾರ್ಥನೆ ಮಾಡುವ ಘಟನೆಯನ್ನಿಲ್ಲಿ ಕೇಳುತ್ತೇವೆ, ವೃಕ್ಷಗಳೂ ಸಹ ಹೇಗೆ ಮೊರೆಯಿಟ್ಟವು ಎನ್ನುವ ವಿವರದೊಂದಿಗೆ.
ಸುಮಿತ್ರಾದೇವಿಯ ಹಿತೋಪದೇಶ
ಮಗ ವನಕ್ಕೆ ಹೋದ ಬಳಿಕ ಕೌಸಲ್ಯಾದೇವಿ ಅಪಾರ ದುಃಖಕ್ಕೊಳಗಾದರೆ, ಸುಮಿತ್ರಾದೇವಿಯರು ಪರಮಾದ್ಭುತವಾದ ಕ್ರಮದಲ್ಲಿ ಅವರನ್ನು ಸಾಂತ್ವನಗೊಳಿಸುವ ಪರಿಯನ್ನಿಲ್ಲಿ ಕೇಳುತ್ತೇವೆ. ನಮ್ಮ ಕಣ್-ತೆರೆಸುವ ಪ್ರಸಂಗ.
ಕೈಕಯಿಯನ್ನು ತೊರೆದ ದಶರಥರು
ದಶರಥ ಮಹಾರಾಜರು ಕೈಕಯಿಯನ್ನು ಶಾಶ್ವತವಾಗಿ ತೊರೆದು ಕೌಸಲ್ಯೆಯ ಮನೆಯನ್ನು ಸೇರುತ್ತಾರೆ. ಅಂತ್ಯವಿಲ್ಲದ ದುಃಖ ಇಡಿಯ ಅಯೋಧ್ಯೆಯನ್ನು ಆವರಿಸುವದನ್ನಿಲ್ಲಿ ಕೇಳುತ್ತೇವೆ.
ಶ್ರೀರಾಮನ ನಿರ್ಗಮನ
ಅಯೋಧ್ಯೆಯ ಸೌಭಾಗ್ಯವಾದ ಶ್ರೀರಾಮಚಂದ್ರ ನಗರವನ್ನು ತೊರೆದು ಹೊರಟು ನಿಂತಾಗ ಸಮಗ್ರ ನಾಗರೀಕರು, ಆನೆ ಕುದುರೆಗಳು ದಶರಥ ಕೌಸಲ್ಯೆಯರು ಅನುಭವಿಸಿದ ಅಪಾರ ನೋವಿನ ಚಿತ್ರಣ ಇಲ್ಲಿದೆ.
ಗಂಡನಿಗೇಕೆ ಅಷ್ಟು ಮಹತ್ತ್ವ
ಹೆಣ್ಣಿಗೆ ಗಂಡನಿಲ್ಲದೇ ಯಾವ ಸಾಧನೆಯಿಲ್ಲ ಎಂದು ಶಾಸ್ತ್ರಗಳು ಮೇಲಿಂದ ಮೇಲೆ ಹೇಳುತ್ತವೆ. ಯಾಕಷ್ಟು ಮಹತ್ತ್ವ ಗಂಡನಿಗೆ ಎಂಬ ಪ್ರಶ್ನೆಗೆ ಸ್ವಯಂ ಸೀತಾದೇವಿಯರು ನೀಡಿದ ಉತ್ತರ ಇಲ್ಲಿದೆ. ತಪ್ಪದೇ ಕೇಳಿ.
ಶೀಲ ಎಂದರೇನು?
ಕೈಕೆಯಿಯನ್ನು ವಸಿಷ್ಠರು ಶೀಲವರ್ಜಿತೆ ಎಂದು ಕರೆಯುತ್ತಾರೆ. ಕೈಕಯಿ ಪರಪುರುಷಸಂಪರ್ಕವನ್ನು ಮಾಡಿದವಳಲ್ಲ. ಹಾಗಾದರೆ ಕೈಕಯಿಯನ್ನು ವಸಿಷ್ಠರು ಹೀಗೇಕೆ ಕರೆದರು ಎಂಬ ಪ್ರಶ್ನೆಗೆ ಹಾರೀತರು ಶೀಲ ಎನ್ನುವ ಶಬ್ದಕ್ಕೆ ತಿಳಿಸಿರುವ ಅದ್ಭುತ ಅರ್ಥಗಳನ್ನಿಲ್ಲಿ ಕೇಳುತ್ತೇವೆ.
ನಾರು ವಸ್ತ್ರದ ಧಾರಣೆ
ರಜಸ್ವಲೆಯಾದ ಪತ್ನಿಯನ್ನು ಹೇಗೆ ನೋಡಿಕೊಳ್ಳಬೇಕು, ಹೆಂಡತಿಯಿಂದ ಹೇಗೆ ಧರ್ಮಾಚರಣೆ ಮಾಡಿಸಬೇಕು ಎಂಬ ವಿಷಯದ ಕುರಿತ ನಿರೂಪಣೆ ಇಲ್ಲಿದೆ.
ಸಿದ್ಧಾರ್ಥರ ಆಕ್ರೋಶ
ಅಜ ಮಹಾರಾಜರ ಕಾಲದಲ್ಲಿ ಅಮಾತ್ಯರಾಗಿದ್ದ, ಅಯೋಧ್ಯೆಯ ಪ್ರಮುಖ ಪುರುಷರಲ್ಲಿ ಒಬ್ಬರಾದ, ದಶರಥರಿಂದ ಆರಂಭಿಸಿ ಸಮಗ್ರ ಜನತೆಯ ಗೌರವಕ್ಕೆ ಪಾತ್ರರಾಗಿದ್ದ ಶೂದ್ರಜಾತಿಯ ಸಿದ್ಧಾರ್ಥರು ಅಸಮಂಜಸನ ವಿಷಯದಲ್ಲಿ ಕೈಕಯಿಗೆ ಬುದ್ಧಿ ಹೇಳುವ ಪ್ರಸಂಗವನ್ನು ನಾವಿಲ್ಲಿ ಕೇಳುತ್ತೇವೆ.
ಸುಮಂತ್ರರ ಆಕ್ರೋಶ
ಪ್ರಾಚೀನ ಭಾರತದಲ್ಲಿ ಶೂದ್ರರ ಸ್ಥಾನ ಮಾನ ಎಷ್ಟಿತ್ತು ಎಂದು ಅರ್ಥಮಾಡಿಸುವ ಭಾಗವಿದು. ಶೂದ್ರರಾದ, ರಾಷ್ಟ್ರದ ಮಹಾಮಂತ್ರಿಗಳಾದ ಸುಮಂತ್ರರು ಪಟ್ಟದ ರಾಣಿ ಕೈಕಯಿಯನ್ನು ಸಮಗ್ರ ಸಭೆಯಲ್ಲಿ ದಿಟ್ಟತನದಿಂದ ಪ್ರಶ್ನಿಸುವ ನಿರ್ಭಯರಾಗಿ ನಿಂದಿಸುವ ಭಾಗವಿದು.
ದಶರಥರ ಅಪಾರ ದುಃಖ
ವನಕ್ಕೆ ತೆರಳಲು ಅನುಜ್ಞೆಯನ್ನು ಬೇಡಲು ಶ್ರೀರಾಮ ದಶರಥರ ಅರಮನೆಗೆ ಬಂದಾಗ ನಡೆಯುವ ಮನಕಲಕುವ ಘಟನೆಗಳ ಚಿತ್ರಣ.
ವನಕ್ಕೆ ಹೋಗಲು ಜನರ ನಿರ್ಧಾರ
ಸರ್ವಸ್ವದಾನ ಮಾಡಿದ ಶ್ರೀರಾಮಚಂದ್ರ ಸೀತಾಮಾತೆ ಲಕ್ಷ್ಮಣರು ಹೊರಟು ನಿಂತರೆ ಸಮಸ್ತ ಅಯೋಧ್ಯಾನಗರ ವಾಸಿಗಳು ಕೈಕಯಿಯ ನಿಂದೆ ಮಾಡುತ್ತ ತಾವೂ ಸಹ ರಾಮನೊಂದಿಗೆ ಹೊರಡುವ ನಿರ್ಧಾರ ಮಾಡುವ, ಪಶು ಪಕ್ಷಿ ಪ್ರಾಣಿಗಳು ರಾಮನಿಗಾಗಿ ಮಾಡುವ ಆಕ್ರಂದನ ಕುರಿತು ನಾವಿಲ್ಲಿ ಕೇಳುತ್ತೇವೆ.
ಯಾವ ಜಾತಿಗೆ ಯಾವ ವೃತ್ತಿ
ಯಾವ ಜಾತಿಯವರು ಯಾವ ವೃತ್ತಿಯನ್ನು ಮಾಡಿದರೆ ಸುಖವಾಗಿರುತ್ತಾರೆ ಎಂಬ ಚರ್ಚೆ ಈ ರಾಮ-ತ್ರಿಜಟಬ್ರಾಹ್ಮಣ ಪ್ರಸಂಗದಲ್ಲಿದೆ.
ರಾಮ ಮಾಡಿದ ಸರ್ವಸ್ವ ದಾನ
ಸಿಂಹಾಸನವನ್ನೇರಿ ರಾಜ್ಯ ಪಾಲನೆ ಮಾಡಬೇಕಿದ್ದ ಸಂದರ್ಭದಲ್ಲಿ ವನಕ್ಕೆ ಹೊರಡುವ ಪರಿಸ್ಥಿತಿ ಬಂದರೂ, ಶ್ರೀರಾಮಚಂದ್ರ ತನ್ನ ವೈಯಕ್ತಿಕ ಸಂಪತ್ತನ್ನೆಲ್ಲ ಬ್ರಾಹ್ಮಣರಿಗೆ ದಾನ ಮಾಡಿ, ತನ್ನ ಭೃತ್ಯರಿಗೆ, ಆವಶ್ಯಕತೆ ಇರುವವರಿಗೆ ಹಂಚಿದ ಘಟನೆಯ ವಿವರವನ್ನಿಲ್ಲಿ ಕೇಳುತ್ತೇವೆ.
ಲಕ್ಷ್ಮಣರ ಭಕ್ತಿ ಊರ್ಮಿಳೆಯ ಧರ್ಮ
“ನೀನು ಅಯೋಧ್ಯೆಯಲ್ಲಿಯೇ ಇದ್ದು ತಂದೆ ತಾಯಿಯರನ್ನು ನೋಡಿಕೋ” ಎನ್ನುವ ಅಣ್ಣನನ್ನು ಲಕ್ಷ್ಮಣರು ಭಕ್ತಿಯಿಂದ ಒಪ್ಪಿಸಿದ ಘಟನೆಯ ಚಿತ್ರಣದೊಂದಿಗೆ ಊರ್ಮಿಳಾದೇವಿಯರನ್ನು ಏಕೆ ವನಕ್ಕೆ ಕರೆದುಕೊಂಡು ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಶ್ರೀರಾಮನನ್ನು ಒಪ್ಪಿಸಿದ ಸೀತೆ
ಕೇಳಿದರೇ ಭಯವಾಗುವಂತೆ ಕಾಡಿನ ಕಷ್ಟಗಳನ್ನು ರಾಮದೇವರು ವರ್ಣಿಸಿದರೆ, ಪರಮಾದ್ಭುತ ಉತ್ತರದೊಂದಿಗೆ ನಮ್ಮ ಸೀತಮ್ಮ ಗಂಡನನ್ನು ಒಪ್ಪಿಸುವ ಘಟನೆಯ ಚಿತ್ರಣ ಇಲ್ಲಿದೆ.
ಸೀತೆ ತಿಳಿಸಿದ ಸ್ತ್ರೀಧರ್ಮ
ಗಂಡ ಮಾಡುವ ಸತ್ಕಾರ್ಯಗಳಲ್ಲಿ ಹೆಂಡತಿ ಭಾಗಿಯಾದಾಗ ಆ ಸತ್ಕರ್ಮದ ಪೂರ್ಣ ಪಡೆಯುತ್ತಾಳೆ ಎಂಬ ವಿಷಯದೊಂದಿಗೆ, ಗಂಡ ಹೆಂಡತಿಯರ ಮಧ್ಯದಲ್ಲಿರ ಬೇಕಾದ ಅದ್ಭುತ ಬಾಂಧವ್ಯದ ಕುರಿತು ಸೀತಾದೇವಿ ಹೇಳುವ ಮಾತುಗಳನ್ನಿಲ್ಲಿ ಕೇಳುತ್ತೇವೆ.
ಕೌಸಲ್ಯೆಯ ಆಶೀರ್ವಾದ
ದೂರದ ಊರಿಗೆ, ಮಹತ್ತ್ವದ ಕಾರ್ಯಕ್ಕೆ ಹೊರಟ ನಮ್ಮ ಪ್ರೀತಿಪಾತ್ರರನ್ನು ಯಾವ ರೀತಿ ಬೀಳ್ಕೊಡಬೇಕು, ದೇವರಲ್ಲಿ ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂದು ತಿಳಿಸುವ ಭಾಗವಿದು.
ದೈವ ದೊಡ್ಡದೋ ಪೌರುಷ ದೊಡ್ಡದೋ
ಎಲ್ಲವೂ ದೈವಾಧೀನ, ಭಗವಂತನ ಇಚ್ಚೆಯನ್ನು ಮೀರಿ ನಡೆಯಲು ಸಾಧ್ಯವಿಲ್ಲ ಎಂದು ಶ್ರೀರಾಮ ಹೇಳಿದರೆ ಪುರುಷಪ್ರಯತ್ನವೇ ಪ್ರಧಾನ ಎಂದು ಲಕ್ಷ್ಮಣರು ಪ್ರತಿಪಾದಿಸುತ್ತಾರೆ. ಶ್ರೀರಾಮದೇವರು ಪರಮಾದ್ಭುತವಾಗಿ ಉತ್ತರಿಸುತ್ತಾರೆ. ದೈವ-ಪೌರುಷಗಳ ಕುರಿತ ಅದ್ಭುತ ಮತ್ತು ನಿರ್ಣಾಯಕ ಚರ್ಚೆಯನ್ನಿಲ್ಲಿ ಕೇಳುತ್ತೇವೆ.
ಶ್ರೀರಾಮ ತಿಳಿಸಿದ ಸ್ತ್ರೀಧರ್ಮ
ಎಂದಿಗೂ ಯಾರೊಂದಿಗೂ ಹೇಳಿಕೊಳ್ಳದ ಅಂತರಂಗದ ದುಃಖವನ್ನು, ಸಮಸ್ಯೆಯನ್ನು ಕೌಸಲ್ಯಾದೇವಿಯರು ಮಗನ ಮುಂದೆ ಹೇಳಿಕೊಂಡು ನಿನ್ನೊಂದಿಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳುತ್ತಾರೆ. ಶ್ರೀರಾಮ ಅದಕ್ಕೆ ನೀಡುವ ಉತ್ತರದ ವಿವರಣೆಯೊಂದಿಗೆ ಮನಕಲಕುವ ಘಟನೆಯ ಚಿತ್ರಣ ಇಲ್ಲಿದೆ.
ರಾಮ ಕೈಕೇಯೀ ಸಂವಾದ
ಹಿರಿಯರು ಅಧರ್ಮ ಮಾಡಿದಾಗ ಹೇಗೆ ಉತ್ತರಿಸಬೇಕು, ಅಧಾರ್ಮಿಕರಾದ ಹಿರಿಯರ ಮುಂದೆ ಹೇಗೆ ಮಾತನಾಡಬೇಕು, ಯಾವುದಕ್ಕೆ ದುಃಖ ಪಡಬೇಕು, ಯಾವುದಕ್ಕೆ ದುಃಖ ಪಡಬಾರದು ಮುಂತಾದ ಹತ್ತಾರು ಪಾಠಗಳನ್ನು ನಮ್ಮ ಸ್ವಾಮಿ ಈ ಪ್ರಸಂಗದಲ್ಲಿ ಕಲಿಸುತ್ತಾನೆ.
ರಾಮನಿಗೆ ಬರಲು ಆದೇಶ
“ಸಾಯುವದರೊಳಗೆ ರಾಮನನ್ನು ನೋಡಬೇಕಾಗಿದೆ, ಕರೆ ತಾ” ಎಂದು ಸುಮಂತ್ರರಿಗೆ ದಶರಥರು ಹೇಳುವ ಹೃದಯವಿದ್ರಾವಕ ಪ್ರಸಂಗದೊಂದಿಗೆ ಈ ಘಟನೆಯ ಬಗ್ಗೆ ತಿಳಿಯದ ರಾಮನ ಅರಮನೆಯಲ್ಲಿ ಯಾವ ಪರಿಸ್ಥಿತಿಯಿತ್ತು ಎಂಬ ಚಿತ್ರಣ ಇಲ್ಲಿದೆ.
ಕೈಕಯಿಯನ್ನು ಏಕೆ ನಿಗ್ರಹಿಸಲಿಲ್ಲ
ಗಂಡನಾಗಿ, ರಾಜನಾಗಿ ದಶರಥ ಮಹಾರಾಜರು ಕೈಕಯಿಯನ್ನು ಸಹಜವಾಗಿ ನಿಗ್ರಹಿಸಬಹುದಿತ್ತಲ್ಲವೇ? ಏಕೆ ನಿಗ್ರಹಿಸಲಿಲ್ಲ ಎಂಬ ಪ್ರಶ್ನೆಗೆ ಶಾಸ್ತ್ರ ನೀಡುವ ಪರಮಾದ್ಭುತ ಉತ್ತರ ಇಲ್ಲಿದೆ. ನಮ್ಮ ಬದುಕನ್ನು ಬಂಗಾರಗೊಳಿಸುವ ಪಾಠಗಳೊಂದಿಗೆ.
ದಶರಥರ ವಿಲಾಪ
ಕೌಸಲ್ಯಾ, ಸುಮಿತ್ರಾ, ಕೈಕಯಿ, ಭರತ ಮುಂತಾದವರ ಬಗ್ಗೆ ದಶರಥರಿಗೆ ಏನೆಲ್ಲ ಭಾವನೆಗಳಿದ್ದವು, ಹಾಗೂ ಕೈಕಯಿಯ ವರದಿಂದ ಏನೆಲ್ಲ ಅನರ್ಥಗಳಾಗುತ್ತವೆ ಇತ್ಯಾದಿ ಅನೇಕ ವಿಷಯಗಳನ್ನು ಈ ಪ್ರಸಂಗದಲ್ಲಿ ಕೇಳುತ್ತೇವೆ.
ಕೈಕಯಿಯ ಎರಡು ವರಗಳು
ದುಷ್ಟರ ವರ್ತನೆ ಯಾವ ರೀತಿ ಇರುತ್ತದೆ, ಶಾಸ್ತ್ರದ ಸೂಕ್ಷ್ಮ ಪ್ರಕ್ರಿಯೆಗಳನ್ನು, ಧರ್ಮವನ್ನು ದುರ್ಜನರು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎನ್ನುವದಕ್ಕೊಂದು ಜ್ವಲಂತ ನಿದರ್ಶನವಾದ ಘಟನೆ.
ದಶರಥರ ನಿಷ್ಕಪಟ ಪ್ರೇಮ
ಶ್ರೀರಾಮರ ಪಟ್ಟಾಭಿಷೇಕದ ಸಂಭ್ರಮವನ್ನು ಮೊದಲು ಕೈಕಯಿಯೊಂದಿಗೆ ಹಂಚಿಕೊಳ್ಳಲು ಬಂದ ದಶರಥ ಮಹಾರಾಜರು, ಕೈಕಯಿ ದುಃಖಿತಳಾದದ್ದನ್ನು ಕಂಡು ತಮ್ಮ ನಿಷ್ಕಲ್ಮಷ ಮನಸ್ಸಿನಿಂದ ಅವಳನ್ನು ಒಲಿಸಿಕೊಳ್ಳಲು ಮಾತನಾಡುವ ಪ್ರಸಂಗದ ಚಿತ್ರಣ.
ಮಂಥರೆಯ ದುರ್ಮಂತ್ರಣ
ಎಷ್ಟು ರೀತಿಯಲ್ಲಿ ಹೇಳಿದರೂ ಕೈಕಯಿ ರಾಮಪಟ್ಟಾಭಿಷೇಕವನ್ನು ನಿಲ್ಲಿಸಲು ಸಿದ್ಧಳಾಗದೇ ಇದ್ದಾಗ, ಮಂಥರೆಯ ಒಂದೇ ಮಾತು ಅವಳನ್ನು ಬದಲಾಯಿಸುತ್ತದೆ. ಏನದು, ಏಕೆ ಅದು ಕೈಕಯಿಯ ಮೇಲೆ ಪರಿಣಾಮ ಬೀರಿತು ಎಂಬ ವಿವರ ಇಲ್ಲಿದೆ.
ಮಂಥರೆಯ ದುಷ್ಟಬುದ್ಧಿ
ಅಯೋಧ್ಯೆಯ ಸಂಭ್ರಮವನ್ನು, ಮುಖ್ಯವಾಗಿ ಕೌಸಲ್ಯಾದೇವಿಯರು ಮಾಡುತ್ತಿದ್ದ ದಾನವನ್ನು ಕಂಡು ಕುದ್ದುಹೋದ ಮಂಥರೆ ಮಲಗಿದ್ದ ಕೈಕಯಿಯನ್ನು ಎಬ್ಬಿಸಿ ದುರ್ಬೋಧನೆ ಮಾಡುವ ಪ್ರಸಂಗದ ವಿವರಣೆ.
ಅಯೋಧ್ಯೆಯ ಸಂಭ್ರಮ
ರಾಮಪಟ್ಟಾಭಿಷೇಕಕ್ಕೆ ಸಮಗ್ರ ಅಯೋಧ್ಯೆ ಎಷ್ಟು ಸಂಭ್ರಮದಿಂದ ಸಿದ್ಧವಾಗಿತ್ತು, ಸ್ವಯಂ ಶ್ರೀರಾಮರು ವಸಿಷ್ಠರ ಆದೇಶದಂತೆ ಯಾವೆಲ್ಲ ಸತ್ಕರ್ಮಗಳನ್ನು ಮಾಡಿದ್ದರು ಎನ್ನುವದರ ಚಿತ್ರಣ ಇಲ್ಲಿದೆ.
ದಶರಥರ ಅಂತರಂಗ, ರಾಮನ ದೀಕ್ಷೆ
ದಶರಥರು ಭರತನಿಲ್ಲದಿದ್ದಾಗ ರಾಜ್ಯಾಭಿಷೇಕವನ್ನು ಮಾಡಿದರು ಎಂಬ ಆಧುನಿಕರ ಆಕ್ಷೇಪಕ್ಕೆ ಉತ್ತರದೊಂದಿಗೆ ಶ್ರೀರಾಮಸೀತೆಯರು ಪಟ್ಟಾಭಿಷೇಕಕ್ಕೆ ದೀಕ್ಷಿತರಾದ ವಿವರವಿದೆ.
ಶ್ರೀರಾಮನಿಗೆ ಉಪದೇಶ
ದಶರಥರು ಸಪ್ತದ್ವೀಪವತಿಯಾದ ಭೂಮಿಗೆ ಒಡೆಯ ಎಂದು ಕೇಳುತ್ತೇವೆ, ರಾವಣನೂ ಸಾಮಂತನಾಗಿದ್ದನೇ? ಜನಕಾದಿಗಳ ಜೊತೆಯಲ್ಲಿ ಹೇಗೆ ಸಂಬಂದವಿತ್ತು?
ಸಭೆಯ ನಿರ್ಣಯ
ಸಮಗ್ರ ಸಭೆ, ರಾಮಚಂದ್ರ ಯುವರಾಜನಾಗಲಿ ಎಂದು ಅನುಮೋದಿಸಿದರೆ, ಸ್ವಯಂ ದಶರಥ ಮಹಾರಾಜರು ಅವರೆಲ್ಲರಿಗೆ ಪ್ರಶ್ನೆ ಕೇಳುತ್ತಾರೆ — ನಾನು ಧರ್ಮದಿಂದ ಪಾಲನೆ ಮಾಡುತ್ತಿರುವಾಗ ಯುವರಾಜನ ಆವಶ್ಯಕತೆ ಏನಿದೆ. ಎಂದು ಆಗ ಸಭೆಯಲ್ಲಿದ್ದ ಸಾಮಂತ ರಾಜರಿಂದಾರಂಭಿಸಿ ನಗರ-ಗ್ರಾಮಮುಖ್ಯಸ್ಥರವೆರೆಗೆ ಜನರು ನೀಡುವ ಅದ್ಭುತ ಉತ್ತರಗಳ ಸಂಕಲನ ಇಲ್ಲಿದೆ.
ದಶರಥರ ಮಹಾಸಭೆ
ರಾಜ ಮಹಾರಾಜರ ಆಳ್ವಿಕೆ ಎಷ್ಟು ಶ್ರೇಷ್ಠವಾಗಿರುತ್ತಿತ್ತು ಎಂದು ಮನಗಾಣಿಸಿ, ದಶರಥ ಮಹಾರಾಜರ ಬಗೆಗಿನ ಗೌರವವನ್ನು ನೂರ್ಮಡಿ ಮಾಡುವ ಭಾಗ.
ರಾಜಪದವಿಯ ಅರ್ಹತೆ
ರಾಜನಾಗಬೇಕಾದರೆ ಇರಬೇಕಾದ ಅರ್ಹತೆಗಳೇನು, ಶ್ರೀರಾಮನಲ್ಲಿ ಅವು ಇದ್ದವೆ, ಆ ಗುಣಗಳ ಪರೀಕ್ಷೆಯನ್ನು ಹಿಂದಿನ ಕಾಲದಲ್ಲಿ ಹೇಗೆ ನಿರ್ಣಯಿಸುತ್ತಿದ್ದರು ಎಂಬ ಅಪರೂಪದ ವಿಷಯದ ನಿರೂಪಣೆ ಇಲ್ಲಿದೆ.
ಶ್ರೀರಾಮ ಸೀತೆಯರ ದಾಂಪತ್ಯ
ಪರಮ ಸಂಭ್ರಮದಿಂದ ರಾಜ-ರಾಜಪತ್ನಿಯರು ತಮ್ಮ ಸೊಸೆಯಂದರನ್ನು ಮನೆ ತುಂಬಿಸಿಕೊಂಡದ್ದು, ಶ್ರೀರಾಮಚಂದ್ರ ರಾಜ್ಯದ ಕಾರ್ಯಗಳನ್ನು ನಿರ್ವಹಿಸುತ್ತಿದ್ದ ರೀತಿ, ಸಾಟಿಯಿಲ್ಲದ ಸೀತಾ ರಾಮರ ಪ್ರೇಮದ ಕುರಿತು ನಾವಿಲ್ಲ ಕೇಳುತ್ತೇವೆ. ಶ್ರೀಮದಾಚಾರ್ಯರು ರಾಮಕಥೆಯ ಕುರಿತು ಹೇಳಿದ ಪರಮಾದ್ಭುತ ತತ್ವಗಳ ಚಿಂತನೆಯೊಂದಿಗೆ.
ರಾಮ-ಪರಶುರಾಮ ನಿರ್ಣಯ
ರಾಮ ಪರಶುರಾಮರಿಬ್ಬರೂ ವಿಷ್ಣುವಿನ ಅವತಾರವಾದರೆ ಯುದ್ಧ ಹೇಗಾಗಲು ಸಾಧ್ಯ, ಒಬ್ಬರು ಸೋತು ಒಬ್ಬರು ಗೆಲ್ಲಲು ಹೇಗೆ ಸಾಧ್ಯ, ಪರಶುರಾಮರ ಲೋಕಗಳನ್ನು ರಾಮದೇವರು ಸುಟ್ಟು ಹಾಕಿದರು ಎಂದರೆ ಏನರ್ಥ, ಪರಶುರಾಮರು ದೈನ್ಯಕ್ಕೊಳಗಾಗಿದ್ದು ಸತ್ಯವಲ್ಲವೇ ಎಂಬೆಲ್ಲ ಪ್ರಶ್ನೆಗಳ ಭಗವತ್ಪಾದರು ನೀಡಿದ ಉತ್ತರಗಳ ವಿವರಣೆ ಇಲ್ಲಿದೆ.
ಶ್ರೀರಾಮದೇವರ ವಿಜಯ
ಪರಶುರಾಮ ನೀಡಿದ ವೈಷ್ಣವ ಧನುಷ್ಯವನ್ನು ಅತ್ಯಂತ ಸುಲಭವಾಗಿ ಹೆದೆಯೇರಿಸಿ, ಬಾಣ ಹೂಡಿ ಪರಶುರಾಮದೇವರನ್ನು ಗೆದ್ದ ರಾಮದೇವರ ಮಹಾವಿಜಯದ ವರ್ಣನೆ ಇಲ್ಲಿದೆ.
ಪರಶುರಾಮರ ಆಗಮನ
ಅಯೋಧ್ಯೆಗೆ ಹಿಂತಿರುಗುವ ಮಾರ್ಗಮಧ್ಯದಲ್ಲಿ ಅಪಾರ ಪರಾಕ್ರಮದ ಪರಶುರಾಮದೇವರು ಆಗಮಿಸಿ ರಾಮನ ಪರೀಕ್ಷೆಗೆ ಮುಂದಾಗುವ ಘಟನೆಯ ವಿವರ ಇಲ್ಲಿದೆ.
ಮಗಳಿಗೆ ಬುದ್ಧಿಮಾತು
ಜನಕ ಮಹಾರಾಜರು ಮತ್ತು ಕುಶಧ್ವಜರು ಗಂಡನ ಮನೆಗೆ ಹೊರಟು ನಿಂತ ತಮ್ಮ ಮಕ್ಕಳಿಗೆ ಗಂಡನ ಮನೆಯಲ್ಲಿ ಹೇಗೆ ಬದುಕಬೇಕೆಂದು ತಿಳಿಸಿ ಗಂಡಂದಿರಿಗೆ ಮಕ್ಕಳನ್ನು ಒಪ್ಪಿಸುವ ಭಾಗ.
ಸೀತಾರಾಮಕಲ್ಯಾಣ
ಜಗತ್ತಿನ ತಂದೆ ತಾಯಿಗಳ ಪರಮ ಮಂಗಳ ಮದುವೆಯ ಚಿತ್ರಣ. ಕೇಳಿಯೇ ಆನಂದಿಸಬೇಕಾದ ಭಾಗ.
ವಾಗ್ದಾನ
ಮದುವೆ ಎಂದರೆ ಕೇವಲ ಒಂದು ಗಂಡು ಹೆಣ್ಣಿನ ಜೋಡಿ ಒಂದಾಗುವದಲ್ಲ. ಎರಡು ಕುಲಗಳು ಒಂದಾಗುವದು. ಸೂರ್ಯವಂಶ ಮತ್ತು ವಿದೇಹವಂಶಗಳ ಅದ್ಭುತ ಪರಿಚಯದೊಂದಿಗೆ ಜನಕ ಮಹಾರಾಜರು ದಶರಥ ಮಹಾರಾಜರಿಗೆ ಮಾಡಿದ ಮದುವೆಯ ವಾಗ್ದಾನ
ಮಿಥಿಲೆಗೆ ದಶರಥರ ಆಗಮನ
ಜನಕ ಮಹಾರಾಜರ ಆಹ್ವಾನವನ್ನು ಸ್ವೀಕರಿಸಿ ದಶರಥಮಹಾರಾಜರು ಚತುರಂಗಬಲಸಮೇತರಾಗಿ ವಸಿಷ್ಠ ವಾಮದೇವಾದಿಗಳಿಂದ ಸಹಿತರಾಗಿ ಮಿಥಿಲೆಗೆ ಬರುವ ಸಂಭ್ರಮದ ಘಟನೆಯ ಚಿತ್ರಣ.
ಸೀತಾರಮಣ
ಪರಮಾದ್ಭುತ ಸೌಂದರ್ಯದ ಸೀತಾದೇವಿಯರು ಭಕ್ತಿ, ಪ್ರೇಮ, ನಾಚಿಕೆಗಳಿಂದ ನಡೆದು ಬಂದು ಶೃಂಗಾರವಾರಿಧಿಯಾದ ಶ್ರೀರಾಮಚಂದ್ರದೇವರ ಕೊರಳಿಗೆ ಹಾರ ಹಾಕಿದ ಪರಮಮಂಗಳ ಘಟನೆಯ ಚಿತ್ರಣ ಇಲ್ಲಿದೆ. ಕೇಳಿಯೇ ಆನಂದಿಸಬೇಕಾದ ಭಾಗ.
ಧನುರ್ಭಂಗ
ಸಕಲ ಇಂದ್ರಾದಿ ದೇವತೆಗಳಿಗೂ ಎತ್ತಲಿಕ್ಕೆ ಸಾಧ್ಯವಿಲ್ಲದ, ಮಹಾಬಲಿಷ್ಠವಾದ ಶಿವಧನುಷ್ಯವನ್ನು ಐರಾವತ ಕಬ್ಬಿನ ಜಲ್ಲೆಯನ್ನು ಲೀಲೆಯಿಂದ ಮುರಿಯುವಂತೆ ರಾಮದೇವರು ಮುರಿದು ಹಾಕಿದ ರೋಮಂಚಕಾರಿ ಪ್ರಸಂಗದ ಚಿತ್ರಣ.
ಶಿವ ಧನುಷ್ಯದ ವೈಭವ
ಭೂಮಿಯ ಎಲ್ಲ ರಾಜರೂ, ರಾವಣನೂ ಸಹ ಬಂದು ಶಿವಧನುಷ್ಯವನ್ನು ಅಲ್ಲಾಡಿಸಲು ಸಾಧ್ಯವಾಗದೇ ಹೋದದ್ದು, ಪರಶಿವನ ಪರಮಪ್ರಸಾದದಿಂದಲೇ ಐದು ಸಾವಿರ ಜನ ಮಹಾಬಲಿಷ್ಠರಾದ ಕಿಂಕರರು ಅದನ್ನು ಮಹಾಪ್ರಯತ್ನದಿಂದ ಎಳೆದು ತರುತ್ತಿದ್ದದ್ದು, ಆ ಧನುಷ್ಯದ ಗಾತ್ರ, ರಾಮಚಂದ್ರನಿಗೆ ಆಯುಧಗಳ ಬಗ್ಗೆ ಇದ್ದ ಆಸಕ್ತಿ ಪ್ರೇಮ ಇವೆಲ್ಲದರ ವಿವರಣೆ ಇಲ್ಲಿದೆ.
ಸೀತಾದೇವಿಯ ಪ್ರಾದುರ್ಭಾವ
ಅಗ್ನಿ, ಜಲಗಳಲ್ಲಿ ಅವತರಿಸದೇ ಭೂಮಿಯಲ್ಲೇ ಅವತರಿಸಲು, ಹಾಗೂ ಲೋಕವಿಚಿತ್ರವಾದ ರೀತಿಯಲ್ಲಿ ಅವತರಿಸಲು ವಿಶೇಷ ಕಾರಣವಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರದೊಂದಿಗೆ ಜಗದಂಬಿಕೆಯ ಪ್ರಾದುರ್ಭಾವದ ಚಿತ್ರಣ ಇಲ್ಲಿದೆ.
ಶತಾನಂದರ ಸಂಭ್ರಮ
ತಮ್ಮ ತಂದೆ ತಾಯಿಯರನ್ನು ಒಂದುಗೂಡಿಸಿದ ಶ್ರೀರಾಮಚಂದ್ರನನ್ನು ಕಂಡ ಶತಾನಂದರ ಪರಮಸಂಭ್ರಮದ ಚಿತ್ರಣ ಇಲ್ಲಿದೆ.
ಅಹಲ್ಯಾದೇವಿಯರು ನಿಜವಾಗಿಯೂ ಶಿಲೆಯಾಗಿದ್ದರೆ?
ಚೇತನ ಜಡವಾಗಲು ಸಾಧ್ಯವಿಲ್ಲ, ಜಡ ಚೇತನವಾಗಲು ಸಾಧ್ಯವಿಲ್ಲ. ಹಾಗಾದರೆ ಅಹಲ್ಯೆ ಕಲ್ಲಾಗಿದ್ದರು ಎಂದರೆ ಏನರ್ಥ?
ಗೌತಮರ ತಪ್ಪಿಗೆ ಅಹಲ್ಯೆ ಏಕೆ ಬಲಿಪಶು?
ಗೌತಮ ಮಹರ್ಷಿಗಳು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದು ಅವರ ತಪ್ಪು. ಅವರು ಮಾಡಿದ್ದಾರೆ. ಆ ಅಧಿಕ ತಪಸ್ಸಿನ ಪುಣ್ಯವನ್ನು ಅವರಿಂದ ಪಡೆಯುವದು ದೇವತೆಗಳ ಕರ್ತವ್ಯ. ಇದರ ಮಧ್ಯದಲ್ಲಿ ಅಹಲ್ಯೆ ಏಕೆ ಬಲಿಪಶು ಆಗಬೇಕು.
ಅಹಲ್ಯಾದೇವಿಯರ ಉದ್ಧಾರ
ಅಹಲ್ಯಾದೇವಿಯರು ಮಾಡಿದ ಅತ್ಯಂತ ಕಠಿಣವಾದ ತಪಸ್ಸು, ಅವರ ಮೇಲೆ ಶ್ರೀರಾಮಚಂದ್ರದೇವರು ಮಾಡಿದ ಪರಮಾನುಗ್ರಹದ ನಿರೂಪಣೆ ಇಲ್ಲಿದೆ.
ಇಂದ್ರದೇವರ ದೃಷ್ಟಿಯಿಂದ
ಇಂದ್ರದೇವರು ತಾವಾಗಿ ಅಪೇಕ್ಷೆ ಪಟ್ಟು, ಗೌತಮರ ಅಧಿಕ ಪುಣ್ಯವನ್ನು ಪಡೆಯಲು, ಶಾಪವನ್ನು ಸ್ವೀಕರಿಸಿದ್ದೇ ಹೊರತು, ಅವರನ್ನು ಶಾಸಿಸುವ ಅಧಿಕಾರ ಗೌತಮರಿಗಿಲ್ಲ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ.
ಇಂದ್ರ ಅಹಲ್ಯೆಯರಿಗೆ ಶಾಪ
ಗಂಡ ಹೆಂಡತಿಯರಲ್ಲೊಬ್ಬರು ಲೈಂಗಿಕ ಅಪರಾಧ ಮಾಡಿದಾಗ, ತಪ್ಪಿನ ಎಚ್ಚರ ಇದ್ದಾಗ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಶ್ರೀಮದಾಚಾರ್ಯರ ನಿರ್ಣಯದ ವಿವರಣೆ ಇಲ್ಲಿದೆ.
ಯಜ್ಞರಕ್ಷಣೆ
ಮಾರೀಚನನ್ನು ಹಿಮ್ಮೆಟ್ಟಿಸಿ ಸುಬಾಹು ಮೊದಲಾದ ಸಕಲ ರಾಕ್ಷಸರನ್ನು ಕೊಂದು ವಿಶ್ವಾಮಿತ್ರರ ಯಜ್ಞವನ್ನು ರಾಮಚಂದ್ರ ರಕ್ಷಣೆ ಮಾಡಿದ ಪರಮಮಂಗಳಘಟನೆಯ ಚಿತ್ರಣ.
ಸಿದ್ಧಾಶ್ರಮಕ್ಕೇಕೆ ಅಷ್ಟು ಮಹತ್ತ್ವ
ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಸಿದ್ಧಾಶ್ರಮಕ್ಕೆ ಕರೆದುಕೊಂಡು ಬಂದು ಆ ಆಶ್ರಮಕ್ಕೆ ಆ ಹೆಸರು ಬರಲು ಕಾರಣವೇನು ಎನ್ನುವದನ್ನು ತಿಳಿಸುತ್ತ ವಾಮನದೇವರ ಕಥೆಯನ್ನು ಅದ್ಭುತವಾಗಿ ಹೇಳುತ್ತಾರೆ. ಆ ಪ್ರಸಂಗದ ವಿವರಣೆ ಇಲ್ಲಿದೆ.
ಅಸ್ತ್ರಗಳ ಪ್ರಾಪ್ತಿ
ಅನೇಕ ಸಾವಿರ ವರ್ಷಗಳ ತಪಸ್ಸಿನಿಂದ ಪಡೆದಿದ್ದ ಸಕಲ ಅಸ್ತ್ರಗಳನ್ನೂ ವಿಶ್ವಾಮಿತ್ರರು ಜಗದೊಡೆಯನಿಗೆ ಒಪ್ಪಿಸಿಕೊಂಡ ಪರಿ
ತಾಟಕಾ ಸಂಹಾರ
ಅನಂಗಾಶ್ರಮ ಎಂಬ ಅಪೂರ್ವ ಆಶ್ರಮದ ವಿವರ, ಮತ್ತು ತಾಟಕೆಯನ್ನು ರಾಮ ಕೊಂದು ಹಾಕಿದ ಘಟನೆಗಳ ವಿವರ.
ವಿಶ್ವಾಮಿತ್ರರ ಉಪದೇಶ
ಜಗದೊಡೆಯನಿಗೆ ತಮ್ಮಲ್ಲಿದ್ದ ಅಸ್ತ್ರವಿದ್ಯೆಯನ್ನು ವಿಶ್ವಾಮಿತ್ರರು ಸಮರ್ಪಿಸಿಕೊಂಡ ಘಟನೆಯ ವಿವರ.
ವಿಶ್ವಾಮಿತ್ರರ ಆಗಮನ
ಯಜ್ಞರಕ್ಷಣೆಗಾಗಿ ವಿಶ್ವಾಮಿತ್ರರು ರಾಮಚಂದ್ರನನ್ನು ಕರೆದೊಯ್ಯಲು ಬರುವ ಪ್ರಸಂಗದ ವಿವರಣೆ.
ರಾಮ-ಕೃಷ್ಣಾವತಾರಗಳ ಬಾಲ್ಯ
ರಾಮನ ಬಾಲ್ಯ ಕೃಷ್ಣನಂತೇಕೆ ಇಲ್ಲ ಎಂದು ಅನೇಕರನ್ನು ಕಾಡುವ ಪ್ರಶ್ನೆ. ಬಾಲ್ಯವಷ್ಟೇ ಅಲ್ಲ, ರಾಮ ಏಕಪತ್ನೀವ್ರತಸ್ಥ. ಶ್ರೀಕೃಷ್ಣ ಹದಿನಾರು ಸಾವಿರ ಪತ್ನಿಯರ ನಲ್ಲನಾದ. ಈ ಕುರಿತ ಚರ್ಚೆ ಇಲ್ಲಿದೆ.
ರಾಮದೇವರ ಬಾಲ್ಯ
ರಾಮ ಲಕ್ಷ್ಮಣ, ಭರತ ಶತ್ರುಘ್ನರು ಬೆಳೆದ ಕ್ರಮ, ಅವರ ಮಧ್ಯದಲ್ಲಿದ್ದ ಅಪೂರ್ವ ಬಾಂಧವ್ಯ, ಅವರಿಂದ ಸಕಲರಿಗೂ ದೊರೆಯುತ್ತಿದ್ದ ಪರಮಾನಂದದ ಚಿತ್ರಣ ಇಲ್ಲಿದೆ.
ಲಕ್ಷ್ಮಣ ದೊಡ್ಡವನೋ, ಭರತ ದೊಡ್ಡವನೋ?
ರಾಮನ ತಮ್ಮಂದಿರಲ್ಲಿ ಲಕ್ಷ್ಮಣನೇ ದೊಡ್ಡವನು, ಭರತನಲ್ಲ, ಲಕ್ಷ್ಮಣ ಶತ್ರುಘ್ನರು ಅವಳಿ ಮಕ್ಕಳಲ್ಲ, ನಾಲ್ಕು ಜನರು ಒಂದೂವರೆ ವರ್ಷದ ಅವಧಿಯಲ್ಲಿ ಜನಿಸಿದ್ದು, ಮೂರು ದಿವಸಗಳಲ್ಲಿ ಅಲ್ಲ ಎಂಬೆಲ್ಲ ವಿಷಯಗಳ ನಿರೂಪಣೆ ಇಲ್ಲಿದೆ.
ಶ್ರೀರಾಮಾವತಾರ
ಅನಂತಗುಣಪೂರ್ಣನಾದ ಶ್ರೀಮನ್ನಾರಾಯಣ ಶ್ರೀರಾಮಚಂದ್ರನಾಗಿ ದಶರಥ ಕೌಸಲ್ಯೆಯರ ಮಗನಾಗಿ ಅವತರಿಸಿ ಬಂದ ಪರಮಪವಿತ್ರ ಘಟನೆಯ ಚಿತ್ರಣ. ರಾಮ ಎಂಬ ಶಬ್ದದ ಅರ್ಥದ ವಿವರಣದೊಂದಿಗೆ.
ದೇವತೆಗಳ ಅವತಾರ
ಭಗವಂತನ ಸೇವೆಗೆ ಸಕಲ ದೇವತೆಗಳೂ ಕಪಿಗಳಾಗಿ ಹುಟ್ಟಿಬರುವ ಘಟನೆಯನ್ನಿಲ್ಲಿ ಕೇಳುತ್ತೇವೆ.
ಪುತ್ರಕಾಮೇಷ್ಟಿ
ಕ್ಷೀರಸಾಗರದಲ್ಲಿ ದೇವತೆಗಳು ಮಾಡಿದ ಪ್ರಾರ್ಥನೆ, ಭೂಲೋಕದಲ್ಲಿ ದಶರಥರು ಮಾಡಿದ ಪುತ್ರಕಾಮೇಷ್ಟಿಯ ವರ್ಣನೆ
ಯಜ್ಞ ದಾನಗಳ ವೈಭವ
ದೇವತೆಗಳು ಸಾಕ್ಷಾತ್ತಾಗಿ ಬಂದು ಹವಿಸ್ಸನ್ನು ಸ್ವೀಕರಿಸಿದ ಹಾಗೂ ದಶರಥ ಮಹಾರಾಜರು ಮಾಡಿದ ಸಮಗ್ರ ಭೂಮಂಡಲದ ದಾನದ ವೈಭವದ ಚಿತ್ರಣ ಇಲ್ಲಿದೆ.
ಯಜ್ಞದ ಸಿದ್ಧತೆ
ಒಂದು ಯಜ್ಞ ನಡೆಯಬೇಕಾದರೆ ಬ್ರಾಹ್ಮಣರಿಂದ ಆರಂಭಿಸಿ ಶೂದ್ರರವರೆಗಿನ ಸಮಗ್ರ ಜನತೆ ಯಾವ ರೀತಿ ಪಾಲ್ಗೊಳ್ಳಬೇಕು, ಯಜ್ಞ ಮಾಡುವ ರಾಜ ಅವರೆಲ್ಲರನ್ನು ಯಾವ ರೀತಿ ಕಾಣಬೇಕು, ದಶರಥಮಹಾರಾಜರು ಯಾವ ರೀತಿ ನಡೆಸಿಕೊಂಡರು ಎಂಬ ವಿಷಯದ ಕುರಿತು ನಾವಿಲ್ಲಿ ಕೇಳುತ್ತೇವೆ. ಆಗಿನ ಕಾಲದಲ್ಲಿ ಜನರ ಮಧ್ಯದಲ್ಲಿದ್ದ ಬಾಂಧವ್ಯ ಎಷ್ಟು ಅದ್ಭುತವಾಗಿತ್ತು ಎನ್ನುವ ವಿಷಯ ಇಲ್ಲಿ ಮನವರಿಕೆಯಾಗುತ್ತದೆ.
ಅಯೋಧ್ಯೆಗೆ ಋಷ್ಯಶೃಂಗರ ಆಗಮನ
ಸ್ವಯಂ ದಶರಥ ಮಹಾರಾಜರು ಗೆಳೆಯ ರೋಮಪಾದನ ಅಂಗದೇಶಕ್ಕೆ ಆಗಮಿಸಿ ಋಷ್ಯಶೃಂಗರನ್ನು ಅಯೋಧ್ಯೆಗೆ ಬರಲು ಪ್ರಾರ್ಥಿಸಿದ ಘಟನೆಯ ಚಿತ್ರಣ. ನಮ್ಮ ಜೀವನವನ್ನು ಬಂಗಾರಗೊಳಿಸುವ ಪಾಠಗಳೊಂದಿಗೆ.
ಮಳೆ ತರಿಸಿದ ಋಷ್ಯಶೃಂಗರು
ವೃದ್ಧೆ ಉಪಾಯದಿಂದ ಋಷ್ಯಶೃಂಗರನ್ನು ಅಂಗದೇಶಕ್ಕೆ ಕರೆತಂದದ್ದು, ಅವರು ಕಾಲಿಟ್ಟ ತಕ್ಷಣ ಮಳೆ ಸುರಿಯಲಾರಂಭಿಸಿದ್ದು, ಆ ಮಳೆಯನ್ನು ರಾಜನಿಂದಾರಂಭಿಸಿ ಪಶು ಪಕ್ಷಿ ಪ್ರಾಣಿಗಳವರೆಗೆ ಎಲ್ಲರೂ ಆಸ್ವಾದಿಸಿದ್ದು, ರೋಮಪಾದ ನಡೆದ ವೃತ್ತಾಂತವನ್ನೆಲ್ಲ ಋಷ್ಯಶೃಂಗರಿಗೆ ನಿವೇದಿಸಿಕೊಂಡು ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ್ದು, ಹಾಗೂ ಸಿಟ್ಟಿಗೆ ಬಂದಿದ್ದ ವಿಭಾಂಡಕರನ್ನು ರೋಮಪಾದ ಶಾಂತಗೊಳಿಸಿದ ಅದ್ಭುತ ಕ್ರಮ ಇವೆಲ್ಲವನ್ನೂ ಇಲ್ಲಿ ಕೇಳುತ್ತೇವೆ.
ವೇಶ್ಯೆಯರ ಸಾಹಸ
ಋಷ್ಯಶೃಂಗರನ್ನು ತಮ್ಮ ರಾಜ್ಯಕ್ಕೆ ಕರೆತರಲು ಮುದಿ ವೇಶ್ಯೆಯೊಬ್ಬಳು ಮಾಡಿದ ಸಾಹಸ, ಋಷ್ಯಶೃಂಗರ ಮುಗ್ಧತೆಯ ಚಿತ್ರಣ ಇಲ್ಲಿದೆ.
ಋಷ್ಯಶೃಂಗರ ಜನ್ಮ
ಋಷಿಗಳು ವಿಚಿತ್ರವಾದ ರೀತಿಯಲ್ಲಿ ಮಕ್ಕಳನ್ನು ಪಡೆಯುವದನ್ನು ನಾವು ಪುರಾಣಗಳಲ್ಲಿ ತಿಳಿಯುತ್ತೇವೆ. ಋಷಿಗಳು ಕಾಮಾಂಧರಲ್ಲ ಎನ್ನುವ ತತ್ವದ ನಿರೂಪಣೆಯೊಂದಿಗೆ ಅವರ ಅಪಾರ ಇಂದ್ರಿಯನಿಗ್ರಹದ ಕುರಿತ ಚಿಂತನೆ ಇಲ್ಲಿದೆ.
ಯಜ್ಞ ಮಾಡುವ ನಿರ್ಧಾರ
ಇಡಿಯ ರಾಷ್ಟ್ರವನ್ನು ಸಂಪದ್-ಭರಿತವಾಗಿರಿಸಿದ್ದ ದಶರಥ ಮಹಾರಾಜರಿಗೆ, ಅವರ ಮತ್ತು ಅವರ ಪತ್ನಿಯರ ದೇಹದಲ್ಲಿ ಯಾವ ದೋಷವಿಲ್ಲದಿದ್ದರೂ ಏಕೆ ಮಕ್ಕಳಾಗಿರಲಿಲ್ಲ? ಯಜ್ಞವನ್ನು ಮಾಡಿ ಮಕ್ಕಳನ್ನು ಪಡೆಯುವ ಆವಶ್ಯಕತೆ ಏನಿತ್ತು? ಹಾಗೂ ದಶರಥ ಮಹಾರಾಜರಿಗೆ ಶಾಂತಾ ಎಂಬ ಮಗಳಿದ್ದಳೇ? ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯುವದರೊಂದಿಗೆ ಅವರು ಅಶ್ವಮೇಧ ಯಜ್ಞವನ್ನು ಮಾಡಲು ನಿರ್ಧರಿಸಿದ ವಿವರವನ್ನು ಕೇಳುತ್ತೇವೆ.
ಹೇಗಿತ್ತು ಅಂದಿನ ಅಯೋಧ್ಯೆ
ಹಿಂದಿನವರೆಲ್ಲ ದಡ್ಡರು, ಇಂದಿನ ನಾವು ತುಂಬ ಅಭಿವೃದ್ಧಿ ಹೊಂದಿದವರು ಎಂಬ ಭ್ರಮೆ ಅನೇಕರಿಗುಂಟು. ಲಕ್ಷಲಕ್ಷ ವರ್ಷಗಳ ಹಿಂದೆ ಇದ್ದಂತಹ ಅಯೋಧ್ಯಾ ನಗರ ಎಷ್ಟು ಅದ್ಭುತವಾಗಿ ವೈಜ್ಞಾನಿಕವಾಗಿ ನಿರ್ಮಾಣಗೊಂಡಿತ್ತು ಎನ್ನುವದನ್ನು ವಾಲ್ಮೀಕಿ ಋಷಿಗಳು ರಾಮಾಯಣದಲ್ಲಿ ದಾಖಲಿಸಿದ್ದಾರೆ. ರಸ್ತೆಗಳು, ಕಟ್ಟಡಗಳು, ಸೌಲಭ್ಯಗಳು, ಸುರಕ್ಷತೆ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಪರಿಪೂರ್ಣವಾದ ನಗರ ಹೇಗಿರಬೇಕು ಎನ್ನುವದನ್ನು ನಮಗೆ ಮನದಟ್ಟು ಮಾಡಿಸುತ್ತಾರೆ.
ಕುಶ ಲವರ ರಾಮಾಯಣ ಗಾಯನ
ಕುಶಲವರಿಬ್ಬರೂ ಸಮಗ್ರ ರಾಮಾಯಣವನ್ನು ಋಷಿಗಳ ಸಭೆಯಲ್ಲಿ ಹಾಡಿದಾದ ಆ ಮುನಿಗಳೆಲ್ಲರೂ ತಮ್ಮ ಕಣ್ಣ ಮುಂದೆಯೇ ರಾಮಾಯಣ ನಡೆಯುತ್ತಿದೆ ಎನ್ನುವಂತೆ ಆಸ್ವಾದಿಸುತ್ತಾರೆ. ಗುರುಗಳ ಆಜ್ಙೆಯಂತೆ ಗ್ರಾಮಗ್ರಾಮಗಳಲ್ಲಿ ರಾಮಾಯಣದ ಗಾನವನ್ನು ಮಾಡುವಾಗ, ಸ್ವಯಂ ಶ್ರೀರಾಮಚಂದ್ರನೂ ಅದನ್ನು ಕೇಳಿ, ತನ್ನ ಸಭೆಗೆ ಕರೆಯಿಸಿ ಆ ತನ್ನ ಮಕ್ಕಳಿಂದ ರಾಮಾಯಣವನ್ನು ಶ್ರವಣ ಮಾಡಿದ ಘಟನೆಯ ವಿವರ ಇಲ್ಲಿದೆ.
ರಾಮಾಯಣದ ರಚನೆ
ನಮ್ಮ ಪ್ರಾಚೀನರು ಯಾವ ಕ್ರಮದಲ್ಲಿ ಗ್ರಂಥ ರಚನೆ ಮಾಡುತ್ತಿದ್ದರು, ಏನೆಲ್ಲ ನಿಯಮಗಳನ್ನು ಅನುಸರಿಸುತ್ತಿದ್ದರು ಎಂಬ ಮಹತ್ತ್ವದ ತತ್ವಗಳ ಅನಾವರಣ ಇಲ್ಲಿದೆ. ಲಕ್ಷ ಲಕ್ಷ ವರ್ಷಗಳ ಹಿಂದೆ ರಚಿತವಾಗಿ ಸೂರ್ಯ ಚಂದ್ರರಿರುವವರೆಗೆ ಉಳಿಯಲಿರುವ ಶ್ರೀಮದ್ ರಾಮಾಯಣ ನಿರ್ಮಾಣವಾದ ರೋಮಾಂಚಕಾರಿ ಘಟನೆಯ ವಿವರದೊಂದಿಗೆ.
ಶೋಕ ಶ್ಲೋಕವಾದ ಕಥೆ
ಜಗತ್ತಿನ ಮೊಟ್ಟ ಮೊದಲ ಶ್ಲೋಕ ನಿರ್ಮಾಣವಾದ ಕ್ರಮದ ವಿವರಣೆ. ವೇದಗಳಲ್ಲಿ ಶ್ಲೋಕವಿದ್ದ ಬಳಿಕ ಇದು ಮೊಟ್ಟ ಮೊದಲ ಶ್ಲೋಕ ಹೇಗಾಯಿತು ಎಂಬ ಪ್ರಶ್ನೆಯ ಉತ್ತರದೊಂದಿಗೆ.
ಸಂಕ್ಷಿಪ್ತ ರಾಮಾಯಣ
ನಾರದರು ವಾಲ್ಮೀಕಿಋಷಿಗಳಿಗೆ ಉಪದೇಶ ಮಾಡಿದ ಸಮಗ್ರ ರಾಮಾಯಣದ ಅದ್ಭುತ ಪಕ್ಷಿನೋಟ.
ಶ್ರೀರಾಮನೆಂಬ ಅದ್ಭುತ
ಶ್ರೀರಾಮನ ಕುರಿತು ಏಕೆ ತಿಳಿಯಬೇಕು, ಮನಸ್ಸಿನಲ್ಲಿ ರಾಮನನ್ನು ಏಕೆ ಆರಾಧಿಸಬೇಕು, ಮಂದಿರ ಕಟ್ಟಿ ಏಕೆ ಪೂಜಿಸಬೇಕು ಎಂಬೆಲ್ಲ ಪ್ರಶ್ನೆಗಳಿಗೆ ರಾಮನ ಕುರಿತ ರಾಮಾಯಣ ಮಹಾಗ್ರಂಥವನ್ನು ಬರೆದ ವಾಲ್ಮೀಕಿಋಷಿಗಳು ಪ್ರಥಮಾಧ್ಯಾಯದಲ್ಲಿಯೇ ನೀಡಿದ ಉತ್ತರಗಳ ಸಂಕಲನ.
ಕುಶಲವರೋ, ಲವಕುಶರೋ?
ನನ್ನ ಪ್ರಶ್ನೆ, ನೀವು ಪ್ರತಿಬಾರಿ ಕುಶ - ಲವರು ಎಂದು ಸಂಭೋಧಿಸಿದ್ದಿರಾ. ನಾನು ರಾಮಾಯಣ ಕಥೆ ಕೇಳಿದಾಗ ರಾಮನ ಮಕ್ಕಳ ಹೆಸರು ಲವ - ಕುಶರು ಎಂದೇ ಕೇಳಿದ್ದೇನೆ. ಇದೇ ಮೊದಲ ಬಾರಿಗೆ ನಿಮ್ಮ ಪ್ರವಚನದಲ್ಲಿ ಕುಶ - ಲವರು ಎಂದು ಕೇಳಿದೆನು. ಇದರ ಕಾರಣ ವೇನು? ಇದಕ್ಕೆ ಒಳ ಅರ್ಥವಿದೆಯಾ?