2021 ಪ್ಲವಸಂವತ್ಸರದ ಪಂಚಾಂಗ ಶ್ರವಣ
ವಿಶ್ವನಂದಿನಿಯ ಸಕಲ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.
2019 ವಿಕಾರಿ ಸಂವತ್ಸರದ ಪಂಚಾಂಗ ಶ್ರವಣ
ವಿಶ್ವನಂದಿನಿಯ ಸಕಲ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ಹರಿವಾಯುದೇವತಾಗುರುಗಳು ನಿಮ್ಮ ಮತ್ತು ನಿಮ್ಮ ತಾಯಿಯವರ ಮೇಲೆ ಪೂರ್ಣಾನುಗ್ರಹವನ್ನು ಮಾಡಿ ದೀರ್ಘ ಆರೋಗ್ಯ, ಸಾತ್ವಿಕ ಸಂಪತ್ತು, ಪೂರ್ಣ ನೆಮ್ಮದಿಗಳನ್ನು ನೀಡಿ ಶ್ರೇಷ್ಠ ಸಾಧನೆಯನ್ನು ಮಾಡಿಸಲಿ ಎಂದು ಅವರನ್ನು ಪ್ರಾರ್ಥಿಸುತ್ತೇನೆ.
2018 ವಿಲಂಬಿ ಸಂವತ್ಸರದ ಪಂಚಾಂಗಶ್ರವಣ
ಸಮಸ್ತ ವಿಶ್ವನಂದಿನಿಯ ಬಾಂಧವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು. ಶ್ರೀಹರಿ ವಾಯು ದೇವತಾ ಗುರುಗಳು ನಿಮಗೆಲ್ಲರಿಗೂ ಸಂಪೂರ್ಣ ಆಯುಷ್ಯ, ಉತ್ತಮ ಆರೋಗ್ಯ, ಸಾತ್ವಿಕ ಸಂಪತ್ತು, ಪರಿಶುದ್ಧ ಜ್ಞಾನ, ಪ್ರಾಮಾಣಿಕ ವೈರಾಗ್ಯ, ಪರಿಪೂರ್ಣ ಭಕ್ತಿಯನ್ನು ಕರುಣಿಸಿ ಸದಾ ಮಧ್ವಶಾಸ್ತ್ರಾಸಕ್ತರನ್ನಾಗಿ ಮಾಡಲಿ ಎಂದು ಹಾರೈಸುತ್ತೇನೆ. Watch the original video on YouTube. https://www.youtube.com/watch?v=76MAyDJqVDk
2017 ಹೇಮಲಂಬ ಸಂವತ್ಸರದ ಪಂಚಾಂಗ ಶ್ರವಣ
ಚೈತ್ರ ಶುದ್ಧ ಪ್ರತಿಪದೆಯಂದು ಬೆಳಗಿನ ಹೊತ್ತು ಪಂಚಾಂಗಶ್ರವಣವನ್ನು ಮಾಡುವದರಿಂದ, ದುರಿತಗಳಿಂದ ವಿಮುಕ್ತಿ, ಉತ್ತಮ ಸಂಪತ್ತು, ಆರೋಗ್ಯ ಮತ್ತು ಆಯುಷ್ಯ ದೊರೆಯುತ್ತದೆ ಎಂದು ಶಾಸ್ತ್ರಗಳು ತಿಳಿಸಿ ಹೇಳುತ್ತವೆ. ಕಾಲಗಳ ವಿಭಾಗ, ಕಾಲನಾಮಕ ಭಗವಂತನ ಮಹಾಮಾಹಾತ್ಮ್ಯ, ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳಿಗೆ ನಿಯಾಮಕರಾದ ದೇವತೆಗಳು, ಹೇಮಲಂಬ ಸಂವತ್ಸರದ ನವನಾಯಕರು, ಅವರಿಂದ ಉಂಟಾಗುವ ಫಲಗಳು, ಅವರಲ್ಲಿ ನಾವು ಮಾಡಬೇಕಾದ ಪ್ರಾರ್ಥನೆ ಈ ಎಲ್ಲವೂ ಈ ಉಪನ್ಯಾಸದಲ್ಲಿವೆ.
ಪಂಚಾಂಗಶ್ರವಣ
ಶ್ರೀ ಶುಭಕೃತ್ ಸಂವತ್ಸರದ (2022) ಪಂಚಾಂಗಶ್ರವಣ, ಕಾಲನಾಮಕ ಭಗವಂತನ ಚಿಂತನೆ ಮತ್ತು ದ್ವಾದಶರಾಶಿಗಳ ವರ್ಷಫಲದೊಂದಿಗೆ.
ತೋರಣ
ಯುಗಾದಿ ಮುಂತಾದ ಹಬ್ಬಗಳು, ಮದುವೆ ಮುಂಜಿ ಮುಂತಾದ ಮಂಗಳಕಾರ್ಯಗಳಲ್ಲಿ ತೋರಣ ಕಟ್ಟುವ ಕ್ರಮದ ಮತ್ತು ಪಾಲಿಸಲೇಬೇಕಾದ ನಿಯಮದ ವಿವರಣೆ.