09/09 ಶ್ರೀಮದಾಚಾರ್ಯರ ಮೇಲೆ ಅನುಗ್ರಹ
ಶ್ರೀಮದಾಚಾರ್ಯರ ಗ್ರಂಥಗಳಲ್ಲಿ ಮತ್ತು ಶ್ರೀ ಮಧ್ವವಿಜಯದಲ್ಲಿ ನಿರೂಪಿತವಾದ ಘಟನೆಗಳ ನಿರೂಪಣೆಯೊಂದಿಗೆ ಶ್ರೀ ವೇದವ್ಯಾಸದೇವರು ಶ್ರೀಮದಾಚಾರ್ಯರ ಮೇಲೆ ಮಾಡುವ ಭೂರಿ ಅನುಗ್ರಹವನ್ನು ಯಥಾಮತಿ ನಿರೂಪಿಸುವ ಉಪನ್ಯಾಸ.
08/09 ವೇದವ್ಯಾಸದೇವರ ಶಿಷ್ಯರು
ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಜ್ಞಾನಕಾರ್ಯವನ್ನು ಮಾಡಿದ ವೇದವ್ಯಾಸದೇವರು ತಮ್ಮ ಶಿಷ್ಯರಿಂದ ಆ ಪರಂಪರೆಯನ್ನು ಹೇಗೆ ಮುಂದುವರೆಸಿದರು ಎಂಬ ವಿಷಯವನ್ನು ನಿರೂಪಿಸುವ ಉಪನ್ಯಾಸ. ನವರಾತ್ರಿಯಲ್ಲಿ ನಾವು ಪೂಜಿಸಬೇಕಾದ ಋಷಿಪುಂಗವರಿವರು.
07/09 ಕ್ರಿಮಿಯಿಂದ ರಾಜ್ಯವಾಳಿಸಿದೆ
ಒಂದು ಹುಳವನ್ನೋ ಕೀಟವನ್ನೋ ಹೊಸಕಿಹಾಕಿದಾಗ ಕೆಲವರು ಆಲೋಚಿಸುತ್ತಿರುತ್ತಾರೆ — ಈ ಕೆಟ್ಟ ಜನ್ಮದಿಂದ ಇದಕ್ಕೆ ಮುಕ್ತಿ ದೊರೆಯಿತು ಎಂದು. ಮನುಷ್ಯರ ಈ ಆಲೋಚನೆ ಎಷ್ಟು ಅಪದ್ಧ ಎನ್ನುವದನ್ನು ಕೀಟದ ಮುಖದಿಂದಲೇ ವೇದವ್ಯಾಸದೇವರು ತಿಳಿಸಿದ್ದಾರೆ. ಕೇಳಿ.
06/09 ಅವತಾರ ಕಾರ್ಯ
ಶ್ರೀ ವೇದವ್ಯಾಸದೇವರು ಯಾವ ಕಾರಣಕ್ಕಾಗಿ ಅವತರಿಸಿದರೋ ಆ ಕಾರ್ಯವನ್ನು ಅವರು ಸಂಪನ್ನ ಮಾಡಿದ ರೀತಿಯ ಕುರಿತು ತಿಳಿಸುವ ಭಾಗವಿದು.
05/09 ಶ್ರೀ ವೇದವ್ಯಾಸದೇವರ ಪ್ರಾದುರ್ಭಾವ
ಮಹಾಭಾರತದ ಆದಿಪರ್ವದಲ್ಲಿ ಮತ್ತು ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದ ಹತ್ತನೆಯ ಅಧ್ಯಾಯದಲ್ಲಿ ನಿರೂಪಿಸಿರುವ ವೇದವ್ಯಾಸಪ್ರಾದುರ್ಭಾವದ ನಿರೂಪಣೆ, ಶ್ರೀ ವೇದವ್ಯಾಸಾವತಾರದ ಉಪನ್ಯಾಸದ ಒಂಭತ್ತು ಉಪನ್ಯಾಸಗಳಲ್ಲಿ ಐದನೆಯ ಭಾಗ.
04/09 ಸತ್ಯವತೀದೇವಿಯ ಕಥೆ.
ಮಹಾಭಾರತದ ಆದಿಪರ್ವದಲ್ಲಿ ಬಂದಿರುವ ಸತ್ಯವತಿಯ ಚರಿತ್ರೆಯ ನಿರೂಪಣೆ, ಶ್ರೀ ವೇದವ್ಯಾಸಾವತಾರದ ಉಪನ್ಯಾಸದ ಒಂಭತ್ತು ಉಪನ್ಯಾಸಗಳಲ್ಲಿ ನಾಲ್ಕನೆಯ ಭಾಗ.
03/09 ಪರಾಶರಮಹರ್ಷಿಗಳ ಕಥೆ
ಮಹಾಭಾರತದ ಆದಿಪರ್ವದಲ್ಲಿ ಬಂದಿರುವ ಪರಾಶರರ ಚರಿತ್ರೆಯ ನಿರೂಪಣೆ, ಶ್ರೀ ವೇದವ್ಯಾಸಾವತಾರದ ಉಪನ್ಯಾಸದ ಒಂಭತ್ತು ಉಪನ್ಯಾಸಗಳಲ್ಲಿ ಮೂರನೆಯ ಭಾಗ.
02/09 ವಸಿಷ್ಠಮಹರ್ಷಿಗಳ ಕಥೆ
ಮಹಾಭಾರತದ ಆದಿಪರ್ವದಲ್ಲಿ ಬಂದಿರುವ ವಸಿಷ್ಠರ ಚರಿತ್ರೆಯ ನಿರೂಪಣೆ, ಶ್ರೀ ವೇದವ್ಯಾಸಾವತಾರದ ಉಪನ್ಯಾಸದ ಒಂಭತ್ತು ಉಪನ್ಯಾಸಗಳಲ್ಲಿ ಎರಡನೆಯ ಭಾಗ.
01/09 ಶ್ರೀ ವೇದವ್ಯಾಸಾವತಾರದ ಹಿನ್ನೆಲೆ
ಶ್ರೀ ವೇದವ್ಯಾಸಾವತಾರದ ಹಿನ್ನೆಲೆ. ಮಹಾಭಾರತತಾತ್ಪರ್ಯನಿರ್ಣಯದ ಹತ್ತನೆಯ ಅಧ್ಯಾಯದ ಅನುವಾದ, ಶ್ರೀ ವೇದವ್ಯಾಸಾವತಾರದ ಉಪನ್ಯಾಸದ ಒಂಭತ್ತು ಉಪನ್ಯಾಸಗಳಲ್ಲಿ ಮೊದಲ ಭಾಗ.