21/21 ಗುರ್ವಂತರ್ಯಾಮಿಗೆ ಸಮರ್ಪಣೆ
ಶ್ರೀ ವಿಜಯರಾಯರ ಪರಮಾನುಗ್ರಹದಿಂದ ನಡೆದಿರುವ, ಅವರು ರಚಿಸಿರುವ ಬ್ಯಾಸರದೇ ಭಜಿಸಿರೋ ಎಂಬ ಕೃತಿಯ ಅರ್ಥಾನುಸಂಧಾನದ ಸಮರ್ಪಣೆ
20/21 ಅವರ ಸಾಹಿತ್ಯದ ಕುರಿತು
ಶ್ರೀ ಪುರಂದರದಾಸರ ದಿವ್ಯ ಸಾಹಿತ್ಯದ ಕುರಿತಾದ ಒಂದು ಚಿಂತನೆ ಇಲ್ಲಿದೆ.
19/21 ನಾರದರ ಮಾಹಾತ್ಮ್ಯ
ಎಲ್ಲ ಲೋಕಗಳನ್ನು ಸಂಚರಿಸುವ ನಾರದರು ಒಮ್ಮೆ ನರಕಕ್ಕೂ ಭೇಟಿ ನೀಡಿದಾಗ ಅಲ್ಲಿದ್ದ ದುಃಖಿಜನರನ್ನು ಕಂಡು ಮರುಕದಿಂದ ಅವರನ್ನು ತಮ್ಮ ಹರಿನಾಮಸ್ಮರಣೆಯ ಶಕ್ತಿಯಿಂದಲೇ ಉದ್ಧರಿಸುತ್ತಾರೆ. ವಾಯುಪುರಾಣದಲ್ಲಿ ಬಂದಿರುವ ಈ ದಿವ್ಯಘಟನೆಯ ವಿವರ ಇಲ್ಲಿದೆ. ಆ ದಿವಸ ನರಕದಲ್ಲಿ ತೊಳಲುತ್ತಿದ್ದವರನ್ನು ಉದ್ದರಿಸಿದ ನಾರದರು ಸಂಸಾರದಲ್ಲಿ ಬಳಲುತ್ತಿರುವ ಸಜ್ಜನರನ್ನು ಉದ್ಧರಿಸಲೋಸುಗ ಶ್ರೀಪುರಂದರದಾಸರಾಗಿ ಅವತರಿಸಿ ಬಂದರು ಎಂಬ ಅವರ ಕಾರುಣ್ಯದ ಚಿಂತನೆಯ ಅಂಗವಾಗಿ.
18/21 ಪುರಂದರ ದಾಸರ ಸ್ವರೂಪ
ಶ್ರೀ ಪುರಂದರದಾಸರು ನಾರದರ ಅವತಾರ ಎಂಬ ಪರಮಮಂಗಳ ವಿಷಯವನ್ನು ಶ್ರೀ ವಿಜಯರಾಯರು ನಮ್ಮ ಮೇಲಿನ ಕಾರುಣ್ಯದಿಂದ ಈ ಪದ್ಯದಲ್ಲಿ ತಿಳಿಸಿಕೊಡುತ್ತಾರೆ. ಈ ಪವಿತ್ರ ವಿಷಯದ ಕುರಿತ ಚಿಂತನೆ ಇಲ್ಲಿದೆ.
17/21 ಭಗವಂತನ ಅನುಗ್ರಹ
ಶ್ರೀಹರಿ ಪುರಂದರದಾಸರ ಮೇಲೆ ಮಾಡಿದ ಪರಮಾನುಗ್ರಹವನ್ನು ಶ್ರೀವಿಜಯರಾಯರು ಮೈಯುಬ್ಬಿ ವರ್ಣಿಸುತ್ತಾರೆ. ಅವರ ಪವಿತ್ರವಚನಗಳ ಅನುವಾದ ಇಲ್ಲಿದೆ.
16/21 ರಂಗ ಕೊಳಲನೂದಲಾಗಿ
ರಂಗ ಕೊಳಲನೂದಲಾಗಿ ಎಂಬ ಪದ್ಯ ಶ್ರೀ ಪುರಂದರದಾಸರ ಒಂದು ದಿವ್ಯ ಕೃತಿ. ಕೆಲವರು ಇದು ಶ್ರೀ ಪ್ರಸನ್ನ ವೇಂಕಟದಾಸರ ರಚನೆ ಎನ್ನುತ್ತಾರೆ. ಆದರೆ ಹಸ್ತಪ್ರತಿಗಳ ಸಂಶೋಧನೆಯಿಂದ ಇದು ಪುರಂದರದಾಸರದೇ ಕೃತಿ ಎಂದು ವಿದ್ವಾಂಸರು ನಿರ್ಣಯಿಸಿದ್ದಾರೆ. ಆ ಕೃತಿಯ ವಿವರಣೆ ಈ ಭಾಗದಲ್ಲಿದೆ.
15/21 ಪುರಂದರ ದಾಸರ ಕೃತಿಗಳ ಸಂಖ್ಯೆ
ಪುರಂದರದಾಸರು ಒಟ್ಟು ಎಷ್ಟು ಕೃತಿಗಳನ್ನು ರಚಿಸಿದ್ದಾರೆ ಎಂಬ ವಿಷಯದ ಕುರಿತ ಚರ್ಚೆ ಇಲ್ಲಿದೆ.
14/21 ದಾಸರೆಂದರೆ ಪುರಂದರದಾಸರಯ್ಯ
ಒಳ್ಳೆಯ ಕೆಲಸಗಳನ್ನು ಮಾಡಿದಾಗ ಜಗತ್ತು ನಮ್ಮನ್ನು ಹೊಗಳಬಹುದು. ಆದರೆ ಪುರಂದರದಾಸರಿಗೆ ದಾಸದೀಕ್ಷೆಯನ್ನು ನೀಡಿದ ಶ್ರೀಮಚ್ಚಂದ್ರಿಕಾಚಾರ್ಯರೇ ದಾಸರಾಯರ ಜೀವನಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಅವರ ರಚನೆ — ದಾಸರೆಂದರೆ ಪುರಂದರದಾಸರಯ್ಯ ಎಂಬ ಕೃತಿಯ ಅರ್ಥಾನುಸಂಧಾನ ಈ ಪದ್ಯದಲ್ಲಿದೆ.
13/21 ಮಧುಕರ ವೃತ್ತಿ ಎನ್ನದು...
ಶ್ರೀ ಪುರಂದರದಾಸರ ಜೀವನಶೈಲಿಯನ್ನು ನಿರೂಪಿಸುವ ಮಧುಕರ ವೃತ್ತಿ ಎನ್ನದು ಎಂಬ ಹಾಡಿನ ಅರ್ಥಾನುಸಂಧಾನ.
12/21 ಎನ್ನ ಗಂಡ ವೈಷ್ಣವನಾದ ಕಾರಣ...
ಲೌಕಿಕ ಮತ್ತು ವೈಷ್ಣವ ಬದುಕಿನ ವ್ಯತ್ಯಾಸಗಳನ್ನು ಮನಗಾಣಿಸುವ ಮತ್ತೊಂದು ನಿಂದಾಸ್ತುತಿ — ಅಕ್ಕಾ ಅಕಟಕಟೆನ್ನ ಗಂಡ ವೈಷ್ಣವನಾದ ಕಾರಣ, ಬರಿದಾಯ್ತೆನ್ನ ಬದುಕು ಎನ್ನುವದು. ಮನುಷ್ಯನಾದವನು ಯಾಕೆ ವೇದೋಕ್ತವಾದ ಶುದ್ಧ ಕ್ರಮದಲ್ಲಿ ಯಾಕೆ ಬದುಕಬೇಕು ಎನ್ನುವದಕ್ಕೆ ಶ್ರೀ ಪುರಂದರಾದಸರು ಮನಸ್ಸಿನಲ್ಲಿ ನಾಟಿ ಕುಳಿತುಕೊಳ್ಳುವ ದಿವ್ಯ ಉತ್ತರವನ್ನು ನೀಡುತ್ತಾರೆ. ತಪ್ಪದೇ ಆಲಿಸಿ. ಎಲ್ಲ ಸಜ್ಜನರಿಗೂ ಕೇಳಿಸಿ.
11/21 ಶ್ರೀ ವ್ಯಾಸರಾಜರ ಮೇಲಿನ ನಿಂದಾಸ್ತುತಿ
ಶ್ರೀಪುರಂದರದಾಸರು ರಚಿಸಿರುವ ನಿಂದಾಸ್ತುತಿಗಳಲ್ಲಿಯೇ ಪ್ರಾಯಃ ಮೊದಲನೆಯ ನಿಂದಾಸ್ತುತಿ — ಮಂಡೆ ಬೋಳಾದ ಸಂನ್ಯಾಸಿ ಮನೆ ಬಂದ್ಹೊಕ್ಕನಮ್ಮ ಎನ್ನುವದು. ಲೋಕದ ಸುಖದಲ್ಲಿ ಆಸಕ್ತವಾದ ಜೀವನಕ್ಕೂ ವಿಷ್ಣುಭಕ್ತನಾಗಿ ಸಾಗಿಸುವ ಜೀವನಕ್ಕೂ ಇರುವ ವ್ಯತ್ಯಾಸವನ್ನು ಅದ್ಭುತವಾಗಿ ಮನಗಾಣಿಸುವ ದಿವ್ಯ ಕೃತಿ. ತಪ್ಪದೇ ಕೇಳಿ
10/21 ಶ್ರೀ ವ್ಯಾಸರಾಜರಿಂದ ದಾಸದೀಕ್ಷೆ
ವೈರಾಗ್ಯಭಾವದಿ ಜೀವಿಸಿಕೊಂಡಿರುವದೇ ಛಂದ ಎಂದು ನಿರ್ಣಯಿಸಿದ ಶ್ರೀನಿವಾಸನಾಯರು ಶ್ರೀಮಚ್ಚಂದ್ರಿಕಾಚಾರ್ಯಗುರುಸಾರ್ವಭೌಮರ ಪಾದದಡಿಗೆ ಬರುತ್ತಾರೆ, ಸರ್ವವನ್ನೂ ನಿವೇದಿಸಕೊಂಡು ಅವರಿಂದ ದಾಸದೀಕ್ಷೆಯನ್ನು ಪಡೆದು ಪುರಂದರದಾಸರಾಗುತ್ತಾರೆ. ಆ ಪವಿತ್ರ ಘಟನೆಯ ವಿವರಣೆ ಈ ಭಾಗದಲ್ಲಿದೆ.
09/21 ನಾಯಕರು ದಾಸರಾದರು
ಮಗನ ಮುಂಜಿಗಾಗಿ ತನ್ನನ್ನು ಹಣ ಕೇಳಲು ಬಂದದ್ದು ಸಾಮಾನ್ಯ ಬ್ರಾಹ್ಮಣನಲ್ಲ, ನನ್ನ ಮನಸ್ಸಿನ ಭಾವವನ್ನು ತಿಳಿಯಲು ಶ್ರೀಹರಿಯೇ ಬ್ರಾಹ್ಮಣನಾಗಿ ಬಂದಿದ್ದ ಎನ್ನವದನ್ನು ಶ್ರೀಶ್ರೀನಿವಾಸನಾಯಕರು ಮನಗಾಣುತ್ತಾರೆ. ಅಲ್ಲಿಯವರೆಗೆ ಲೋಭಿಯಾಗಿ ಬದುಕುತ್ತಿದ್ದ ಅವರು ಸರ್ವಸ್ವವನ್ನೂ ತ್ಯಾಗ ಮಾಡಿ ಪುರಂದರವಿಠಲನ ದಾಸರಾದ ಘಟನೆಯ ಮಂಗಳ ಘಟನೆಯ ವಿವರವನ್ನು ನಾವಿಲ್ಲಿ ಕೇಳುತ್ತೇವೆ.
08/21 ಮೂಗುತಿ ಘಟನೆಯ ವಾಸ್ತವಿಕತೆ
ಮೂಗುತಿ ವಿಷದ ಬಟ್ಟಲಿನಿಲ್ಲಿ ಬಿದ್ದ ಕಥೆಯನ್ನು ಒಪ್ಪಲಿಕ್ಕೆ ಕೆಲವರಿಗೆ ವೈಚಾರಿಕತೆ ಅಡ್ಡಿ ಬರುತ್ತದೆ. ವಸ್ತುಸ್ಥಿತಿಯಲ್ಲಿ ಇದು ನಿಜವಾಗಿ ನಡೆದ ಘಟನೆಯೇ ಎನ್ನುವದನ್ನು ಈ ಭಾಗದಲ್ಲಿ ಯುಕ್ತಿಯುಕ್ತವಾಗಿ ಪ್ರತಿಪಾದಿಸಲಾಗಿದೆ. ನೀವು ಕೇಳುವದರೊಂದಿಗೆ ಈ ಭಾಗವನ್ನಿನು ತಪ್ಪದೇ ನಿಮ್ಮ ಮಕ್ಕಳಿಗೆ ಕೇಳಿಸಿ.
07/21 ವಿಷದ ಬಟ್ಟಲಲ್ಲಿ ಮೂಗುತಿ
ಇದು ತಮ್ಮ ಪತ್ನಿಯದೇ ಮೂಗುತಿ ಎಂದು ಅರಿತ ನಾಯಕರು ಮನೆಗೆ ಬಂದು ಮೂಗುತಿಯೆಲ್ಲಿ ಎಂದು ಹೆಂಡತಿಯನ್ನು ಕೇಳುತ್ತಾರೆ. ಅದು ಮುರಿದಿದೆ, ಒಳಗಿಟ್ಟಿದ್ದೇನೆ ಎಂದು ಸರಸ್ವತಮ್ಮನವರು ತಿಳಿಸುತ್ತಾರೆ. ಒಳಗಿಂದ ತರದಿದ್ದರೆ ನಿನ್ನನ್ನು ಕೊಂದೇ ಬಿಡುತ್ತೇನೆ ಎನ್ನುತ್ತಾರೆ, ನಾಯಕರು. ಸಾಯಲು ಸಿದ್ಧವಾಗಿ ವಿಷ ಕುಡಿಯಲು ಆ ಸಾಧ್ವಿ ಸಿದ್ಧರಾದರೆ, ಆ ವಿಷದ ಬಟ್ಟಲಿನಲ್ಲಿ ಮೂಗುತಿಯನ್ನು ಹಾಕುತ್ತಾನೆ, ನಮ್ಮ ಸ್ವಾಮಿ. ಈ ಘಟನೆಗಳ ವಿವರದೊಂದಿಗೆ, ನಾಯಕರ ಪತ್ನಿಯ ವ್ಯಕ್ತಿತ್ವದ ಎತ್ತರದ ಚಿಂತನೆ ಇಲ್ಲಿದೆ. ತಪ್ಪದೇ ಕೇಳಿ.
06/21 ಮೂಗುತಿ ನಾಯಕರ ಬಳಿಗೇ ಬಂತು
ಸರಸ್ವತಮ್ಮನವರಿಂದ ಮೂಗುತಿಯನ್ನು ಪಡೆದ ಬ್ರಾಹ್ಮಣ ಅದನ್ನು ನಾಯಕರ ಬಳಿಗೇ ತಂದು ಮಾರಾಟ ಮಾಡುತ್ತಾನೆ. ತಿರುಗಿ ಬರುತ್ತೇನೆ ಎಂದು ಹೇಳಿ ಹಣ ತೆಗೆದುಕೊಳ್ಳದೇ ಹೊರಟು ಬಿಡುತ್ತಾನೆ. ಆ ಘಟನೆಗಳ ವಿವರಣೆ ಇಲ್ಲಿದೆ.
05/21 ಪತ್ನಿಯು ಮೂಗುತಿ ದಾನ ಮಾಡಿದ ಕಥೆ
ನಾಯಕರಿಂದ ತಿರಸ್ಕೃತನಾದ ಬ್ರಾಹ್ಮಣರೂಪಿ ಶ್ರೀಹರಿ, ಅವರ ಮನೆಯ ಹಿತ್ತಲಿನ ಬಾಗಿಲಿನ ಬಳಿ ಹೋಗಿ ನಾಯಕರ ಪತ್ನಿಯನ್ನು ಹಣಕ್ಕಾಗಿ ಪರಿಪರಿಯಾಗಿ ಬೇಡುತ್ತಾನೆ. ಮನಕರಗಿದ ಆ ಸಾಧ್ವಿ ತನ್ನ ಮೂಗಿನ ಮುತ್ತಿನ ಮೂಗುತಿಯನ್ನು ದಾನ ಮಾಡುತ್ತಾರೆ. ಆ ಪ್ರಸಂಗದ ಚಿತ್ರಣ ಇಲ್ಲಿದೆ. ಶ್ರೀ ವಿಜಯದಾಸರ ಕಥಾನಿರೂಪಣಾಕೌಶಲವನ್ನು ಅರಿಯಲು ಈ ಭಾಗ ಕೇಳಬೇಕು.
04/21 ಬ್ರಾಹ್ಮಣನಿಗಾದ ಅವಮಾನ
ಶ್ರೀನಿವಾಸನಾಯಕರು ಆ ಬ್ರಾಹ್ಮಣನನ್ನು ನಡೆಸಿಕೊಂಡ ಬಗೆಯ ಚಿತ್ರಣ ಇಲ್ಲಿದೆ.
03/21 ದೇವರು ಬ್ರಾಹ್ಮಣನಾಗಿ ಬಂದ
ಶ್ರೀನಿವಾಸನಾಯಕನಾಗಿ ಹುಟ್ಟಿ ಬಂದಿರುವ ನಾರದರನ್ನು ಶ್ರೀಹರಿಗೆ ಪುರಂದರದಾಸರನ್ನಾಗಿ ಮಾಡಬೇಕಾಗಿದೆ. ಹೀಗಾಗಿ ಅವರ ಅಂಗಡಿಗೆ ಹಣ ಬೇಡುವ ಬ್ರಾಹ್ಮಣನಾಗಿ ಬರುತ್ತಾನೆ. ಬಂದು ಹಣಕ್ಕಾಗಿ ನಾಯಕರನ್ನು ಕಾಡಿಸುತ್ತಾನೆ. ಆ ಪ್ರಸಂಗಗಳ ವಿವರಣೆ ಇಲ್ಲಿದೆ.
02/21 ಬ್ಯಾಸರದೇ ಭಜಿಸಿರೋ
ಶ್ರೀ ಪುರಂದರ ದಾಸರ ಚರಿತ್ರೆಯನ್ನು ಅಧಿಕೃತವಾಗಿ ನಿರೂಪಿಸುವ ಶ್ರೇಷ್ಠ ಕೃತಿ, ಶ್ರೀ ವಿಜಯದಾಸಾರ್ಯರು ರಚಿಸಿರುವ ಬ್ಯಾಸರದೇ ಭಜಿಸಿರೋ ಎಂಬ ಅದ್ಭುತ ದೇವರನಾಮ. ಈ ಕೃತಿಯ ಪಲ್ಲವಿಯ ಅರ್ಥಾನುಸಂಧಾನ ಇಲ್ಲಿದೆ.
01/21 ಶ್ರೀ ಪುರಂದರದಾಸರ ಹಿರಿಮೆ
ಮಾಧ್ವಜ್ಞಾನಿಪರಂಪರೆಯಲ್ಲಿ ಶ್ರೀ ಪುರಂದರ ದಾಸಾರ್ಯರಿಗಿರುವ ಶ್ರೇಷ್ಠ ಸ್ಥಾನದ ನಿರೂಪಣೆ ಇಲ್ಲಿದೆ.
ಪುರಂದರದಾಸರೇಕೆ ಸಂನ್ಯಾಸಿಗಳಾಗಲಿಲ್ಲ?
ಪುರಂದದರದಾಸರು ವ್ಯಾಸರಾಜರಿಂದ ದಾಸದೀಕ್ಷೆಯನ್ನೇ ಯಾಕೆ ತೆಕ್ಕೊಂಡರು. ಸಂನ್ಯಾಸಿ ಅಗುವ ಎಲ್ಲ ಲಕ್ಷಣ ಅವರಲ್ಲಿ ಈಗ ಇತ್ತು. ತನ್ನ ಮೂಲರೂಪದಲ್ಲಿ ನಾರದರು ಬ್ರಹ್ಮಚಾರಿ ಆಗಿರುವಾಗ ಅವತಾರ ಮಾಡಿ ಬಂದಾಗ ದಾಸದೀಕ್ಷೆಯನ್ನೇ ತೆಗೆದು ಸಂನ್ಯಾಸದೀಕ್ಷೆ ತೆಗೆಯದೇ ಇರಲಿಕ್ಕೆ ವಿಶೇಷ ಏನಾದರೂ ಕಾರಣ ಇರಬಹುದೇ? — ಎಮ್. ಉಲ್ಲಾಸ್ ಹೆಗಡೆ.