Bannanje Vimarsha



Upanyasas - VNU162

BV27 ನ್ಯಾಯಸುಧಾ ಅರ್ಥದ ಚರ್ಚೆ - 02

ಶ್ರೀಮದಾಚಾರ್ಯರ “ಮಿಥ್ಯಾಯಾಃ ಸಾಧಕತ್ವಂ ಚ” ಎಂಬ ವಾಕ್ಯಕ್ಕೆ ಟೀಕಾಕೃತ್ಪಾದರು ಶ್ರೀಮನ್ ನ್ಯಾಯಸುಧಾದಲ್ಲಿ ಹೇಳಿರುವ ಅರ್ಥದ ಕುರಿತ ಚರ್ಚೆಯ  ಎರಡನೆಯ ಭಾಗವಿದು. 

4825 Views
Upanyasas - VNU161

BV26 ನ್ಯಾಯಸುಧಾ ಅರ್ಥದ ಚರ್ಚೆ -01

ಶ್ರೀಮದಾಚಾರ್ಯರ “ಮಿಥ್ಯಾಯಾಃ ಸಾಧಕತ್ವಂ ಚ” ಎಂಬ ವಾಕ್ಯಕ್ಕೆ ಟೀಕಾಕೃತ್ಪಾದರು ಶ್ರೀಮನ್ ನ್ಯಾಯಸುಧಾದಲ್ಲಿ ಹೇಳಿರುವ ಅರ್ಥದ ಕುರಿತ ಚರ್ಚೆಯ  ಮೊದಲ ಭಾಗವಿದು. 

5165 Views
Upanyasas - VNU160

BV25 ಶ್ರೀ ರಘುವರ್ಯತೀರ್ಥರು ಮಾಡಿರುವ ಟೀಕಾಕೃತ್ಪಾದರ ಮಹತ್ತರ ಸೇವೆ

ಶ್ರೀ ಹೃಷೀಕೇಶಸಂಸ್ಥಾನ ಪಲಿಮಾರು ಮಠದ ಭೂಷಾಮಣಿಗಳಾದ ಶ್ರೀ ರಘುವರ್ಯತೀರ್ಥಶ್ರೀಪಾದಂಗಳವರು ಮಾಡಿರುವ ಸಾರ್ವಕಾಲಿಕ ಮತ್ತು ಐತಿಹಾಸಿಕ ಶ್ರೀಮಟ್ಟೀಕಾಕೃತ್ಪಾದರ ಮಹತ್ತರ ಆರಾಧನೆಯ ಚಿತ್ರಣ. ತಪ್ಪದೇ ಕೇಳಿ. 

4884 Views
Upanyasas - VNU159

BV24 ಟೀಕಾಕೃತ್ಪಾದರಿಗೆ ಬನ್ನಂಜೆ ಮಾಡಿರುವ ಅವಹೇಳನ

ಬನ್ನಂಜೆ ಟೀಕಾಕೃತ್ಪಾದರನ್ನು ಅದೆಷ್ಟು ಅವಹೇಳನ ಮಾಡುತ್ತಾರೆ ಎನ್ನುವದನ್ನು ಆಧಾರಗಳ ಸಮೇತವಾಗಿ ನಿರೂಪಿಸಿ ಇಲ್ಲಿ ಖಂಡಿಸಲಾಗಿದೆ. 

4112 Views
Upanyasas - VNU158

BV23 ತಿಥಿನಿರ್ಣಯ ಆಚಾರ್ಯರ ಗ್ರಂಥವಲ್ಲ

ತಿಥಿನಿರ್ಣಯ ಎನ್ನುವ ಗ್ರಂಥ ಶ್ರೀಮದಾಚಾರ್ಯರ ರಚನೆ ಎನ್ನುವದು ಬನ್ನಂಜೆಯ ವಾದ. ಆದರೆ ಶ್ರೀ ವಾದಿರಾಜಗುರುಸಾರ್ವಭೌಮರು ಈ ಕೃತಿ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ರಚನೆ ಎಂದು ಸ್ಪಷ್ಟವಾಗಿ ತಮ್ಮ ಏಕಾದಶೀನಿರ್ಣಯ ಗ್ರಂಥದಲ್ಲಿ ಹೇಳಿದ್ದಾರೆ. ಇದರ ಕುರಿತ ಚರ್ಚೆ ಇಲ್ಲಿದೆ. 

2195 Views
Upanyasas - VNU157

BV22 ಪಂಡಿತರ ಬೌದ್ಧಿಕ ದಾಸ್ಯ

ಬನ್ನಂಜೆ ಗೋವಿಂದಾಚಾರ್ಯರು ಪ್ರಮಾಣಪ್ರಮಿತವಾದ ವಿಷಯವನ್ನು ಹೇಳಿದರೆ ಎಲ್ಲರೂ ಆದರದಿಂದ ಒಪ್ಪಬೇಕು, ಸಂಶಯವಿಲ್ಲ. ಆದರೆ, ಕೆಲವು ಪಂಡಿತರು ಹೀನ ಬೌದ್ಧಿಕ ದಾಸ್ಯಕ್ಕೊಳಗಾಗಿ ಬನ್ನಂಜೆ ಹೇಳಿದ್ದನ್ನೆಲ್ಲ ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ, ಬನ್ನಂಜೆಯನ್ನು ಆದರಿಸುವ ಭರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ, ಶ್ರೀ ರಘೂತ್ತಮರಿಗೆ ಅಪಚಾರವನ್ನು ಎಸಗುತ್ತಾರೆ, ಅಷ್ಟೇ ಅಲ್ಲ ಬನ್ನಂಜೆಯ ಪುಸ್ತಕದಲ್ಲಿರುವ ಮುದ್ರಣ ದೋಷವನ್ನೂ ಮೂಲ ಪಾಠ ಎಂದು ಭ್ರಮಿಸಿ ಶ್ರೀ ಹೃಷೀಕೇಶತೀರ್ಥರ ಪಾಠ ಎಂದು ಮುದ್ರಿಸುತ್ತಾರೆ ಎನ್ನುವದನ್ನು ಆಧಾರಗಳ ಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ. 

2720 Views
Upanyasas - VNU156

BV21 ಆ ಹಸ್ತಪ್ರತಿಯನ್ನು ಶ್ರೀ ಹೃಷೀಕೇಶತೀರ್ಥರು ಬರೆದಿಲ್ಲ

ಯಾವ ಹಸ್ತಪ್ರತಿಯನ್ನು ಶ್ರೀ ಹೃಷೀಕೇಶತೀರ್ಥರು ಬರೆದಿದ್ದಾರೆ ಎಂದು ಬನ್ನಂಜೆ ವಾದಿಸುತ್ತಾರೆಯೋ, ಆ ಹಸ್ತಪ್ರತಿಯನ್ನು ಶ್ರೀ ಹೃಷೀಕೇಶತೀರ್ಥರು ಬರೆದದ್ದಲ್ಲ, ಶ್ರೀ ಹೃಷೀಕೇಶತೀರ್ಥರು ಬರೆದ ಶುದ್ಧ ಹಸ್ತಪ್ರತಿಯನ್ನು ನೋಡಿ ಯಾರೋ ಬರೆದುಕೊಂಡಿರುವ ಮಾತೃಕೆಯದು ಎನ್ನುವದನ್ನು ಆಧಾರಗಳ ಸಮೇತವಾಗಿ ಈ ಭಾಗದಲ್ಲಿ ಪ್ರತಿಪಾದಿಸಲಾಗಿದೆ. 

2801 Views
Upanyasas - VNU155

BV20 ಆ ಹಸ್ತಪ್ರತಿ ಪ್ರಾಚೀನರಿಗೆ ಸಮ್ಮತವಲ್ಲ

ಬನ್ನಂಜೆ ಒಂದು ಹಸ್ತಪ್ರತಿಯನ್ನಿಟ್ಟುಕೊಂಡು ಇದು ಶ್ರೀ ಹೃಷೀಕೇಶತೀರ್ಥರ ಹಸ್ತಪ್ರತಿ ಎಂದು ವಾದಿಸುತ್ತಿರುತ್ತಾರೆ. ಅಲ್ಲಿನ ಪಾಠಗಳನ್ನೂ ಶ್ರೀ ಹೃಷೀಕೇಶತೀರ್ಥರ ಪಾಠ ಎಂದೇ ಪ್ರಚಾರ ಮಾಡುತ್ತಿರುತ್ತಾರೆ. ವಸ್ತುಸ್ಥಿತಿಯಲ್ಲಿ ಆ ಹಸ್ತಪ್ರತಿ ಶ್ರೀ ಹೃಷೀಕೇಶತೀರ್ಥರ ಹಸ್ತಪ್ರತಿಯೇ ಅಲ್ಲ ಎನ್ನುವದನ್ನು ಈ ಉಪನ್ಯಾಸ ಮತ್ತು ಮುಂದಿನ ಉಪನ್ಯಾಸಗಳಲ್ಲಿ ಅತ್ಯಂತ ಸಮರ್ಥವಾಗಿ ಪ್ರತಿಪಾದಿಸಲಾಗಿದೆ.  ಬನ್ನಂಜೆಯ ಬಳಿಯಿರುವ ಹಸ್ತಪ್ರತಿಯಲ್ಲಿರುವ ಪಾಠ ಶ್ರೀ ಪದ್ಮನಾಭತೀರ್ಥರಿಗೆ, ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಿಗೆ ಮತ್ತು ಶ್ರೀ ನಾರಾಯಣಪಂಡಿತಾಚಾರ್ಯರಿಗೆ ಸಮ್ಮತವೇ ಅಲ್ಲ ಎನ್ನುವದನ್ನು ಈ ಉಪನ್ಯಾಸದಲ್ಲಿ ಆಧಾರಗಳ ಸಮೇತವಾಗಿ ಪ್ರತಿಪಾದಿಸಲಾಗಿದೆ. ಈ ಉಪನ್ಯಾಸ ಮತ್ತು ಪುಸ್ತಕ ಪ್ರಕಟವಾದದ್ದು 2014ರ ನವೆಂಬರಿನಲ್ಲಿ.  ಬನ್ನಂಜೆಗೆ ಇನ್ನೂ ಉತ್ತರಿಸಲು ಸಾಧ್ಯವಾಗಿಲ್ಲ. ಸಾಧ್ಯವೂ ಇಲ್ಲ. 

2092 Views
Upanyasas - VNU154

BV19 ಬನ್ನಂಜೆಯಿಂದ ಮಾಧ್ವತತ್ವಗಳ ಕುರಿತ ಅವಹೇಳನ

ಬನ್ನಂಜೆ ಗೋವಿಂದಾಚಾರ್ಯರಿಗೆ ಮಾಧ್ವ ತತ್ವಗಳ ಇರುವ ತಿರಸ್ಕಾರವನ್ನು, , ಮಾಧ್ವ ಜ್ಞಾನಿಗಳನ್ನು ಅವರು ಅವಹೇಳನ ಮಾಡುವದನ್ನು ಅನೇಕ ಆಧಾರಗಳ ಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ.

2761 Views
Upanyasas - VNU153

BV18 ಸ್ಮರಣಾಚ್ಚ ಎಂಬ ಸೂತ್ರದ ಕುರಿತ ಚರ್ಚೆ

ಸ್ಮರಣಾಚ್ಚ ಎನ್ನುವ ಸೂತ್ರವನ್ನೂ ಸಹಿತ ಬ್ರಹ್ಮಸೂತ್ರ ಎಂದು ಬನ್ನಂಜೆ ಒಪ್ಪುವದಿಲ್ಲ. ಬನ್ನಂಜೆ ನೀಡುವ ಕಾರಣಗಳು ಪೇಲವ ಎನ್ನುವದನ್ನು ಪ್ರತಿಪಾದಿಸಿ ಅದನ್ನು ಸೂತ್ರ ಎಂದು ಈ ಭಾಗದಲ್ಲಿ ಪ್ರತಿಪಾದಿಸಲಾಗಿದೆ. ಹಿಂದಿನ ಚರ್ಚೆಯನ್ನು ಕೇಳಿದ ನಂತರವೇ ಇದನ್ನು ಕೇಳಿ. ಪೂರ್ಣವಾಗಿ ಅರ್ಥವಾಗುತ್ತದೆ. 

1730 Views
Upanyasas - VNU152

BV17 ಯುಕ್ತೇಶ್ಚ ಎನ್ನುವ ಸೂತ್ರದ ಚರ್ಚೆ

ಬ್ರಹ್ಮಸೂತ್ರಗಳ ದ್ವಿತೀಯಾಧ್ಯಾಯದಲ್ಲಿ ಯುಕ್ತೇಶ್ಚ  ಎನ್ನುವದು ಸೂತ್ರವೇ ಅಲ್ಲ, ಭಾಷ್ಯವಚನವನ್ನೇ ಸೂತ್ರ ಎಂದು ಎಲ್ಲರೂ ಭ್ರಮಿಸಿದ್ದಾರೆ ಎನ್ನುವದು ಬನ್ನಂಜೆಯ ವಾದ. ಇದಕ್ಕೆ ಬನ್ನಂಜೆ ನೀಡಿರುವ ಕಾರಣಗಳು ಅದೆಷ್ಟು ಬಾಲಿಶ ಮತ್ತು ಪೇಲವ ಎನ್ನುವದನ್ನು ಪ್ರತಿಪಾದಿಸಿ, ಶ್ರೀಮದಾಚಾರ್ಯರ ಸಿದ್ಧಾಂತವನ್ನು ಸಮರ್ಥಿಸಲಾಗಿದೆ. ಸುಲಭವಾಗಿ ಅರ್ಥವಾಗುವ ವಿಷಯ, ತಪ್ಪದೇ ಕೇಳಿ. 

1917 Views
Upanyasas - VNU151

BV16 ಬನ್ನಂಜೆಯ ಅಪಪಾಠಗಳು - 2

ಶ್ರೀಮದಾಚಾರ್ಯರ ಭಾಷ್ಯದ ಜೊತೆಯಲ್ಲಿ ಶಂಕರರ ಪಾಠಗಳನ್ನು ಬನ್ನಂಜೆ ಸೇರಿಸಿ ಅದನ್ನು ಮಾಧ್ವಪಾಠ ಎಂದು ಕರೆಯುತ್ತಾರೆ, ಅಷ್ಟರ ಮಟ್ಟಿಗೆ ಅವರಿಗೆ ಪೂರ್ವಾಗ್ರಹವಿದೆ ಎನ್ನುವದನ್ನು ಆಧಾರ ಸಮೇತವಾಗಿ  ಪ್ರತಿಪಾದಿಸುವ ಭಾಗವಿದು. ಗೀತೆಯಲ್ಲಿ ಯ ಏನಮ್ ಎನ್ನುವದು ಶ್ರೀಮದಾಚಾರ್ಯರ ಪಾಠ. ಯ ಏವಂ ಎನ್ನುವದು ಶಂಕರರ ಪಾಠ. ಬನ್ನಂಜೆ ಶಂಕರರ ಪಾಠವನ್ನೇ ಮಧ್ವಭಾಷ್ಯದ ಜೊತೆಯಲ್ಲಿ ಮುದ್ರಿಸಿದ್ದಾರೆ ಎನ್ನುವದನ್ನು ತೋರಿಸಿ, ಯ ಏನಮ್ ಎನ್ನುವ ಪಾಠವೇ ಶ್ರೀಮದಾಚಾರ್ಯರಿಗೆ ಸಮ್ಮತವಾದದ್ದು ಎಂದು ಇಲ್ಲಿ ಸಮರ್ಥಿಸಲಾಗಿದೆ. 

3062 Views
Upanyasas - VNU150

BV15 ಬನ್ನಂಜೆಯ ಅಪಪಾಠಗಳು

ಬನ್ನಂಜೆ ನಿರ್ಣಯಿಸುವ ಬಹುತೇಕ ಪಾಠಗಳು ಅಪಪಾಠಗಳೇ ಆಗಿವೆ. ಮೂಲಗ್ರಂಥಗಳಿಗೆ ಅಪಚಾರವನ್ನೇ ಎಸಗುತ್ತವೆ ಎನ್ನುವದನ್ನು ಆಧಾರಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ. 

2914 Views
Upanyasas - VNU149

BV14 ಬನ್ನಂಜೆಯ ಪೂರ್ವಾಗ್ರಹ

ಬನ್ನಂಜೆ ತಾಡೆವಾಲೆಗಳ ಆಧಾರದ ಮೇಲಷ್ಟೇ ಪಾಠಗಳನ್ನು ನಿರ್ಣಯಿಸುವದಿಲ್ಲ, ತಮ್ಮ ಪೂರ್ವಾಗ್ರಹದಿಂದ ಪಾಠಗಳನ್ನು ನಿರ್ಣಯಿಸುತ್ತಾರೆ ಎನ್ನುವದನ್ನು ಆಧಾರಸಮೇತವಾಗಿ ಇಲ್ಲಿ ಸಾಬೀತುಪಡಿಸಲಾಗಿದೆ. 

2129 Views
Upanyasas - VNU148

BV13 ಬನ್ನಂಜೆ ಮಾಡಿರುವ ಪ್ರಕ್ಷೇಪ

ಪಾಠನಿರ್ಣಯದ ಸಂದರ್ಭದಲ್ಲಿ ಬನ್ನಂಜೆ ಪ್ರಕ್ಷೇಪಗಳನ್ನು ಮಾಡುತ್ತಾರೆ, ವ್ಯತ್ಯಾಸಗಳನ್ನು ಮಾಡುತ್ತಾರೆ ಎನ್ನುವದನ್ನು ಆಧಾರದೊಂದಿಗೆ ಈ ಉಪನ್ಯಾಸದಲ್ಲಿ ಸಾಬೀತುಪಡಿಸಲಾಗಿದೆ.   ಯಮಜ್ಯಾಮುದವಾಹ ಎಂಬ ಶ್ರೀ ಮಧ್ವವಿಜಯದ ಮಾತನ್ನು ಯಮಜಾಮ್ಯುದವಾಸ ಎಂದು ಬನ್ನಂಜೆ ಮಾಡಿರುವ ಬದಲಾವಣೆ ಮಧ್ವವಿಜಯದ ಸೊಬಗಿಗೆ ಮತ್ತು ಅರ್ಥಕ್ಕೆ ಅದೆಂತಹ ಅಪಚಾರವನ್ನು ಮಾಡಿದೆ ಎನ್ನುವದನ್ನು ನಾವಿಲ್ಲಿ ಮನಗಾಣುತ್ತೇವೆ. 

2234 Views
Upanyasas - VNU147

BV12 ಸೂರ್ಯ ನುಡಿದ ಸಾಕ್ಷಿ

ದೇವಕಾರ್ಯ ಪಿತೃಕಾರ್ಯಗಳಿಗೆ ಸೌರಮಾನವನ್ನು ಅನುಸರಿಸಬಾರದು, ಚಾಂದ್ರಮಾನವನ್ನೇ ಅನುಸರಿಸಬೇಕು ಎಂಬ ಶ್ರೀಮದಾಚಾರ್ಯರ ಸಿದ್ಧಾಂತವನ್ನು ಸೌರಮಾನದ ಅಧಿಪತಿಯಾದ ಸ್ವಯಂ ಸೂರ್ಯನೇ ಪ್ರತೀವರ್ಷವೂ ಅನುಸರಿಸುವ ಸಾಕ್ಷಿಯನ್ನು ಇಲ್ಲಿ ತೋರಿಕೊಡಲಾಗಿದೆ. ತಪ್ಪದೇ ಕೇಳಿ. 

2732 Views
Upanyasas - VNU146

BV11 ಸಂನ್ಯಾಸಪದ್ಧತಿಯ ಚರ್ಚೆ

“ಸಿಂಹಮಾಸೇ ತು ರೋಹಿಣ್ಯಾ ಯುತಾಂ ಕೃಷ್ಣಾಷ್ಟಮೀಂ ಪುಮಾನ್”   ಎಂಬ ಸಂನ್ಯಾಸಪದ್ಧತಿಯ ವಾಕ್ಯ ಇಡಿಯ ಕೃಷ್ಣಾಷ್ಟಮಿಯ ಆಚರಣೆಯ ಕುರಿತ ಚರ್ಚೆಯಲ್ಲಿ ಅತ್ಯಂತ ಮಹತ್ತ್ವದ್ದು. ಈ ವಾಕ್ಯದ ಅರ್ಥವಿವರಣೆ ಈ ಉಪನ್ಯಾಸದಲ್ಲಿದೆ. 

2785 Views
Upanyasas - VNU145

BV10 ಜಯಂತೀನಿರ್ಣಯದ ಚರ್ಚೆ

  ಜಯಂತೀ ನಿರ್ಣಯದಲ್ಲಿ ಶ್ರೀಮದಾಚಾರ್ಯರು ಮಾಸವನ್ನು ಯಾಕೆ ಉಲ್ಲೇಖಿಸಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡುವದರೊಂದಿಗೆ “ರೋಹಿಣ್ಯಾಮರ್ಧರಾತ್ರೇ ತು ಯದಾ ಕಾಲಾಷ್ಟಮೀ ಭವೇತ್” ಎಂಬ ಆಚಾರ್ಯರ ವಾಕ್ಯದ ಅರ್ಥವಿವರಣೆ ಈ ಉಪನ್ಯಾಸದಲ್ಲಿದೆ. 

2866 Views
Upanyasas - VNU144

BV09 ತಾತ್ಪರ್ಯನಿರ್ಣಯ ವಾಕ್ಯದ ಚರ್ಚೆ

ಕೃಷ್ಣ ಹುಟ್ಟಿದ್ದು ಭಾದ್ರಪದದಲ್ಲಿ, ಶ್ರಾವಣದಲ್ಲಿ ಅಲ್ಲ ಎನ್ನುವದು ಬನ್ನಂಜೆಯ ನಿಲುವು. ಇದಕ್ಕೆ ಕಾರಣ ತಾತ್ಪರ್ಯನಿರ್ಣಯದ ಯಸ್ಮಿನ್ನಬ್ಧೇ ಭಾದ್ರಪದೇ ಎಂಬ ವಾಕ್ಯ. ಈ ವಾಕ್ಯದ ಅರ್ಥದ ವಿಸ್ತೃತವಾದ ಚರ್ಚೆಯನ್ನು ಮಾಡಿ, ಶ್ರೀ ವೇದಾಂಗತೀರ್ಥರು ಮುಂತಾದ ಪ್ರಾಚೀನ ಆಚಾರ್ಯರ ವಾಕ್ಯಗಳ ಮುಖಾಂತರ ಆಚಾರ್ಯರ ಅಭಿಪ್ರಾಯವನ್ನು ತಿಳಿಸಿ ಶ್ರೀಕೃಷ್ಣ ಅವತರಿಸಿದ್ದು ಶ್ರಾವಣದಲ್ಲಿಯೇ, ಭಾದ್ರಪದದಲ್ಲಿ ಅಲ್ಲ ಎಂದು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ.   ಇದರ ಕುರಿತ ಲೇಖನ VNA084

3255 Views
Upanyasas - VNU143

BV08 ಸೌರಮಾನದ ಆಚರಣೆ ತಪ್ಪು

ಸೌರಮಾನದ ರೀತಿಯ ಆಚರಣೆ ಶ್ರೀಮದಾಚಾರ್ಯರಿಗೆ ಸಮ್ಮತವಲ್ಲ, ಚಾಂದ್ರಮಾನದ ಆಚರಣೆಯೇ ಸಮ್ಮತ ಎಂದು ಆಚಾರ್ಯರ ಮತ್ತು ಶ್ರೀ ವಾದಿರಾಜರ ವಾಕ್ಯಗಳಿಂದ ಇಲ್ಲಿ ಸಮರ್ಥಿಸಲಾಗಿದೆ. 

3274 Views
Upanyasas - VNU142

BV07 ಕೃಷ್ಣಾಷ್ಟಮೀ ವಿವಾದ

ಕೃಷ್ಣಾಷ್ಟಮಿಯ ಆಚರಣೆಯ ಕುರಿತು ಬನ್ನಂಜೆಯ ವಿಚಾರಗಳ ಸಂಗ್ರಹ ಇಲ್ಲಿದೆ. 

2924 Views
Upanyasas - VNU141

BV06 ಅಚ್ಯುತಪ್ರೇಕ್ಷ ಎಂಬ ಹೆಸರೇ ಸರಿ

ಶ್ರೀಮದಾಚಾರ್ಯರ ಗುರುಗಳ ಹೆಸರು ಅಚ್ಯುತಪ್ರೇಕ್ಷರೆಂದೋ, ಅಚ್ಯುತಪ್ರಜ್ಞರೆಂದೋ ಎಂಬ ವಿವಾದದ ಕುರಿತ ಚರ್ಚೆ ಇಲ್ಲಿದೆ. ಶ್ರೀ ನಾರಾಯಣಪಂಡಿತಾಚಾರ್ಯರ ಮತ್ತು ಮಾಧ್ವಪರಂಪರೆಯ ಜ್ಞಾನಿಗಳ ವಚನದ ಆಧಾರಗಳಿಂದ ಅವರ ಹೆಸರು ಅಚ್ಯುತಪ್ರೇಕ್ಷರೆಂದೇ ಎಂದು ಇಲ್ಲಿ ಸಮರ್ಥವಾಗಿ ಪ್ರತಿಪಾದಿಸಲಾಗಿದೆ. 

1470 Views
Upanyasas - VNU140

BV05 ಮಧ್ವವಿಜಯ ಎಂಬ ಹೆಸರೇ ಸರಿ

ಮಧ್ವವಿಜಯ ಎನ್ನುವ ಹೆಸರೇ ಸರಿ, ಸುಮಧ್ವವಿಜಯ ಎನ್ನುವದು ಆ ಕಾವ್ಯದ ಹೆಸರಲ್ಲ ಎನ್ನುವ ಬನ್ನಂಜೆಯ ಸಂಶೋಧನೆಯನ್ನು ಪ್ರಾಚೀನ ಆಚಾರ್ಯರ ವಾಕ್ಯಗಳಿಂದ ಸಮರ್ಥಿಸುವ ಭಾಗ.

2683 Views
Upanyasas - VNU139

BV04 ದ್ವಾದಶಾದಿತ್ಯರ ವಿವಾದ

ದ್ವಾದಶಾದಿತ್ಯರ ಕುರಿತು ಶಾಸ್ತ್ರ ನೀಡುವ ಚಿತ್ರಣವನ್ನು ಪ್ರತಿಪಾದಿಸುವ ಭಾಗ, ಪ್ರಳಯಕಾಲದ ಕುರಿತು ಪುರಾಣಗಳು ತಿಳಿಸುವ ಅನೇಕ ಅಪೂರ್ವ ವಿಷಯಗಳ ನಿರೂಪಣೆಯೊಂದಿಗೆ.

1612 Views
Upanyasas - VNU138

BV03 ಬನ್ನಂಜೆ ಉತ್ತಮ ಕವಿ

ಬನ್ನಂಜೆ ಗೋವಿಂದಾಚಾರ್ಯರ ಕವಿತಾಶಕ್ತಿ, ಅನುವಾದಸಾಮರ್ಥ್ಯ ಮತ್ತು ಗ್ರಂಥಸಂಪಾದನಾಕೌಶಲದ ಕುರಿತ ಮುಕ್ತಪ್ರಶಂಸೆ ಈ ಭಾಗದಲ್ಲಿ.

2253 Views
Upanyasas - VNU137

BV02 ಸಂಸ್ಕೃತಕ್ಕೆ ಲಿಪಿ ಇದೆ

ಸಂಸ್ಕೃತಕ್ಕೆ ಲಿಪಿಯಿದೆಯೋ ಇಲ್ಲವೋ ಎನ್ನುವ ವಿಷಯದ ಕುರಿತ ಚರ್ಚೆಯಲ್ಲಿ ಹನುಮಂತದೇವರು ಪುಸ್ತಕವನ್ನು ಹಿಡಿದು ಅಧ್ಯಯನ ಮಾಡುತ್ತಿದ್ದರು ಎಂಬ ರಾಮಾಯಣದ ವಚನ, ಮತ್ತು ಹಯಗ್ರೀವದೇವರ ಕೈಯಲ್ಲಿ ಪುಸ್ತಕವಿದೆ ಎಂಬ ಆಚಾರ್ಯರ ವಚನಗಳ ಆಧಾರದ ಮೇಲೆ ಸಂಸ್ಕೃತಕ್ಕೆ ಲಿಪಿಯಿದೆ ಎಂದು ಸಮರ್ಥವಾಗಿ ಪ್ರತಿಪಾದಿಸಲಾಗಿದೆ.

2708 Views
Upanyasas - VNU136

BV01 ಮುನ್ನುಡಿ

ಬನ್ನಂಜೆ ಗೋವಿಂದಾಚಾರ್ಯರ ಸಂಶೋಧನೆಗಳ ಸರಿತಪ್ಪುಗಳನ್ನು ವಿಮರ್ಶಿಸುವ ಹಿಂದಿನ ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸುವಂತಹ ಭಾಗ. 

2122 Views
Upanyasas - VNU135

ರಾಮಾಯಣದ ಕಾಲ ನಿರ್ಣಯ

ಬನ್ನಂಜೆ ಗೋವಿಂದಾಚಾರ್ಯರ ಪ್ರಕಾರ ರಾಮಾಯಣ ನಡೆದದ್ದು 24ನೆಯ ತ್ರೇತಾಯುಗದಲ್ಲಿ. ಶ್ರೀ ಯಾದವಾರ್ಯರು 28ನೆಯ ಮಹಾಯುಗದಲ್ಲಿಯೇ ರಾಮಾಯಣ ನಡೆದದ್ದು ಎನ್ನುತ್ತಾರೆ. ಶ್ರೀಮದಾಚಾರ್ಯರ ವಚನಗಳ ಆಧಾರ ಮತ್ತು ಯುಕ್ತಿಗಳ ಆಧಾರದಿಂದ 28ರಲ್ಲಿಯೇ ರಾಮಾವತಾರವಾದದ್ದು ಎಂದು ಇಲ್ಲಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನ VNA135

4327 Views