Ahalya Nirnaya



Upanyasas - VNU778

ಶಿಲೆ, ಅತಿರಿಕ್ತ ತಪಸ್ಸು, ಭಕ್ತಿ

ಅಹಲ್ಯಾದೇವಿಯರು ನಿಜವಾಗಿಯೂ ಶಿಲೆಯಾಗಿದ್ದರೆ?  ಅತಿರಿಕ್ತ ತಪಸ್ಸಿನ ವಿವರಣೆ ಮತ್ತು  ವಿಷ್ಣುಭಕ್ತಿಯ ಮಹಾಮಾಹಾತ್ಮ್ಯದ ಚಿಂತನೆ ಇಲ್ಲಿದೆ. 

6585 Views
Upanyasas - VNU777

ಗೌತಮರ ತಪ್ಪಿಗೆ ಅಹಲ್ಯೆ ಏಕೆ ಬಲಿಪಶು?

ಗೌತಮ ಮಹರ್ಷಿಗಳು ತಮ್ಮ ಯೋಗ್ಯತೆ ಮೀರಿ ತಪಸ್ಸು ಮಾಡಿದ್ದು ಅವರ ತಪ್ಪು. ಅವರು ಮಾಡಿದ್ದಾರೆ. ಆ ಅಧಿಕ ತಪಸ್ಸಿನ ಪುಣ್ಯವನ್ನು ಅವರಿಂದ ಪಡೆಯುವದು ದೇವತೆಗಳ ಕರ್ತವ್ಯ. ಇದರ ಮಧ್ಯದಲ್ಲಿ ಅಹಲ್ಯೆ ಏಕೆ ಬಲಿಪಶು ಆಗಬೇಕು. 

7736 Views
Upanyasas - VNU776

ಅಹಲ್ಯಾದೇವಿಯರ ಉದ್ಧಾರ

ಅಹಲ್ಯಾದೇವಿಯರು ಮಾಡಿದ ಅತ್ಯಂತ ಕಠಿಣವಾದ ತಪಸ್ಸು, ಅವರ ಮೇಲೆ ಶ್ರೀರಾಮಚಂದ್ರದೇವರು ಮಾಡಿದ ಪರಮಾನುಗ್ರಹದ ನಿರೂಪಣೆ ಇಲ್ಲಿದೆ. 

6487 Views
Upanyasas - VNU775

ಇಂದ್ರ ದೇವರ ದೃಷ್ಟಿಯಿಂದ..

 ಶಾಪದಿಂದ ವೃಷಣಗಳನ್ನು ಕಳೆದುಕೊಂಡ ಇಂದ್ರದೇವರಿಗೆ ಮೇಕೆಯ ವೃಷಣಗಳನ್ನು ಪಿತೃಗಳು ಜೋಡಿಸುತ್ತಾರೆ. ಮೇಕೆಯನ್ನೇ ಏಕೆ ಆರಿಸಿಕೊಂಡರು, ಅಶ್ವಿನೀ, ವರುಣ, ಧನ್ವಂತರಿಗಳು ಈ ಕಾರ್ಯವನ್ನು ಮಾಡದೇ, ಪಿತೃದೇವತೆಗಳೇ ಏಕೆ ಮಾಡಿದರು, ಆ ಮೇಕೆಯ ಗತಿಯೇನು ಇತ್ಯಾದಿ ವಿಷಯಗಳ ನಿರೂಪಣೆ ಇಲ್ಲಿದೆ. 

7287 Views
Upanyasas - VNU774

ಇಂದ್ರ ಅಹಲ್ಯೆಯರಿಗೆ ಶಾಪ

ಗೌತಮರು ನದಿಯ ಸ್ನಾನಕ್ಕಾಗಿ ತೆರಳಿದ್ದಾಗ ಗೌತಮರ ವೇಷದಲ್ಲಿಯೇ ಇಂದ್ರದೇವರು ಬರುತ್ತಾರೆ. ಬಂದಿರುವದು ಗಂಡನಲ್ಲ, ಇಂದ್ರ ಎಂದು ತಿಳಿದಿದ್ದರೂ, ಆ ಕ್ಷಣದ ದೌರ್ಬಲ್ಯದಿಂದ, ದುಷ್ಟಬುದ್ಧಿಯಿಂದ ಅಹಲ್ಯೆಯೂ ತಪ್ಪನ್ನೆಸಗುತ್ತಾರೆ. ಆ ನಂತರ ಇಂದ್ರದೇವರು ಆಶ್ರಮದಿಂದ ಸರಸರನೇ ನಡೆದು ಹೋಗುವಾಗ, ಗೌತಮರು ಬಂದು, ತಮ್ಮ ಜ್ಞಾನದೃಷ್ಟಿಯಿಂದ ಎಲ್ಲವನ್ನೂ ಕಂಡು ಇಂದ್ರ-ಅಹಲ್ಯೆ ಇಬ್ಬರಿಗೂ ಶಾಪವನ್ನು ನೀಡುತ್ತಾರೆ. ತಮ್ಮ ತಪ್ಪನ್ನರಿತು ಕಾಲಿಗೆ ಬಿದ್ದು ಕ್ಷಮೆ ಕೇಳಿದ ಅಹಲ್ಯೆಗೆ ಶಾಪವಿಮೋಚನೆಯನ್ನೂ ಅನುಗ್ರಹಿಸುತ್ತಾರೆ, ಪಾಪಪ್ರಕ್ಷಾಲನೆಯ ನಂತರ ಸ್ವೀಕರಿಸುತ್ತೇನೆ ಎಂಬ ಅಭಯವನ್ನೂ ನೀಡುತ್ತಾರೆ.  ಕುಳಿತಿದ್ದಕ್ಕೆ ನಿಂತದ್ದಕ್ಕೆ ವಿಚ್ಛೇದನವನ್ನು ತೆಗೆದುಕೊಳ್ಳುವ, ಅಗ್ನಿಸಾಕ್ಷಿಯಾಗಿ ಆದ ಮದುವೆಯನ್ನು ಮುರಿಯುವ ಇಂದಿನ ಜನರಿಗೆ ಗೌತಮರು ಕಲಿಸುವ ಅದ್ಬುತ ಪಾಠ ಇಲ್ಲಿದೆ. 

8047 Views
Upanyasas - VNU773

ಅಹಲ್ಯಾದೇವಿಯರ ಜನ್ಮ

ಬ್ರಹ್ಮದೇವರ ಪುತ್ರಿಯಾಗಿ ಅಹಲ್ಯಾದೇವಿಯರ ಜನ್ಮ, ಅವರ ಅದ್ಭುತ ರೂಪ, ಅವರ ಹೆಸರಿನ ಅರ್ಥ, ಇಂದ್ರದೇವರಿಗೆ ಅವರನ್ನು ಮದುವೆಯಾಗಲು ಉಂಟಾದ ಬಯಕೆ, ಆದರೆ ಗೌತಮರ ಆಶ್ರಮದಲ್ಲಿ ಅಹಲ್ಯೆಯನ್ನು ಬಹುಕಾಲದವರೆಗೆ ಇರಿಸಿ ಗೌತಮರ ತಪಃಸಿದ್ಧಿಯನ್ನು ಕಂಡು ಬ್ರಹ್ಮದೇವರು ಅವರಿಗೆ ಮದುವೆಮಾಡಿಕೊಟ್ಟ ವಿವರ ಈ ಪ್ರವಚನದಲ್ಲಿದೆ, ಅಹಲ್ಯಾದೇವಿಯರ ವೃತ್ತಾಂತವನ್ನು ಕೇಳುವ ಮುನ್ನ ಯಾವ ಎಚ್ಚರವಿರಬೇಕು ಎಂಬ ವಾಲ್ಮೀಕಿಯ ವಚನದ ಅರ್ಥಾನುಸಂಧಾನದೊಂದಿಗೆ. 

6764 Views