ಪ್ರಭಾತಪಂಚಕಮ್ 05/05
ಇಡಿಯ ಸ್ತೋತ್ರಪ್ರಪಂಚದಲ್ಲಿಯೇ ಅಪೂರ್ವವಾದ ಒಂದು ಪರಮಾದ್ಭುತಪ್ರಾರ್ಥನೆಯನ್ನು ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ನಮಗಿಲ್ಲಿ ತಿಳಿಸಿಕೊಂಡುತ್ತಾರೆ. ನಮ್ಮ ದಿವಸವನ್ನಲ್ಲ, ಇಡಿಯ ಜೀವನವನ್ನೇ ಪವಿತ್ರಗೊಳಿಸುವ, ಸಾರ್ಥಕಗೊಳಿಸುವ ದಿವ್ಯ ಪ್ರಾರ್ಥನೆಯಿದು. ತಪ್ಪದೇ ಕೇಳಿ.
ಪ್ರಭಾತಪಂಚಕಮ್ 04/05
ಶ್ರೀಹರಿನಾಮಸ್ಮರಣೆಯ ಕ್ರಮದ ವಿವರಣೆ ಇಲ್ಲಿದೆ. ಶ್ರೀಮದಾಚಾರ್ಯರು ಕೃಷ್ಣಾಮೃತಮಹಾರ್ಣವದಲ್ಲಿ ತಿಳಿಸಿ ಹೇಳಿದ ಪವಿತ್ರತತ್ವಗಳ ಅನುಸಂಧಾನದೊಂದಿಗೆ.
ಪ್ರಭಾತಪಂಚಕಮ್ 03/05
ಬೆಳಿಗ್ಗೆ ಏಳುತ್ತಿದ್ದಂತೆ ಮಾಡಬೇಕಾದ, ಪರಮಪವಿತ್ರ ನದಿಗಳ ಸ್ಮರಣೆಯ ಕ್ರಮವನ್ನು ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದಂಗಳವರು ನಮಗಿಲ್ಲಿ ಕಲಿಸುತ್ತಾರೆ. ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರು ಸಂಗ್ರಹಿಸಿ ನೀಡಿರುವ ನದೀತಾರತಮ್ಯಸ್ತೋತ್ರದ ವಿವರಣೆಯೂ ಇಲ್ಲಿದೆ.
ಪ್ರಭಾತಪಂಚಕಮ್ 02/05
ನಿದ್ರೆಯನ್ನು ಗೆಲ್ಲಲು ಯಾವ ಭಗವದ್ರೂಪದ ಚಿಂತನೆ ಮಾಡಬೇಕು, ಬೆಳಿಗ್ಗೆ ಎದ್ದ ತಕ್ಷಣ ದುಷ್ಟರನ್ನು ಕಂಡರೆ, ದುಷ್ಟರ ನೆನಪು ಮಾಡಿಕೊಂಡೇ ಎದ್ದರೆ ಆಗುವ ಅಶುಭದ ಪರಿಹಾರಕ್ಕೆ ಯಾವ ರೂಪವನ್ನು ಚಿಂತಿಸಬೇಕು, ಸಂಸಾರದ ಭಾರವನ್ನು ಹೊತ್ತು ಸುಗಮವಾಗಿ ಸಾಧನೆಯ ಮಾರ್ಗದಲ್ಲಿ ನಡೆಯಲು ಯಾರನ್ನು ಸ್ಮರಿಸಬೇಕು, ಬಯಸಿದ್ದನ್ನು ಪಡೆಯಲು ಯಾರನ್ನು ಬೆಳಿಗ್ಗೆ ಏಳುತ್ತಿದ್ದಂತೆ ನೆನೆಯಬೇಕು, ಯಾವ ಮಂಗಳರೂಪದ ಸ್ಮರಣೆಯಿಂದ ಇಡಿಯ ದಿವಸ ಮಂಗಲಮಯವಾಗುತ್ತದೆ ಎಂಬ ಪ್ರಶ್ನೆಗಳಿಗೆ ಶ್ರೀ ಲಕ್ಷ್ಮೀವಲ್ಲಭತೀರ್ಥಶ್ರೀಪಾದರು ನೀಡಿರುವ ಉತ್ತರದ ವಿವರಣೆ ಈ ಉಪನ್ಯಾಸದಲ್ಲಿದೆ.
ಪ್ರಭಾತಪಂಚಕಮ್ 01/05
ನಮಗೆ ನಾವು ಸುಪ್ರಭಾತವನ್ನು ಹೇಳಿಕೊಳ್ಳಬೇಕು ಎಂದು ಆದೇಶಿಸಿದವರು ಶ್ರೀ ವೇದವ್ಯಾಸದೇವರು. ಆ ಮಹಾಧರ್ಮವನ್ನು ಆಚರಿಸಿ ತೋರಿದವರು ರುದ್ರದೇವರು. ಈ ಸತ್ಸಂಪ್ರದಾಯವನ್ನರಿತ ನಮ್ಮ ಶ್ರೀಮದ್ ವ್ಯಾಸರಾಜಸಂಸ್ಥಾನದ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀಲಕ್ಷ್ಮೀವಲ್ಲಭತೀರ್ಥಶ್ರೀಪಾದರು ಇಡಿಯ ಮಾಧ್ವಪರಂಪರೆಯಲ್ಲಿಯೇ ಅತ್ಯಪೂರ್ವವಾದ ಒಂದು ಪ್ರಭಾತಪಂಚಕವನ್ನು ಬರೆದು ನೀಡಿದ್ದಾರೆ. ಅದ್ಭುತಾರ್ಥಗರ್ಭಿತವಾಗ ಆ ಸ್ತೋತ್ರದ ಮೊದಲ ಶ್ಲೋಕದ ಅನುವಾದ ಈ ಲೇಖನದಲ್ಲಿದೆ, ಪರಮಾತ್ಮನ ದಶಾವತಾರಗಳಲ್ಲಿ ನಾವು ಮಾಡಬೇಕಾದ ಪ್ರಾರ್ಥನೆಯ ಚಿಂತನೆಯೊಂದಿಗೆ.