02/02 ಪರಶುರಾಮವೈಭವ
ರೇಣುಕಾ ಜಮದಗ್ನಿಯರ ದಾಂಪತ್ಯ, ರೇಣುಕೆಯ ಶಿರಶ್ಛೇದದ ಹಿಂದಿರುವ ಕಾರಣಗಳು, ನಾವು ತಿಳಿಯಬೇಕಾದ ಮಹತ್ತ್ವದ ವಿಷಯಗಳು, ಕಾರ್ತವೀರ್ಯಾರ್ಜುನನ ಅಪರಾಧ, ಪರಶುರಾಮ ಅವನನ್ನು ಸಂಹಾರ ಮಾಡಿದ ಬಗೆ, ಜಮದಗ್ನಿಯ ವಧೆ, ಕ್ಷತ್ರಿಯವಂಶಗಳ ವಿನಾಶ, ಪರಶುರಾಮದೇವರ ಯುದ್ಧವೈಭವ ಹಾಗೂ ಯಜ್ಞವೈಭವ, ಪರಶುರಾಮದೇವರ ಅನುಗ್ರಹವನ್ನು ಪಡೆಯಬೇಕಾದರೆ ನಮ್ಮಲ್ಲಿರಬೇಕಾದ ಸದ್ಗುಣ ಯಾವುದು ಎಂದು ಶ್ರೀಮದಾಚಾರ್ಯರು ತಿಳಿಸಿರುವ ತತ್ವ ಮುಂತಾದ ವಿಷಯಗಳನ್ನು ವಿವರಿಸಿ ಈ ಉಪನ್ಯಾಸವನ್ನು ಗುರ್ವಂತರ್ಯಾಮಿಗೆ ಸಮರ್ಪಿಸಲಾಗಿದೆ.
01/02 ಪರಶುರಾಮ ಪ್ರಾದುರ್ಭಾವ
ಅಕ್ಷಯ ತೃತೀಯಾ, ಶ್ರೀ ಪರಶುರಾಮದೇವರು ಅವತರಿಸಿದ ಪರಮಪವಿತ್ರ ದಿವಸ. ಪರಶುರಾಮದೇವರ ಶಿಷ್ಯರಾದ ಶ್ರೀ ಅಕೃತವ್ರಣ ಎಂಬ ಋಷಿಗಳು ಪಾಂಡವರಿಗೆ ಹೇಳಿದ ಪರಶುರಾಮದೇವರ ಕಥೆಯ ಉಪನ್ಯಾಸ ಇಂದಿನ ಜ್ಞಾನಪುಷ್ಪ. ಆಲಿಸಿ.
ಜಮದಗ್ನಿಋಷಿಗಳಿಗೆ ಹಸುವನ್ನು ಕಾಪಾಡುವಷ್ಟು ಶಕ್ತಿ ಇರಲಿಲ್ಲವೇ?
ಶ್ರೀ ಜಮದಗ್ನಿಋಷಿಗಳಿಗೆ ಸತ್ತ ತಮ್ಮ ಹೆಂಡತಿಯನ್ನು ಬದುಕಿಸುವಷ್ಟು ಸಾಮರ್ಥ್ಯವಿದ್ದಾಗ ಕಾರ್ತವೀರ್ಯಾರ್ಜುನ ಹಸುವನ್ನು ಸೆಳೆದೊಯ್ಯಬೇಕಾದರೆ ನಿಗ್ರಹಿಸುವ ಶಕ್ತಿ ಇರಲಿಲ್ಲವೇ? ವಿಜಯ್ ಕುಮಾರ್, ಬೆಂಗಳೂರು.
ಪರಶುರಾಮದೇವರು ತಂದೆಯನ್ನೇಕೆ ಬದುಕಿಸಲಿಲ್ಲ?
“ಪರಶುರಾಮದೇವರಿಗೆ ತಾಯಿಯನ್ನು ಬದುಕಿಸುವ ಸಾಮರ್ಥ್ಯವಿತ್ತು. ಅಂದಮೇಲೆ ತಂದೆಯನ್ನೂ ಬದುಕಿಸುವ ಶಕ್ತಿಯೂ ಇತ್ತು. ಯಾಕಾಗಿ ಬದುಕಿಸಲಿಲ್ಲ” — ಜಗನ್ನಾಥ್, ಬೆಂಗಳೂರು.
ಪರಶುರಾಮಜಯಂತಿಯನ್ನು ಎಂದು ಆಚರಿಸಬೇಕು?
ಆಚಾರ್ಯರೇ, ತಾವು ಉಪನ್ಯಾಸದಲ್ಲಿ ಅಕ್ಷಯತೃತೀಯಾದಂದು ಪರಶುರಾಮಜಯಂತಿ ಎಂದು ಹೇಳಿದ್ದೀರಿ. ಪಂಚಾಂಗದಲ್ಲಿ ದ್ವಿತೀಯಾ ತಿಥಿ ಇರುವ ದಿವಸ (28/4/2017) ಪರಶರುರಾಮ ಜಯಂತಿ ಎಂದೂ ಹಾಗೂ ಶನಿವಾರ 29/4/2017 ಅಕ್ಷಯ ತೃತೀಯಾ ಎಂದು ಮುದ್ರಿಸಿದ್ದಾರೆ. ದಯವಿಟ್ಟು ಗೊಂದಲ ಪರಿಹರಿಸಿ. — ನರಸಿಂಹ ಮೂರ್ತಿ, ಕೋಲಾರ.