GK-16 ಗಿರಿಜಾಕಲ್ಯಾಣ
ಜಗತ್ತಿನ ತಂದೆತಾಯಿಗಳ ಮದುವೆಯ ದಿವ್ಯಚಿತ್ರಣ. ಕೇಳಿಯೇ ಆನಂದಿಸಬೇಕಾದ ಭಾಗ.
GK-15 ಅಕ್ಷತಾರೋಪಣ
ಗೌರೀ ಶಂಕರರು ಪರಸ್ಪರ ಅಕ್ಷತಾರೋಪಣೆ ಮಾಡಿಕೊಂಡ ದಿವ್ಯಕ್ಷಣಗಳ ಚಿತ್ರಣ ಇಲ್ಲಿದೆ.
GK-14 ಮದುವೆಗೆ ಬಂದ ಮಹಾದೇವ
ಸಮಸ್ತ ದೇವತೆಗಳ ಸಮೇತರಾಗಿ ರುದ್ರದೇವರು ಮದುವೆಯ ಮನೆಗೆ ಬರುತ್ತಾರೆ. ಹಿಮವಂತ ಎಲ್ಲರನ್ನೂ ಗೌರವದಿಂದ ಸ್ವಾಗತಿಸಿ, ತನ್ನ ಅಳಿಯನನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳುತ್ತಾನೆ. ಆ ಸಂಭ್ರಮದ ಘಟನೆಗಳ ವಿವರ ಇಲ್ಲಿದೆ.
GK-13 ವಧೂಪರೀಕ್ಷೆ
ಸಪ್ತರ್ಷಿಗಳು ಮಾಡಿದ ವಧೂಪರೀಕ್ಷೆಯ ವಿವರ ಇಲ್ಲಿದೆ. ಕೇಳಬಾರದ ಪ್ರಶ್ನೆಯೊಂದನ್ನು ಸಪ್ತರ್ಷಿಗಳು ಕೇಳಿದಾಗ ದಿಟ್ಟತನದಿಂದ ಗೌರೀದೇವಿಯರು ಉತ್ತರಿಸುತ್ತಾರೆ. ಸಜ್ಜನರ ಜ್ಞಾನವೃದ್ಧಿಗಾಗಿ ನಡೆದ ಈ ಘಟನೆಯ ವಿವರ ಇಲ್ಲಿದೆ.
GK-12 ವರಪರೀಕ್ಷೆ
ಗಂಡಿನವರ ಕಡೆಯಿಂದ ಸಪ್ತರ್ಷಿಗಳು ಬಂದು ಕನ್ಯಾದರ್ಶನವನ್ನು ಮಾಡುತ್ತಾರೆ. ಹಿಮವಂತ ವರನ ಪರೀಕ್ಷೆಯನ್ನು ಮಾಡುತ್ತಾನೆ. ಶಂಕರನ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾನೆ. ಆ ಭಾಗದ ವಿವರಣೆ ಇಲ್ಲಿದೆ.
GK-11 ಸಪ್ತರ್ಷಿಗಳಿಗೆ ಆಜ್ಞೆ
ಶಾಸ್ತ್ರೋಕ್ತವಾದ ಕ್ರಮದಲ್ಲಿಯೇ ಮದುವೆಯಾಗಬೇಕು ಎಂಬ ಪಾರ್ವತಿಯ ಅಪೇಕ್ಷೆಯಂತೆ, ಲೋಕದಲ್ಲಿ ಮತ್ತು ಶಾಸ್ತ್ರದಲ್ಲಿ ಯಾವ ರೀತಿಯ ಮದುವೆಯ ಕ್ರಮವಿದೆಯೋ ಅದೇ ಕ್ರಮವನ್ನು ರುದ್ರದೇವರು ಅನುಸರಿಸುತ್ತಾರೆ. ಮದುವೆಯ ಸಂಭ್ರಮದ ಭಾಗದ ವಿವರಣೆ ಇಲ್ಲಿದೆ.
GK-10 ಸಿದ್ಧಿಗಳಿಸಿದ ಪಾರ್ವತಿ
ಅದ್ಭುತ ತಪಸ್ಸನ್ನು ಮಾಡಿ ಸಿದ್ಧಿಗಳಿಸಿದ ಪ್ರೇಮದ ಮಗಳನ್ನು ಹಿಮ ಮೇನೆಯರು ಸಂಭ್ರಮದಿಂದ ತಮ್ಮ ಮನೆಗೆ ಕರೆದೊಯ್ಯುವ ಪ್ರಸಂಗದ ವಿವರಣೆ ಇಲ್ಲಿದೆ.
GK-09 ಗಿರಿಜೆಗೊಲಿದ ಶಂಕರ
ಪಾರ್ವತೀದೇವಿಯ ಶಿವಭಕ್ತಿಯನ್ನು ಪರೀಕ್ಷೆ ಮಾಡಿ ರುದ್ರದೇವರು ಗಿರಿಜೆಯ ಮೇಲೆ ಮಾಡುವ ಅನುಗ್ರಹದ ಚಿತ್ರಣ ಇಲ್ಲಿದೆ.
GK08 ಪಾರ್ವತೀದೇವಿ ಕಲಿಸುವ ಪಾಠ
ಯಶಸ್ಸನ್ನು ಪಡೆಯಲು ಮನುಷ್ಯ ಮಾಡಬೇಕಾದ ಮಹಾಪ್ರಯತ್ನದ, ಅವನಿಗಿರಬೇಕಾದ ಮನಃಸ್ಥೈರ್ಯದ ಕುರಿತು ಪಾರ್ವತೀದೇವಿ ಕಲಿಸುವ ಅದ್ಭುತ ಪಾಠದ ವಿವರಣೆ ಇಲ್ಲಿದೆ.
GK06 ರತೀದೇವಿಯ ತಪ್ಪೇನು?
ರತೀದೇವಿ ಯಾವ ತಪ್ಪು ಮಾಡಿದ್ದಳು? ಅವಳಿಗೇಕೆ ಪತಿವಿಯೋಗವುಂಟಾಯಿತು? ಕಾಮ ಪ್ರದ್ಯುಮ್ನನಾಗಿ ಹುಟ್ಟುವವರೆಗೆ ಅವಳ ಅವಸ್ಥೆ ಏನಿತ್ತು ಎಂಬೆಲ್ಲ ಪ್ರಶ್ನೆಗಳಿಗೆ ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಉತ್ತರಗಳನ್ನು ನೀಡಿದ್ದಾರೆ. ಆ ಕಥೆಗಳ ನಿರೂಪಣೆ ಇಲ್ಲಿದೆ
GK-05 ರತೀದೇವಿ ಮಾಡಿದ ದಾಂಪತ್ಯಪ್ರದಾಯಕ ಸ್ತೋತ್ರ
ದೇವತೆಗಳಿಗೆ ಮರಣವಿಲ್ಲದ ಕಾರಣಕ್ಕೇ ಅಮರರು ಎಂದು ಕರೆಸಿಕೊಳ್ಳುತ್ತಾರೆ. ಅಂದಮೇಲೆ ದೇವೋತ್ತಮನಾದ ಮನ್ಮಥನನ್ನು ರುದ್ರದೇವರು ಹೇಗೆ ಕೊಲ್ಲಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ವೈಧವ್ಯ ಮತ್ತು ವೈಧುರ್ಯದ ದೋಷವನ್ನು ಪರಿಹಾರ ಮಾಡುವ ರುದ್ರದೇವರ ಸ್ತೋತ್ರದ ಅರ್ಥಾನುಸಂಧಾನದೊಂದಿಗೆ.
GK04 ಕಾಮದಹನ
ರುದ್ರದೇವರು ಕಾಮನನ್ನು ಸಂಹಾರ ಮಾಡಿದ ಘಟನೆಯ ವಿವರ ಇದೆ. ಕಾಮನನ್ನು ಸುಡಲು ಕಾರಣವೇನು ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುವದರೊಂದಿಗೆ.
GK-03 ಗಿರಿಜಾ-ಶಂಕರಸಂವಾದ
ಹಿಮವಂತ ಮತ್ತು ರುದ್ರದೇವರ ನಡುವಿನ ಸಂವಾದ, ಗಿರಿಜಾದೇವಿ ಮತ್ತು ರುದ್ರದೇವರ ನಡುವಿನ ಸಂವಾದ ಹಾಗೂ ರುದ್ರದೇವರು ಆಚರಿಸಿ ತೋರಿಸಿದ ಒಂದು ಮಹತ್ತ್ವದ ಧರ್ಮದ ಆಚರಣೆಯ ನಿರೂಪಣೆ ಇಲ್ಲಿದೆ.
GK-02 ಗಿರಿಜಾಪ್ರಾದುರ್ಭಾವ
ಮನುಷ್ಯಪ್ರಯತ್ನದ ಅನಿವಾರ್ಯತೆ, ಹಿಮವಂತನಲ್ಲಿ ದೇವತೆಗಳ ಪ್ರಾರ್ಥನೆ, ಮೇನಾ-ಹಿಮವಂತರ ಸಂವಾದ, ಗಿರಿಜಾದೇವಿಯ ಪ್ರಾದುರ್ಭಾವ ಎಂಬ ನಾಲ್ಕು ವಿಷಯಗಳು ಈ ಉಪನ್ಯಾಸದಲ್ಲಿವೆ.
GK-01 ರುದ್ರದೇವರ ತಪಸ್ಸು
ಗಿರಿಜಾಕಲ್ಯಾಣಶ್ರವಣದಿಂದ ಉಂಟಾಗುವ ಫಲಗಳು, ರಾಮಚಂದ್ರನ ಧ್ಯಾನ ಮಾಡುತ್ತ ಕುಳಿತಿದ್ದ ರುದ್ರದೇವರ ತಪಸ್ಸಿನ ವರ್ಣನೆ, ಗಿರಿಜಾಕಲ್ಯಾಣದ ನಂತರ ಅವತರಿಸಿದ ರಾಮಚಂದ್ರನ ಧ್ಯಾನವನ್ನು ರುದ್ರದೇವರು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರದೊಂದಿಗೆ ದೇವತೆಗಳಿಗೆ ತಾರಕಾಸುರನ ಪೀಡೆಯುಂಟಾದ ಬಗೆ ಅದಕ್ಕಾಗಿ ಅವರು ಮಾಡಿದ ಪ್ರಯತ್ನಗಳನ್ನು ಇಲ್ಲಿ ವಿವರಿಸಲಾಗಿದೆ.