Uttaradi Mathada Vimarshe
Prashnottara - VNP267

ಚಂದಿಯವರ ದುರ್ವಾದವನ್ನು ಧೂಳೀಪಟ ಮಾಡಿದ ಶೇಷವಾಕ್ಯಾರ್ಥಚಂದ್ರಿಕಾ

ಯಾವುದನ್ನು ಆಶ್ರಯಿಸಿಕೊಂಡು ಚಂದಿಯವರು ಪುಸ್ತಕ ಬರೆಯಲು ಹೊರಟಿದ್ದಾರೆಯೋ, ಆ ಯಥಾತ್ಮಶಕ್ತ್ಯಾ ಎನ್ನುವದರ ಚರ್ಚೆ ಇಲ್ಲಿದೆ. ಪದಚ್ಛೇದದಿಂದ ಸಾಧುತ್ವಸಮರ್ಥನೆಯಾಗಿದೆ ಎಂಬ ಅವರ ದುರ್ವಾದವನ್ನು ಶ್ರೀ ಶೇಷವಾಕ್ಯಾರ್ಥಚಂದ್ರಿಕೆಯ ವಚನವೇ ಸುಟ್ಟು ಹಾಕಿರುವದನ್ನು ಪರಿಸ್ಪಷ್ಟವಾಗಿ ತೋರಿಕೊಡಲಾಗಿದೆ. 

24879 Views
Prashnottara - VNP266

ಪೂಜ್ಯ ಶ್ರೀ ಹರಿದಾಸಭಟ್ಟರಿಂದಲೇ ಶ್ರೀ ರಂಗಾಚಾರ್ಯರ ಖಂಡನೆ

“ಮಿಥ್ಯಾಯಾಃ ಎನ್ನುವದು ಒಂದೇ ಪದ ಎಂದು ಶ್ರೀ ಪದ್ಮನಾಭತೀರ್ಥಗುರುಸಾರ್ವಭೌಮರಿಗೆ ಮತ್ತು ಶ್ರೀಮನ್ನಾರಾಯಣಪಂಡಿತಾಚಾರ್ಯರಿಗೆ ಸಮ್ಮತವಲ್ಲ” ಎಂಬ ಶ್ರೀ ಗಣಾಚಾರಿ ರಂಗಾಚಾರ್ಯರ ಭ್ರಮೆಯನ್ನು ಪೂಜ್ಯ ಶ್ರೀ ಹರಿದಾಸಭಟ್ಟರ ವಾಕ್ಯದಿಂದಲೇ ಖಂಡಿಸಲಾಗಿದೆ. ಪ್ರಾಚೀನ ವ್ಯಾಖ್ಯಾನಗಳ ಅರ್ಥಾನುಸಂಧಾನದೊಂದಿಗೆ. 

24493 Views
Prashnottara - VNP265

ಶ್ರೀ ರಂಗಾಚಾರ್ಯರ ಪರಮ ಬಾಲಿಶ ಲೇಖನ

“ಮಿಥ್ಯಾಯಾಃ” ಎನ್ನುವಲ್ಲಿ ಇರುವದು ಶಬ್ದಸಾಧುತ್ವಸಮರ್ಥನೆಯಲ್ಲವಂತೆ, ವಾಕ್ಯಸಾಧುತ್ವಸಮರ್ಥನೆಯಂತೆ ಎಂಬ ಶ್ರೀ ಗಣಾಚಾರಿ ರಂಗಾಚಾರ್ಯರ ಪರಮ ಬಾಲಿಶ ವಾದದ ಖಂಡನೆ. 

23939 Views
Prashnottara - VNP264

ಶ್ರೀ ರಂಗಾಚಾರ್ಯರ ಲೇಖನದ ವಿಮರ್ಶೆ ಆರಂಭ

ಮುಂದಿನ ಎರಡು ಉಪನ್ಯಾಸಗಳಲ್ಲಿ ಶ್ರೀ ಗಣಾಚಾರಿ ರಂಗಾಚಾರ್ಯರ ಲೇಖನದ ಕುರಿತ ತೀಕ್ಷ್ಣ ವಿಮರ್ಶೆ ಬರುವದಿದೆ. ಅವರ ಕುರಿತು ನನಗಿರುವ ಅಭಿಪ್ರಾಯವನ್ನು ಪರಿಸ್ಪಷ್ಟವಾಗಿ ಇಲ್ಲಿ ನಿರೂಪಿಸಲಾಗಿದೆ.

19131 Views
Prashnottara - VNP255

ವ್ಯಾಕರಣದ ದೃಷ್ಟಿಯಿಂದ ವಾಮನನ ಕೃತಿ ಪ್ರಮಾಣವೇ ಅಲ್ಲ

ಒಂದು ಗ್ರಂಥವನ್ನು  ಪ್ರಮಾಣ ಎಂದು ಒಪ್ಪಬೇಕಾದರೆ ಯಾವ ಮಾನದಂಡಗಳಿರಬೇಕು ಎಂದು ಶ್ರೀಮದಾಚಾರ್ಯರು ಶ್ರೀಮಟ್ಟೀಕಾಕೃತ್ಪಾದರು ತಿಳಿಸಿದ್ದಾರೆಯೋ ಆ ಯಾವ ವಿಷಯಗಳೂ ವಾಮನನ ಈ ಕೃತಿಯಲ್ಲಿಲ್ಲ ಎನ್ನುವದನ್ನು ಇಲ್ಲಿ ಮನಗಾಣುತ್ತೇವೆ. 

21545 Views
Prashnottara - VNP254

ರಾಯರ ಮಠವನ್ನೇಕೆ ಖಂಡಿಸುವದಿಲ್ಲ? ಹಣಕ್ಕಾಗಿ ತಾನೇ?

“ನಾನು ರಾಯರ ಮಠದಿಂದ ಹಣ ತೆಗೆದುಕೊಂಡ ಕಾರಣಕ್ಕೇ ಸುಬುಧೇಂದ್ರರನ್ನು ಖಂಡಿಸದೇ ಸತ್ಯಾತ್ಮರನ್ನು ಖಂಡಿಸುತ್ತಿದ್ದೇನೆ” ಎಂದು ಉತ್ತರಾದಿಮಠದವರು ಆಕ್ಷೇಪಿಸಿದ ಆಡಿಯೋಗೆ ಉತ್ತರ. 

29317 Views
Prashnottara - VNP253

ಸುಧಾಪಾಠ ನಂತರ, ನಿಮ್ಮ ಶಿಷ್ಯರಿಗೆ ಮೊದಲು ಧಾತುಪಾಠ ಹೇಳಿ, ಸತ್ಯಾತ್ಮರೆ!

ಸತ್ಯಾತ್ಮರ ಸಮರ್ಥಕರಿಗೆ ಶ್ರೀಮನ್-ನ್ಯಾಯಸುಧಾ, ಪರಿಮಳ, ಶೇಷವಾಕ್ಯಾರ್ಥಚಂದ್ರಿಕೆಗಳು ಸರಿಯಾಗಿ ಪಾಠವಾಗಿರುವದು ದೂರ ಉಳಿಯಿತು, ಧಾತುಪಾಠವೂ ಸರಿಯಾಗಿ ಆಗಿಲ್ಲ ಎನ್ನುವದನ್ನು ಉತ್ತರಾದಿಮಠದ ಶ್ರೀ ಸತ್ಯಧರ್ಮತೀರ್ಥರ ವ್ಯಾಖ್ಯಾನದಿಂದಲೇ ಇಲ್ಲಿ ಪ್ರತಿಪಾದಿಸಲಾಗಿದೆ. 

23124 Views
Prashnottara - VNP252

ನಾನೇಕೆ ಸತ್ಯಾತ್ಮರನ್ನು ಗೌರವಿಸುವದಿಲ್ಲ

ನಾನು ಸತ್ಯಾತ್ಮರನ್ನು “ತೀರ್ಥ ಶ್ರೀಪಾದರು” ಎಂದು ಉಲ್ಲೇಖಿಸದಿರುವದಕ್ಕೆ ಮೂರು ಕಾರಣಗಳು. 

25621 Views
Prashnottara - VNP251

ಕಾಲ್ಪನಿಕ ಕತೆಗಳಿಂದ ತತ್ವನಿರ್ಣಯವಾಗುವದಿಲ್ಲ

ಶ್ರೀ ಹೃಷೀಕೇಶಾಚಾರ್ಯ ಮಠದ ಅವರ ಎರಡನೆಯ ಲೇಖನಕ್ಕೆ ಉತ್ತರ

10491 Views
Prashnottara - VNP250

ಪರಿಮಳ ವಾಕ್ಯದ ಅರ್ಥ

 “ರಾಯರು ಹೇಳಿದ್ದನ್ನೇ ಸತ್ಯಾತ್ಮರು ಹೇಳಿದ್ದಾರೆ” ಎಂಬ ಉತ್ತರಾದಿಮಠದ ಪಂಡಿತರ ಭ್ರಮೆಯ ಖಂಡನೆ ಇಲ್ಲಿದೆ.  ನಮ್ಮ ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ವಾಕ್ಯದ ಸರಳ ಮತ್ತು ಸಹಜವಾದ ಅರ್ಥ, ಆ ಅರ್ಥಕ್ಕೆ ಪ್ರಮಾಣಗಳ ನಿರೂಪಣೆಯೊಂದಿಗೆ. 

21166 Views
Prashnottara - VNP248

ನಿಸ್ಸಾರ ಪುಸ್ತಕ, ವಾಕ್ಯಾರ್ಥದಿಂದ ಪಲಾಯನ

ಉತ್ತರಾದಿಮಠದ  ಚಂದಿ ರಘುವೀರಾಚಾರ್ಯರು ಸತ್ತ್ವಹೀನವಾದ ಪುಸ್ತಕವನ್ನು ಪ್ರಕಟಿಸಿ ನನಗೆ ಕಳುಹಿಸಿದ್ದರು. 14ನೆಯ ತಾರೀಕು ವಾಕ್ಯಾರ್ಥಕ್ಕೆ ಬನ್ನಿ ಎಂದರೆ, “ವಾಕ್ಯಾರ್ಥದ ಆವಶ್ಯಕತೆ ಇರುವದು ನನಗಲ್ಲ, ನಿಮಗೆ" ಎಂದು ಜಾರಿಕೊಂಡು ಕಿರುಲೇಖನವೊಂದನ್ನು ಕಳುಹಿಸಿದ್ದಾರೆ. ಅವರ ಪುಸ್ತಕ, ಕಿರುಲೇಖಗಳನ್ನು ಪ್ರಕಟಿಸಿದ್ದೇನೆ, ನನ್ನ ಸ್ಪಷ್ಟನಿಲುವುಗಳೊಂದಿಗೆ.

15665 Views
Prashnottara - VNP246

ವಾಕ್ಯಾರ್ಥ

ವಾಕ್ಯಾರ್ಥದ ಕುರಿತ ಬೆಳವಣಿಗೆಗಳ ಮಾಹಿತಿ. 

15004 Views
Prashnottara - VNP245

ವಾಕ್ಯಾರ್ಥದ ವೇದಿಕೆ ಸಿದ್ಧಪಡಿಸುತ್ತೇನೆ

ಶ್ರೀ ಚಂದಿ ರಘುವೀರಾಚಾರ್ಯರು ವಾಕ್ಯಾರ್ಥಕ್ಕೆ ಸಿದ್ಧ ಎಂದು ತಿಳಿಸಿ, ವೇದಿಕೆ ಸಿದ್ಧಪಡಿಸಲು ತಿಳಿಸಿದ್ದಾರೆ. ಆ ಕುರಿತ ವಿವರ. 

15498 Views
Prashnottara - VNP244

ಪುಸ್ತಕವನ್ನು ಇಂದೇ (14-03-2022)ಪ್ರಕಟಿಸಿ, ಸತ್ಯಾತ್ಮರೆ!

ನಾನು ಮಾಡಿದ ಆಕ್ಷೇಪಕ್ಕೆ ಎಂಟು ವರ್ಷಗಳ ನಂತರ ಉತ್ತರ ನೀಡಿದ್ದೇವೆ ಎಂದು ಪುಸ್ತಕವನ್ನು ಬಿಡುಗಡೆ ಮಾಡಿರುವ ಸತ್ಯಾತ್ಮರು ಪುಸ್ತಕವನ್ನು ಮಾತ್ರ ಪ್ರಕಟ ಮಾಡಿಲ್ಲ!

19093 Views