ಮುಟ್ಟಬೇಡಿ ಮುಟ್ಟಬೇಡಿ ಮುರಹರನ ದಾಸರನು
ಸಾವಿನ ಭಯವನ್ನು ಕಳೆದುಕೊಳ್ಳಬೇಕು ಎಂದು ಭಾಗವತ ಆದೇಶಿಸುತ್ತದೆ — “ಅಂತಕಾಲೇ ತು ಪುರಷ ಆಗತೇ ಗತಸಾಧ್ವಸಃ” ಎಂದು. ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲದ ಈ ಸಾವಿನ ಭಯವನ್ನು ಗೆಲ್ಲುವ ಕ್ರಮವನ್ನು ಭಗವದ್ಗೀತೆ ಮತ್ತು ದಾಸಸಾಹಿತ್ಯ ತಿಳಿಸಿರುವ ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಶ್ರೀ ಕನಕದಾಸಾರ್ಯರ “ಮುಟ್ಟಬೇಡಿ ಮುಟ್ಟಬೇಡಿ” ಎಂಬ ಹಾಡಿನ ಅರ್ಥಾನುಸಂಧಾನದೊಂದಿಗೆ.
ಜಾಗು ಮಾಡದೇ ಎಂದರೇನು?
“ವಿಜಯವಿಠ್ಠಲನಂಘ್ರಿ ಜಾಗು ಮಾಡದೇ ಭಜಿಪ ಭಾಗ್ಯವನು ಕೊಡು ಶಂಭೋ” ಎಂಬ ಸಾಲಿನಲ್ಲಿ ಜಾಗು ಮಾಡದೇ ಎಂದರೆ ಅರ್ಥವೇನು?
ಕಾಲನಿಯಾಮಕ ಹರಿಯ ಕುರಿತು ತಿಳಿಸಿ
ಆಚಾರ್ಯರೇ ನಮಸ್ಕಾರಗಳು. ಶ್ರೀಜಗನ್ನಾಥದಾಸಾರ್ಯರು ತವ ದಾಸೋಹಂ ಎಂಬ ಪದ್ಯದಲ್ಲಿ ಬಳಸಿರುವ ಈ ಶಬ್ದಗಳ ಅರ್ಥವನ್ನು ದಯವಿಟ್ಟು ತಿಳಿಸಿ. ಕಾಲನಿಯಾಮಕ, ಕಾಲಾಂತರ್ಗತ, ಕಾಲಾತೀತ, ತ್ರಿಕಾಲಜ್ಞ ಕಾಲೋತ್ಪಾದಕ, ಕಾಲಪ್ರವರ್ತಕ, ಕಾಲನಿವರ್ತಕ, ಕಾಲಮೂರ್ತಿ ತವ ದಾಸೋಹಂ. — ಜಯಶ್ರೀ, ಬೆಂಗಳೂರು.