ಗಂಗೆಯ ವ್ಯಾಪ್ತತ್ವ
ಆಚಾರ್ಯರು ಹಸ್ತಿನಾವತಿಯಲ್ಲಿ ಚಾತುರ್ಮಾಸ್ಯಕ್ಕಾಗಿ ಕುಳಿತಾಗ ಗಂಗೆ ಆಚಾರ್ಯರಿದ್ದಲ್ಲಿಗೇ ಹರಿದು ಬಂದ ಘಟನೆಯನ್ನು ಕೇಳುತ್ತೇವೆ. ಉಡುಪಿಯ ಮಧ್ವಸರೋವರಕ್ಕೆ ಬರುವ ಘಟನೆಯನ್ನು ಕೇಳುತ್ತೇವೆ. ಶ್ರೀಪಾದರಾಜಗುರುಸಾರ್ವಭೌಮರಿಗಾಗಿ ನರಸಿಂಹತೀರ್ಥಕ್ಕೆ ಗಂಗೆ ಬಂದ ಘಟನೆಯನ್ನು ಕೇಳುತ್ತೇವೆ. ಅತೀ ಕ್ಷುದ್ರರಾದ ನಾವು ನಮ್ಮ ಮನೆಯಲ್ಲಿ ಸ್ನಾನ ಮಾಡುವಾಗಲೂ ಗಂಗೆಯ ಸ್ಮರಣೆ ಮಾಡಿದರೆ, ಸ್ನಾನದ ನೀರಿನಲ್ಲಿ ಗಂಗೆಯ ಸನ್ನಿಧಾನ ಉಂಟಾಗುತ್ತದೆ ಎಂದು ಶಾಸ್ತ್ರ ತಿಳಿಸುತ್ತದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ, ಶ್ರೀ ವಿಜಯದಾಸಾರ್ಯರು ತಮ್ಮ ಸುಳಾದಿಯಲ್ಲಿ ಉತ್ತರ ನೀಡಿದ್ದಾರೆ. ಆ ಪರಮಪವಿತ್ರ ಪ್ರಮೇಯದ ಚಿಂತನೆ ಇಲ್ಲಿದೆ.
ಗಂಗಾವತರಣ ಆದದ್ದು ಎಂದು?
ಭಗೀರಥ ಪ್ರಯತ್ನದಿಂದ ಗಂಗಾವತರಣವಾದ ದಿನ ಯಾವಾಗ. ದಯವಿಟ್ಟು ತಿಳಿಸಿ. — ಭಾರತೀಶ