07/07 ಶ್ರೀ ನರಸಿಂಹದೇವರ ಅನುಗ್ರಹ
ಪ್ರಹ್ಲಾದರಾಜರು ಮಾಡಿದ ಸ್ತೋತ್ರದ ಕಡೆಯ ಭಾಗ, ಶ್ರೀನರಸಿಂಹ ಅವರ ಮೇಲೆ ಮಾಡಿದ ಪರಮಾನುಗ್ರಹ, ನಮ್ಮ ಮೇಲೆ ಪ್ರಹ್ಲಾದರಾಜರು ತೋರಿರುವ ಪ್ರೀತಿ, ವಾತ್ಸಲ್ಯಗಳ ಕುರಿತು ನಾವಿಲ್ಲಿ ಕೇಳುತ್ತೇವೆ.
06/07 ನರಸಿಂಹಸ್ತುತಿ - 03
ಶ್ರೀ ಪ್ರಹ್ಲಾದರಾಜರು ಮಾಡಿರುವ ಶ್ರೀ ನರಸಿಂಹಸ್ತೋತ್ರದಲ್ಲಿನ 43 ಶ್ಲೋಕಗಳಲ್ಲಿ “ಕ್ವಾಹಂ ರಜಃಪ್ರಭವ” ಎಂಬ ಶ್ಲೋಕದಿಂದ ಆರಂಭಿಸಿ “ಕೋsನ್ವತ್ರ ತೇsಖಿಲಗುರೋ” ಎಂಬ ಶ್ಲೋಕದವರೆಗಿನ ಹದಿನೇಳು ಶ್ಲೋಕಗಳ ಅನುವಾದ ಈ ಭಾಗದಲ್ಲಿದೆ.
05/07 ನರಸಿಂಹಸ್ತುತಿ - 02
ಶ್ರೀ ಪ್ರಹ್ಲಾದರಾಜರು ಮಾಡಿರುವ ಶ್ರೀ ನರಸಿಂಹಸ್ತೋತ್ರದಲ್ಲಿನ 43 ಶ್ಲೋಕಗಳಲ್ಲಿ “ಸರ್ವೈ ಹ್ಯಮೀ” ಎಂಬ ಶ್ಲೋಕದಿಂದ ಆರಂಭಿಸಿ “ಕುತ್ರಾಶಿಷಃ” ಎಂಬ ಶ್ಲೋಕದವರೆಗಿನ ಹದಿಮೂರು ಶ್ಲೋಕಗಳ ಅನುವಾದ ಈ ಭಾಗದಲ್ಲಿದೆ. ಸಂಸಾರದ ಭೀಕರತೆ, ನರಸಿಂಹನ ಪ್ರಸನ್ನತೆ, ದೇವರಿಗೂ ಭಕ್ತನಿಗೂ ಇರುವ ಅದ್ಭುತವಾದ ಸಂಬಂಧಗಳು, ಲೌಕಿಕ ಸಂಪತ್ತಿನ ನಶ್ವರತೆ ಮುಂತಾದ ವಿಷಯಗಳ ಕುರಿತ ಅದ್ಭುತ ಮಾತುಗಳನ್ನು ಶ್ರೀಪ್ರಹ್ಲಾದರಾಜರ ಮುಖದಿಂದ ನಾವಿಲ್ಲಿ ಕೇಳುತ್ತೇವೆ.
04/07 ನರಸಿಂಹಸ್ತುತಿ-01
ಶ್ರೀ ನರಸಿಂಹದೇವರು ಪ್ರಾದುರ್ಭೂತರಾಗಿ ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ಆ ಮಹಾಶಕ್ತಿಯ ಪರಬ್ರಹ್ಮನ ಮುಂದೆ ನಿಂತ ಪ್ರಹ್ಲಾದರಾಜರು ಮಾಡಿದ ಸ್ತೋತ್ರದ ಸಮಗ್ರ ವಿವರಣೆ ನಿಮಗಿಲ್ಲಿ ದೊರೆಯುತ್ತದೆ
03/07 ನರಸಿಂಹಪ್ರಾದುರ್ಭಾವ
ಪ್ರಹ್ಲಾದನನ್ನು ಕೊಲ್ಲಹೊರಟ ಹಿರಣ್ಯಕಶಿಪುವಿನ ಸಂಹಾರಕ್ಕಾಗಿ, ಬ್ರಹ್ಮದೇವರ ಮಾತನ್ನು ಸತ್ಯ ಮಾಡಲು ಪರಮಾತ್ಮ ಕಂಬವನ್ನು ಸೀಳಿ ಶ್ರೀಮನ್ನರಸಿಂಹನಾಗಿ ಅವತರಿಸಿದ ಅದ್ಭುತಘಟನೆಯ ಚಿತ್ರಣ ಈ ಭಾಗದಲ್ಲಿದೆ. ಕೇಳಿಯೇ ಅನಂದಿಸಬೇಕಾದ ಭಾಗ.
02/07 ಪ್ರಹ್ಲಾದನ ವರ್ಣನೆ ಮತ್ತು ಉಪದೇಶಗಳು
ಗುರುಗಳಿಂದಲೇ ಶ್ಲಾಘಿತವಾದ ಗುಣಗಳ ಖನಿ ಶ್ರೀ ಪ್ರಹ್ಲಾದರಾಜರು. ನಾರದರು ಪಾಂಡವರ ಮುಂದೆ ಕುಳಿತು ಹೇಳಿದ ಪ್ರಹ್ಲಾದರಾಜರ ಮಾಹಾತ್ಮ್ಯ ಮತ್ತು ಪ್ರಹ್ಲಾದರಾಜರು ದೈತ್ಯಬಾಲಕರಿಗೆ ಮಾಡಿದ ಶ್ರೇಷ್ಠತತ್ವೋಪದೇಶಗಳ ಕುರಿತು ವಿವರಿಸುವ ಉಪನ್ಯಾಸ.
01/07 ಹಿರಣ್ಯಕಶಿಪುವಿನ ತಪಸ್ಸು
ಶ್ರೀಮದ್ ಭಾಗವತದ ಸಪ್ತಮಸ್ಕಂಧದಲ್ಲಿ ನಿರೂಪಿತವಾಗಿರುವ ಶ್ರೀ ನರಸಿಂಹಾವತಾರ ವಿಶ್ವನಂದಿನಿಯ ಉಪನ್ಯಾಸಮಾಲಿಕೆಯಲ್ಲಿ ಮೊಟ್ಟಮೊದಲ ಪುಷ್ಪ. ಏಳು ಭಾಗಗಳಲ್ಲಿರುವ ನರಸಿಂಹಾವತಾರದ ಮೊದಲ ಭಾಗವಿದು.