ನಾಗ ವರುಣ ಲೋಕಗಳ ಮೇಲೆ ಆಕ್ರಮಣ
ವಾಸುಕಿ ಮುಂತಾದ ನಾಗರನ್ನು ಗೆದ್ದು, ನಿವಾತಕವಚರೊಂದಿಗೆ ಯುದ್ಧ ಮಾಡಿ ಅವರ ಸ್ನೇಹವನ್ನು ಪಡೆದು, ಕಾಲಕೇಯರೊಂದಿಗೆ ಯುದ್ಧ ಮಾಡುವಾಗ ತಂಗಿಯ ಗಂಡನನ್ನೇ ಕೊಂದು, ವೀರಾವೇಶದೊಂದಿಗೆ ಹೋರಾಡಿದ ವರುಣಪುತ್ರರನ್ನು ರಾವಣ ಗೆದ್ದ ಪ್ರಸಂಗಗಳ ವಿವರಣೆ.
ಯಮ ರಾವಣ ಯುದ್ಧ
ಬ್ರಹ್ಮದೇವರಿಂದ ಅಮೋಘತ್ವವರವಿರುವ ಕಾಲದಂಡ ಯಮದೇವರ ಬಳಿಯಲ್ಲಿ, ಅವಧ್ಯತ್ವವರ ಪಡೆದ ರಾವಣ ಒಂದೆಡೆಯಲ್ಲಿ. ಈ ಮಹಾಪರಾಕ್ರಮಿ ಅವಧ್ಯರಿಬ್ಬರ ರೋಮಾಂಚಕಾರಿ ಯುದ್ಧ.
ಯಮಲೋಕದ ಮೇಲೆ ಆಕ್ರಮಣ
ಕರ್ತವ್ಯನಿರತರಾದ ಯಮಕಿಂಕರರ ಮೇಲೆ ರಾವಣ ಆಕ್ರಮಣ ಮಾಡಿದಾಗ ಯಮದೂತರು ಅವನ ಅಮಾತ್ಯರನ್ನು ಓಡಿಸಿ, ರಾವಣನನ್ನು ಮೂರ್ಛೆಗೊಳಿಸುವ ರೋಮಾಂಚಕಾರಿ ಘಟನೆಯ ಚಿತ್ರಣ ಇಲ್ಲಿದೆ.
ನಾರದರಿಂದ ಮನುಷ್ಯರ ರಕ್ಷಣೆ
ಮನುಷ್ಯಸಂಕುಲದ ಮೇಲೆ ನಾರದರಿಗೆ ಅಪಾರವಾದ ಕಾರುಣ್ಯ. ಮನುಷ್ಯರಿಗೆ ಸಹಜವಾದ ಸಮಸ್ಯೆಗಳನ್ನು ರಾವಣನಿಗೆ ವಿವರಿಸಿ, ಅವರನ್ನು ಕೊಲ್ಲಬೇಡ ಎಂದು ತಿಳಿಸುವ ಪ್ರಸಂಗ. ನಮ್ಮ ಬಗ್ಗೆ ನಾವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ.
ಅನರಣ್ಯರ ಶಾಪ
ಇಕ್ಷ್ವಾಕುವಂಶದ ಅನರಣ್ಯಮಹಾರಾಜರು ರಾವಣನೊಂದಿಗೆ ಯುದ್ಧ ಮಾಡಿ ಸಾಯುವ ಸಂದರ್ಭದಲ್ಲಿ ತಮ್ಮ ಕುಲದಲ್ಲಿಯೇ ಹುಟ್ಟುವ ರಾಮ ನಿನ್ನನ್ನು ಕೊಲ್ಲುತ್ತಾನೆ ಎಂದು ಶಾಪ ನೀಡುವ ಪ್ರಸಂಗದ ವಿವರಣೆ.
ಮರುತ್ತರ ಯಜ್ಞದ ಪ್ರಸಂಗ
ಮರುತ್ತರು ಯಜ್ಞ ಮಾಡುವ ಸ್ಥಳಕ್ಕೆ ರಾವಣ ಬಂದಾಗ ನಡೆಯುವ ವಿಚಿತ್ರ ಘಟನೆಗಳ ಚಿತ್ರಣ ಇಲ್ಲಿದೆ.
ವೇದವತಿಯರ ಪ್ರತಿಜ್ಞೆ
ಲಕ್ಷ್ಮೀದೇವಿಯ ಅವತಾರರಾದ ವೇದವತಿದೇವಿಯರನ್ನು ರಾವಣ ಬಲಾತ್ಕರಿಸಲು ಬಂದಾಗ ನಿನ್ನ ಮರಣಕ್ಕಾಗಿ ಮತ್ತೆ ಆವಿರ್ಭವಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ವೇದವತಿಯರು ಅಗ್ನಿಪ್ರವೇಶ ಮಾಡಿದ ಘಟನೆಯ ವಿವರ.
ರಾವಣ ಎಂಬ ಹೆಸರು ಬರಲು ಕಾರಣ
ರಾವಣ ಎಂದರೆ ಕಿರುಚಿಕೊಂಡವನು ಎಂದರ್ಥ. ಒಂದು ಸಾವಿರ ವರ್ಷಗಳಷ್ಟು ದೀರ್ಘಕಾಲ ನೋವಿನಿಂದ ಅವನು ಕಿರುಚಿದ ಘಟನೆಯ ವಿವರ ಇಲ್ಲಿದೆ.
ಪುಷ್ಪಕ ಹೇಗೆ ಚಲಿಸುತ್ತಿತ್ತು
ಪುಷ್ಪಕ ವಿಮಾನ ಯಾವ ರೀತಿಯಾಗಿ ಕೆಲಸ ಮಾಡುತ್ತಿತ್ತು ಎಂಬ ವಿಷಯದೊಂದಿಗೆ ರಾವಣನಿಗೆ ನಂದೀಶ್ವರರು ಶಾಪ ನೀಡಿದ ವಿವರ ಇಲ್ಲಿದೆ.
ಪುಷ್ಪಕವಿಮಾನದ ಅಪಹರಣ
ವೈಶ್ರವಣರ ಮೇಲೆ ಆಕ್ರಮಣ ಮಾಡಿ, ಅವರನ್ನು ಸೋಲಿಸಿ, ಲಕ್ಷಾಂತರ ಯಕ್ಷರನ್ನು ರಾವಣ ಪುಷ್ಪಕವಿಮಾನವನ್ನು ಅಪಹರಣ ಮಾಡಿದ ಘಟನೆಯ ಚಿತ್ರಣ.
ಕುಬೇರರ ಬುದ್ಧಿಮಾತು, ದಶಗ್ರೀವನ ದುರಹಂಕಾರ
ಧರ್ಮದಿಂದ ದೊಡ್ಡವರು ಪ್ರೀತರಾಗುತ್ತಾರೆ, ಅಧರ್ಮ ಮಾಡಿದರೆ ಕುಪಿತರಾಗುತ್ತಾರೆ ಎಂದು ತಮ್ಮ ದೃಷ್ಟಾಂತದಿಂದಲೇ ವೈಶ್ರವಣರು ದಶಗ್ರೀವನಿಗೆ ಬುದ್ಧಿ ಹೇಳಿದರೆ ಅವನು ಅವರ ದೂತನನ್ನು ಕೊಂದು ಹಾಕುವ ಘಟನೆಯ ವಿವರ.
ಲಂಕೆ ಮಂಡೋದರಿಯರ ಪ್ರಾಪ್ತಿ
ವೈಶ್ರವಣರ ವಶವಾಗಿದ್ದ ಲಂಕೆಯನ್ನು ಪಡೆದು ಮಯಾಸುರರ ಮಗಳು ಮಂಡೋದರಿಯನ್ನು ರಾವಣ ಮದುವೆಯಾದ ಘಟನೆಯ ವಿವರ.
ದಶಗ್ರೀವನ ತಪಸ್ಸು
ಸಾವಿರವರ್ಷಕ್ಕೊಮ್ಮೆ ತನ್ನ ಒಂದೊಂದು ತಲೆಯನ್ನೇ ಕಡಿದು ಅರ್ಪಿಸುತ ಹತ್ತು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿ ದಶಗ್ರೀವ ವರ ಪಡೆದ ವಿವರ ಇಲ್ಲಿದೆ. ವಿಭೀಷಣ, ಕುಂಭಕರ್ಣರ ತಪಸ್ಸಿನ ವಿವರದೊಂದಿಗೆ.
ದಶಗ್ರೀವನ ಜನ್ಮ
ತನ್ನ ರೂಪವನ್ನು ಉಪಯೋಗಿಸಿಕೊಂಡು ಕೈಕಸಿ ವಿಶ್ರವಸರನ್ನು ಸಂಧ್ಯಾಕಾಲದಲ್ಲಿ ಕೂಡಿ ದಶಗ್ರೀವನನ್ನು ಘೋರ ಕಾಲದಲ್ಲಿ ಘೋರಶಕುನಗಳಿರುವಾಗ ಮಗನನ್ನಾಗಿ ಪಡೆದ ಘಟನೆಯ ವಿವರ.
ನಾರಾಯಣನ ಯುದ್ಧ ವೈಭವ
ಗರುಡಾರೂಢನಾದ ನಮ್ಮ ಸ್ವಾಮಿ ಅಂತರಿಕ್ಷದಲ್ಲಿ ಈ ರಾಕ್ಷಸಸೇನೆಯೊಂದಿಗೆ ಯುದ್ಧ ಮಾಡಿ ಮಾಲಿಯನ್ನು ಸಂಹಾರ ಮಾಡಿದ ದಿವ್ಯಘಟನೆಯ ಚಿತ್ರಣ.
ಯುದ್ಧಕ್ಕೆ ಸಿದ್ಧನಾದ ನಾರಾಯಣ
ದೇವತೆಗಳು ರುದ್ರದೇವರನ್ನು ಪ್ರಾರ್ಥಿಸಿದಾಗ ಬ್ರಹ್ಮವರವನ್ನು ಮೀರಲು ನನಗೆ ಸಾಧ್ಯವಿಲ್ಲ, ಶ್ರೀಹರಿಯನ್ನೇ ಪ್ರಾರ್ಥಿಸಿ ಎಂದು ಹೇಳುತ್ತಾರೆ. ಅವರ ಪ್ರಾರ್ಥನೆಯಿಂದ ಪ್ರಸನ್ನನಾದ ಶ್ರೀಹರಿ ಯುದ್ಧಕ್ಕೆ ಸಿದ್ಧನಾದ ಪರಿಯ ವಿವರಣೆ ಇಲ್ಲಿದೆ.
ಮಾಲ್ಯವಂತ ಸುಮಾಲಿ ಮಾಲಿ
ಶಿವ ಪಾರ್ವತಿಯರು ರಕ್ಷಿಸಿದ ಸುಕೇಶ ರಾಕ್ಷಸನಿಗೆ ಮೂರು ಜನ ತಾಮಸ ರಾಕ್ಷಸರು ಮಕ್ಕಳಾಗಿ ಹುಟ್ಟಿ ಬರುತ್ತಾರೆ. ಅವರು ಮಾಡಿದ ತಪಸ್ಸು, ಲಂಕೆಯನ್ನು ಪಡೆದ ವಿವರ ಇಲ್ಲಿದೆ.
ಮೋಕ್ಷಯೋಗ್ಯ ರಾಕ್ಷಸರು
ಬ್ರಹ್ಮದೇವರು ಸೃಷ್ಟಿ ಮಾಡಿದ ಹೇತಿ-ಪ್ರಹೇತಿ ಮುಂತಾದ ರಾಕ್ಷಸರ ಕಥೆ, ಹಾಗೂ ರಾಕ್ಷಸರಲ್ಲಿಯೂ ಮುಕ್ತಿಯನ್ನು ಪಡೆಯುವ ಸಜ್ಜೀವರಿದ್ದಾರೆ ಎಂಬ ತತ್ವದ ನಿರೂಪಣೆ.
ವಿಶ್ರವಸ್ ಮತ್ತು ವೈಶ್ರವಣರ ಕಥೆ
ಮಕ್ಕಳಲ್ಲಿ ಒಳ್ಳೆತನವನ್ನೋ, ಕೆಟ್ಟತನವನ್ನೋ ಮೂಡಿಸುವ ಮೂಲಕಾರಣದ ವಿವರ ಇಲ್ಲಿದೆ.
ಪುಲಸ್ತ್ಯರ ಕಥೆ
ಗಂಗಾ ಗಣಪತಿಯರಿಗೂ ಯಾರ ಮಹಿಮೆಯನ್ನು ಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲವೋ ಅಂತಹ ಮಹಾನುಭಾವರಾದ ಶ್ರೀ ಪುಲಸ್ತ್ಯಬ್ರಹ್ಮರ ಚರಿತ್ರೆಯ ಯಥಾಮತಿ ನಿರೂಪಣೆ.
ಋಷಿಗಳ ಭಯ
ದೇವರು ಯಾವಾಗ ಭಕ್ತರನ್ನು ಕಾಪಾಡುತ್ತಾನೆ, ಯಾವಾಗ ಮತ್ತು ಏಕೆ ಕಾಪಾಡದೇ ಸುಮ್ಮನಿರುತ್ತಾನೆ ಎನ್ನುವ ಅಪೂರ್ವ ವಿಷಯದ ನಿರೂಪಣೆ ಇಲ್ಲಿದೆ.
ಕಾಕಾಸುರ ನಿಗ್ರಹ
ಇಂದ್ರದೇವರ ಮಗ ಜಯಂತ ಅಸುರಾವೇಶಕ್ಕೊಳಗಾಗಿ, ಕುರಂಗ ಎಂಬ ಅಸುರನೊಂದಿಗೆ ಕಾಗೆಯಾಗಿ ಸೀತಮ್ಮನವರಿಗೆ ಅಪಚಾರ ಮಾಡಿ ರಾಮದೇವರಿಂದ ನಿಗ್ರಹಕ್ಕೊಳಗಾಗುವ ಘಟನೆಯ ವಿವರ.
ಸೀತೆಗೆ ರಾಮನಿಂದ ಅಲಂಕಾರ
ಕಷ್ಟದ ಕಾಲದಲ್ಲಿ ಕಳೆದುಕೊಂಡ ಸಂಪತ್ತನ್ನು ನೆನೆದು ದುಃಖಪಡುವದಲ್ಲ, ಇರುವ ವಸ್ತುಗಳೊಂದಿಗೆ ಹೇಗೆ ಸಂತಸದಿಂದಿರಬೇಕು ಎಂದು ನಮ್ಮ ಸ್ವಾಮಿ ಇಲ್ಲಿ ಆಚರಿಸಿ ತೋರಿಸುತ್ತಾನೆ.
ಪಾದುಕಾ ಪಟ್ಟಾಭಿಷೇಕ
ಅಯೋಧ್ಯೆಯ ಒಳಗೂ ಪ್ರವೇಶಿಸದೇ, ಭರತರು ನಂದಿಗ್ರಾಮದಲ್ಲಿದ್ದುಕೊಂಡು, ಪಾದುಕೆಗೆ ಪಟ್ಟಾಭಿಷೇಕ ಮಾಡಿ ರಾಜ್ಯವಾಳಿದ ಕ್ರಮದ ವಿವರ ಇಲ್ಲಿದೆ.
ಪಾದುಕೆ ಪಡೆದ ಭರತರು
“ಅಣ್ಣ ಹಿಂತಿರುಗುವದಿಲ್ಲವಾದರೆ ನಾನಿಲ್ಲೇ ಪ್ರಾಯೋಪವೇಶ ಸ್ವೀಕರಿಸುತ್ತೇನೆ” ಎಂದು ರಾಮದೇವರ ಅಗ್ನಿಶಾಲೆಯಿಂದ ದರ್ಭೆ ತಂದು, ಪರ್ಣಶಾಲೆಯ ಮುಂದೆ ಹಾಸಿ, ಭರತರು ಮಲಗಿಯೇ ಬಿಡುತ್ತಾರೆ. ರಾಮದೇವರು ಆ ಭರತರನ್ನು ಪ್ರಾಯೋಪವೇಶದಿಂದ ಎದ್ದೇಳುವಂತೆ ಮಾಡುವ ಪರಿಯೇ ಅದ್ಭುತ. ಕೇಳಿಯೇ ಆಸ್ವಾದಿಸಬೇಕಾದ ಭಾಗ.
ತಂದೆ ತಾಯಿಯರ ಋಣ
ಸಮಗ್ರ ಸೂರ್ಯವಂಶದ ಇತಿಹಾಸವನ್ನು ತಿಳಿಸಿದ ವಸಿಷ್ಠರು “ಧರ್ಮಾಚರಣೆ ಮಾಡಬೇಕು ಎಂದೆಯಲ್ಲ, ನಿನ್ನ ಕುಲಧರ್ಮದ ಆಚರಣೆ ಮಾಡು, ರಾಜ್ಯಪಾಲನೆ ಮಾಡು” ಎಂದು ಆದೇಶಿಸಿದರೆ, ನಮ್ಮ ಸ್ವಾಮಿ ರಾಮದೇವರು ನೀಡುವ ಪರಮ ಪರಮಾದ್ಭುತವಾದ ಉತ್ತರ
ನಾಸ್ತಿಕ್ಯ ವಾದವನ್ನು ಖಂಡಿಸಿದ ಶ್ರೀರಾಮ
“ಧರ್ಮ, ಸತ್ಯ ಎನ್ನುವದೆಲ್ಲ ಸುಳ್ಳು, ನೀ ಬಂದು ರಾಜ್ಯವಾಳು” ಎಂಬ ಜಾಬಾಲಿಗಳ ಮಾತಿಗೆ ಉತ್ತರವಾಗಿ ನಮ್ಮ ಸ್ವಾಮಿ ಧರ್ಮಕ್ಕೆ ಅನುಭವವೇ ಪ್ರಮಾಣ ಎನ್ನುವದನ್ನು ತೋರಿಸಿಕೊಟ್ಟು ವಚನಭ್ರಷ್ಟತೆಯನ್ನು ಖಂಡಿಸುವ ದಿವ್ಯ ಭಾಗವಿದು.