ಪೈತೃಕ ಸುಳಾದಿ
“ನರಕೋದ್ಧಾರ ಸತ್ಯ ಇದರಿಂದ ಪಿತೃಗಳಿಗೆ” ಎಂದು ನಮ್ಮ ಕುಲದವರನ್ನು ಸಕಲ ತಾಪಗಳಿಂದ ಉದ್ಧಾರ ಮಾಡುವ, ಶ್ರೀ ವಿಜಯದಾಸಾರ್ಯರು ರಚಿಸಿರುವ ಪೈತೃಕ ಸುಳಾದಿಯ ಪಠಣ ಇಲ್ಲಿದೆ. ಶ್ರಾದ್ಧ ನಡೆಯುವ ಸಂದರ್ಭದಲ್ಲಿ, ಮುಖ್ಯವಾಗಿ ಬ್ರಾಹ್ಮಣಭೋಜನ, ಪಿಂಡಪ್ರದಾನ ಕಾಲಗಳಲ್ಲಿ ಇದನ್ನು ಪಠಿಸಬೇಕು. ತಂದೆ ಇರುವವರು, ಸ್ತ್ರೀಯರು, ಮಕ್ಕಳೂ ಸಹ ಇದನ್ನು ಪಠಿಸಬೇಕು.
ಶ್ರಾದ್ಧಕ್ಕೂ ಕಾಗೆಗಳಿಗೂ ಇರುವ ಸಂಬಂಧ
ಮರುತ್ತಮಹಾರಾಜರು ಯಜ್ಞಮಾಡುವಾಗ ಅಲ್ಲಿಗೆ ಯುದ್ಧಕ್ಕಾಗಿ ರಾವಣ ಬರುತ್ತಾನೆ. ಆಗ ದೇವತೆಗಳೆಲ್ಲರೂ ಬೇರೆಬೇರೆ ಪಕ್ಷಿಯ ರೂಪಗಳನ್ನು ತೆಗೆದುಕೊಳ್ಳುತ್ತಾರೆ. ಯಮಧರ್ಮರು ಕಾಗೆಯ ರೂಪವನ್ನು ಸ್ವೀಕರಿಸಿ, ರಾವಣ ಹೋದ ನಂತರ ಕಾಗೆಯ ಕುಲಕ್ಕೇ ವರಗಳನ್ನು ಅನುಗ್ರಹಿಸುತ್ತಾರೆ. ಶ್ರಾದ್ಧಕ್ಕೂ ಮತ್ತು ಕಾಗೆಗಳಿಗೂ ಇರುವ ಸಂಬಂಧವನ್ನು ತಿಳಿಸುವ ಈ ಅಪೂರ್ವಘಟನೆಯ ಚಿತ್ರಣ ಇಲ್ಲಿದೆ.
ಸಪಿಂಡೀಕರಣವನ್ನು ಮನೆಯ ಮೇಲೆ ಮಾಡಬಹುದೇ?
ಮುತ್ತೈದೆಯರು ಸತ್ತಾಗ ತುಳಸಿ ಹಾರವನ್ನು ಅವರಿಗೆ ಹಾಕಬಹುದಾ ಧರ್ಮೊದಕ ಮತ್ತು ಸಪಿಂಡಿಕರಣ ಶ್ರಾದ್ಧವನ್ನು ಮನೆಯ ಮಹಡಿಯ ಮೇಲೆ ಮಾಡಬಹುದಾ...
ಮಲತಾಯಿ ಇದ್ದರೆ ತಾಯಿಯ ಶ್ರಾದ್ಧ ಮಾಡಬಾರದೇ?
ತಾಯಿ ಮೃತಳಾಗಿದ್ದು ತಂದೆ ಮತ್ತು ಮಲತಾಯಿ ಇದ್ದರೆ ತಾಯಿಯ ಶ್ರಾದ್ಧವನ್ನು ಮಗನು ಮಾಡಬಹುದೇ?
ಶೂನ್ಯತಿಥಿ ಇದ್ದ ದಿವಸವೂ ಜಲತರ್ಪಣವನ್ನು ನೀಡಬೇಕೆ?
ಪಂಚಾಂಗದಲ್ಲಿ ಕೆಲವು ದಿವಸಗಳಲ್ಲಿ ಶೂನ್ಯತಿಥಿ, ಶ್ರಾದ್ಧ ಇರುವದಿಲ್ಲ ಎಂದು ಮುದ್ರಿಸಿರುತ್ತಾರೆ, ಅಂತಹ ದಿವಸಗಳಲ್ಲಿ ನಾವು ಶ್ರಾದ್ಧವನ್ನು ಮಾಡುವದಿಲ್ಲ. ಹಾಗಾದರೆ, ನಾವು ಪ್ರತಿನಿತ್ಯ ನೀಡುವ ಜಲತರ್ಪಣವನ್ನು ಅಂತಹ ದಿವಸಗಳಲ್ಲಿ ನೀಡಬೇಕೇ, ನೀಡಬಾರದೆ? ನೀಡಬೇಕೆಂದರೆ ಯಾವ ತಿಥಿಯನ್ನು ಗ್ರಹಿಸಬೇಕು?
ಬಲಗೈಗೆ ಪೆಟ್ಟಾಗಿದ್ದರೆ ಅಥವಾ ಮುರಿದಿದ್ದರೆ ಎಡಗೈಯಿಂದ ತರ್ಪಣ ನೀಡಬಹುದೆ?
ಎಡಗೈಯಿಂದ ಯಾವ ದೇವ-ಪಿತೃಕಾರ್ಯಗಳನ್ನು ಮಾಡಬಾರದು ಎನ್ನುತ್ತಾರೆ, ಆದರೆ, ಬಲಗೈಗೆ ಪೆಟ್ಟಾಗಿದ್ದಾಗ, ಅಥವಾ ಬಲಗೈ ಮುರಿದೇ ಹೋಗಿದ್ದಾಗ ದೇವ ಪಿತೃ ಕಾರ್ಯಗಳನ್ನು ಮಾಡಲೇಬಾರದೋ ಅಥವಾ ಎಡಗೈಯಿಂದ ಮಾಡಬಹುದೋ?
ದೇವರಿಗೆ ಅರ್ಪಿಸಿದ ಕರ್ಮವನ್ನು ಜೀವರಿಗೆ ನೀಡುವದು ಹೇಗೆ?
ನಾವು ಕರ್ಮಫಲವನ್ನು ಕೂಡ ಕೃಷ್ಣಾರ್ಪಣ ಎಂದು ಬಿಡುತ್ತೀವಿ. ಆ ಫಲ ಕೂಡ ನಮ್ಮ ಬಳಿ ಇರುವದಿಲ್ಲ ಅಂತ ಕೇಳಿದ್ದೀವಿ. ನಮಗೆ ಅಧಿಕಾರ ಹೇಗೆ ಬರುತ್ತದೆ. M ಶ್ರೀನಾಥ್, ಬೆಂಗಳೂರು
ಧರ್ಮೋದಕವನ್ನು ಯಾರು ಹೇಗೆ ನೀಡಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಧರ್ಮೋದಕ ಅಂದರೆ ಏನು. ಪುರೋಹಿತರು ಮಹಿಳೆಯರು ಮತ್ತು ಚಿಕ್ಕ ಹುಡುಗರಿಂದ (ಅನುಪನೀತರಿಂದ) ಧರ್ಮೋದಕವನ್ನು ಬಿಡಿಸುತ್ತಾರೆ. ಇದು ಸರಿಯೇನಾ? ಧರ್ಮೋದಕವನ್ನು ಬಿಡುವಾಗ ಅನುಸಂಧಾನ ಏನು ಮಾಡಬೇಕು? ತಿಳಿಸಿರಿ. - ಮುದಿಗಲ್ ಶ್ರೀನಾಥ್
ಯಾವ ಶ್ರಾದ್ಧವನ್ನು ಎಲ್ಲಿ ಮಾಡಬೇಕು?
ಆಚಾರ್ಯರಿಗೆ ನಮಸ್ಕಾರಗಳು. ಪಿತೃಕಾಯರ್ಯವನ್ನು (ತಿಲ ತರ್ಪಣ/ಪಿಂಡಪ್ರದಾನ) ಕತೃಗಳೇ ನದಿ ಅಥವಾ ಮನೆಯಲ್ಲಿ ಮಾಡಬಹುದಾ... ದಯವಿಟ್ಟು ವಿಧಿ ವಿದಾನಗಳನ್ನು ತಿಳಿಸಿ. — ನರಸಿಂಹ ಮೂರ್ತಿ
ಕ್ಷೇತ್ರಗಳಲ್ಲಿ ಮೃತರಾದರೆ ಅಂತ್ಯಸಂಸ್ಕಾರ ಹೇಗೆ?
ಪವಿತ್ರ ಕ್ಷೇತ್ರ ದರ್ಶನಕ್ಕೆ ಹೋಗಿ ಮೃತರಾದರವರಿಗೆ ವಿಧಿಗಳು ಏನಾಗಿರುತ್ತದೆ. ಮೃತಶರೀರ ದಾಹಾದಿಗಳು ಬೇಕಿಲ್ಲವೇ? ದಯವಿಟ್ಟು ತಿಳಿಸಿ — ಎನ್. ವಿ. ಪದ್ಮನಾಭ
ತಂದೆ ಬದುಕಿದ್ದಾಗ ಮಾವನ ಶ್ರಾದ್ಧ ಮಾಡಬಹುದೇ?
ನಮಸ್ಕಾರ ಗುರುಗಳಿಗೆ ನನಗೆ ತಂದೆ ಇದ್ದಾರೆ. ತಾಯಿ ಇಲ್ಲ. ನಾನು ನನ್ನ ಹೆಂಡತಿಯ ತಂದೆಯವರ ಶ್ರಾದ್ಧ ಮಾಡಬಹುದಾ ದಯವಿಟ್ಟು ತಿಳಿಸಿರಿ. — ವಿನಾಯಕ ಕುಲಕರ್ಣಿ
ಪವಿತ್ರದ ಉಂಗುರದ ಧಾರಣೆ ಹೇಗೆ?
ನಮಸ್ಕಾರ. ಪವಿತ್ರದ ಉಂಗುರವನ್ನು ಯಾವ ಬೆರಳಿಗೆ ಧರಿಸಬೇಕು ??ದಿನದ ಯಾವ ಸಮಯದಲ್ಲಿ ಪವಿತ್ರದ ಉಂಗುರ ದರಿಸಬೇಕು ? — ಶ್ರೀನಿವಾಸ್
ಕುತಪಕಾಲ ಎಂಬ ಶಬ್ದದ ಅರ್ಥವೇನು?
ಕುತಪಕಾಲ ಎಂಬ ಶಬ್ದದ ಅರ್ಥವೇನು, ಗುರುಗಳೇ? — ಜಯಶ್ರೀ ಕರುಣಾಕರ
ಪುನರ್ಜನ್ಮ ಪಡೆದ ವ್ಯಕ್ತಿಗೆ ಶ್ರಾದ್ಧ ಹೇಗೆ ತಲುಪುತ್ತದೆ?
ಗುರುಗಳಿಗೆ ನಮಸ್ಕಾರ. ನನ್ನ ಪ್ರಶ್ನೆ, ಶ್ರಾದ್ಧ ಕರ್ಮಗಳ ಬಗ್ಗೆ. ನಾವು ಪಿತೃದೇವತೆಗಳಿಗೆ ಶ್ರಾದ್ಧಾದಿ ಕರ್ಮಗಳನ್ನು ಮಾಡುತ್ತೇವೆ. ಆದರೆ ನಮ್ಮಲ್ಲಿ ಪುನರ್ಜನ್ಮದ ಸಿದ್ಧಾಂತ ದ ಪ್ರಕಾರ ಅಳಿದ ವ್ಯಕ್ತಿ ಕರ್ಮಾನುಸಾರವಾಗಿ ಬೇರೆಯ ದೇಹ ಪಡೆಯುತ್ತಾನೆ. ಹಾಗಾದರೆ ನಾವು ಮಾಡುವ ಶ್ರಾದ್ಧಾದಿ ಕರ್ಮಗಳು ಯಾರಿಗೆ ಸೇರುತ್ತವೆ. — ಶ್ರೀಕಾಂತ್ ಜೋಷಿ.